ಗಣೇಶ್ ಜೊತೆ ನಟಿಸೋಕೆ ಹನುಮಾನ್ ನಟಿ ಅಮೃತಾ ಅಯ್ಯರ್ ಪಡೆದಿದ್ದೆಷ್ಟು? ರಚಿತಾ ರಾಮ್‌ರನ್ನೂ ಹಿಂದಿಕ್ಕಿದರೇ?

ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಂದು ಹೊಸ ಸಿನಿಮಾ ಸೆಟ್ಟೇರಿದೆ. 'ಲವ್ ಇನ್ ಮಂಡ್ಯ' ಸಿನಿಮಾದ ನಿರ್ದೇಶಕ ಅರಸು ಅಂತಾರೆ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಮುಹೂರ್ತ ಕೂಡ ನಡೆದಿದ್ದು, ಇನ್ನೇನು ಶೂಟಿಂಗ್ ಆರಂಭ ಆಗಲಿದೆ. ಈ ಸಿನಿಮಾದಲ್ಲಿ ಗಣೇಶ್‌ಗೆ ನಾಯಕಿಯಾಗಿ ನಟಿಸುವುದಕ್ಕೆ ಹನುಮಾನ್ ಸಿನಿಮಾದ ನಟಿ ಅಮೃತಾ ಅಯ್ಯರ್ ಅನ್ನು ಕರೆದುಕೊಂಡು ಬರಲಾಗಿದೆ.

ಟಾಲಿವುಡ್‌ನಲ್ಲಿ ತೆರೆಕಂಡಿದ್ದ 'ಹನುಮಾನ್' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 350 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇಲ್ಲಿಂದ ಈ ನಟಿಯ ಜನಪ್ರಿಯತೆ ದುಪ್ಪಟ್ಟಾಗಿತ್ತು. ಇದರ ಬೆನ್ನಲ್ಲೇ ಈಗ ಅಮೃತಾ ಅಯ್ಯರ್ ಕನ್ನಡ ಚಿತ್ರರಂಗಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

Hanuman Movie actress Amritha Aiyer took huge remuneration for Ganesh Film

ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗೆ ನಾಯಕಿಯಾಗಿರುವ ಈ ನಟಿಗೆ ಭರ್ಜರಿ ಸಂಭಾವನೆ ಕೊಟ್ಟಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇನ್ನೂ ಹೆಸರಿಡದ ಈ ಸಿನಿಮಾಗೆ ಅಮೃತಾ ಅಯ್ಯರ್ ಅವರಿಗೆ ದುಬಾರಿ ಸಂಭಾವನೆ ಕೊಟ್ಟು ಕರೆದುಕೊಂಡು ಬರಲಾಗಿದೆ. ಹಾಗಿದ್ದರೆ, ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿರುವುದೇನು? ಅಮೃತಾ ಅಯ್ಯರ್ ಸಂಭಾವನೆ ಎಷ್ಟು? ಬೆಂಗಳೂರಿಗೆ ಈಕೆನೂ ಏನು ಲಿಂಕ್? ತಿಳಿಯುವುದಕ್ಕೆ ಮುಂದೆ ಓದಿ.

'ಹನುಮಾನ್' ನಾಯಕಿ ಅಮೃತಾ ಅಯ್ಯರ್

ಅಮೃತಾ ಅಯ್ಯರ್ ಈಗಾಗಲೇ ತೆಲುಗು ಹಾಗೂ ತಮಿಳಿ ಚಿತ್ರರಂಗದಲ್ಲಿ ಚಿರಪರಿಚಿತ ನಟಿ. 2012ರಿಂದಲೇ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದಾರೆ. ಇವರ ಚೊಚ್ಚಲ ಸಿನಿಮಾ 'ಪದ್ಮವ್ಯೂಹಂ'. ಮಲಯಾಳಂ ಭಾಷೆಯ ಈ ಸಿನಿಮಾದಲ್ಲಿ ಇವರಿಗೆ ಕ್ರೆಡಿಟ್ ಸಿಕ್ಕಿರಲಿಲ್ಲ. ಇಲ್ಲಿಂದ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸುವುದಕ್ಕೆ ಶುರು ಮಾಡಿದ್ದರು. 2024ರಲ್ಲಿ ತೆರೆಕಂಡ 'ಹನುಮಾನ್' ಈಕೆಯ ವೃತ್ತಿ ಬದುಕಿಗೆ ಹೊಸ ಮೆರುಗನ್ನು ಕೊಟ್ಟಿತ್ತು.

ಕನ್ನಡ ಚಿತ್ರರಂಗಕ್ಕೆ ಎಂಟ್ರಿ

'ಹನುಮಾನ್' ಸಿನಿಮಾ ರಿಲೀಸ್ ಆದ್ಮೇಲೆ ಅಮೃತಾ ಅಯ್ಯರ್‌ಗೆ ಬೇಡಿಕೆ ಹೆಚ್ಚಾಗಿತ್ತು. ಬೇರೆ ಬೇರೆ ಭಾಷೆಗಳಿಂದ ಆಫರ್ ಬಂದಿವೆ. ಇದರ ನಡುವೆ ಕನ್ನಡ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್‌ಗೆ ಗಣೇಶ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಅಮೃತಾ ಅವರ ಮೊದಲ ಕನ್ನಡ ಸಿನಿಮಾ. ಅರಸು ಅಂತಾರೆ ನಿರ್ದೇಶಿಸುತ್ತಿರುವ ಈ ಸಿನಿಮಾ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಮೂರು ಹಂತಗಳಲ್ಲಿ ನಡೆಯಲಿದೆ ಎನ್ನಲಾಗಿದೆ. ಅಂದ್ಹಾಗೆ ಅಮೃತಾಗೂ ಬೆಂಗಳೂರಿಗೂ ಒಂದು ನಂಟಿದೆ. ಹುಟ್ಟಿದ್ದು ಚೆನ್ನೈನಲ್ಲಿಯೇ ಆದರೂ, ಬೆಳೆದಿದ್ದು ಬೆಂಗಳೂರಿನಲ್ಲಿ. ಇಲ್ಲಿನ ಎನ್‌ಎಚ್‌ಆರ್ ಸ್ಕೂಲ್ ಹಾಗೂ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಕಾಮರ್ಸ್ ಪದವಿ ಪಡೆದಿದ್ದಾರೆ.

Hanuman Movie actress Amritha Aiyer took huge remuneration for Ganesh Film

ಅಮೃತಾ ಅಯ್ಯರ್ ಪಡೆದ ಸಂಭಾವನೆ ಎಷ್ಟು?

ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ 'ಹನುಮಾನ್' ನಟಿಗೆ ಎಷ್ಟು ಸಂಭಾವನೆ ಕೊಟ್ಟಿರಬಹುದು? ಇಂತಹದ್ದೊಂದು ಪ್ರಶ್ನೆ ಸಿನಿಮಾ ಮಂದಿಯಲ್ಲಿ ಚರ್ಚೆಯಾಗುತ್ತಿದೆ. ಅವರಿಗೆ ಸಿಕ್ಕಿರೋ ಮಾಹಿತಿ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಹಬ್ಬಿದೆ. 'ಹನುಮಾನ್' ಯಶಸ್ಸಿನ ಬಳಿಕ ಅಮೃತಾ ಅಯ್ಯರ್ ಸಂಭಾವನೆ ಹೆಚ್ಚಿಸಿಕೊಂಡಿದ್ದು, ಕನ್ನಡ ಸಿನಿಮಾಗೆ ಬರೋಬ್ಬರಿ 75 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಇದು ಗಾಂಧಿನಗರದ ಸಿನಿಮಾ ಮಂದಿಯ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿಯಷ್ಟೇ. ಚಿತ್ರತಂಡ ಅಥವಾ ಖುದ್ದಾಗಿ ನಟಿ ಈ ವಿಷಯವನ್ನು ಬಹಿರಂಗ ಪಡಿಸಿಲ್ಲ.

ರಚಿತಾ ರಾಮ್ ಸಂಭಾವನೆ ಅತೀ ಹೆಚ್ಚು

ಕನ್ನಡದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ರಚಿತಾ ರಾಮ್. ಸ್ಯಾಂಡಲ್‌ವುಡ್ ಮಂದಿಯರ ಪ್ರಕಾರ ರಚಿತಾ ರಾಮ್ ಒಂದು ಸಿನಿಮಾಗೆ 1 ಕೋಟಿಯಿಂದ 1.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಆದರೆ, ಸಿನಿಮಾ ಮಂದಿ ತಮ್ಮ ಸಂಭಾವನೆಯ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಹೀಗಾಗಿ ಇದು ಗಾಂಧಿನಗರದ ಓಡಾಡುತ್ತಿರುವ ಸುದ್ಧಿ. ಅಧಿಕೃತವಾಗಿ ರಚಿತಾ ರಾಮ್ ತಮ್ಮ ಸಂಭಾವನೆ ಬಗ್ಗೆ ಇದೂವರೆಗೂ ರಿವೀಲ್ ಮಾಡಿಲ್ಲ.

More from Filmibeat

English summary
Hanuman Movie actress Amritha Aiyer took huge remuneration for Ganesh Film;
Read more about: ganesh remuneration actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X