ಶಿವಣ್ಣ- ಡಾಲಿ ಧನಂಜಯ್‌ಗೆ ಆಕ್ಷನ್ ಕಟ್ ಹೇಳಲಿರೋ ಹೇಮಂತ್ ರಾವ್? ಭೈರವನ ಕೊನೆ ಪಾಠ ಏನಾಯ್ತು?

ಶಿವಣ್ಣನ ಗ್ರೀನ್‌ ಸಿಗ್ನಲ್ ಕೊಟ್ಟ ಸಿನಿಮಾಗಳಲ್ಲಿ ಬಹು ನಿರೀಕ್ಷೆಯನ್ನು ಹುಟ್ಟಿಸಿದ ಸಿನಿಮಾ 'ಭೈರವನ ಕೊನೆ ಪಾಠ'. ಇದಕ್ಕೆ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ನಿರ್ದೇಶಕ ಹೇಮಂತ್ ರಾವ್ ಆಕ್ಷನ್ ಕಟ್ ಹೇಳಬೇಕಿತ್ತು. ಶಿವಣ್ಣನೂ ಸಿಕ್ಕಾಪಟ್ಟೆ ಇಷ್ಟ ಪಟ್ಟು ಓಕೆ ಎಂದಿದ್ದಾಗಿತ್ತು. ಇನ್ನೇನು ಈ ಸಿನಿಮಾ ಸೆಟ್ಟೇರಬೇಕು ಅನ್ನೋವಾಗಲೇ ಶಿವಣ್ಣ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಈ ಸಿನಿಮಾ ಬಗ್ಗೆ ಸುದ್ದಿಯಿಲ್ಲ.

ಕೆಲವರು 'ಭೈರವನ ಕೊನೆ ಪಾಠ' ನಿಂತು ಹೋಯ್ತು ಎಂಬ ಸುದ್ದಿಯನ್ನು ಹಬ್ಬಿಸಿದ್ದರು. ಆದರೆ, ಅದಕ್ಕೆ ಚಿತ್ರತಂಡವೇ ಉತ್ತರನೂ ಕೊಟ್ಟಿತ್ತು. ಸದ್ಯ ಶಿವಣ್ಣ ಈಗ ಚೇತರಿಸಿಕೊಂಡು ಸಿನಿಮಾ ಶೂಟಿಂಗ್ ಆರಂಭ ಮಾಡಿದ್ದಾರೆ. ಇನ್ನೇನು ಮತ್ತೆ ಆರಂಭ ಆಗುತ್ತೆ ಅಂದರೆ, ಚಿತ್ರರಂಗದಲ್ಲಿ ಬೇರೊಂದು ಸುದ್ದಿ ಹರಿದಾಡುವುದಕ್ಕೆ ಶುರುವಾಗಿದೆ. ಹೇಮಂತ್ ರಾವ್ ಹೊಸ ಸಿನಿಮಾ ಕೈ ಹಾಕಿದ್ದಾರೆಂದು ಗುಲ್ಲೆದ್ದಿದೆ.

Hemanth M Rao to direct Shivarajkumar and Daali Dhananjay after Bhairavana Kone Paata shelving completely

'ಸಪ್ತ ಸಾಗರದಾಚೆ ಎಲ್ಲೋ' ಬಳಿಕ ಹೇಮಂತ್ ರಾವ್ ಅವರ ಮತ್ತೊಂದು ಸಿನಿಮಾಗಾಗಿ ಸಿನಿಪ್ರಿಯರು ಕಾದು ಕೂತಿದ್ದಾರೆ. ಅದರಲ್ಲೂ 'ಭೈರವನ ಕೊನೆ ಪಾಠ' ಸಿನಿಮಾದ ಪೋಸ್ಟರ್ ನೋಡಿ ಥ್ರಿಲ್ ಆಗಿದ್ದರು. ಸದ್ಯಕ್ಕೆ ಆ ಸಿನಿಮಾ ಸೆಟ್ಟೇರುತ್ತಿಲ್ಲ. ಈ ಮಧ್ಯೆ ಹೊಸ ಸಿನಿಮಾಗೆ ಕೈ ಹಾಕಿದ್ದಾರಂತೆ. ಅದರಲ್ಲಿ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ ಇಬ್ಬರನ್ನೂ ಇಟ್ಕೊಂಡು ಸಿನಿಮಾ ಮಾಡುತ್ತಿದ್ದಾರೆಂಬ ಸುದ್ದಿಯಿದೆ. ಅಸಲಿಗೆ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಹರಿದಾಡುತ್ತಿರುವ ಈ ಸಿನಿಮಾ ಬಗ್ಗೆ ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.

ಶಿವಣ್ಣ-ಡಾಲಿಗೆ ಆಕ್ಷನ್ ಕಟ್

'ಭೈರವನ ಕೊನೆ ಪಾಠ' ಸಿನಿಮಾ ಮೇಲೆ ಎಲ್ಲರೂ ಕಣ್ಣಿಟ್ಟಿದ್ದರು. ಆದರೆ, ಅದು ತಡವಾಗುತ್ತಿದೆ. ಈ ಬೆನ್ನಲ್ಲೇ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದಾರೆಂದು ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿ. ಆ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ ಒಟ್ಟಿಗೆ ನಟಿಸುತ್ತಿದ್ದಾರೆ. ಮತ್ತೊಂದು ಸಿನಿಮಾದಲ್ಲಿ ಶಿವಣ್ಣ ಹಾಗೂ ಡಾಲಿ ಒಂದಾಗಲಿದ್ದು, ಇದೊಂದು ಫ್ಯಾಮಿಲಿ ಡ್ರಾಮಾ ಎಂದು ಸಿನಿಮಾ ಮಂದಿಯ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿ.

Hemanth M Rao to direct Shivarajkumar and Daali Dhananjay after Bhairavana Kone Paata shelving completely

ರೆಟ್ರೋ ಸ್ಟೋರಿ

ಶಿವಣ್ಣ ಹಾಗೂ ಡಾಲಿ ಧನಂಜಯ್ ಇಬ್ಬರ ಕಾಂಬಿನೇಷನ್‌ ಪ್ರೇಕ್ಷಕರಿಗೆ ಇಷ್ಟ. ಈಗಾಗಲೇ ಈ ಜೋಡಿ 'ಟಗರು' ಹಾಗೂ 'ಬೈರಾಗಿ' ಸಿನಿಮಾ ಮೂಲಕ ಮೋಡಿ ಮಾಡಿದೆ. ಈಗ ಮತ್ತೊಮ್ಮೆ ಒಟ್ಟಿಗೆ ನಟಿಸಲಿದ್ದಾರೆ. ಹೇಮಂತ್ ರಾವ್ ಈ ಸಿನಿಮಾ ಮೂಲಕ ರೆಟ್ರೋ ಕತೆಯೊಂದನ್ನು ಹೇಳುವುದಕ್ಕೆ ಹೊರಟಿದ್ದಾರೆಂದು ಹೇಳಲಾಗುತ್ತಿದೆ. 70 -80 ರ ದಶಕದ ಕತೆ ಇದ್ದಾಗಿದ್ದು, ಫ್ಯಾಮಿಲಿ ಸಬ್ಜೆಕ್ಟ್ ಎನ್ನಲಾಗಿದೆ. ಜೊತೆಗೆ ಇಬ್ಬರು ಮಾಸ್ ಹೀರೋಗಳಿಗಾಗಿ ಆಕ್ಷನ್ ದೃಶ್ಯಗಳನ್ನು ಇಡಲಾಗಿದೆ. ಮುಂದಿನ ತಿಂಗಳಿನಿಂದಲೇ ಶೂಟಿಂಗ್‌ ಆರಂಭ ಆಗುತ್ತೆ ಎನ್ನುವ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿ ನೀಡಿಲ್ಲ.

'ಬೈರವನ ಕೊನೆ ಪಾಠ'ದ ಕಥೆಯೇನು?

ಹೇಮಂತ್ ರಾವ್ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿದ್ದರಿಂದ 'ಬೈರವನ ಕೊನೆ ಪಾಠ' ಕೈ ಬಿಟ್ಟರಾ? ಈ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಈಗಾಗಲೇ ಈ ಸಿನಿಮಾ ಬಗ್ಗೆ ಹೇಮಂತ್ ರಾವ್ ಹಾಗೂ ತಂಡ ಮಾಹಿತಿಯನ್ನು ಹಂಚಿಕೊಂಡಿದೆ. ಶಿವಣ್ಣ ನಟಿಸಬೇಕಿದ್ದ ಈ ಸಿನಿಮಾ ಪೋಸ್ಟ್‌ಪೋನ್ ಆಗಿದೆ ನಿಂತಿಲ್ಲ ಎಂದು ಹೇಳಿದ್ದರು. 'ಬೈರವನ ಕೊನೆ ಪಾಠ'ದಲ್ಲಿ ಶಿವಣ್ಣ ಹೆವಿ ಕಾಸ್ಟ್ಯೂಮ್ ಅನ್ನು ಹಾಕಬೇಕಿದೆ. ಅಲ್ಲದೆ, ಆಕ್ಷನ್ ಸೀನ್‌ಗಳು ಹೆಚ್ಚು ಇರುವುದರಿಂದ ಶಿವಣ್ಣನಿಗೆ ಈಗ ಸಾಧ್ಯವಿಲ್ಲ. ಇನ್ನೊಂದು ಕೆಲವು ತಿಂಗಳು ಬೇಕಿರುವುದರಿಂದ ಆ ಸಿನಿಮಾ ಮುಂದೂಡಿದ್ದಾರೆ. ಅಲ್ಲದೇ ಈ ಸಿನಿಮಾವನ್ನೇ ನಾನೇ ಮಾಡುತ್ತೇನೆ ಎಂದು ಶಿವಣ್ಣ ಭರವಸೆ ಕೊಟ್ಟಿದ್ದಾರಂತೆ. ಹಾಗಾಗಿ ಮುಂದಿನ ವರ್ಷಕ್ಕೆ ಪೋಸ್ಟ್‌ಪೋಸ್ ಆಗಿದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Hemanth M Rao to direct Shivarajkumar and Daali Dhananjay after Bhairavana Kone Paata shelving completely
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X