ವಿಚ್ಛೇದನದ ಬಳಿಕ ಸಮಂತಾಗೆ ನಾಗಚೈತನ್ಯ ಎದುರು ಸಿಕ್ಕಾಗ ಏನಾಯಿತು? ಮಾತುಕತೆ ಆಯ್ತಾ?

ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ಬೇರೆಯಾದಲ್ಲಿಂದ ಮುಖಾ ಮುಖಿ ಭೇಟಿಯಾಗುವ ಸಂದರ್ಭ ಎದುರಾಗಿರಲಿಲ್ಲ. ಆದ್ರೀಗ ಇವರಿಬ್ಬರೂ ಡಿವೋರ್ಸ್ ಅನೌನ್ಸ್ ಮಾಡಿ ಮೂರು ತಿಂಗಳ ಬಳಿಕ ಭೇಟಿಯಾಗುವ ಸಂದರ್ಭ ಎದುರಾಗಿತ್ತು ಎಂದು ಟಾಲಿವುಡ್‌ನಲ್ಲಿ ಗುಸು ಗುಸು ಹಬ್ಬಿದೆ. ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಭಿನ್ನಾಭಿಪ್ರಾಯಗಳಿಂದ ಬೇರೆಯಾದಾಗ ಇಬ್ಬರೂ ನೊಂದುಕೊಂಡಿದ್ದರು. ಹೀಗಾಗಿ ಸಮಂತಾ ಹಾಗೂ ನಾಗಚೈತನ್ಯ ಮುಖಾಮುಖಿಯಾದಾಗ ಸಂದರ್ಭದ ಬಗ್ಗೆ ಟಾಲಿವುಡ್‌ನಲ್ಲಿ ಗುಸು ಗುಸು ಹಬ್ಬಿದೆ.

ಸಿನಿಮಾ ಇಂಡಸ್ಟ್ರಿ ಅಂದಮೇಲೆ ಇಬ್ಬರನ್ನೊಬ್ಬರು ನೋಡದೆ ಇರಲು ಸಾಧ್ಯವೇ ಇಲ್ಲ. ಯಾವುದಾರೂ ಕೆಲಸಕ್ಕೆ ಒಂದೆಡೆ ಸೇರಬೇಕಾಗುವ ಸಂದರ್ಭ ಬರಬಹುದು. ಆಗ ಇಬ್ಬರೂ ತಮ್ಮ ನಡುವಿನ ಇದ್ದ ಕೋಪವನ್ನು ಮರೆತು ಒಂದು ಮುಗುಳುನಗೆಯನ್ನಾದರೂ ನೀಡಬೇಕಾಗುತ್ತದೆ. ಇಂತಹ ಸಂದರ್ಭ ವಿಚ್ಛೇದನ ನೀಡಿದ ಮೂರು ತಿಂಗಳ ಬಳಿಕವೇ ಎದುರಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಟಾಲಿವುಡ್‌ನಲ್ಲಿ ಸಮಂತಾ ಹಾಗೂ ನಾಗಚೈತನ್ಯ ಮುಖಾ ಮುಖಿಯಾದ ಬಗ್ಗೆ ಹರಿದಾಡಿದ ಸುದ್ದಿ ಏನು ತಿಳಿಯಲು ಮುಂದೆ ಓದಿ...

ಸ್ಯಾಮ್-ಚೈ ಫೇಸ್ ಟು ಫೇಸ್

ಸ್ಯಾಮ್-ಚೈ ಫೇಸ್ ಟು ಫೇಸ್

ಟಾಲಿವುಡ್‌ನಲ್ಲಿ ಗುಲ್ಲೆದ್ದಿರುವ ಸಂಗತಿ ಏನಪ್ಪಾ ಅಂದರೆ, ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಇತ್ತೀಚೆಗೆ ಮುಖಾ ಮುಖಿಯಾಗುವ ಸಂದರ್ಭ ಎದುರಾಗಿತ್ತು. ತೆಲುಗು ಮಾಧ್ಯಮಗಳ ವರದಿ ಪ್ರಕಾರ, ಸಮಂತಾ ಹಾಗೂ ನಾಗಚೈತನ್ಯ ಒಂದೇ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇಬ್ಬರೂ ಎದುರಾಗ ಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು ಎಂದು ಟಾಲಿವುಡ್ ವೆಬ್ ಸೈಟ್‌ಗಳು ವರದಿ ಮಾಡಿವೆ.

ಬಂಗಾರರಾಜು Vs ಯಶೋಧ

ಬಂಗಾರರಾಜು Vs ಯಶೋಧ

ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಮುಖಾ ಮುಖಿಯಾಗಿದ್ದು ರಾಮನಾಯ್ಡು ಸ್ಟುಡಿಯೋದಲ್ಲಿ. ನಾಗಚೈತನ್ಯ 'ಬಂಗಾರರಾಜು' ಚಿತ್ರದ ಶೂಟಿಂಗ್​ನಲ್ಲಿ ನಿರತರಾಗಿದ್ದರು. ಇತ್ತ ಸಮಂತಾ ಕೂಡ ದ್ವಿಭಾಷಾ ಸಿನಿಮಾ 'ಯಶೋಧ' ಶೂಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಬೇರೆ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ವಿಚ್ಛೇದನದ ಬಳಿಕ ಇಬ್ಬರೂ ಕೆಲಸದ ನಿಮಿತ್ತ ಒಂದೇ ಕಡೆ ಸೇರಿದ್ದು, ಮುಖಮುಖಿಯಾಗಿದ್ದಾರೆ ಎನ್ನಲಾಗಿದೆ.

ಸ್ಯಾಮ್-ಚೈ ಮಾತಾಡಿದ್ರಾ?

ಸ್ಯಾಮ್-ಚೈ ಮಾತಾಡಿದ್ರಾ?

ಒಂದೇ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ ಅಂದ್ಮೇಲೆ ಮುಖಾ ಮುಖಿಯಾಗುವುದು ಕಾಮನ್. ಆದರೆ, ಇಬ್ಬರೂ ಒಂದೇ ಸ್ಟುಡಿಯೋದಲ್ಲಿ ಇದ್ದರೂ ಒಬ್ಬರನ್ನೊಬ್ಬರು ಭೇಟಿಯಾಗಿಲ್ಲ. ನಾಗಚೈತನ್ಯ 'ಬಂಗಾರುರಾಜು' ಶೂಟಿಂಗ್ ಮುಗಿಸಿ ಹೋದರೆ, ಇತ್ತ ಸಮಂತಾ ಕೂಡ 'ಯಶೋಧ' ಚಿತ್ರೀಕರಣದ ಬಳಿಕ ಕಾರು ಹತ್ತಿ ಮನೆಗೆ ತೆರಳಿದರು ಎನ್ನಲಾಗಿದೆ. ಇನ್ನೊಂದು ಕಡೆ ಇಬ್ಬರೂ ಒಬ್ಬರನ್ನೊಬ್ಬರು ಮಾತಾಡಿಸುವುದಕ್ಕೂ ಮುಂದಾಗಿಲ್ಲ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

7 ವರ್ಷದ ಪ್ರೀತಿ, 4 ವರ್ಷದ ದಾಂಪತ್ಯ

7 ವರ್ಷದ ಪ್ರೀತಿ, 4 ವರ್ಷದ ದಾಂಪತ್ಯ

ಸಮಂತಾ ಹಾಗೂ ನಾಗಚೈತನ್ಯ 2010ರಲ್ಲಿ ತೆರೆಕಂಡ 'ಯೇ ಮಾಯ ಚೇಸಾವೆ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಅಲ್ಲಿಂದ ಇಬ್ಬರಲ್ಲೂ ಪ್ರೀತಿ ಚಿಗುರಿತ್ತು. ಬಳಿಕ 2017ರಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದರು. ಆದರೆ, ಸಮಂತಾ ಹಾಗೂ ನಾಗಚೈತನ್ಯ ಇಬ್ಬರಲ್ಲೂ ಮೈನಸ್ಸು ಮೂಡಿದ್ದರಿಂದ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದರು. ವಿಚ್ಛೇದನದ ಬಗ್ಗೆ ತನಗಾದ ನೋವನ್ನು ಸಮಂತಾ ಮಾಧ್ಯಮಗಳೊಂದಿಗೆ ಮಾತಾಡಿದ್ದಾರೆ. ಆದರೆ, ನಾಗಚೈತನ್ಯ ಇದುವರೆಗೂ ವಿಚ್ಛೇದನದ ಬಗ್ಗೆ ಒಂದೇ ಒಂದು ಮಾತು ಕೂಡ ಆಡಿಲ್ಲ. ಸದ್ಯ ಸಮಂತಾ ಸ್ನೇಹಿತೆಯರೊಂದಿಗೆ ಗೋವಾದಲ್ಲಿ ಹೊಸ ವರ್ಷ ಆಚರಣೆ ಮಾಡಲು ತೆರಳಿದ್ದಾರೆ.

More from Filmibeat

English summary
After divorce Samantha and Naga Chaitanya came face to face in Ramanaidu Studio. Both are avoided eye contact in that situation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X