IPLಗೂ ಮುನ್ನ ನ್ಯೂಯಾರ್ಕ್‌ನಲ್ಲಿ ಒಟ್ಟಿಗೆ ಸುತ್ತಾಡಿದ ಕಾವ್ಯಾ-ಅನಿರುದ್ಧ್ ರವಿಚಂದರ್; ಪೋಟೊಗಳು ವೈರಲ್
ಐಪಿಎಲ್ 19ನೇ ಆವೃತ್ತಿ ಈಗಾಗಲೇ ಶುರುವಾಗಿವೆ. ಮೊದಲ ಪಂದ್ಯದಲ್ಲಿಯೇ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ನಡೆದಿದೆ. ಮೊದಲ ಪಂದ್ಯದಲ್ಲಿಯೇ ಕಾವ್ಯಾ ಮಾರನ್ ಒಡೆತನದ ಸನ್‌ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಮೊತ್ತವನ್ನು ಕಲೆ ಹಾಕಿದರೂ, ಸೋಲಿನ ರುಚಿ ನೋಡಬೇಕಾಯ್ತು. ಮೊದಲ ಪಂದ್ಯ ವೀಕ್ಷಣೆಗೆ ಬಂದಿದ್ದ ಕಾವ್ಯಾ ಮಾರನ್‌ಗೆ ನಿರಾಸೆಯಾಗಿದೆ.
ಆದರೆ, ಐಪಿಎಲ್ ಮೊದಲ ಆರಂಭಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಮಾಲೀಕರಾದ ಕಾವ್ಯಾ ಮಾರನ್ ಕುರಿತ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಾವ್ಯಾ ಮಾರನ್‌ಗೆ ಅವರ ತಂಡದ ಕ್ರಿಕೆಟ್ ಆಟಗಾರರಷ್ಟೇ ಅಭಿಮಾನಿಗಳಿದ್ದಾರೆ. ಅವರನ್ನು ಸೌಂದರ್ಯಕ್ಕೆ ಮರಳಾದ ಯುವಕರು ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ.

ತಮ್ಮ ತಂಡದ ಪಂದ್ಯಗಳು ನಡೆಯುವಾಗ ಕಾವ್ಯಾ ಮಾರನ್ ಕ್ರೀಡಾ ಪ್ರೇಮಿಗಳ ಗಮನವನ್ನು ಸೆಳೆಯುತ್ತಾರೆ. ಇದೂವರೆಗೂ ಅವರ ನಾಯಕತ್ವ, ಜಾಣ್ಮೆ ಹಾಗೂ ತಮ್ಮ ಸೌಂದರ್ಯದಿಂದಲೇ ಮಿಂಚುತ್ತಿದ್ದಾರೆ. ಪಂದ್ಯಗಳು ನಡೆಯುವಾಗ ಕ್ಯಾಮರಾ ಕಣ್ಣುಗಳು ಅವರ ಮೇಲೆ ಇದ್ದೇ ಇರುತ್ತವೆ. ಈಗ ಐಪಿಎಲ್ 19ನೇ ಸೀಸನ್ ಆರಂಭಕ್ಕೂ ಮುನ್ನ ಆರಂಭಕ್ಕೂ ಮುನ್ನ ಅವರ ಡೇಟಿಂಗ್ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗಿದ್ದವು.
ಹಲವು ವರ್ಷಗಳಿಂದ ಕಾವ್ಯಾ ಮಾರನ್ ಹಾಗೂ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದೆ. ಅದು ಐಪಿಎಲ್ ಪಂದ್ಯಗಳು ಶುರುವಾಗದ ಗರಿಗೆದರುತ್ತವೆ. ನಿರಂತರವಾಗಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತವೆ. ಈ ಬಾರಿ ಕೂಡ ಆ ಚರ್ಚೆಯಿಂದ ಈ ಜೋಡಿ ದೂರ ಉಳಿದಿಲ್ಲ. ಕೆಲ ವರ್ಷಗಳಿಂದ ಇವರ ಬಗ್ಗೆ ಹಲವು ವರದಿಗಳು ಓಡಾಡಿದರೂ, ಇಬ್ಬರೂ ಈ ಬಗ್ಗೆ ಮೌನ ಮುರಿದಿಲ್ಲ. ಇದು ಅವರ ಅಭಿಮಾನಿಗಳ ಕುತೂಹಲವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಇದೆ.
ಈ ಹಿಂದೆ ಒಮ್ಮೆ ಮಾತ್ರ ಸಂಗೀತ ನಿರ್ದೇಶಕ ಅನಿರುದ್ಧ್ ತಮ್ಮ ಹಾಗೂ ಕಾವ್ಯಾ ಮಾರನ್ ಅವರ ನಡುವೆ ಇರೋದು ಸ್ನೇಹವಷ್ಟೇ ಎಂದಿದ್ದರು. ಅದನ್ನೇ ನಂಬಿಕೊಂಡು ಅವರಿಬ್ಬರ ಅಭಿಮಾನಿಗಳು ಹಾಗೂ ಫಾಲೋವರ್ಸ್ ಸೈಲೆಂಟ್ ಆಗಿದ್ದರು. ಆದ್ರೀಗ ನ್ಯೂಯಾರ್ಕ್‌ನ ರಸ್ತೆಯಲ್ಲಿ ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ಹಾಗೂ ಆಪ್ತರೊಂದಿಗೆ ಓಡಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೀಗಾಗಿ ಮತ್ತೆ ಅವರಿಬ್ಬರು ಡೇಟಿಂಗ್ ಮಾಡುತ್ತಿರುವ ಸುದ್ದಿ ಸದ್ದು ಮಾಡುತ್ತಿದೆ.
ಅನಿರುದ್ಧ್ ಹಾಗೂ ಕಾವ್ಯಾ ಮಾರನ್ ಇಬ್ಬರೂ ನ್ಯೂಯಾರ್ಕ್ ರಸ್ತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಸಲಿಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೊ ಅಸಲಿನೋ? ನಕಲಿನೋ.. ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಆದರೆ, ನೆಟ್ಟಿಗರು ಮಾತ್ರ ಈ ಫೋಟೊಗಳು ಡಿಸೈನ್ ಡಿಸೈನ್ ಆಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ತಮ್ಮ ಸಂಬಂಧವನ್ನು ಮರೆ ಮಾಚುತ್ತಿದ್ದಾರೆ" ಕೆಲವರ ಕಾಮೆಂಟ್ ಮಾಡಿದರೆ, ಇನ್ನು ಕೆಲವರು "ತಮ್ಮ ನಡುವಿನ ಬಾಂಧವ್ಯದ ಬಗ್ಗೆ ಸ್ಪಷ್ಟೀಕರಣ ನೀಡಬೇಕು" ಎಂದು ಒತ್ತಾಯ ಮಾಡುತ್ತಿದ್ದಾರೆ.
ಇವರಿಬ್ಬರ ನ್ಯೂಯಾರ್ಕ್ ಪ್ರವಾಸದ ಬಳಿಕ ತಮಿಳು ಮಾಧ್ಯಮಗಳಲ್ಲಿ ಇಬ್ಬರ ಮದುವೆ ಬಗ್ಗೆ ಚರ್ಚೆಯಾಗುತ್ತಿದೆ. ದಕ್ಷಿಣ ಭಾರತದ ಚಿತ್ರರಂಗ ಕೂಡ ಅನಿರುದ್ಧ್ ಹಾಗೂ ಕಾವ್ಯಾ ಶೀಘ್ರದಲ್ಲೇ ಮದುವೆಯಾಗಬಹುದೆಂಬ ಡೌಟ್‌ನಲ್ಲಿ ಇದೆ. ಇತ್ತ ನೆಟ್ಟಿಗರು ಮದುವೆ ಆಗುತ್ತಾರೆಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಐಪಿಎಲ್ ಪಂದ್ಯದ ವಿಚಾರಕ್ಕೆ ಬಂದರೆ, ಕಾವ್ಯಾ ಮಾರನ್ ಮಾಲೀಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಆರ್‌ಸಿಬಿ ವಿರುದ್ಧ ಹೀನಾಯವಾಗಿ ಸೋತಿದೆ. ದೊಡ್ಡ ಮೊತ್ತವನ್ನು ಕಡಿಮೆ ಸಮಯದಲ್ಲಿ ಚೇಸ್ ಮಾಡಿದ ಪಂದ್ಯಗಳ ಪಟ್ಟಿ ಸೇರಿದೆ.


Click it and Unblock the Notifications