ಮತ್ತೆ ಚಿತ್ರರಂಗಕ್ಕೆ ಮರಳುವ ಸೂಚನೆ ಕೊಡುತ್ತಿದ್ದಾರಾ ಮೋಹಕತಾರೆ ರಮ್ಯಾ?
ಮೋಹಕತಾರೆ ರಮ್ಯಾ ಮತ್ತೆ ಬಣ್ಣ ಹಚ್ಚುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಒಡಾಡುತ್ತಲೇ ಇದೆ. ಅದರಲ್ಲೂ ಸ್ಯಾಂಡಲ್‌ವುಡ್ ಲಕ್ಕಿ ಗರ್ಲ್ ಬೆಂಗಳೂರಿಗೆ ಹಿಂತಿರುಗಿದ ಬಳಿಕವಂತೂ ಈ ಗುಮಾನಿಗಳು ಮತ್ತಷ್ಟು ಹೆಚ್ಚಾಗಿದೆ. ಕೆಲವು ವರ್ಷಗಳಿಂದ ರಮ್ಯಾ ಕ್ಯಾಮರಾ ಮುಂದೆ ಬಂದಿದ್ದು ತೀರಾ ವಿರಳ. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಷ್ಟೇ ಆಕ್ಟೀವ್ ಆಗಿಲ್ಲ. ಬದಲಾಗಿ, ಸ್ಯಾಂಡಲ್‌ವುಡ್ ತಾರೆಯೊಂದಿಗೆ ಮಿಂಗಲ್ ಆಗುತ್ತಿದ್ದಾರೆ.
ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ವೇದಿಕೆ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಕಂಬ್ಯಾಕ್ ಮಾಡುವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಬೇಕು ಅನ್ನುವ ಹಂಬಲ ಮೋಹಕತಾರೆ ರಮ್ಯಾಗಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ನಿಧಾನವಾಗಿ ಚಿತ್ರರಂಗದವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ, ಇದೂವರೆಗೂ ಸಿನಿಮಾ ಎಂಟ್ರಿ ಬಗ್ಗೆ ರಮ್ಯಾ ಎಲ್ಲೂ ಮಾತಾಡಿಲ್ಲ.
ಅಮೂಲ್ಯ ಸೀಮಂತದಲ್ಲಿ ಕಂಡ ಮೋಹಕತಾರೆ
ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಸೀಮಂತ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಯಾವುದಾದರೂ ಕಾರ್ಯಕ್ರಮ ನಡೆದರೆ, ಅಲ್ಲಿ ಚಿತ್ರರಂಗದ ಗಣ್ಯರು ಸೇರುತ್ತಾರೆ. ಆದರೆ, ಕಲವು ವರ್ಷಗಳಿಂದ ರಮ್ಯಾ ಇಂತಹ ಸಮಾರಂಭದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದ್ರೀಗ ಅಮೂಲ್ಯ ಸೀಮಂತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಅಮೂಲ್ಯ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಷ್ಟೇ ಅಲ್ಲದೆ ನಟಿ ಜೊತೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ರಮ್ಯಾ ರಾಜಕೀಯಕ್ಕೆ ಸೇರಿದ ಕ್ಷಣದಿಂದ ಸಿನಿಮಾರಂಗದ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೇವಲ ರಾಜಕೀಯದಲ್ಲೇ ಬ್ಯುಸಿಯಾಗಿದ್ದರು. ಒಂದಿಷ್ಟು ವರ್ಷ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಈಗ ಮತ್ತೆ ಬೆಂಗಳೂರಿಗೆ ಮರಳಿದ್ದು, ಸಿನಿಮಾದಲ್ಲಿ ನಟಿಸುವ ಸೂಚನೆ ನೀಡಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ನಿರ್ಧಾರ ಪ್ರಕಟಿಸುವ ಸಾಧ್ಯತೆ
ಮೂಲಗಳ ಪ್ರಕಾರ, ರಮ್ಯಾ ಸ್ಯಾಂಡಲ್‌ವುಡ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಮನಸ್ಸು ಮಾಡಿದ್ದಾರೆ. ಆದರೆ, ಸದ್ಯ ತೂಕ ಹೆಚ್ಚಿಸಿಕೊಂಡಿದ್ದರಿಂದ ಸ್ವಲ್ಪ ದಪ್ಪಗಾಗಿದ್ದಾರೆ. ಹೀಗಾಗಿ ಮತ್ತೆ ರಮ್ಯಾ ದೇಹವನ್ನು ಸ್ಲಿಮ್ ಮಾಡಿಕೊಂಡು ಸಂಪೂರ್ಣ ತಯಾರಿ ಮಾಡಿಕೊಂಡು ಚಿತ್ರರಂಗ ಪ್ರವೇಶ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಮ್ಯಾ ಅಂದುಕೊಂಡಂತೆ ಆದರೆ, ಏಪ್ರಿಲ್ ತಿಂಗಳಲ್ಲಿ ಸ್ಯಾಂಡಲ್‌ವುಡ್ ರೀ ಎಂಟ್ರಿ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸಬಹುದು ಎನ್ನುತ್ತಿವೆ ಮೂಲಗಳು.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ವೇಳೆ ರಮ್ಯಾ ಭಾವುಕರಾಗಿದ್ದರು. ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವ ಬಗ್ಗೆ ಅಪ್ಪು ಜೊತೆ ಚರ್ಚಿಸಿದ್ದೆ. ಮುಂದಿನ ಸಿನಿಮಾದಲ್ಲಿ ನಟಿಸುವಂತೆ ಪುನೀತ್ ಕೇಳಿದ್ದರು ಎಂದು ಭಾವುಕರಾಗಿ ನುಡಿದಿದ್ದರು. ಪುನೀತ್ ಹಾಗೂ ರಮ್ಯಾ ಜೋಡಿ ಸ್ಯಾಂಡಲ್‌ವುಡ್‌ನ ಹಿಟ್ ಜೋಡಿಯಲ್ಲೊಂದು. ಇಬ್ಬರೂ ನಟಿಸಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿದ್ದೇ ಇಲ್ಲ. ಹೀಗಾಗಿ ಆದಷ್ಟು ಬೇಗ ರಮ್ಯಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿ ಅಂತ ರಮ್ಯಾ ಅಭಿಮಾನಿಗಳು ಕಾದು ಕೂತಿದ್ದಾರೆ.


Click it and Unblock the Notifications











