ಮೀನಾ-ನಯನತಾರಾ ನಡುವೆ ಮೈಮಸ್ಸು; 'ಮೂಕುತಿ ಅಮ್ಮನ್ 2' ಕೊನೆಯ ದಿನ ಮಿಸ್ ಆಗಿದ್ಯಾಕೆ?

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮೀನಾ ಹಾಗೂ ನಯನತಾರಾ ಇಬ್ಬರೂ ಚಿರಪರಿಚಿತರು. ಇಬ್ಬರೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮೀನಾ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರೂ ಬಹುಬೇಡಿಕೆಯ ನಟಿಯಾಗಿದ್ದಾರೆ. ಅದೇ ನಯನತಾರಾ ಮದುವೆ ಬಳಿಕವೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೀಗಾಗಿ ಇಬ್ಬರೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆಯ ನಟಿಯರಾಗಿದ್ದಾರೆ.

ಇತ್ತೀಚೆಗೆ ನಯನತಾರಾ ಹಾಗೂ ಮೀನಾ ನಡುವೆ ಮೈಮಸ್ಸು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಇಬ್ಬರೂ ಜನಪ್ರಿಯ ನಟಿಯರಿಗೆ ಏನಾಯ್ತು? ಖುಷ್ಬೂ ಪತಿ ಸುಂದರ್ ಸಿ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಇಬ್ಬರ ನಡುವೆ ಮೈಮನಸ್ಸು ಮೂಡಿತೇ? ಇಂತಹದ್ದೊಂದು ಚರ್ಚೆ ಮತ್ತೆ ಗಾಢವಾಗಿ ಆಗುತ್ತಿರುವುದಕ್ಕೆ ಪ್ರಮುಖ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ.

Is there any conflict between Meena and Nayanthara while Mookuthi Amman 2 movie shooting

ನಟಿ ಖುಷ್ಬೂ ಪತಿ ಸುಂದರ್ ಸಿ ನಿರ್ದೇಶಿಸಿರುವ ಸಿನಿಮಾ 'ಮೂಕುತಿ ಅಮ್ಮನ್ 2' ಇತ್ತೀಚೆಗೆ ಶೂಟಿಂಗ್ ಮುಗಿದೆ. ಈ ಸಿನಿಮಾ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಸ್ನೇಹಾ, ಊರ್ವಶಿ ಸೇರಿದಂತೆ ಹಲವು ಮಂದಿ ಜನಪ್ರಿಯ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಒಂದು ಮೂಲದ ಪ್ರಕಾರ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ನಯನತಾರಾ ಹಾಗೂ ಮೀನಾ ನಡುವಿನ ವೈಮನಸ್ಸಿನ ಬಗ್ಗೆನೂ ಚರ್ಚೆಯಾಗುತ್ತಿದೆ.

ಇತ್ತೀಚೆಗೆ ಸುಂದರ್ ಸಿ 'ಮೂಕುತಿ ಅಮ್ಮನ್ 2' ಸಿನಿಮಾವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ವೇಳೆ ಸಿನಿಮಾಗೆ ಕುಂಬಳಕಾಯಿ ಒಡೆಯುವ ಸಮಯದಲ್ಲಿ ಇಡೀ ಚಿತ್ರತಂಡವೇ ಸೇರಿಕೊಂಡಿತ್ತು. ಅಲ್ಲಿ ನಟಿ ಮೀನಾ ಮಾತ್ರ ಮಿಸ್ಸಿಂಗ್ ಆಗಿದ್ದರು. ಅಭಿಮಾನಿಗಳು ಮೀನಾ ಕೂಡ ಅಲ್ಲಿಗೆ ಬರಬಹುದೆಂದು ನಿರೀಕ್ಷೆ ಮಾಡಿದ್ದರು. ಆದರೆ, ಮೀನಾ ಅಲ್ಲಿ ಕಾಣಿಸಿಕೊಳ್ಳದೇ ಇದ್ದಿದ್ದನ್ನು ನೋಡಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ನಡುವೆ ವೈಮನಸ್ಸು ಇರೋದು ಕನ್ಫರ್ಮ್ ಅಂತ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಅಷ್ಟಕ್ಕೂ ಇವರಿಬ್ಬರ ನಡುವಿನ ವೈಮನಸ್ಸಿನ ಚರ್ಚೆ ಶುರುವಾಗಿದ್ದು ಎಲ್ಲಿಂದ ಅಂತ ತಿಳಿದುಕೊಳ್ಳುವುದು ಮುಖ್ಯ. ಇವರಿಬ್ಬರ ನಡುವಿನ ಕಿತ್ತಾಟ ರಜನಿಕಾಂತ್ ಸಿನಿಮಾ 'ಕುಸೇಲನ್'ನಿಂದ ಆರಂಭ ಆಗುತ್ತೆ. ಈ ಸಿನಿಮಾದಲ್ಲಿ ಮೀನಾ ನಾಯಕಿಯಾಗಿಯೇ ನಟಿಸಿದ್ದರು. ಹಾಗೇ ನಯನತಾರಾ ಕೂಡ ಪ್ರಮುಖ ಪಾತ್ರದಲ್ಲಿಯೇ ನಟಿಸಿದ್ದರು. ಆದರೆ, ಸಿನಿಮಾದ ಕ್ರೆಡಿಟ್ ಕಾರ್ಡ್ ವೇಳೆ ಮೀನಾ ಬದಲು ನಯನತಾರಾ ಹೆಸರು ಮೊದಲು ಬಂದಿತ್ತು. ಆ ವೇಳೆ ಈ ವಿಚಾರಕ್ಕೆ ಮೀನಾ ಬೇಸರ ವ್ಯಕ್ತಪಡಿಸಿದ್ದರು.

Is there any conflict between Meena and Nayanthara while Mookuthi Amman 2 movie shooting

'ಮೂಕುತಿ ಅಮ್ಮನ್ 2' ಸಿನಿಮಾದ ಮುಹೂರ್ತದ ವೇಳೆ ನಯನತಾರಾ ಹಾಗೂ ಮೀನಾ ನಡುವೆ ಆ ಮುನಿಸು ಕ್ಯಾರಿಯಾಗಿತ್ತು ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ. ನಯನತಾರಾ ಆ ಕಾರ್ಯಕ್ರಮಕ್ಕೆ ತಡವಾಗಿ ಎಂಟ್ರಿ ಕೊಟ್ಟಿದ್ದರು. ಅಷ್ಟೊತ್ತಿಗಾಗಲೇ ಮೀನಾ, ಖುಷ್ಬೂ ಹಾಗೂ ರೆಜಿನಾ ವೇದಿಕೆ ಇದ್ದರು. ಇದರಿಂದ ಜನರ ಗಮನ ಈ ಮೂವರ ಮೇಲೆ ಇತ್ತು. ಇದಕ್ಕೆ ನಯನತಾರಾ ಮುನಿಸಿಕೊಂಡಿದ್ದರು. ಆ ವೇಳೆ ನಯನತಾರಾ ಹಾಗೂ ಮೀನಾ ನಡುವಿನ ಆತ್ಮೀಯತೆಯ ಕೊರತೆ ಎದ್ದು ಕಾಣುತ್ತಿದೆ ಎಂಬ ವಿಡಿಯೋ ಕೂಡ ಶೇರ್ ಆಗಿತ್ತು.

ಇನ್ನೊಂದು ಕಡೆ 'ಮೂಕುತಿ ಅಮ್ಮನ್ 2' ಸಿನಿಮಾ ನಯನತಾರಾಗಿಂತ ಮೀನಾ ಪಾತ್ರವೇ ಹೆಚ್ಚು ಗಮನ ಸೆಳೆಯುತ್ತಿದೆ. ಈ ಕಾರಣಕ್ಕೆ ನಯನತಾರಾ ಅಸಮಧಾನ ಹೊರ ಹಾಕಿದ್ದರು. ಅದಕ್ಕೆ ಮೀನಾ ಪಾತ್ರವನ್ನು ಸ್ನೇಹಾಗೆ ನೀಡಲಾಗಿದೆ. ಈ ಕಾರಣಕ್ಕೆ ಸಿನಿಮಾ ಮುಗಿಯುವ ವೇಳೆ ತಂಡದೊಂದಿಗೆ ನಟಿ ಮೀನಾ ಕಾಣಿಸಿಕೊಳ್ಳುತ್ತಿಲ್ಲವೆಂದು ಸಿನಿಮಾ ಮಂದಿ ಚರ್ಚೆ ಮಾಡುತ್ತಿದ್ದಾರೆ. ಆದರೆ, ಅಸಲಿ ಮ್ಯಾಟರ್ ಬೇರೆನೇ ಇದೆ. 'ಮೂಕುತಿ ಅಮ್ಮನ್ 2' ಸಿನಿಮಾ ಮುಹೂರ್ತ ಸಮಾರಂಭಕ್ಕೆ ಮೀನಾ ಕೇವಲ ಅತಿಥಿಯಾಗಿ ಆಗಮಿಸಿದ್ದರು. ಈ ಸಿನಿಮಾದಲ್ಲಿ ಅವರಿಗೆ ಯಾವುದೇ ಪಾತ್ರವಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಅಷ್ಟೇ ಅಲ್ಲದೆ ಈ ಎಲ್ಲಾ ವಿಷಯಗಳನ್ನು ಖುಷ್ಬೂ ಕೂಡ ತಳ್ಳಿ ಹಾಕಿದ್ದಾರೆ.

More from Filmibeat

English summary
Is there any conflict between Meena and Nayanthara while Mookuthi Amman 2 movie shooting.
Read more about: nayanthara meena actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X