ಜೂ. ಎನ್‌ಟಿಆರ್, ರಾಜಮೌಳಿ ನಡುವೆ ವೈಮನಸ್ಸು: ಟಾಲಿವುಡ್‌ನಲ್ಲೇನಿದು ಸುದ್ದಿ?

ಟಾಲಿವುಡ್ ಯಂಗ್ ಟೈಗರ್ ಜೂ.ಎನ್‌ಟಿಆರ್ ಹಾಗೂ ರಾಜಮೌಳಿ ಸಂಬಂಧ ಇಂದು ನಿನ್ನೆಯದಲ್ಲ. ಜೂ.ಎನ್‌ಟಿಆರ್ ಹಾಗೂ ರಾಜಮೌಳಿ RRR ಸಿನಿಮಾಗೂ ಮುನ್ನವೇ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಹೀಗಾಗಿ ಇಬ್ಬರೂ ಟಾಲಿವುಡ್‌ನ ಬೆಸ್ಟ್‌ ಫ್ರೆಂಡ್ಸ್.

ರಾಜಮೌಳಿ ಈ ಹಿಂದೆ ಜೂ.ಎನ್‌ಟಿಆರ್‌ಗೆ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 'ಸ್ಟುಡೆಂಟ್ ನಂ 1' ಹಾಗೂ 'ಯಮದೊಂಗ' ಇವು ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾಗಳು. ಈ ಎರಡೂ ಚಿತ್ರಗಳು ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿತ್ತು. ಅಲ್ಲಿಂದ ರಾಜಮೌಳಿ ಹಾಗೂ ಜೂ.ಎನ್‌ಟಿಆರ್ ಒಡನಾಟವಿದೆ.

ಜೂ.ಎನ್‌ಟಿಆರ್ ಇದೂವರೆಗೂ 29 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಎರಡು ಸಿನಿಮಾಗಳು ಸೆಟ್ಟೇರಲು ಸಜ್ಜಾಗಿವೆ. ಈ ಎರಡೂ ಸಿನಿಮಾಗಳನ್ನು ಕೂಡ ಬೆಸ್ಟ್ ಡೈರೆಕ್ಟರ್‌ಗಳು ನಿರ್ದೇಶನ ಮಾಡುತ್ತಿದ್ದು, ನಿರೀಕ್ಷೆಗಳು ಗರಿಗೆದರಿವೆ. ಈ ಮಧ್ಯೆ ಜೂ. ಎನ್‌ಟಿಆರ್ ಇಷ್ಟಪಡುವ ನಿರ್ದೇಶಕ ರಾಜಮೌಳಿ ಜೊತೆ ಸಂಬಂಧ ಹಳಸಿದೆ ಎಂದು ಟಾಲಿವುಡ್ ಮಾತಾಡಿಕೊಳ್ಳುತ್ತಿದೆ. ಅದ್ಯಾಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ತಾರಕ್-ರಾಜಮೌಳಿ ಕಾಂಬಿನೇಷನ್‌ ಸಿನಿಮಾಗಳು

ತಾರಕ್-ರಾಜಮೌಳಿ ಕಾಂಬಿನೇಷನ್‌ ಸಿನಿಮಾಗಳು

ಜೂ. ಎನ್‌ಟಿಆರ್ ಟಾಲಿವುಡ್‌ ಜರ್ನಿಗೊಂದು ಇತಿಹಾಸವಿದೆ. 29 ಸಿನಿಮಾಗಳ ಜರ್ನಿಯಲ್ಲಿ ತಾರಕ್ ಸಾಕಷ್ಟು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದಾರೆ. 'ಆದಿ', 'ಸ್ಟುಡೆಂಟ್ ನಂ 1', 'ಯಮದೊಂಗ', 'ಸಿಂಹಾದ್ರಿ', 'ಟೆಂಪರ್', 'ಆರವಿಂದ ಸಮೇತ', 'ಜನತಾ ಗ್ಯಾರೇಜ್' ಹಾಗೂ 'RRR' ಅಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿವೆ. ಇದರಲ್ಲಿ 'ಸ್ಟುಡೆಂಟ್ ನಂ 1', 'ಯಮದೊಂಗ', 'RRR' ಮೂರು ಸಿನಿಮಾಗಳನ್ನು ರಾಜಮೌಳಿ ನಿರ್ದೇಶಿಸಿದ್ದಾರೆ. ಹೀಗಾಗಿ ಜೂ.ಎನ್‌ಟಿಆರ್ ಹಾಗೂ ರಾಜಮೌಳಿ ಜೋಡಿಗೆ ಟಾಲಿವುಡ್‌ನಲ್ಲಿ ವಿಶೇಷ ಸ್ಥಾನವಿದೆ. ಇಷ್ಟು ಉತ್ತಮ ಸಂಬಂಧವಿರುವ ಜೋಡಿ ಮಧ್ಯೆ ಈಗ ಎಲ್ಲವೂ ಸರಿಯಿಲ್ಲ ಎನ್ನುತ್ತಿದೆ ಟಾಲಿವುಡ್.

ತಾರಕ್-ರಾಜಮೌಳಿ ಸಂಬಂಧ ಸರಿಯಿಲ್ಲ

ತಾರಕ್-ರಾಜಮೌಳಿ ಸಂಬಂಧ ಸರಿಯಿಲ್ಲ

ಜೂ.ಎನ್‌ಟಿಆರ್ ಹಾಗೂ ರಾಜಮೌಳಿ ಮುನಿಸಿನ ಬಗ್ಗೆ RRR ಸಿನಿಮಾ ಬಿಡುಗಡೆಯಾದಲ್ಲಿಂದ ಸುದ್ದಿಯಾಗುತ್ತಲೇ ಇದೆ. RRR ಸಿನಿಮಾದಲ್ಲಿ ರಾಜಮೌಳಿ, ಜೂ.ಎನ್‌ಟಿಆರ್‌ ಹಾಗೂ ರಾಮ್‌ಚರಣ್ ಪಾತ್ರದಲ್ಲಿ ತಾರತಮ್ಯ ಮಾಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ. RRR ರಿಲೀಸ್ ಆದ ದಿನವೇ ಜೂ.ಎನ್‌ಟಿಆರ್ ಅಭಿಮಾನಿಗಳು ರಾಜಮೌಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಇನ್ನೊಂದು ಕಡೆ ಜೂ.ಎನ್‌ಟಿಆರ್ ಕೂಡ ಬೇಸರ ವ್ಯಕ್ತಪಡಿಸಿದ್ದರು ಎನ್ನುವ ಮಾತುಗಳು ಹರಿದಾಡಿದ್ದವು. ಅದೀಗ ನಿಜ ಎನ್ನುತ್ತಿದೆ ಟಾಲಿವುಡ್.

ನೆಚ್ಚಿನ ನಟನಿಗೆ ವಿಶ್ ಮಾಡಿಲ್ಲ ಜಕ್ಕಣ್ಣ

ನೆಚ್ಚಿನ ನಟನಿಗೆ ವಿಶ್ ಮಾಡಿಲ್ಲ ಜಕ್ಕಣ್ಣ

ಇದೇ ಮೇ 20 ರಂದು ಜೂ. ಎನ್‌ಟಿಆರ್ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಇಡೀ ಟಾಲಿವುಡ್‌ ಇಂಡಸ್ಟ್ರೀಯೇ ಯಂಗ್ ಟೈಗರ್ ಹುಟ್ಟುಹಬ್ಬಕ್ಕೆ ಶುಭ ಕೋರಿತ್ತು. ಆದರೆ, ರಾಜಮೌಳಿ ಮಾತ್ರ ಜೂ. ಎನ್‌ಟಿಆರ್‌ಗೆ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಶ್ ಮಾಡಿಲ್ಲ. ಇದನ್ನೇ ಟಾಲಿವುಡ್ ಸಾಕ್ಷಿ ಎಂಬಂತೆ ತೋರಿಸುತ್ತಿದೆ. ಆದರೆ, ಇನ್ನು ಕೆಲವರು ರಾಜಮೌಳಿ ಪರ್ಸನಲ್ ಆಗಿ ವಿಶ್ ಮಾಡಿರುವ ಸಾಧ್ಯತೆಯಿದೆ. ಆ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡುತ್ತಿಲ್ಲವೆಂದೂ ಹೇಳುತ್ತಿದೆ.

ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿ

ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿ

RRR ಸಿನಿಮಾ ಬಳಿಕ ರಾಜಮೌಳಿ ಹೊಸ ಸಿನಿಮಾಗೆ ತಯಾರಿ ನಡೆಸಿದ್ದಾರೆ. ಮಹೇಶ್ ಬಾಬು ಜೊತೆ ಸಿನಿಮಾ ಮಾಡಲು ಸ್ಕ್ರಿಪ್ಟ್ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಜೂ.ಎನ್‌ಟಿಆರ್ 30ನೇ ಸಿನಿಮಾಗೆ ರೆಡಿಯಾಗಿದ್ದಾರೆ. ಇನ್ನೊಂದು ಕಡೆ ಪ್ರಶಾಂತ್ ನೀಲ್ ನಿರ್ದೇಶನದ 31ನೇ ಸಿನಿಮಾ ಕೂಡ ಅನೌನ್ಸ್ ಆಗಿದೆ.

More from Filmibeat

English summary
Is There Any Rift Between Jr NTR And Rajamouli? Why RRR Director Didn't wish Bheem?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X