ಜಾಹ್ನವಿ ಕಪೂರ್ ಕೇಳಿದ ಸಂಭಾವನೆಗೆ ತೆಲುಗು ಮಂದಿ ಫುಲ್ ಶಾಕ್: ರಶ್ಮಿಕಾಗಿಂತ ದುಬಾರಿ ಅಂತೆ!
ಬಾಲಿವುಡ್‌ಗೆ ಹೋಗಿ ರಶ್ಮಿಕಾ ಮಂದಣ್ಣ ಕಾಂಪಿಟೇಷನ್ ಕೊಡ್ತಿದ್ದಾರೆ. ಬಿಟೌನ್ ನಟಿಯರಿಗೆ ಸಿಗಬೇಕಿದ್ದ ದೊಡ್ಡ ಸಿನಿಮಾಗಳು ರಶ್ಮಿಕಾ ಪಾಲಾಗಿದೆ. ಅತ್ತ ಬಾಲಿವುಡ್ ನಟಿಯರು ದಕ್ಷಿಣದ ಕಡೆ ಮುಖ ಮಾಡಿ ಇಲ್ಲಿ ಪೈಪೋಟಿ ಕೊಡೋಕೆ ತುದಿಗಾಲಲ್ಲಿ ನಿಂತಿದ್ದಾರೆ.
ಎರಡೂ ಕಡೆಯ ಫಿಲ್ಮ್ ಮೇಕರ್ಸ್ ಆಲೋಚನೆ ಕೂಡ ಇದೇ ಹಾದಿಯಲ್ಲಿ ಇದ್ದಂತಿದೆ. ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿಗೆ ಮತ್ತೊಬ್ಬ ಬಾಲಿವುಡ್ ನಟಿ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಹಲವು ದಿನಗಳಿಂದ ಇವರ ಹೆಸರು ಟಾಲಿವುಡ್‌ನಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಅವರೇ ಜಾಹ್ನವಿ ಕಪೂರ್.
ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ಗೆ ಬಿಟೌನ್‌ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಹೀಗಾಗಿ ದಕ್ಷಿಣ ಭಾರತಕ್ಕೆ ಕಾಲಿಡುವುದಕ್ಕೆ ವೇದಿಕೆ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಜೂ.ಎನ್‌ಟಿಆರ್ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡುತ್ತಾರೆ ಅನ್ನೋ ಮಾತಿದೆ. ಈ ಮಧ್ಯೆ ಜಾಹ್ನವಿ ಸಂಭಾವನೆ ಕೇಳಿ ಟಾಲಿವುಡ್ ಮಂದಿ ಸುಸ್ತಾಗಿದ್ದಾರೆ ಅನ್ನೋ ಸುದ್ದಿ ಭಾರಿ ಸದ್ದು ಮಾಡುತ್ತಿದೆ.

NTR 30ಗೆ ಜಾಹ್ನವಿ ದುಬಾರಿ ಸಂಭಾವನೆ?
RRR ಅದ್ಧೂರಿ ಯಶಸ್ಸಿನ ಬಳಿಕ ಜೂ.ಎನ್‌ಟಿಆರ್ ಹೊಸ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ತನ್ನ 30ನೇ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಆಗಿರುವುದರಿಂದ ಜಾರೂಕತೆಯಿಂದ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೊರಟಾಲ ಶಿವ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾಗೆ ಜಾಹ್ನವಿ ಕಪೂರ್ ಬರುತ್ತಾರೆ ಅಂತ ಬಹಳ ದಿನಗಳಿಂದ ಓಡಾಡುತ್ತಿದೆ. ಇದೇ ವೇಳೆ ಜಾಹ್ನವಿ ಕಪೂರ್ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಗಿಂತಲೂ ಅನ್ನೋ ಸುದ್ದಿನೂ ಹರಿದಾಡುತ್ತಿದೆ.

ರಶ್ಮಿಕಾಗಿಂತ ದುಬಾರಿ ಜಾಹ್ನವಿ ಕಪೂರ್
ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಹೀಗಾಗಿ ಎಲ್ಲರ ಗಮನ ದಕ್ಷಿಣ ನಾಲ್ಕು ಸಿನಿಮಾಗಳ ಮೇಲೆ ನೆಟ್ಟಿದೆ. ಜೂ.ಎನ್‌ಟಿಆರ್ 30ನೇ ಸಿನಿಮಾಗೆ ಜಾಹ್ನವಿ ಕಪೂರ್ ಬರೋದು ಬಹುತೇಕ ಕನ್ಫರ್ಮ್ ಎನ್ನಲಾಗಿದೆ. ಈ ಮಧ್ಯೆ ರಶ್ಮಿಕಾಗಿಂತ ಜಾಹ್ನವಿ ಕಪೂರ್ ದುಬಾರಿ ಅನ್ನೋ ಸುದ್ದಿ ಓಡಾಡುತ್ತಿದೆ. 'ಪುಷ್ಪ' ಸಿನಿಮಾಗೆ ರಶ್ಮಿಕಾ 5 ಕೋಟಿ ಸಂಭಾವನೆ ಪಡೆದಿದ್ದರಂತೆ. ಜಾಹ್ನವಿ ಕಪೂರ್ ಅದಕ್ಕಿಂತ ದುಬಾರಿ ಸಂಭಾವನೆ ಪಡೆಯುತ್ತಿದ್ದಾರಂತೆ.

'ಸೀತಾರಾಮಂ' ನಟಿಗೆಷ್ಟು ಸಂಭಾವನೆ
RRR ಸಿನಿಮಾಗೆ ಆಲಿಯಾ ಭಟ್ ದುಬಾರಿ ಸಂಭಾವನೆಯನ್ನು ಪಡೆದಿದ್ದರು. ಅದೇ 'ಸೀತಾರಾಮಂ' ಯಶಸ್ವಿ ಸಿನಿಮಾ ಕೊಟ್ಟಿರೋ ಮೃಣಾಲ್ ಠಾಕೂರ್‌ಗೆ ಒಂದು ಕೋಟಿ ಸಂಭಾವನೆ ನೀಡಲಾಗಿದ್ಯಂತೆ. ಈ ಬಾಲಿವುಡ್ ನಟಿಯ ಜನಪ್ರಿಯತೆಯ ಆಧಾರದ ಮೇಲೆ ಸಂಭಾವನೆ ನಿಗಧಿಯಾಗುತ್ತಿದೆ. ಹೀಗಾಗಿ ಜಾಹ್ನವಿ ಕಪೂರ್‌ಗೆ ಎಷ್ಟು ಸಂಭಾವನೆ ಕೊಟ್ಟಿದ್ದಾರೆ? ಅನ್ನೋದು ಅಧಿಕೃತವಾಗಿ ಹೊರಬೀಳಬೇಕಿದೆ.

ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳಿವೆ
ಜಾಹ್ನವಿ ಕಪೂರ್ ಕೈಯಲ್ಲಿ ಬಾಲಿವುಡ್‌ನ ಎರಡು ಸಿನಿಮಾಗಳಿವೆ. 'ಮಿಲ್ಲಿ' ಸಿನಿಮಾ ಮೂಲಕ ಮೆಚ್ಚುಗೆ ಗಳಿಸಿದ್ದ ನಟಿ, 'ಬವಾಲ್' ಹಾಗೂ 'ಮಿಸ್ಟರ್ ಹಾಗೂ ಮಿಸ್ಸಸ್ ಮಹಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಜೊತೆ ಟಾಲಿವುಡ್‌ಗೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಒಂದು ವೇಳೆ ತೆಲುಗು ಸಿನಿಮಾಗಳಲ್ಲಿ ಯಶಸ್ಸು ಕಂಡರೆ, ಜಾಹ್ನವಿ ಕಪೂರ್‌ಗೆ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಲಿದೆ.


Click it and Unblock the Notifications











