'ಪೊನ್ನಿಯನ್ ಸೆಲ್ವನ್'ನಲ್ಲಿ ವಿಕ್ರಮ್, ಕಾರ್ತಿ ಮತ್ತು ಐಶ್ವರ್ಯಾಗಿಂತ ಹೆಚ್ಚು ಸಂಭಾವನೆ ಪಡೆದಿದ್ಯಾರು?

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ. ಇವರ ಬಹು ನಿರೀಕ್ಷಿತ ಸಿನಿಮಾ ಪೊನ್ನಿಯನ್ ಸೆಲ್ವನ್ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿಸಿವೆ ಅಷ್ಟೇ. ಸೆಪ್ಟೆಂಬರ್ 30ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ಕೇವಲ ಒಂದು ತಿಂಗಳು ಬಾಕಿ ಉಳಿದಿದೆ ಅಷ್ಟೇ.

'ಪೊನ್ನಿಯನ್ ಸೆಲ್ವನ್' ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಮಣಿರತ್ನಂ ನಿರ್ದೇಶಿಸಿದ ಈ ಸಿನಿಮಾ ಅಮರರ್ ಕಲ್ಕಿಯವರು ಕಾದಂಬರಿಯನ್ನು ಆಧರಿಸಿದ ಸಿನಿಮಾ ಆಗಿದೆ.

ಈ ಐತಿಹಾಸಿಕ ಮಹಾಕಾವ್ಯಕ್ಕೆ ಮಣಿರತ್ನಂ ಸಿನಿಮಾ ರೂಪ ಕೊಟ್ಟಿದ್ದಾರೆ. 'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲಿ ಭಾರತೀಯ ಚಿತ್ರರಂಗದ 50ಕ್ಕೂ ಹೆಚ್ಚು ಜನಪ್ರಿಯರ ಕಲಾವಿದರು ನಟಿಸಿದ್ದಾರೆ. ಇದೇ ವೇಳೆ ಪೊನ್ನಿಯನ್ ಸೆಲ್ವನ್ ಬಗ್ಗೆ ಬಗ್ಗೆ ಕಾಲಿವುಡ್‌ನಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ವಿಕ್ರಮ್, ಕಾರ್ತಿ, ಐಶ್ವರ್ಯಾ ರೈ ಬಚ್ಚನ್‌ಗಿಂತ ಹೆಚ್ಚು ಸಂಭಾವನೆಯನ್ನು ಒಬ್ಬ ನಟ ಪಡೆದಿದ್ದಾರೆ.

ಪ್ರಮುಖ ಪಾತ್ರದಲ್ಲಿ 15 ಮಂದಿ

ಪ್ರಮುಖ ಪಾತ್ರದಲ್ಲಿ 15 ಮಂದಿ

'ಪೊನ್ನಿಯನ್ ಸೆಲ್ವನ್' ಸಿನಿಮಾದಲ್ಲಿ 50ಕ್ಕೂ ಅಧಿಕ ಮಂದಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರಲ್ಲಿ ವಿಕ್ರಮ್, ಐಶ್ವರ್ಯಾ ರೈ, ಜಯಂ ರವಿ, ಕಾರ್ತಿ, ತ್ರಿಶಾ, ಐಶ್ವರ್ಯಾ ಲಕ್ಷ್ಮಿ, ಶರತ್‌ಕುಮಾರ್, ಜಯರಾಮ್, ಪ್ರಕಾಶ್ ರಾಜ್, ಪಾರ್ತಿಬನ್ ಸೇರಿದಂತೆ ಸುಮಾರು 15 ಮಂದಿ ಮಾತ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಿಯಾಜ್ ಖಾನ್, ವಿನೋತಿನಿ, ವಿಜಯ್ ಯೇಸುದಾಸ್ ಸೇರಿದಂತೆ ಹಲವರು ಪೋಷಕ ಪಾತ್ರಗಳಲ್ಲಿಯೂ ನಟಿಸಿದ್ದಾರೆ.

ಹೆಚ್ಚು ಸಂಭಾವನೆ ಯಾರಿಗೆ?

ಹೆಚ್ಚು ಸಂಭಾವನೆ ಯಾರಿಗೆ?

'ಪೊನ್ನಿಯನ್ ಸೆಲ್ವನ್' ಸಿನಿಮಾದಲ್ಲಿ ಅದೆಷ್ಟೇ ನಟರಿದ್ದರೂ, ವಿಕ್ರಮ್, ಕಾರ್ತಿ, ಜಯಂ ರವಿ, ಐಶ್ವರ್ಯಾ ರೈ, ತ್ರಿಶಾ ಸಂಭಾವನೆ ಮೇಲೆ ಎಲ್ಲರ ಕಣ್ಣಿದೆ. ಆದರೆ, ಕಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಬೇರೆನೇ ಇದೆ. ಜಯಂ ರವಿ ಉಳಿದವರಿಗಿಂತಲೂ ಅತೀ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಸಂಭಾವನೆ ಎಷ್ಟು?

ಸಂಭಾವನೆ ಎಷ್ಟು?

'ಪೊನ್ನಿಯನ್ ಸೆಲ್ವನ್‌'ಗಾಗಿ ವಿಕ್ರಮ್, ಕಾರ್ತಿ ಮತ್ತು ಐಶ್ವರ್ಯ ರೈಗೆ ಭಾರೀ ಸಂಭಾವನೆ ಸಿಕ್ಕಿದೆ ಎಂದು ಈ ಹಿಂದೆನೇ ವರದಿಯಾಗಿತ್ತು. ಆದರೆ, ಇತ್ತೀಚೆಗೆ ತಮಿಳು ಚಿತ್ರರಂಗದಲ್ಲಿ ಜಯಂ ರವಿಗೆ ಇವರೆಲ್ಲರಿಗಿಂತಲೂ ಹೆಚ್ಚು ಸಂಭಾವನೆ ಸಿಕ್ಕಿದೆ ಎಂಬ ಮಾತು ಓಡಾಡುತ್ತಿದೆ. ಈ ಸುದ್ದಿ ಕಾಲಿವುಡ್‌ನಲ್ಲಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಹೀಗಾಗಿ ಜಯಂ ರವಿ ಉಳಿದ ಸ್ಟಾರ್ ನಟರಿಗಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದಂತೆ, ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ.

ಹೀರೊ ಯಾರು?

ಹೀರೊ ಯಾರು?

'ಪೊನ್ನಿಯನ್ ಸೆಲ್ವನ್' ಸ್ಟೋರಿ ಪ್ರಕಾರ, ಸಿನಿಮಾದಲ್ಲಿ ಚೋಳರ ರಾಜ ಅರುಲ್ಮೋಳಿ ವರ್ಮನ್ ಪ್ರಮುಖ. ಆದರೆ, ಸಿನಿಮಾದ ಕಥೆಯಲ್ಲಿ ವಂದಿಯಾದೇವನ್ ಪಾತ್ರದಲ್ಲಿರುವ ಕಾರ್ತಿಯನ್ನು ಪ್ರಮುಖ ಪಾತ್ರದಲ್ಲಿ ತೋರಿಸಲಾಗಿದೆ ಎನ್ನಲಾಗುತ್ತಿದೆ. ಹಾಗೆ ನೋಡಿದರೆ ವಂದಿಯಾದೇವನ್ ಪಾತ್ರ ಮಾಡಿದ್ದ ಕಾರ್ತಿಗೆ ಹೆಚ್ಚು ಸಂಭಾವನೆ ಸಿಗಬೇಕಿತ್ತು. ಆದರೆ, ಜಯಂ ರವಿಗೆ ಇಷ್ಟೊಂದು ಸಂಭಾವನೆ ಏಕೆ ಕೊಟ್ಟಿದ್ದಾರೆಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

More from Filmibeat

English summary
Jayam Ravi Got More Remuneration Than Vikram, Karthi Aishwarya Rai In Ponniyan Selvan, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X