ಮುಂಬೈನಲ್ಲಿ ಬೀಡು ಬಿಟ್ಟ ಪ್ರೇಮ್-ಅರ್ಜುನ್ ಜನ್ಯ: ದಸರಾದಂದು ಧ್ರುವ ಫ್ಯಾನ್ಸ್‌ಗೆ ಗಿಫ್ಟ್?

'ಏಕ್‌ ಲವ್ ಯಾ' ಸಿನಿಮಾ ಬಳಿಕ ಜೋಗಿ ಪ್ರೇಮ್ ಹೊಸ ಸಿನಿಮಾ ಕೈಗೆತ್ತಿಕೊಂಡಿರೋದು ಗೊತ್ತೇ ಇದೆ. ಇದೇ ಮೊದಲ ಬಾರಿಗೆ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಅದಕ್ಕಾಗಿ ಕಳೆದ ಕೆಲವು ತಿಂಗಳಿನಿಂದ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ.

ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಫಸ್ಟ್ ಕಾಂಬಿನೇಷನ್ ಆಗಿರೋದ್ರಿಂದ ಸಿನಿಮಾ ಕ್ಯೂರಿಯಾಸಿಟಿ ಹುಟ್ಟಿಸಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಹೇಗೆ ಕಾಣಿಸಿಕೊಳ್ಳಬಹುದು? ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಪ್ರೇಮ್ ಇನ್ನೂ ಸಿನಿಮಾದ ಟೈಟಲ್ ಆಗಲಿ, ಟೀಸರ್ ಆಗಲಿ ರಿಲೀಸ್ ಮಾಡಿಲ್ಲ. ಚಿಕ್ಕದೊಂದು ಸುಳಿವು ಕೂಡ ಬಿಟ್ಟುಕೊಡಲಿಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿ ಬೀಡುಬಿಟ್ಟಿರುವ ಪ್ರೇಮ್ ಹಾಗೂ ಅರ್ಜುನ್ ಸರ್ಜಾ ಸಿಕ್ಕಾಪಟ್ಟೆ ಕೆಲಸ ಮಾಡುತ್ತಿದ್ದಾರೆ.

ಜೋಗಿ ಪ್ರೇಮ್ ಜೊತೆ ಅರ್ಜುನ್ ಜನ್ಯಗೆ ಇದು ಮೊದಲ ಸಿನಿಮಾವೇನು ಅಲ್ಲ. ಹೀಗಾಗಿ ಪ್ರೇಮ್ ಸ್ಟೈಲ್ ಏನು ಅನ್ನೋದು ಗೊತ್ತಿದೆ. ಅಲ್ಲದೆ ಇದು ಬಿಗ್ ಬಜೆಟ್ ಸಿನಿಮಾ ಆಗಿರೋದ್ರಿಂದ ಕೇವಲ ಟೈಟಲ್ ಟೀಸರ್ ಬಗ್ಗೆನೇ ಹೆಚ್ಚು ತಲೆಕೆಡಿಸಿಕೊಂಡಂತಿದೆ. ಸದ್ಯ ಇಬ್ಬರೂ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಅರ್ಜುನ್ ಜನ್ಯ- ಪ್ರೇಮ್ ಬ್ಯುಸಿ

ಅರ್ಜುನ್ ಜನ್ಯ- ಪ್ರೇಮ್ ಬ್ಯುಸಿ

ಕೆಲವು ದಿನಗಳ ಹಿಂದಷ್ಟೇ ಜೋಗಿ ಪ್ರೇಮ್, ಅರ್ಜುನ್ ಜನ್ಯ ಮುಂಬೈನಲ್ಲಿದ್ದರು. ಸಂಗೀತ ಕ್ಷೇತ್ರದ ದಿಗ್ಗಜ ತೌಫಿಕ್ ಖುರೇಶಿ ಜೊತೆ ಕಾಣಿಸಿಕೊಂಡಿದ್ದರು. ಈಗ ಅರ್ಜುನ್ ಜನ್ಯ ಹಾಗೂ ಪ್ರೇಮ್ ಇಬ್ಬರೂ ರೆಕಾರ್ಡಿಂಗ್ ಸ್ಟುಡಿಯೋದಲ್ಲಿರೋ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಮುಂದಿನ ಸಿನಿಮಾಗೆ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಟೈಟಲ್ ಟೀಸರ್ ಲೋಡಿಂಗ್ ಅಂತನೂ ಬರೆದುಕೊಂಡಿದ್ದಾರೆ. ಹೀಗಾಗಿ ಧ್ರುವ ಸರ್ಜಾ ಫ್ಯಾನ್ಸ್ ಕಾತುರದಿಂದ ಎದುರು ನೋಡುತ್ತಿದ್ದಾರೆ.

ಧ್ರುವ ಫ್ಯಾನ್ಸ್‌ಗೆ ದಸರಾ ಗಿಫ್ಟ್

ಧ್ರುವ ಫ್ಯಾನ್ಸ್‌ಗೆ ದಸರಾ ಗಿಫ್ಟ್

ಧ್ರುವ ಸರ್ಜಾ -ಪ್ರೇಮ್ ಕಾಂಬಿನೇಷನ್‌ ಟೈಟಲ್ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ನೀಡಿಲ್ಲ. ಪ್ರೇಮ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡುವ ಕ್ರಿಯೇಟಿವ್ ಆಗಿಯೇ ಮಾಡುತ್ತಾರೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಪ್ರೇಮ್ ಟೈಟಲ್ ಲಾಂಚ್ ಮಾಡುವುದಕ್ಕೆ ತಲೆಕೆಡಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ, ದಸರಾ ಹಬ್ಬಕ್ಕೆ ಆಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡುವುದಕ್ಕೆ ಸಜ್ಜಾಗಿದ್ದಾರೆ. ನಾಡ ಹಬ್ಬಕ್ಕೆ ಟೈಟಲ್ ಟೀಸರ್ ರಿಲೀಸ್ ಮಾಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ.

ಕೆವಿಎನ್ ನಿರ್ಮಾಣ

ಕೆವಿಎನ್ ನಿರ್ಮಾಣ

ಅಂದ್ಹಾಗೆ ಈ ರೇರ್ ಕಾಂಬಿನೇಷನ್ ಸಿನಿಮಾವನ್ನು ಸ್ಯಾಂಡಲ್‌ವುಡ್‌ನ ದುಬಾರಿ ಸಿನಿಮಾಗಳ ನಿರ್ಮಾಣ ಸಂಸ್ಥೆ ಕೆವಿಎನ್‌ ಪ್ರೊಡಕ್ಷನ್ ಪ್ರಡ್ಯೂಸ್ ಮಾಡುತ್ತಿದೆ. ಈ ಸಿನಿಮಾ ಕೂಡ ಬಿಗ್ ಬಜೆಟ್ ಸಿನಿಮಾ ಆಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಲಿದೆ. ಪ್ರೇಮ್ ಮತ್ತೆ ಪಕ್ಕಾ ಮಾಸ್ ಸಿನಿಮಾವನ್ನು ನಿರ್ದೇಶನ ಮಾಡುವುದಕ್ಕೆ ಸಜ್ಜಾಗಿದ್ದಾರೆ.

ಯುದ್ಧದ ಮುನ್ನುಡಿ ಆರಂಭ

ಯುದ್ಧದ ಮುನ್ನುಡಿ ಆರಂಭ

ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್‌ ಸಿನಿಮಾ ಈಗಾಗಲೇ ಸೆಟ್ಟೇರಿದೆ. ಪ್ರೇಮ್ 70ರ ದಶಕದ ಕಥೆಯನ್ನು ಹೆಣೆದಿದ್ದು, ಅದಕ್ಕಾಗಿ ಒಂದು ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರೆ. ಹೀಗಾಗಿ ಇದೊಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ ಎನ್ನಬಹುದು. ಟೈಟಲ್ ಲಾಂಚ್‌ ಅನ್ನೇ ದೊಡ್ಡ ಮಟ್ಟದಲ್ಲಿ ಮಾಡಲಾಗುತ್ತಿದ್ದು, ಅರ್ಜುನ್ ಜನ್ಯ ಹಾಗೂ ಪ್ರೇಮ್ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ.

More from Filmibeat

English summary
Jogi Prem And Arjun Janya Working For Dhruva Sarja Movie Teaser Launch, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X