ಲಕ್ಕಿ ಥಿಯೇಟರ್‌ಗಳಿಗೆ ಪಟ್ಟು ಹಿಡಿದರೇ ಜೋಗಿ ಪ್ರೇಮ್? ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತಾ 'ಕೆಡಿ'?
ಜೋಗಿ ಪ್ರೇಮ್ ಮೊದಲಿನಿಂದಲೂ ಕೆಲವು ನಂಬಿಕೆಗಳನ್ನು ಇಟ್ಟುಕೊಂಡಿದ್ದಾರೆ. ಆರಂಭದಲ್ಲಿ ಅವರ ಸಿನಿಮಾಗಳು ವರ ಮಹಾಲಕ್ಷ್ಮಿ ಹಬ್ಬದಂದು ರಿಲೀಸ್ ಆಗುತ್ತಿದ್ದವು. ಇಲ್ಲ ಸೆಟ್ಟೇರುತ್ತಿದ್ದರು. ಅದನ್ನು ಅವರು ಅದೃಷ್ಟದ ದಿನವೆಂದು ಪರಿಗಣಿಸಿದ್ದರು. ಹಾಗೇ ತಮ್ಮ ಸಿನಿಮಾಗಳನ್ನು ಅವರ ಲಕ್ಕಿ ಚಿತ್ರಮಂದಿರಗಳಲ್ಲಿಯೇ ರಿಲೀಸ್ ಮಾಡುತ್ತಿದ್ದರು. ಅದೇನೇ ಆದರೂ ಆ ಥಿಯೇಟರ್‌ಗಳನ್ನು ಮಾತ್ರ ಮಿಸ್ ಮಾಡುತ್ತಿರಲಿಲ್ಲ.
ಇದೇ ಏಪ್ರಿಲ್ 30ರಂದು ಜೋಗಿ ಪ್ರೇಮ್ ನಿರ್ದೇಶಿಸಿದ 'ಕೆಡಿ ದಿ ಡೆವಿಲ್' ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಜೋಗಿ ಪ್ರೇಮ್ ಥಿಯೇಟರ್‌ಗಳ ಸೆಟಪ್ ಮಾಡುತ್ತಿದ್ದಾರೆಂದು ಸುದ್ದಿ ಹರಿದಾಡುತ್ತಿದೆ. ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರಿಂದ ಅವರದ್ದೇ ಕೆಲವು ಥಿಯೇಟರ್‌ಗಳು ಇವೆ. ಹೀಗಾಗಿ ಆ ಚಿತ್ರಮಂದಿರಗಳಲ್ಲಿಯೇ 'ಕೆಡಿ' ರಿಲೀಸ್‌ಗೆ ಮುಂದಾಗಿತ್ತು. ಆದರೆ, ಪ್ರೇಮ್ ಅದಕ್ಕೆ ಒಪ್ಪುತ್ತಿಲ್ಲ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

'ಕೆಡಿ' ಬಿಗ್ ಬಜೆಟ್ ಸಿನಿಮಾ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ತಾರಾ ಬಳಗವೇ ಸೇರಿಕೊಂಡಿದೆ. ಹೀಗಾಗಿ ಬೆಂಗಳೂರಿನ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗೋದು ಗ್ಯಾರಂಟಿ. ಆದರೆ, ಥಿಯೇಟರ್ ಸೆಟಪ್ ಮಾಡುತ್ತಿರೋ ಕೆವಿಎನ್‌ಗೆ ಜೋಗಿ ಪ್ರೇಮ್ ಅವರ ಎರಡು ಲಕ್ಕಿ ಥಿಯೇಟರ್‌ಗಳ ಲಿಸ್ಟ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಪ್ರೇಮ್ ಲಕ್ಕಿ ಥಿಯೇಟರ್‌ಗಳಲ್ಲಿ 'ಕೆಡಿ'
'ಕೆಡಿ' ಸಿನಿಮಾ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದಾಗಿರೋ ತ್ರಿವೇಣಿಯಲ್ಲಿ ರಿಲೀಸ್ ಮಾಡುವುದಕ್ಕೆ ಕೆವಿಎನ್ ಮುಂದಾಗಿತ್ತು ಎನ್ನಲಾಗಿದೆ. ಆದರೆ, ಜೋಗಿ ಪ್ರೇಮ್ ಇದಕ್ಕೆ ಒಪ್ಪಿಲ್ಲ. ಅವರ ಎರಡು ಲಕ್ಕಿ ಚಿತ್ರಮಂದಿರಗಳಾದ ನರ್ತಕಿ ಹಾಗೂ ಸಂತೋಷ್ ಎರಡರಲ್ಲಿ ಒಂದು ಚಿತ್ರಮಂದಿರದಲ್ಲಿ ರಿಲೀಸ್ ಮಾಡಬೇಕು. ಅದೇ ಪ್ರಮುಖ ಚಿತ್ರಮಂದಿರ ಆಗಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರಂತೆ.
ಇತ್ತ ಕೆವಿಎನ್ ಸಂಸ್ಥೆಯಿಂದ ತ್ರಿವೇಣಿ ನಮ್ಮದೇ ಚಿತ್ರಮಂದಿರ ಅದರಲ್ಲೇ ರಿಲೀಸ್ ಮಾಡೋಣ ಎನ್ನುತ್ತಿದ್ದಾರೆ ಅಂತ ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಹಾಗಂತ ಇದೊಂದೇ ಏರಿಯಾ ಅಲ್ಲ. ಬೆಂಗಳೂರಿನ ಕೆಲವು ಚಿತ್ರಮಂದಿರಗಳು ಇದರಲ್ಲಿ ಸೇರಿವೆ. ಹಾಗೇ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿರುವ ಅವರ ಲಕ್ಕಿ ಥಿಯೇಟರ್‌ಗಳಲ್ಲಿ ರಿಲೀಸ್ ಆಗಬೇಕು ಎಂದು ಪಟ್ಟು ಹಿಡಿದಿದ್ದಾರಂತೆ.
ಪ್ರೇಮ್ ಲಕ್ಕಿ ಥಿಯೇಟರ್‌ಗಳ್ಯಾವುವು?
ಜೋಗಿ ಪ್ರೇಮ್‌ಗೆ ಕೆಜಿ ರಸ್ತೆಯಲ್ಲಿ ನರ್ತಕಿ ಹಾಗೂ ಸಂತೋಷ್ ಲಕ್ಕಿ ಚಿತ್ರಮಂದಿರಗಳಾಗಿವೆ. ಇದಕ್ಕೂ ಮುನ್ನ ಅತೀ ದೊಡ್ಡ ಚಿತ್ರಮಂದಿರ ಕಪಾಲಿ ಇವರ ಅದೃಷ್ಟದ ಚಿತ್ರಮಂದಿರ ಆಗಿತ್ತು. ಅದನ್ನು ಮುಚ್ಚಿದ ಬಳಿಕ ಈ ಎರಡು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಾರೆ.
ಇದರೊಂದಿಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರ, ಮಂಡ್ಯದ ಗುರುಶ್ರೀ, ದಾವಣಗೆರೆಯ ಅಶೋಕ ಹಾಗೂ ಮೈಸೂರಿನ ಸಂಗಮ್ ಚಿತ್ರಮಂದಿರಗಳು ಜೋಗಿ ಪ್ರೇಮ್‌ಗೆ ಲಕ್ಕಿ ಥಿಯೇಟರ್‌ಗಳಾಗಿವೆ.
'ದಿ ವಿಲನ್'ಗೆ ಬಂದ ಶೇರ್ ಎಷ್ಟು?
ಜೋಗಿ ಪ್ರೇಮ್ ಈ ಹಿಂದೆ ನಿರ್ದೇಶಿಸಿದ್ದ ಮಲ್ಟಿಸ್ಟಾರರ್ ಸಿನಿಮಾ 'ದಿ ವಿಲನ್' ಈ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. 'ದಿ ವಿಲನ್' ಆವರೇಜ್ ಹಿಟ್ ಲಿಸ್ಟ್ ಸೇರಿದ್ದರೂ, ಅವರ ಲಕ್ಕಿ ಚಿತ್ರಮಂದಿರಗಳಿಂದ ಉತ್ತಮ ಶೇರ್ ಬಂದಿವೆ. ಅವರ ಕೆಲವು ಲಕ್ಕಿ ಚಿತ್ರಮಂದಿರಗಳ ಕಲೆಕ್ಷನ್ ಲಿಸ್ಟ್ ಇಲ್ಲಿದೆ.
ದಿ ವಿಲನ್ (ಶೇರ್) ಅಂದಾಜು
ಸಂತೋಷ್ (ಬೆಂಗಳೂರು)- 55 ರಿಂದ 60 ಲಕ್ಷ ರೂ. (ಶೇರ್)
ವೀರೇಶ್ (ಬೆಂಗಳೂರು) - 40-45 ಲಕ್ಷ ರೂ. (ಶೇರ್)
ಮಹಾವೀರ+ಸಂಜಯ್ (ಮಂಡ್ಯ)- 39 ಲಕ್ಷ ರೂ. (ಶೇರ್)
ಸಂಗಮ್ (ಮೈಸೂರು) - 40 ರಿಂದ 45 ಲಕ್ಷ ರೂ. (ಶೇರ್)
ಅಶೋಕ (ದಾವಣಗೆರೆ) - 40 ರಿಂದ 45 ಲಕ್ಷ ರೂ. (ಶೇರ್)
ಧ್ರುವ ಸರ್ಜಾ ಸರ್ಜಾಗೂ ಕೆಲವು ಲಕ್ಕಿ ಥಿಯೇಟರ್‌ಗಳು ಇವೆ. 'ಅದ್ಧೂರಿ', 'ಬಹದ್ದೂರು', 'ಭರ್ಜರಿ', 'ಪೊಗರು' ಈ ನಾಲ್ಕು ಸಿನಿಮಾಗಳೂ ತುಮಕೂರಿನ ಮಾರುತಿ ಥಿಯೇಟರ್‌ನಲ್ಲಿ 50 ರಿಂದ 100 ದಿನ ಪ್ರದರ್ಶನ ಕಂಡಿವೆ. ಇದು ವಿತರಕರ ವಲಯದಿಂದ ಸಿಕ್ಕಿರುವ ಅಂಶಗಳಾಗಿದ್ದು, ಅಧಿಕೃತ ಕಲೆಕ್ಷನ್ ವಿವರ ಲಭ್ಯವಾಗಿಲ್ಲ. ಆದರೆ, ಈ ಎಲ್ಲಾ ಚಿತ್ರಮಂದಿರಗಳು ಪ್ರೇಮ್‌ಗೆ ಲಕ್ಕಿ ಅಂತಾನೇ ಸಾಬೀತಾಗಿದೆ. ಹೀಗಾಗಿ 'ಕೆಡಿ'ಗೂ ಈ ಎಲ್ಲಾ ಚಿತ್ರಮಂದಿರಗಳು ಬೇಕು ಜೋಗಿ ಪ್ರೇಮ್ ಪಟ್ಟು ಹಿಡಿದು ಕೂತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.


Click it and Unblock the Notifications