'ಡೆವಿಲ್' ಮುಗಿಯುತ್ತಿದ್ದಂತೆ ಪ್ರೇಮ್‌ಗೆ ಗ್ರೀನ್ ಸಿಗ್ನಲ್ ಕೊಟ್ರಾ ದರ್ಶನ್? ರಕ್ಷಿತಾ ಪ್ರಡ್ಯೂಸರ್? ಕೆವಿಎನ್ ಕಥೆಯೇನು?

ರೇಣುಕಾಸ್ವಾಮಿ ಪ್ರಕರಣಕ್ಕೂ ಮುನ್ನ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಸಿನಿಮಾಗಳ ಲೈನ್‌ಅಪ್ ಬೇರೆನೇ ಇತ್ತು. ಈಗ ಬೇರೆ ಇದೆ. ಕೆಲವು ನಿರ್ಮಾಪಕರಿಗೆ ದರ್ಶನ್ ಹಣವನ್ನು ಹಿಂತಿರುಗಿಸಿದ್ದರು. ಮುಂದಿನ ದಿನಗಳಲ್ಲಿ ಸಿನಿಮಾಗಳನ್ನು ಮಾಡುವ ಭರವಸೆಯನ್ನು ನೀಡಿದ್ದರು. ಹೀಗಾಗಿ ಕೆಲವು ಸಿನಿಮಾಗಳಿಂದ ದರ್ಶನ್ ಖುದ್ದು ಹೊರ ಬಂದಿದ್ದಾರೆ. ಈಗ ಇಂತಹದ್ದೇ ಮತ್ತೊಂದು ಸುದ್ದಿ ಹೊರ ಬಿದ್ದಿದೆ.

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ ಸೂರಪ್ಪ ಬಾಬುಗೆ ದರ್ಶನ್ ಅಡ್ವಾನ್ಸ್ ಹಣ ಹಿಂತಿರುಗಿಸಿದ್ದರು. ಆ ವೇಳೆನೇ ಇನ್ನೊಂದು ಸುದ್ದಿನೂ ಹಬ್ಬಿತ್ತು. ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್‌ ಸಿನಿಮಾದಿಂದಲೂ ಹೊರ ಬಂದಿದ್ದಾರೆಂಬ ಸುದ್ದಿ ಹಬ್ಬಿತ್ತು. ಆ ವೇಳೆ ಕೆವಿಎನ್‌ ಪ್ರೊಡಕ್ಷನ್ ಇದೆಲ್ಲ ಸುಳ್ಳು ಎಂದು ಸ್ಪಷ್ಠೀಕರಣ ನೀಡಿತ್ತು. ಈ ಬೆನ್ನಲ್ಲೇ ಮತ್ತೊಂದು ಸುದ್ದಿ ಹರಿದಾಡುತ್ತಿದೆ.

Jogi Prem will direct Darshan after Devil movie and Rakshita is the producer what about KVN Production

ಡೆವಿಲ್ ಸಿನಿಮಾ ಬಳಿಕ ದರ್ಶನ್‌ಗೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳುತ್ತಾರೆ. ಆ ಸಿನಿಮಾವನ್ನು ರಕ್ಷಿತಾ ಪ್ರೇಮ್ ಅವರೇ ನಿರ್ಮಾಣ ಮಾಡುತ್ತಾರೆಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೆ, ಕೆವಿಎನ್‌ ಸಂಸ್ಥೆಗೆ ದರ್ಶನ್ ಹಾಗೂ ಜೋಗಿ ಪ್ರೇಮ್ ಮಾಡಬೇಕಿದ್ದ ಸಿನಿಮಾ ಏನಾಯ್ತು? ಇದು ಹೊಸ ಪ್ರಾಜೆಕ್ಟ್? ಯಾವಾಗಿಂತ ಶುರು? ಇಂತಹದ್ದೇ ಒಂದಿಷ್ಟು ಗೊಂದಲಗಳಿಗೆ ಗಾಂಧಿನಗರದಲ್ಲಿ ಸಿಗುತ್ತಿರೋ ಉತ್ತರ ಏನು? ತಿಳಿಯುವುದಕ್ಕೆ ಮುಂದೆ ಓದಿ.

ಮುಂದೆ ಓದಿ..

'ಡೆವಿಲ್' ಬಳಿಕ ಜೋಗಿ ಪ್ರೇಮ್‌ಗೆ ಕಾಲ್‌ಶೀಟ್ ಕೊಟ್ಟ ದರ್ಶನ್?
ದರ್ಶನ್ ಕೆವಿಎನ್‌ ಪ್ರೊಡಕ್ಷನ್ ಜೊತೆನೂ ಸಿನಿಮಾ ಮಾಡ್ತಾರಾ?
ಡಿವಿವಿ ಧಾನಯ್ಯ ಜೊತೆ ಮಾಡಬೇಕಿದ್ದ ಸಿನಿಮಾ ಏನಾಯ್ತು?
ದರ್ಶನ್ ಸಿನಿಮಾಗೆ ರಕ್ಷಿತಾ ಪ್ರೇಮ್ ಸಡನ್ ಎಂಟ್ರಿ ಹೇಗಾಯ್ತು?

ಸಿನಿಮಾ ಇಂಡಸ್ಟ್ರಿ ಅಂದ್ಮೇಲೆ ಗಾಸಿಪ್ ಎಲ್ಲಾ ಕಾಮನ್. ಪ್ರತಿ ದಿನ ಒಂದಲ್ಲ ಒಂದು ಇಂತಹ ಸುದ್ದಿ ಕೇಳುತ್ತಲೇ ಇರುತ್ತೆ. ಈಗ ದರ್ಶನ್ ಸಿನಿಮಾವನ್ನು ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಾರೆಂಬ ಸುದ್ದಿ ಹರಿದಾಡುತ್ತಿದೆ. ದರ್ಶನ್ 'ಡಿವಿಲ್' ಮುಗಿಯುತ್ತಿದ್ದಂತೆ ರಕ್ಷಿತಾ ಸಿನಿಮಾ ಕಡೆಗೆ ದರ್ಶನ್ ಗಮನ ಹರಿಸಲಿದ್ದಾರಂತೆ. ಈ ಸಿನಿಮಾ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿದ್ದು, ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ ಎಂಬುವುದು ಸಿನಿಮಾ ಮಂದಿಯ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿ.

ಇದು ಹೇಗೆ ಸಾಧ್ಯ? ಈ ಪ್ರಶ್ನೆಗಳ ಜೊತೆಗೆ ಇನ್ನೂ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ಅವುಗಳಿಗೆ ಉತ್ತರ ಹೀಗೆ ಕೊಡುತ್ತಾರೆ. 'ಡೆವಿಲ್' ಮುಗಿಯುತ್ತಿದ್ದಂತೆ ದರ್ಶನ್ ತೆಲುಗು ನಿರ್ಮಾಪಕ ಡಿವಿವಿ ದಾನಯ್ಯ ಅವರ ಸಿನಿಮಾ ಮಾಡಬೇಕಿತ್ತಂತೆ. RRR ಸಿನಿಮಾ ನಿರ್ಮಾಣ ಮಾಡಿರುವ ಡಿವಿವಿ ದಾನಯ್ಯ ಹಾಗೂ ದರ್ಶನ್ ಜೊತೆ ಸಿನಿಮಾದ ಮಾತುಕಥೆ ನಡೆದಿತ್ತು. ಆದರೆ, ಕಾರಣಾಂತರಗಳಿಂದ ಅದು ಮುಂದಕ್ಕೆ ಹೋಗಿದೆ. ಮುಂದಿನ ವರ್ಷ ಫೆಬ್ರವರಿ ವೇಳೆಗೆ ದಾನಯ್ಯ ನಿರ್ಮಾಣದ ಸಂಸ್ಥೆ ಜೊತೆ ದರ್ಶನ್ ಸಿನಿಮಾ ಅನೌನ್ಸ್ ಆಗುತ್ತೆ ಎನ್ನುತ್ತಿವೆ ಮೂಲಗಳು.

Jogi Prem will direct Darshan after Devil movie and Rakshita is the producer what about KVN Production

ಈಗ ದಾನಯ್ಯ ಮಾಡಬೇಕಿತ್ತದ ಸಿನಿಮಾದ ಡೇಟ್ಸ್ ಅನ್ನು ರಕ್ಷಿತ್ ಪ್ರೇಮ್ ಹಾಗೂ ಜೋಗಿ ಪ್ರೇಮ್‌ಗೆ ದರ್ಶನ್ ಕೊಟ್ಟಿದ್ದಾರೆ. ಅದು ಅಕ್ಟೋಬರ್‌ ತಿಂಗಳಲ್ಲಿ ಮುಹೂರ್ತ ಆಗಬಹುದೆಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಈಗ ಕೆವಿಎನ್ ಪ್ರೊಡಕ್ಷನ್‌ಗೆ ದರ್ಶನ್ ಹಾಗೂ ಜೋಗಿ ಪ್ರೇಮ್ ಮಾಡಬೇಕಿದ್ದ ಸಿನಿಮಾ ಏನಾಯ್ತು? ಈ ಪ್ರಶ್ನೆಗೆ ಸಿನಿಮಾ ಮಂದಿಯ ಬಳಿ ಅಷ್ಟೊಂದು ಸ್ಪಷ್ಟ ಉತ್ತರವಿಲ್ಲ. ಕೆವಿಎನ್‌ ಜೊತೆ ಸಿನಿಮಾ ಮಾಡುತ್ತಾರಾ? ಇಲ್ವಾ? ಅನ್ನೋದು ಕ್ಲಾರಿಟಿ ಇಲ್ಲ.

ಈ ಹಿಂದೆ ಕೂಡ ಕೆವಿಎನ್‌ ಸಂಸ್ಥೆ ಜೊತೆ ಸಿನಿಮಾ ಮಾಡುವುದನ್ನು ದರ್ಶನ್ ಕೈ ಬಿಟ್ಟಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆ ವೇಳೆ ಖುದ್ದು ಕೆವಿಎನ್ ಇದೆಲ್ಲ ಸುಳ್ಳು ಎಂದಿತ್ತು. ದರ್ಶನ್ ಹಾಗೂ ಪ್ರೇಮ್ ಇಬ್ಬರೂ ಸೇರಿ ಕೆವಿಎನ್‌ಗೆ ಮಾಡಬೇಕಿದ್ದ ಸಿನಿಮಾ ಸದ್ಯ ಮುಂದಕ್ಕೆ ಹೋಗಿರಬಹುದು. ರಕ್ಷಿತಾ ಪ್ರೇಮ್ ಸಿನಿಮ ಮುಗಿಸಿ, ತೆಲುಗು ನಿರ್ಮಾಪಕ ದಾನಯ್ಯ ಅವರ ಸಿನಿಮಾದಲ್ಲಿ ನಟಿಸಿದ ಬಳಿಕ ಕೆವಿಎನ್‌ ಜೊತೆ ಸಿನಿಮಾ ಮಾಡಬಹುದೆಂಬ ಸುದ್ದಿ ಹರಿದಾಡುತ್ತಿದೆ.

ಇದು ಕೇವಲ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ. ದರ್ಶನ್ ಆಗಲಿ, ರಕ್ಷಿತಾ ಪ್ರೇಮ್, ಜೋಗಿ ಪ್ರೇಮ್ ಆಗಲಿ ಇಲ್ಲವೇ ಕೆವಿಎನ್ ಪ್ರೊಡಕ್ಷನ್ ಆಗಲಿ, ಈ ಪ್ರಾಜೆಕ್ಟ್‌ ಬಗ್ಗೆ ಎಲ್ಲೂ ಮಾಹಿತಿಯನ್ನು ಹಂಚಿಕೊಂಡಿಲ್ಲ. ಅತ್ತ ಪ್ರೇಮ್ ಕೆಡಿಯಲ್ಲಿ ಬ್ಯುಸಿಯಾಗಿದ್ದರೆ, ಇತ್ತ ದರ್ಶನ್‌ 'ಡೆವಿಲ್'ನಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Jogi Prem will direct Darshan after Devil movie and Rakshita is the producer what about KVN Production.
Read more about: darshan prem rakshita prem
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X