ಪ್ರಶಾಂತ್ ನೀಲ್ ಸಿನಿಮಾಕ್ಕೆ ಎಸ್ ಎಂದ ಕಮಲ್ ಹಾಸನ್!
ಪ್ರಶಾಂತ್ ನೀಲ್ ಕೇವಲ ಮೂರು ಸಿನಿಮಾಳಿಗೆ ಸ್ಟಾರ್ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಾಲು-ಸಾಲು ಸಿನಿಮಾಗಳು ಅವರ ಕೈಯಲ್ಲಿವೆ.
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ನಿರ್ದೇಶಕರದಲ್ಲಿ ತೊಡಗಿರುವ ಪ್ರಶಾಂತ್ ನೀಲ್, ಇನ್ನೂ ಕೆಲವು ಸ್ಟಾರ್ ನಿರ್ದೇಶಕರ ಸಿನಿಮಾಗಳನ್ನು ನಿರ್ದೇಶನ ಮಾಡಲಿದ್ದಾರೆ. ಪ್ರಶಾಂತ್ ನೀಲ್ ಪಟ್ಟಿಯಲ್ಲಿ ಪ್ರಭಾಸ್ ಬಳಿಕ, ಜೂ ಎನ್‌ಟಿಆರ್, ರಾಮ್ ಚರಣ್ ತೇಜ ಇದ್ದಾರೆ. ಇದೀಗ ಹೊಸ ಸುದ್ದಿಯೆಂದರೆ ಮತ್ತೊಬ್ಬ ಹಿರಿಯ ಸ್ಟಾರ್ ನಟರೊಬ್ಬರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಪ್ರಶಾಂತ್ ನೀಲ್.
ಪ್ರಶಾಂತ್ ನೀಲ್, ತಮಿಳಿನ ಸ್ಟಾರ್ ನಟ ಕಮಲ್ ಹಾಸನ್‌ಗೆ ಪ್ರಶಾಂತ್ ನೀಲ್ ಕತೆ ಹೇಳಿದ್ದು ಕಮಲ್‌ಗೆ ಕತೆ ಇಷ್ಟವಾಗಿದೆ ಹಾಗೂ ಸಿನಿಮಾದಲ್ಲಿ ನಟಿಸಲು ಕಮಲ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಕಮಲ್‌ಗಾಗಿ ಹೊಸ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿಲ್ಲ, ಬದಲಿಗೆ ಜೂ ಎನ್‌ಟಿಆರ್‌ಗಾಗಿ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿಯೇ ಕಮಲ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಜೂ ಎನ್‌ಟಿಆರ್ ಅವರ 31ನೇ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ. ಕಮಲ್ ಹಾಸನ್‌ಗೆ ಪ್ರಶಾಂತ್ ನೀಲ್ ಕತೆ ಹೇಳಿದ್ದು, ಕತೆಯನ್ನು ಬಹುವಾಗಿ ಮೆಚ್ಚಿಕೊಂಡು, ನಟಿಸಲು ಒಪ್ಪಿಗೆ ಸೂಚಿಸಿದ್ದಾರಂತೆ ಕಮಲ್.
ಕಮಲ್ ಹಾಸನ್ ಪ್ರಸ್ತುತ 'ವಿಕ್ರಂ' ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇದರ ಜೊತೆಗೆ 'ಇಂಡಿಯನ್ 2' ಸಿನಿಮಾದಲ್ಲಿಯೂ ಕಮಲ್ ನಟಿಸಿದ್ದಾರೆ. ಕಮಲ್ ಹಾಸನ್ ಹೊಸ ಸಿನಿಮಾವೊಂದರ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಕಮಲ್ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಆ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ನಾಯಕ ಹಾಗೂ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.


Click it and Unblock the Notifications











