ಅಯ್ಯೋ ಇಲ್ಲಪ್ಪ ಅಂತಲೇ ನಿಶ್ಚಿತಾರ್ಥಕ್ಕೆ ರೆಡಿಯಾದ್ರಾ ರಶ್ಮಿಕಾ-ವಿಜಯ್ ದೇವರಕೊಂಡ? ಯಾವಾಗ ಎಂಗೇಜ್ಮೆಂಟ್?

2018ರಲ್ಲಿ 'ಗೀತಾ ಗೋವಿಂದಂ' ಸಿನಿಮಾದ ಒಂದೇ ಒಂದು ತುಣುಕು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ರಶ್ಮಿಕಾ-ವಿಜಯ್ ದೇವರಕೊಂಡ ಮಧ್ಯೆ ಏನೋ ನಡೀತಿದೆ ಅನ್ನೋ ಗುಮಾನಿ ಹುಟ್ಟಿಸಿದ್ದು ಇದೇ ವಿಡಿಯೋ. ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥಕ್ಕೆ ಬ್ರೇಕ್ ಬಿದ್ದಿದ್ದಕ್ಕೂ ಇದೇ ವಿಡಿಯೋನೇ ಕಾರಣ.

ಈ ಸಿನಿಮಾ ರಿಲೀಸ್ ಆದಲ್ಲಿಂದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಲವ್ ಸ್ಟೋರಿ ಮುನ್ನೆಲೆಗೆ ಬಂದಿತ್ತು. ಅಂದಿನಿಂದ ಇಂದಿನವರೆಗೂ ಇವರಿಬ್ಬರ ಪ್ರೇಮಕಥೆ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇದೆ. ಇನ್ನೊಂದು ಕಡೆ ಈ ಜೋಡಿ ಕೂಡ ಆಗಾಗ ಒಟ್ಟಿಗೆ ಜಿಮ್, ಟೂರ್ ಅಂತೆಲ್ಲ ಓಡಾಡಿದ್ದು ಇದೆ. ಹೀಗಾಗಿ ಸಿನಿಪ್ರಿಯರಿಗೆ ಇಬ್ಬರೂ ಡೇಟಿಂಗ್ ಮಾಡುತ್ತಿರಬಹುದು ಅನ್ನೋ ಗುಮಾನಿ ಅಂತೂ ಇದ್ದೇ ಇತ್ತು.

Kannada news: Actress Rashmika Mandanna and Vijay Deverakonda may get engaged next month

ಈಗ ರಶ್ಮಿಕಾ-ವಿಜಯ್ ದೇವರಕೊಂಡ ಬಗೆಗಿನ ಹೊಸ ಸುದ್ದಿಯೊಂದು ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅದೇನಂದ್ರೆ, ಪ್ರೇಮ ಪಕ್ಷಿಗಳು ಶೀಘ್ರದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರಂತೆ. ಇಬ್ಬರ ಕುಟುಂಬಗಳೂ ಇವರ ಎಂಗೇಜ್‌ಮೆಂಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಸದ್ಯ ಸಿನಿಮಾ ಲೋಕದಲ್ಲಿ ಇದೇ ಸುದ್ದಿ ಹಲ್‌ಚಲ್ ಎಬ್ಬಿಸಿದೆ. ಅಷ್ಟಕ್ಕೂ ಈ ಜೋಡಿ ನಿಶ್ಚಿತಾರ್ಥದ ಬಗ್ಗೆ ಏನಿದೆ ಸುದ್ದಿ?

ಪ್ರೀತಿ ಮಾಡೋ ವಿಷಯದ ಬಗ್ಗೆ ಪ್ರತಿಬಾರಿ ಚರ್ಚೆ ಆದಾಗಲೂ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಿರಾಕರಿಸುತ್ತಲೇ ಇದ್ದಾರೆ. ಈ ಹಿಂದೆ ಹಲವು ಬಾರಿ ನೀಡಿದ ಸಂದರ್ಶನದಲ್ಲಿ ರಶ್ಮಿಕಾ, ವಿಜಯ್ ದೇವರಕೊಂಡ ಇಬ್ಬರೂ ನಾವಿಬ್ಬರೂ ಉತ್ತಮ ಗೆಳೆಯರು ಎಂದೇ ಹೇಳಿಕೊಂಡಿದ್ದೇ ಹೆಚ್ಚು. ಹೀಗಿದ್ದರೂ, ದಿಢೀರನೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಮುಂದಿನ ತಿಂಗಳು ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಫೆಬ್ರವರಿಯಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ ಎಂಗೇಜ್ ಆಗುತ್ತಾರೆ ಅನ್ನೋ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇನ್ನೊಂದು ಕಡೆ ಮತ್ತೊಂದು ಸೆಲೆಬ್ರೆಟಿ ಮದುವೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾದು ಕೂತಿದ್ದಾರೆ. ಆದರೆ, ಇದೂ ಕೂಡ ಗಾಳಿ ಸುದ್ದಿಯೋ ಅಥವಾ ನಿಜವಾಗಲೂ ಎಂಗೇಜ್ ಆಗುತ್ತಿದ್ದಾರೋ ಅನ್ನೋ ಗೊಂದಲಕ್ಕೆ ಇಬ್ಬರೂ ಪ್ರತಿಕ್ರಿಯೆ ನೀಡಿಲ್ಲ.

Kannada news: Actress Rashmika Mandanna and Vijay Deverakonda may get engaged next month

'ಅನಿಮಲ್' ಸಿನಿಮಾದ ಪ್ರಚಾರದ ವೇಳೆ ನಂದಮೂರಿ ಬಾಲಕೃಷ್ಣ ನಿರೂಪಣೆಯ 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ' ಟಾಕ್ ಶೋಗೆ ರಶ್ಮಿಕಾ ಹೋಗಿದ್ದರು. ಈ ಸಂದರ್ಭದಲ್ಲಿ ರಣ್‌ಬೀರ್ ಕಪೂರ್ ಈ ಜೋಡಿಯ ಬಗ್ಗೆ ಕೆಲವು ಸುಳಿವುಗಳನ್ನು ನೀಡಿದ್ದರು. ಅಲ್ಲದೇ ವಿಜಯ್ ದೇವರಕೊಂಡ ಕರೆ ಮಾಡುವಂತೆ ರಶ್ಮಿಕಾ ಹೇಳಿದ್ದರು. ಯಾಕಂದ್ರೆ, ರಶ್ಮಿಕಾ ಫೋನ್ ಮಾಡಿದ ಕೂಡಲೇ ವಿಜಯ್ ಕಾಲ್ ಅನ್ನು ಸ್ವೀಕರಿಸುತ್ತಾರೆ ಅಂತಲೂ ಹೇಳಿದ್ದರು. ಆ ಸಂದರ್ಭದಲ್ಲಿ ರಶ್ಮಿಕಾ ನಾಚಿ ನೀರಾಗಿದ್ದರು.

ಇನ್ನು ಕೆಲವು ಸಂದರ್ಭಗಳಲ್ಲಿ ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಕೆಲವು ಹಬ್ಬವನ್ನು ಆಚರಣೆ ಮಾಡಿದ್ದನ್ನು ನೆಟ್ಟಿಗರೇ ಕಂಡು ಹಿಡಿದಿದ್ದರು. ಇತ್ತೀಚೆಗೆ ದೀಪಾವಳಿ ಹಬ್ಬವನ್ನು ಕೂಡ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ಹೈದರಾಬಾದ್‌ನಲ್ಲಿ ಸೆಲೆಬ್ರೆಟ್ ಮಾಡಿದ್ದು, ಸುದ್ದಿಯಾಗಿತ್ತು. ಆದ್ರೀಗ ಇದೂ ಕೂಡ ಗಾಳಿ ಸುದ್ದಿನೇನಾ? ಅಥವಾ ನಿಜನಾ ಅನ್ನೋದನ್ನು ಈ ಜೋಡಿಯೇ ಹೇಳಬೇಕಿದೆ.

ಸದ್ಯಕ್ಕೆ ರಶ್ಮಿಕಾ ಮಂದಣ್ಣ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟಿಸುತ್ತಿರುವ 'ಪುಷ್ಪ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ 'ರೈನ್‌ಬೋ', 'ದಿ ಗರ್ಲ್‌ಫ್ರೆಂಡ್' ಹಾಗೂ ಹಿಂದಿ ಸಿನಿಮಾ 'ಛಾವಾ' ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದಾರೆ. ಅದೇ ವಿಜಯ್ ದೇವರಕೊಂಡ 'ಫ್ಯಾಮಿಲಿ ಸ್ಟಾರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Rashmika Mandanna and Vijay Deverakonda to get engaged in February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X