100 ಕೋಟಿಗೆ ಕತ್ರಿನಾ ಕೈಫ್ ವಿಕ್ಕಿ ಕೌಶಲ್ ಮದುವೆ ವಿಡಿಯೋ ಸೇಲ್: ಏನಂತಿದೆ ಬಾಲಿವುಡ್?

ಬಾಲಿವುಡ್‌ನಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಬಗ್ಗೆ ಅಷ್ಟೊಂದು ಹಲ್‌ಚಲ್ ಎಬ್ಬಿಸಿದ್ದರೂ, ಈ ಜೋಡಿ ಮಾತ್ರ ತಲೆ ತುಟಿಪಿಟಿಕ್ ಅಂದಿರಲಿಲ್ಲ. ತಮಗೂ ಈ ಮದುವೆಗೂ ಮ್ಯಾಟರ್‌ಗೂ ಸಂಬಂಧವೇ ಇಲ್ಲವೇನೋ ಅನ್ನುವಂತೆ ತಮ್ಮ ಕೆಲಸ ಮಾಡಿಕೊಂಡು ಆರಾಮಾಗಿದ್ದರು. ಆದ್ರೀಗ ಈ ಜೋಡಿ ಹಕ್ಕಿಗಳು ಮುಂಬೈ ಬಿಟ್ಟು ಸೀದಾ ಜೈಪುರಕ್ಕೆ ಹಾರಿದೆ. ಮದುವೆಗೆ ಎರಡು ದಿನ ಬಾಕಿ ಉಳಿದಿರುವಾಗ ಕ್ಯಾಮರಾ ಮುಂದೆ ಬಂದು ಪೋಸ್ ಕೊಟ್ಟಿದ್ದಾರೆ.

ಕತ್ರಿನಾ ಕೈಫ್ ವಿಕ್ಕಿಕೌಶಲ್ ಮದುವೆ ಬಗ್ಗೆ ಎಷ್ಟು ಚರ್ಚೆ ಆಗುತ್ತಿದೆಯೋ ಅಷ್ಟೇ ಗಂಭೀರ ಚರ್ಚೆ ಇನ್ನೊಂದು ವಿಷಯದ ಬಗ್ಗೆನೂ ಆಗುತ್ತಿದೆ. ಅದೇನಪ್ಪಾ ಅಂದರೆ, ಈ ಜೋಡಿ ಮದುವೆ ವಿಡಿಯೋಗೆ ಬಾರಿ ಬೇಡಿಕೆ ಬಂದಿದೆಯಂತೆ. ಓಟಿಟಿ ವೇದಿಕೆಯೊಂದು ಈ ಜೋಡಿಗೆ ಬರೋಬ್ಬರಿ 100 ಕೋಟಿ ಆಫರ್ ಇಟ್ಟಿದೆಯಂಯತೆ. ಇದೊಂದು ಸುದ್ದಿ ಬಾಲಿವುಡ್ ಮಂದಿಯನ್ನು ಇನ್ನಿಲ್ಲದಂತೆ ತಲೆ ಕೆಡಿಸಿದೆ.

100 ಕೋಟಿಗೆ ಡೀಲ್‌ಗೆ ಕ್ಯಾಟ್ ವಿಕ್ಕಿ ಸಹಿ

100 ಕೋಟಿಗೆ ಡೀಲ್‌ಗೆ ಕ್ಯಾಟ್ ವಿಕ್ಕಿ ಸಹಿ

ಹೌದು.. ಕೆಲವು ದಿನಗಳಿಂದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ಈ ವೇಳೆ OTT ಸಂಸ್ಥೆಯೊಂದು ಕತ್ರಿನಾ ವಿಕ್ಕಿ ಜೊತೆ ಡೀಲ್ ಕುದುರಿಸಿದೆಯಂತೆ. ಇಬ್ಬರು ಮದುವೆಯ ಘಳಿಗೆಯನ್ನು OTT ಸಂಸ್ಥೆ ಸೆರೆ ಹಿಡಿದು ತನ್ನ ವೇದಿಕೆಯಲ್ಲಿ ಪ್ರದರ್ಶನ ಮಾಡಲಿದೆ. ಇದಕ್ಕೆ ಕತ್ರಿನಾ-ವಿಕ್ಕಿ ಮುಂದೆ ಬರೋಬ್ಬರಿ 100 ಕೋಟಿ ಆಫರ್ ಇಟ್ಟಿದೆಯಂತೆ. ಆದರೆ, ಇಷ್ಟು ದೊಡ್ಡ ಆಫರ್ ಕೊಟ್ಟ ಆ ಸಂಸ್ಥೆ ಯಾವುದು? ನಿಜಕ್ಕೂ 100 ಕೋಟಿ ಆಫರ್ ಮಾಡಿದೆಯಾ? ಅನ್ನುವ ಮಾಹಿತಿಯನ್ನು ಹೊರಹಾಕಿಲ್ಲ.

ಕತ್ರಿನಾ-ವಿಕ್ಕಿ 100 ಕೋಟಿ ಆಫರ್ ಕೊಟ್ಟಿದ್ಯಾಕೆ?

ಕತ್ರಿನಾ-ವಿಕ್ಕಿ 100 ಕೋಟಿ ಆಫರ್ ಕೊಟ್ಟಿದ್ಯಾಕೆ?

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಈ ವರ್ಷದ ಕೊನೆಯ ಅದ್ಧೂರಿ ಮದುವೆ. ಹೀಗಾಗಿ ಎಲ್ಲರ ಕಣ್ಣು ಇಬ್ಬರ ಮದುವೆ ಮೇಲೆ ಬಿದ್ದಿದೆ. ಅಷ್ಟಕ್ಕೂ 100 ಕೋಟಿ ಆಫರ್ ಮಾಡಿದ್ದಕ್ಕೆ ಕಾರಣವಿದೆ. ಈ ಮೂಲಕ ಇಬ್ಬರ ಮದುವೆ ಎಕ್ಸ್‌ಕ್ಲೂಸಿವ್ ಆಗಿ ಕವರ್ ಮಾಡಲಿದೆ. ಎರಡೂ ಕುಟುಂಬದ ವಿಶೇಷ ಸಂದರ್ಶನ ಸಿಗಲಿದೆ. ಅಲ್ಲದೆ ಕತ್ರಿನಾ ಹಾಗೂ ವಿಕ್ಕಿ ಸ್ನೇಹಿತರನ್ನೂ ಮಾತಾಡಿಸಲಿದೆ. ಹೀಗಾಗಿ ಈ ಜೋಡಿ ಮದುವೆ ವಿಡಿಯೋ ಲೀಕ್ ಆಗದಂತೆ ಕಟ್ಟೆಚ್ಚರ ವಹಿಸಿದೆ ಎಂದು ಹೇಳಲಾಗುತ್ತಿದೆ.

ಡಾಕ್ಯೂಮೆಂಟರಿ ಅಲ್ಲ ಇದು ಸಿನಿಮಾ

ಡಾಕ್ಯೂಮೆಂಟರಿ ಅಲ್ಲ ಇದು ಸಿನಿಮಾ

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆಯನ್ನು OTT ವೇದಿಕೆಯಲ್ಲಿ ಸಿನಿಮಾ ರೀತಿ ತೋರಿಸಲು ಮುಂದಾಗಿದೆಯಂತೆ. ಇಬ್ಬರ ಅಭಿಮಾನಿಗಳಿಗೂ ಟ್ರಿಟ್ ಕೊಡುವುದಕ್ಕೆ ಈ ಪ್ರಯತ್ನಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಇಬ್ಬರಿಗೂ 100 ಕೋಟಿ ಆಫರ್ ಮುಂದಿಟ್ಟು, ಕತ್ರಿನಾ ಹಾಗೂ ವಿಕ್ಕಿ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಈಗಾಗಲೇ ಚಿತ್ರೀಕರಣ ಮಾಡುವ ತಂಡ ಸೆಟಪ್ ಮಾಡಿಕೊಂಡು ಇಬ್ಬರ ಆಗಮನಕ್ಕಾಗಿ ಕಾಯುತ್ತಿತ್ತು ಎಂದು ಹೇಳಲಾಗಿದೆ.

ಡಿಪ್ಪಿ-ರಣ್‌ವೀರ್‌ಗೂ ಕೊಟ್ಟಿತ್ತು ಸೇಮ್ ಆಫರ್

ಡಿಪ್ಪಿ-ರಣ್‌ವೀರ್‌ಗೂ ಕೊಟ್ಟಿತ್ತು ಸೇಮ್ ಆಫರ್

ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಮದುವೆ ಕೂಡ ಅದ್ದೂರಿಯಾಗೇ ನಡೆದಿತ್ತು. ಆ ವೇಳೆ ಈ ಜೋಡಿಗೂ ಕೂಡ ಆಫರ್ ನೀಡಲಾಗಿತ್ತಂತೆ. ಆದರೆ, ಮದುವೆ ತಮ್ಮ ಖಾಸಗಿ ವಿಷಯ ಎನ್ನುವ ಕಾರಣಕ್ಕೆ ಈ ಆಫರ್ ಅನ್ನು ತಿರಸ್ಕರಿಸಿತ್ತು ಎನ್ನಲಾಗಿದೆ. ಆದರೆ, ಕತ್ರಿನಾ, ವಿಕ್ಕಿ ಜೋಡಿ ಮಾತ್ರ 100 ಕೋಟಿ ಡೀಲ್ ಒಪ್ಪಿಕೊಂಡಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಸುದ್ದಿ ಎಷ್ಟು ಸತ್ಯ ಅನ್ನುವುದು ಮದುವೆಯ ಬಳಿಕವಷ್ಟೇ ಗೊತ್ತಾಗಲಿದೆ.

More from Filmibeat

English summary
Katrina Kaif and Vicky Kaushal got big offer of Rs. 100 crore by an OTT for their wedding footage? Big rumour is going around in bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X