»   » ಕತ್ರಿನಾ ಕೈಫ್ ಗೆ ಕಪೂರ್ ಖಾಂದಾನ್ ನಿಂದ ಬಹಿಷ್ಕಾರ?

ಕತ್ರಿನಾ ಕೈಫ್ ಗೆ ಕಪೂರ್ ಖಾಂದಾನ್ ನಿಂದ ಬಹಿಷ್ಕಾರ?

Posted By:
Subscribe to Filmibeat Kannada

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಮತ್ತು ಕಪೂರ್ ಖಾಂದಾನಿನ ರಣಬೀರ್ ಕಪೂರ್ ಸ್ಪೇನ್ ಇಬಿಜಾ ಬೀಚಿನಲ್ಲಿ ಸುತ್ತಾಡುತ್ತಿದ್ದ ಬಿಕಿನಿ ಚಿತ್ರಗಳು ಯಾವಾಗ ಲೀಕ್ ಆಯಿತೋ ಅಂದಿನಿಂದ ಕಪೂರ್ ಖಾಂದಾನ್ ಕತ್ರಿನಾ ಕೈಫ್ ಮೇಲೆ ಫುಲ್ ಗುಸ್ಸಾಮೆ ಹೈ ಎನ್ನುವ ಖಬರ್ ಮುಂಬೈನಿಂದ ಬರುತ್ತಿದೆ.

ಆವಾಗಾವಾಗ ಪುರುಸೊತ್ತು ಇದ್ದಾಗಲೆಲ್ಲಾ ಕಪೂರ್ ಬಂಗ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕತ್ರಿನಾಳನ್ನು ರಿಷಿ ಕಪೂರ್ ಮತ್ತು ನೀತು ಕಪೂರ್ ಆದರದಿಂದಲೇ ಬರ ಮಾಡಿಕೊಳ್ಳುತ್ತಿದ್ದರು. ರಣಬೀರ್ ಜೊತೆ ಕಾಲಕಳೆಯಲು ಕತ್ರಿನಾ ರಾತ್ರಿ ಹೊತ್ತಿಗೆ ಆವಾಗಾವಾಗ ಬರುತ್ತಿದ್ದರು ಎನ್ನುವ ಗಾಸಿಪ್ ಸುದ್ದಿ ಕೂಡಾ ಹರಿದಾಡುತ್ತಿತ್ತು.

ತನ್ನ ಹುಟ್ಟಿದ ಹಬ್ಬವನ್ನು ರಣಬೀರ್ ಕಪೂರಿನ ಕೃಷ್ಣರಾಜ್ ಅಪಾರ್ಟ್ಮೆಂಟಿನಲ್ಲಿ ಕತ್ರಿನಾ ಆಚರಿಸಿಕೊಂಡಿದ್ದರು. ಈಗ ಕತ್ರಿನಾ ತಮ್ಮ ಮನೆಗೆ ಬರುವುದು ರಣಬೀರ್ ತಂದೆ ರಿಷಿ ಕಪೂರಿಗೆ ಸುತರಾಂ ಇಷ್ಟವಿಲ್ಲವಿಂತೆ. ಅಲ್ಲದೇ, ತನ್ನ ಮನೆಗೆ ಭೇಟಿ ನೀಡುವುದಕ್ಕೂ ಸದ್ಯಕ್ಕೆ ಬಹಿಷ್ಕಾರ ಹಾಕಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಣದಲ್ಲಿ ಸುತ್ತಾಡುತ್ತಿದೆ.

ಎಷ್ಟಾದರೂ ರಣಬೀರ್ ಕಪೂರ್ 'ಕಪೂರ್ ಖಾಂದಾನಿನ ಕುಡಿ'ಯಲ್ಲವೇ? ರಣ್ಬೀರ್ ತನ್ನ ತಂದೆಯ ಈ ನಿರ್ಧಾರದಿಂದ ಬೇಸರಗೊಂಡಿದ್ದಾರೆ ಮತ್ತು ಸಮಯೋಚಿತ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಇದೆ.. ಮುಂದೆ ಸ್ಲೈಡಿನಲ್ಲಿ..

ರಣಬೀರ್ - ಕತ್ರಿನಾ

ತಂದೆಯ ಈ ಕಠಿಣ ನಿರ್ಧಾರದ ವಿರುದ್ದ ತಿರುಗಿ ಬೀಳಲು ರಣಬೀರ್ ನಿರ್ಧಾರಿಸಿದ್ದಾರೆ ಎನ್ನುವ ಸುದ್ದಿ ಕೂಡಾ ಇದೆ. ಅಲ್ಲದೇ ತಂದೆ ಮತ್ತು ತಾಯಿಯ ಆಶೀರ್ವಾದ ಪಡೆದು ತನ್ನ ಮತ್ತು ಕತ್ರಿನಾ ನಡುವಣ ಸಂಬಂಧವನ್ನು ಇನ್ನೂ ಒಂದು ಹೆಜ್ಜೆ ಮುಂದಿಡಲು ರಣಬೀರ್ ನಿರ್ಧರಿಸಿದ್ದಾರೆ ಎನ್ನುವುದು ಮುಂಬೈ ಬಾಲಿವುಡ್ ಗಾಸಿಪ್ ಲೋಕದ ಸುದ್ದಿ.

ಕತ್ರಿನಾ ಕಪೂರ್ ಖಾಂದಾನಿನ ಬಹುರಾಣಿ

ಒಂದು ವೇಳೆ ರಿಷಿ ಮತ್ತು ನೀತು ಕಪೂರ್ ಒಪ್ಪಿಕೊಂಡರೆ ಕತ್ರಿನಾ ಕೈಫ್ ಬಾಲಿವುಡ್ ಜಗತ್ತಿನ ಪ್ರತಿಷ್ಠಿತ ಕಪೂರ್ ವಂಶದ ಸೊಸೆಯಾದಾರೂ ಆಗಬಹುದು. ಭಗವಾನ್ ಜಾನೆ ಕಿಸ್ಕಾ ನಸೀಬ್ ಮೆ ಕ್ಯಾ ಲಿಖ್ಖಾ ಹೇ? ಅಲ್ವೇ..

ಕತ್ರಿನಾ - ರಣಬೀರ್ ಪ್ರೇಮಾಂಕುರ

ಅಮರ ಮಧುರ ಪ್ರೇಮ.. ಎಂದು ಇಬ್ಬರೂ ಪ್ರೇಮಾಂಕುರಕ್ಕೆ ಬಿದ್ದದ್ದು ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಚಿತ್ರದ ಚಿತ್ರೀಕರಣದ ಸಮಯದ ನಂತರ. ಇದಾದ ನಂತರ ನಮಸ್ತೆ ಲಂಡನ್ ಚಿತ್ರದಲ್ಲಿ ರಿಷಿ ಕಪೂರ್, ಕತ್ರಿನಾ ತಂದೆಯ ಪಾತ್ರದಲ್ಲಿ ನಟಿಸಿದ್ದರು.

ಕತ್ರಿನಾ - ನೀತು ಕಪೂರ್

ಕತ್ರಿನಾ ಮತ್ತು ರಣಬೀರ್ ಕಪೂರ್ ಜೊತೆಜೊತೆಯಾಗಿ ಲಂಡನ್ ನಲ್ಲಿ ಸುತ್ತಾಡುತ್ತಿದ್ದನ್ನು ನೀತು ಕಪೂರ್ ಗಮನಿಸಿದ್ದರು. ಅಲ್ಲದೇ ರಣಬೀರ್ ತಂದೆ, ತಾಯಿ ಇತ್ತೀಚೆಗೆ ಮಾಧ್ಯಮಗಳಿಗೆ ಲೀಕ್ ಆದ ಫೋಟೋಗಳಿಂದ ತುಂಬಾ ಬೇಸರಗೊಂಡಿದ್ದಾರೆ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.

ಸಲ್ಲು ಜೊತೆ ಇಲ್ಲ

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಜೊತೆ ಟು..ಟು..ಬಿಟ್ಟ ನಂತರ ಕತ್ರಿನಾ, ರಣಬೀರ್ ಜೊತೆ ಕಾಣಿಸಿಕೊಳ್ಳ ತೊಡಗಿದರು. ಹಲವು ಬಾರಿ ಕಪೂರ್ ಕುಟುಂಬದ ಜೊತೆ ಕತ್ರಿನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ ಕೂಡಾ..

English summary
It looks like the B-Town's actress Katrina Kaif is facing the heat from the Kapoor Khaandaan over the recent leaked pictures of the actress and her rumoured beau Ranbir Kapoor holidaying in Ibiza. Reportedly, the situation have worsened to such an extent that Kat has been allegedly restricted from visiting the Kapoor residence frequently.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada