ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಪ್ರೇಮಗಳ ದಿನ ಆಚರಣೆ ಮಾಡಿಕೊಳ್ಳಲ್ವಂತೆ: ಅಡ್ಡ ಬಂದಿದ್ದು ಸಲ್ಮಾನ್ ಖಾನ್

ಕತ್ರಿನಾ ಕೈಫ್ ಹಾಗೂ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ಮದುವೆ ಬಳಿಕ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಸೀಕ್ರೆಟ್ ಆಗಿ ಕೇವಲ ಆಪ್ತರ ಸಮ್ಮುಖದಲ್ಲಿ ಮದುವೆ ಆಗಿದ್ದಈ ಜೋಡಿ, ಈಗ ಏನೇ ಮಾಡಿದರೂ ಸುದ್ದಿಯಲ್ಲಿರುತ್ತೆ. ವಿವಾಹಕ್ಕೂ ಮುನ್ನ ಹಾಗೂ ವಿವಾಹದ ಬಳಿಕ ಕತ್ರಿನಾ-ವಿಕ್ಕಿ ಕೌಶಲ್ ತನ್ನ ಖಾಸಗಿ ಬದುಕನ್ನು ಸಾರ್ವಜನಿಕರಿಂದ ದೂರವೇ ಇಟ್ಟಿದ್ದಾರೆ. ಆದರೂ ಬಾಲಿವುಡ್ ಅಂದಮೇಲೆ ಕೇಳಬೇಕಾ? ಗಾಳಿಸುದ್ದಿಗಳಿಗೇನು ಕಮ್ಮಿ ಹೇಳಿ.

ಬಾಲಿವುಡ್​ನ ಈ ಸೀಕ್ರೆಟ್ ​ಜೋಡಿ ವಿವಾಹದ ಬಳಿಕ ಮೊದಲ ಪ್ರೇಮಗಳ ದಿನದಂದೇ ಆಚರಣೆ ಮಾಡಿಕೊಳ್ಳುವುದಿಲ್ಲವಂತೆ. ಮದುವೆ, ಹನಿಮೂನ್, ಎಲ್ಲವೂ ಗುಟ್ಟಗುಟ್ಟಾಗಿ ಮುಗಿಸಿಕೊಂಡು ಬಂದಿದ್ದ ಕತ್ರಿನಾ ಕೈಫ್ ಹಾಗೂ ವಿಕ್ಕಿಕೌಶಲ್ ಪ್ರೇಮಿಗಳ ದಿನ ಏನು ಪ್ಲ್ಯಾನ್ ಮಾಡಬಹುದೆಂಬ ನಿರೀಕ್ಷೆಯಿತ್ತು. ಅದ್ರೀಗ ಇಬ್ಬರೂ ವ್ಯಾಲೆಂಟೈನ್ಸ್ ಡೇ ದಿನ ಒಟ್ಟಿಗೆ ಇರಲ್ವಂತೆ. ಇಂತಹದ್ದೊಂದು ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ಪ್ರೇಮಿಗಳ ದಿನಕ್ಕೆ ಕತ್ರಿನಾ-ವಿಕ್ಕಿ ಬ್ರೇಕ್

ಪ್ರೇಮಿಗಳ ದಿನಕ್ಕೆ ಕತ್ರಿನಾ-ವಿಕ್ಕಿ ಬ್ರೇಕ್

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆಯನ್ನೇ ಗಡಿಬಿಡಿಯಲ್ಲಿ ಆದಂತಿತ್ತು. ಕೇವಲ ಆಪ್ತರಿಗೆ ಹಾಗೂ ಬಾಲಿವುಡ್‌ನ ಕೆಲವೇ ಕೆಲವು ಸ್ನೇಹಿತರಿಗೆ ಆಹ್ವಾನ ನೀಡಲಾಗಿತ್ತು. ಕೆಲವರಂತೂ ಇಷ್ಟೊಂದು ಗುಟ್ಟಾಗಿ ಯಾಕೆ ಮದುವೆ ಆದರು ಅಂತ ಮಾತಾಡಿಕೊಂಡಿದ್ದೂ ಇದೆ. ಒಪ್ಪಿಕೊಂಡ ಸಿನಿಮಾಗಳಿಗಾಗಿ ಹನಿಮೂನ್‌ ಕೂಡ ಅವಸರವಾಗಿಯೇ ನಡೆದು ಹೋಗಿತ್ತು. ಈಗ ಎದ್ದಿರುವ ವಿಷಯವೇನಂದರೆ, ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ಪ್ರೇಮಿಗಳ ದಿನ ಜೊತೆಗೆ ಇರುವುದಿಲ್ಲವಂತೆ. ಅದಕ್ಕೆ ಕಾರಣ ಏನು ಅಂತ ಹುಡುಕಿದರೆ ಸಲ್ಮಾನ್ ಖಾನ್ ವಿರುದ್ಧ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

 'ಟೈಗರ್ 3' ಶೂಟಿಂಗ್ ಆರಂಭಿಸಿದ ಸಲ್ಮಾನ್

'ಟೈಗರ್ 3' ಶೂಟಿಂಗ್ ಆರಂಭಿಸಿದ ಸಲ್ಮಾನ್

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ಪ್ರೇಮಿಗಳ ದಿನದಂದು ದೂರ ಆಗಲು ಕಾರಣ ಸಲ್ಮಾನ್ ಖಾನ್. ಯಾಕಂದ್ರೆ, ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ 'ಟೈಗರ್ 3' ಶೂಟಿಂಗ್ ಆರಂಭ ಆಗಲಿದೆಯಂತೆ. ಯಶ್ ರಾಜ್ ಫಿಲಂಸ್ ಫೆಬ್ರವರಿ 05 ರಿಂದ ಸಿನಿಮಾ ಶೂಟಿಂಗ್ ಆರಂಭ ಮಾಡುವುದಾಗಿ ಇಬ್ಬರೂ ತಿಳಿಸಿದೆ. ಇದಕ್ಕೆ ಸಲ್ಮಾನ್ ಖಾನ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಶೂಟಿಂಗ್ ದೆಹಲಿಯಲ್ಲಿ ನಡೆಯುತ್ತಿರುವುದರಿಂದ ಪತಿ ವಿಕ್ಕಿ ಕೌಶಲ್ ಬಿಟ್ಟು ಒಲ್ಲದ ಮನಸ್ಸಿನಿಂದ ಹೋಗಬೇಕಿದೆ.

ಎರಡು ವಾರ ಟೈಗರ್ 3 ಶೂಟಿಂಗ್

ಎರಡು ವಾರ ಟೈಗರ್ 3 ಶೂಟಿಂಗ್

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಇಬ್ಬರ ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ಟೈಗರ್ 3' ಸಿನಿಮಾ ನೋಡಲು ಫ್ಯಾನ್ಸ್ ಕಾದು ಕೂತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಎರಡೂ ಟೈಗರ್ ಸಿರೀಸ್‌ಗಳೂ ಕೂಡ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿದೆ. ಹೀಗಾಗಿ ಮೂರನೇ ಚಾಪ್ಟರ್ ಕೂಡ ಥ್ರಿಲ್ಲಿಂಗ್ ಆಗಿರುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ದೆಹಲಿಯಲ್ಲಿ ನಡೆಯುವ ಶೂಟಿಂಗ್ ಕಮ್ಮಿ ಅಂದರೂ 12 ರಿಂದ 13 ದಿನ ನಡೆಯಲಿದೆಯಂತೆ. ಹೀಗಾಗಿ ಪ್ರೇಮಿಗಳ ದಿನಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರಂತೆ.

ಈ ವರ್ಷ 'ಟೈಗರ್ 3' ರಿಲೀಸ್

ಈ ವರ್ಷ 'ಟೈಗರ್ 3' ರಿಲೀಸ್

ಕತ್ರಿನಾ ಕೈಫ್ ಹಾಗೂ ಸಲ್ಮಾನ್ ಖಾನ್ ಜೊತೆಯಾಗಿ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ದೆಹಲಿಯ ಶೂಟಿಂಗ್ ಬಳಿಕ ಇನ್ನೂ ಶೂಟಿಂಗ್ ಬಾಕಿ ಉಳಿದುಕೊಳ್ಳಲಿದ್ದು, ಮತ್ತೊಂದು ಹಂತದ ಚಿತ್ರೀಕರಣ ಮಾರ್ಚ್ 10 ರಿಂದ ಆರಂಭ ಆಗಲಿದ್ಯಂತೆ. ಹೀಗಾಗಿ ಈ ವರ್ಷದೊಳಗೆ 'ಟ್ರೈಗರ್ 3' ಸಿನಿಮಾ ಶೂಟಿಂಗ್ ಮುಗಿಸಲಿದ್ದಾರಂತೆ. ನಿರ್ಮಾಣ ಸಂಸ್ಥೆ ಕೂಡ ಇದೇ ವರ್ಷ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಇಟ್ಟುಕೊಂಡಿದ್ದಾರೆ.

More from Filmibeat

English summary
Katrina Kaif to spend Valentines Day without Vicky Kaushal after marriage. Katrina Kaif and Salman Khan will be in delhi for shooting Tiger 3. Salman Khan will start shoot for the movie from this Saturday, February 5, 2022.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X