Keerthy Suresh: ವಿಜಯ್ ಆಯ್ತು.. ಅನಿರುದ್ಧ್ ಆಯ್ತು.. ಕೀರ್ತಿ ಸುರೇಶ್ ಮದುವೆ ಬಗ್ಗೆ ಹೊಸ ಸುದ್ದಿ ಏನದು?
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತೀ ಹೆಚ್ಚು ಇಷ್ಟ ಪಡುವ ನಟಿ ಕೀರ್ತಿ ಸುರೇಶ್. ಇತ್ತೀಚೆಗೆ ಒಂದರ ಹಿಂದೊಂದು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುತ್ತಿದ್ದರೂ, ಅವಕಾಶಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಅದಕ್ಕೆ ಕೀರ್ತಿ ಸುರೇಶ್ ಪ್ರತಿಭೆ.
ಕೀರ್ತಿ ಸುರೇಶ್ ವೃತ್ತಿ ಬದುಕಿನಲ್ಲಿ ಕೆಲವು ತಪ್ಪು ಆಯ್ಕೆಗಳನ್ನು ಮಾಡಿಕೊಂಡಿದ್ದರು. ಅದು ಮಹಾನಟಿಯ ವೃತ್ತಿ ಬದುಕಿಗೆ ದೊಡ್ಡ ಏಟು ಕೊಟ್ಟಿದ್ದು ಸುಳ್ಳಲ್ಲ. ಹಾಗಂತ ಅವಕಾಶಗಳೇನು ಕಮ್ಮಿಯಾಗಿಲ್ಲ. ತೆಲುಗು ಭಾಷೆಯ ಸಿನಿಮಾಗಳಲ್ಲಿ ಕೀರ್ತಿ ಬ್ಯುಸಿಯಾಗಿಯೇ ಇದ್ದಾರೆ. ಸದ್ಯ ನಾನಿ ಜೊತೆ ನಟಿಸಿರುವ 'ದಸರಾ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ಕೀರ್ತಿ ಸುರೇಶ್‌ಗೆ ಅವರ ಮದುವೆ ಸುದ್ದಿನೇ ದೊಡ್ಡ ತಲೆ ನೋವಾಗಿದೆ. ಈಗಾಗಲೇ ಹಲವು ಬಾರಿ ಮದುವೆ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದವು. ಈಗ ಮತ್ತೊಂದು ಸುದ್ದಿ ಓಡಾಡುತ್ತಿದೆ. ಅಷ್ಟಕ್ಕೂ 'ಮಹಾನಟಿ' ಮದುವೆ ಹರಿದಾಡುತ್ತಿರುವ ಹೊಸ ಸುದ್ದಿಯೇನು? ತಿಳಿಯಲು ಮುಂದೆ ಓದಿ.
ಕೀರ್ತಿ ಸುರೇಶ್ ಮದುವೆ ಬಗ್ಗೆ ಮತ್ತೊಂದು ಸುದ್ದಿ
ಬಹುಭಾಷಾ ನಟಿ ಕೀರ್ತಿ ಸುರೇಶ್‌ಗೆ ಅಭಿಮಾನಿಗಳೇನು ಕಮ್ಮಿಯಿಲ್ಲ. ಈಕೆಯ ಪ್ರತಿಯೊಂದು ಸಿನಿಮಾಗಳನ್ನು ಅಭಿಮಾನಿಗಳು ಫಾಲೋ ಮಾಡುತ್ತಲೇ ಇರುತ್ತಾರೆ. ಹಾಗೇ ಮದುವೆ ವಿಚಾರ ಎದ್ದರೆ, ಫ್ಯಾನ್ಸ್‌ಗೆ ಚರ್ಚೆಯ ವಿಷಯವಾಗಿಬಿಡುತ್ತೆ. ಈಗ ಕೀರ್ತಿ ಸುರೇಶ್ ಮದುವೆ ಬಗ್ಗೆ ಮತ್ತೊಮ್ಮೆ ಚಿತ್ರರಂಗದಲ್ಲಿ ಬಿಸಿ ಬಿಸಿ ಚರ್ಚೆ ಓಡಾಡುತ್ತಿದೆ.
ಅಸಲಿಗೆ ಈಗ ಹರಿದಾಡುತ್ತಿರೋ ಸುದ್ದಿ ಏನಪ್ಪಾ ಅಂದ್ರೆ, 'ಮಹಾನಟಿ' ಕೀರ್ತಿ ಸುರೇಶ್ ಇನ್ನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರಂತೆ. ತಮ್ಮ ಬಹುಕಾಲದ ಗೆಳೆಯನನ್ನೇ ವರಿಸಲಿದ್ದಾರೆ ಅನ್ನೋ ಬಗ್ಗೆನೇ ಎಲ್ಲಾ ಕಡೆ ಚರ್ಚೆಯಾಗುತ್ತಿದೆ.

ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಕೀರ್ತಿ ಸುರೇಶ್
ಕೀರ್ತಿ ಸುರೇಶ್ ಮದುವೆ ಬಗ್ಗೆ ಈಗಾಗಲೇ ಹಲವು ವದಂತಿಗಳು ಬಂದು ಹೋಗಿವೆ. ಈಗ ಎದ್ದಿರೋ ಹೊಸ ಸುದ್ದಿ ಏನಂದ್ರೆ, ಕೀರ್ತಿ ಸುರೇಶ್ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲವಂತೆ. ಇತ್ತೀಚೆಗೆ ತಾವು ನಟಿಸುತ್ತಿರುವ ಸಿನಿಮಾದ ನಿರ್ದೇಶಕರಿಗೆ ಮಾಹಿತಿ ನೀಡಿದ್ದು, ಈಕೆ ನಟಿಸುತ್ತಿರುವ ಸಿನಿಮಾದ ಶೂಟಿಂಗ್ ಅನ್ನು ಬೇಗ ಮುಗಿಸುವಂತೆ ಮನವಿ ಮಾಡಿಕೊಂಡಿದ್ದಾರಂತೆ.
ಮೆಗಾಸ್ಟಾರ್ ಚಿರಂಜೀವಿಯ 'ಭೋಲಾ ಶಂಕರ್' ಸಿನಿಮಾದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಚಿರಂಜೀವಿ ತಂಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ನಿರ್ದೇಶಕರಿಗೂ ತಮ್ಮ ಪಾತ್ರದ ಶೂಟಿಂಗ್ ಅನ್ನು ಬೇಗನೇ ಮುಗಿಸುವಂತೆ ಮನವಿ ಮಾಡಿಕೊಂಡಿದ್ದಾರಂತೆ. ಈಗಾಗಲೇ ಒಪ್ಪಿಕೊಂಡಿರೋ ಮೂರು ಸಿನಿಮಾಗಳಲ್ಲಿ ಒಂದನ್ನು ಮುಗಿಸಿದ್ದು, ಇನ್ನು ಎರಡು ಸಿನಿಮಾಗಳನ್ನು ಮದುವೆ ಬಳಿ ಮುಗಿಸಿಕೊಡುವುದಾಗಿ ಹೇಳಿದ್ದಾರಂತೆ.
ಈ ಸುದ್ದಿನೂ ವದಂತಿಯೇ? ಇಲ್ಲ ನಿಜವೇ?
ಕೀರ್ತಿ ಸುರೇಶ್ ಮದುವೆ ಬಗ್ಗೆ ಯಾಕಿಷ್ಟು ಚರ್ಚೆ ಆಗುತ್ತಿದೆ ಅನ್ನೋದು ಅಚ್ಚರಿ ಮೂಡಿಸಿದೆ. ಮಹಾನಟಿ ಮದುವೆ ಈ ಹಿಂದೆ ಕೂಡ ಗಂಭೀರವಾಗಿ ಚರ್ಚೆಯಾಗಿತ್ತು. ದಳಪತಿ ವಿಜಯ್ ತಮ್ಮ ಪತ್ನಿಗೆ ವಿಚ್ಛೇದನ ನೀಡಿ, ಕೀರ್ತಿ ಸುರೇಶ್‌ರನ್ನು ಮದುವೆ ಆಗುತ್ತಾರೆಂಬ ಸುದ್ದಿ ಹಬ್ಬಿತ್ತು. ಇದಕ್ಕೂ ಹಿಂದೆ ಸಂಗೀತ ನಿರ್ದೇಶಕ ಅನಿರುದ್ಧ್ ಜೊತೆ ಈ ನಟಿಯ ಹೆಸರು ತಳುಕು ಹಾಕಿಕೊಂಡಿತ್ತು.
ಕಳೆದ ಕೆಲವು ದಿನಗಳಿಂದ ಕೀರ್ತಿ ಸುರೇಶ್ ಕೇರಳದ ತಮ್ಮ ಬಹುಕಾಲದ ಗೆಳೆಯನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರೊ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಆದರೆ, ಕೀರ್ತು ಸುರೇಶ್ ಅಮ್ಮ ಖುದ್ದಾಗಿ ಇದೆಲ್ಲಾ ಸುಳ್ಳು ಸುದ್ದಿ ಅಂತ ಮನವಿ ಮಾಡಿಕೊಂಡಿದ್ದರು. ಇದರ ಹೊರತಾಗಿಯೂ ಕೀರ್ತಿ ಸುರೇಶ್ ಮದುವೆ ಬಗ್ಗೆ ಎಲ್ಲೆಡೆ ಜೋರಾಗಿಯೇ ಸುದ್ದಿಯಾಗುತ್ತಿದೆ. ಆದರೆ, ಈ ಸುದ್ದಿಯಾದರೂ ನಿಜವೇ? ಇಲ್ಲ ಇದೂ ವದಂತಿಯೇ? ಅನ್ನೋ ಪ್ರಶ್ನೆಯಂತೂ ಹುಟ್ಟಿಕೊಂಡಿದೆ.


Click it and Unblock the Notifications











