'ಕೆಜಿಎಫ್ 2' ಸ್ಯಾಟಲೈಟ್ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟ?

ಯಶ್ ನಾಯಕರಾಗಿರುವ ಈ ವರ್ಷದ ಬಹು ನಿರೀಕ್ಷಿತ 'ಕೆಜಿಎಫ್ ಚಾಪ್ಟರ್ 2' ಚಿತ್ರದ ಹಾಡುಗಳ ತಯಾರಿ ಕಾರ್ಯ ಆರಂಭವಾಗಿದೆ. ಉಳಿದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ ಅಕ್ಟೋಬರ್ 23ರಂದು ತೆರೆಗೆ ಬರುವುದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಭರವಸೆ ನೀಡಿದ್ದಾರೆ.

Recommended Video

ರಶ್ಮಿಕಾ ಚಿತ್ರರಂಗಕ್ಕೆ ಬರೋಕೆ ಈ ಘಟನೆಯೇ ಕಾರಣ..? | Rashmika Mandanna

ಮೊದಲ ಭಾಗದಲ್ಲಿಯೇ ಜನರ ಹುಚ್ಚೆಬ್ಬಿಸಿದ್ದ ಚಿತ್ರಕ್ಕೆ ದೇಶದಾದ್ಯಂತ ಬೇಡಿಕೆ ಇದೆ. ಚಿತ್ರದ ಟ್ರೇಲರ್, ಹಾಡುಗಳ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದು ಸಿನಿಮಾ ಪ್ರಸಾರದ ಇತರೆ ಮಾಧ್ಯಮಗಳಿಗೂ ತಿಳಿದಿರುವ ಸಂಗತಿ. ಹಾಗಾಗಿ ಚಿತ್ರಮಂದಿರಗಳ ವಿತರಣೆ ಬೇಡಿಕೆಯಂತೆಯೇ ಒಟಿಟಿ ಹಾಗೂ ಉಪಗ್ರಹ ಹಕ್ಕುಗಳಿಗೂ ಭಾರಿ ಬೇಡಿಕೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಕೆಜಿಎಫ್ 2 ಚಿತ್ರದ ಉಪಗ್ರಹ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಮುಂದೆ ಓದಿ..

120 ಕೋಟಿ ರೂ.

120 ಕೋಟಿ ರೂ.

ಇದುವರೆಗೂ ಯಾವ ಚಿತ್ರವೂ ಇಷ್ಟು ಮೊತ್ತಕ್ಕೆ ಉಪಗ್ರಹ ಹಕ್ಕುಗಳ ಮಾರಾಟ ಕಂಡಿರಲಿಲ್ಲ ಎನ್ನಲಾಗುತ್ತಿದೆ. ಖಾಸಗಿ ಚಾನೆಲ್ ಒಂದು ಕೆಜಿಎಫ್ ಎರಡನೆಯ ಭಾಗದ ಪ್ರಸಾರದ ಹಕ್ಕನ್ನು 120 ಕೋಟಿ ರೂ. ಭಾರಿ ಮೊತ್ತಕ್ಕೆ ಖರೀದಿಸಿದೆ ಎಂದು ಹೇಳಲಾಗಿದೆ.

ಅಧಿಕೃತ ಹೇಳಿಕೆ ಬಂದಿಲ್ಲ

ಅಧಿಕೃತ ಹೇಳಿಕೆ ಬಂದಿಲ್ಲ

ಯಾವ ಭಾಷೆಯ, ಯಾವ ವಾಹಿನಿ ಇಷ್ಟು ದುಬಾರಿ ಮೊತ್ತಕ್ಕೆ ಉಪಗ್ರಹ ಹಕ್ಕುಗಳನ್ನು ಖರೀದಿಸಿದೆ ಎಂಬುದು ಖಚಿತವಾಗಿಲ್ಲ. ಆದರೆ ಸ್ಯಾಟಲೈಟ್ ರೈಟ್ಸ್ ಮಾರಾಟದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಈ ಕುರಿತು ಚಿತ್ರತಂಡದಿಂದ ಕೂಡ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಒಟಿಟಿಯಲ್ಲೂ ದಾಖಲೆ

ಒಟಿಟಿಯಲ್ಲೂ ದಾಖಲೆ

ಕೆಜಿಎಫ್ 2ದ ಒಟಿಟಿ ಪ್ರಸಾರದ ಹಕ್ಕನ್ನು ಅಮೆಜಾನ್ ಪ್ರೈಮ್ ಈಗಾಗಲೇ 55 ಕೋಟಿ ರೂ.ಗೆ ಖರೀದಿಸಿದೆ ಎನ್ನಲಾಗಿದೆ. ಕೆಜಿಎಫ್ ಮೊದಲ ಭಾಗಕ್ಕೆ ನೀಡಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಮೊತ್ತವನ್ನು ಅಮೆಜಾನ್ ನೀಡಿದೆ.

ಹೊಸ ದಾಖಲೆ ಸೃಷ್ಟಿಸಿದ ಕೆಜಿಎಫ್

ಹೊಸ ದಾಖಲೆ ಸೃಷ್ಟಿಸಿದ ಕೆಜಿಎಫ್

ರಜನಿಕಾಂತ್ ನಟನೆಯ '2.0' ಚಿತ್ರದ ಉಪಗ್ರಹದ ಹಕ್ಕು 110 ಕೋಟಿ ರೂ,ಗೆ ಮಾರಾಟವಾಗಿತ್ತು. ಕೆಜಿಎಫ್ ಈ ದಾಖಲೆಯನ್ನು ಮುರಿದಿದೆ ಎಂದು ಹೇಳಲಾಗಿದೆ. ಇನ್ನು 20 ದಿನದ ಚಿತ್ರೀಕರಣ ಬಾಕಿ ಇದ್ದು, ಜುಲೈನಲ್ಲಿ ಅನುಮತಿ ಸಿಕ್ಕರೆ ಪೂರ್ಣಗೊಳಿಸಿ ಸಿಗದಿಗೊಳಿಸಿದ ದಿನಾಂಕದಂದೇ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಹೇಳಿದೆ.

More from Filmibeat

English summary
Rumours said KGF Chapter 2 satellite rights has sold out for Rs 120 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X