ನಟಿ ಡಿಂಪಲ್, ಮಾಸ್ ಮಹಾರಾಜ ರವಿತೇಜಾ ಲಿಕ್ ಲಾಕ್ ಮಾಡಿದ ಫೋಟೊ ವೈರಲ್

ಯಾವುದೇ ನಟನನ್ನು ಕೇಳಿದರೂ ಕೊರೊನಾ, ಲಾಕ್‌ಡೌನ್‌ಗೆ ಒಂದಿಷ್ಟು ಹಿಡಿಶಾಪ ಹಾಕದೆ ಇರುವುದಿಲ್ಲ. ಆದರೆ, ಲಾಕ್‌ಡೌನ್‌ನಿಂದ ಯಾರಿಗಾದರೂ ಖುಷಿ ಆಗಿದೆ ಅಂದರೆ, ಅದು ತೆಲುಗುನ ಮಾಸ್ ಮಹಾರಾಜ ರವಿ ತೇಜಾಗೆ ಮಾತ್ರ ಇರಬಹುದು. ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿದ್ದ ರವಿತೇಜಾಗೆ ಇದೇ ಲಾಕ್‌ಡೌನ್ ದೊಡ್ಡ ಬ್ರೇಕ್ ಕೊಟ್ಟಿತ್ತು. ಲಾಕ್‌ಡೌನ್ ಬಳಿಕ ರಿಲೀಸ್ ಆಗಿದ್ದ ರವಿತೇಜಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಈ ಕಾರಣಕ್ಕೆ ರವಿತೇಜಾ ಕೈಯಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳಿವೆ.

ರವಿತೇಜಾ ಸದ್ಯ ಕೈಯಲ್ಲಿ ಸಿನಿಮಾಗಳಿವೆ ಅಂತ ಸುದ್ದಿಯಲ್ಲಿ ಇಲ್ಲ. ಒಂದು ಹಾಟ್ ಫೋಟೊದಿಂದ ಭಯಂಕರ ಸುದ್ದಿಯಲ್ಲಿದ್ದಾರೆ. ತನ್ನ ಜೊತೆ ನಟಿಸಿದ ಹೀರೋಯಿನ್‌ಗೆ ಕಿಸ್ ಮಾಡಿದ ಫೋಟೊ ಅದು. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರವಿತೇಜಾ ಲಿಪ್ ಲಾಕ್ ಮಾಡಿದ್ದು, ಸಿನಿಮಾಗಾಗಿಯೋ, ಇಲ್ಲಾ ರಿಯಲ್ ಆಗಿ ಕಿಸ್ ಮಾಡಿದ್ದಾರೋ ಅನ್ನುವ ಗೊಂದಲದಲ್ಲಿ ಅವರ ಅಭಿಮಾನಿಗಳಿದ್ದಾರೆ.

ರವಿತೇಜಾ ಲಿಪ್ ಲಾಕ್ ಫೋಟೊ ಲೀಕ್

ರವಿತೇಜಾ ಲಿಪ್ ಲಾಕ್ ಫೋಟೊ ಲೀಕ್

ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೊ ಹರಿದಾಡುತ್ತಿದೆ. ತೆಲುಗು ನಟ, ಮಾಸ್ ಮಹಾರಾಜ ಅಂತಲೇ ಜನಪ್ರಿಯರಾಗಿರುವ ರವಿ ತೇಜಾ ನಟಿಯೊಬ್ಬರಿಗೆ ಲಿಪ್ ಲಾಕ್ ಮಾಡಿದ ಫೋಟೊ ಅದು. ಈ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಅವರ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದಾರೆ. ಇದು ಸಿನಿಮಾಗಾಗಿ ಲಿಪ್ ಲಾಕ್ ಮಾಡಿರುವ ಫೋಟೊನಾ, ಇಲ್ಲಾ ರಿಯಲ್ ಲಿಪ್ ಲಾಕ್‌ ಫೋಟೊ ಲೀಕ್ ಆಗಿದ್ಯಾ? ಅಂತ ಕುತೂಹಲವೆದ್ದಿದೆ. ಕಾರಣವೇನೆಂದರೆ,ಈ ಫೋಟೊ ಸ್ಪಷ್ಟವಾಗಿಲ್ಲ. ಯಾರೋ ರಹಸ್ಯವಾಗಿ ಈ ಫೋಟೊವನ್ನು ಕ್ಲಿಕ್ ಮಾಡಿದಂತಿದೆ.

ರವಿತೇಜಾ ಕಿಸ್ ಮಾಡಿದ ನಟಿ ಯಾರು?

ರವಿತೇಜಾ ಕಿಸ್ ಮಾಡಿದ ನಟಿ ಯಾರು?

ಟಾಲಿವುಡ್ ಮಾಧ್ಯಮಗಳ ಪ್ರಕಾರ, ರವಿತೇಜಾ 'ಕಿಲಾಡಿ' ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ನಟಿಸುತ್ತಿದ್ದಾರೆ. ಇವರಲ್ಲಿ ಒಬ್ಬರು ಡಿಂಪಲ್ ಹಯಾಥಿ. ಇವರಿಗೆ ರವಿತೇಜಾ ಕಿಸ್ ಮಾಡಿದ್ದಾರೆ ಎಂದು ವರದಿ ಮಾಡಿದೆ. ಇದು 'ಕಿಲಾಡಿ' ಸಿನಿಮಾದ ದೃಶ್ಯ ಆಗದ್ದು, ಯಾರೋ ಕಿಡಿಗೇಡಿಗಳು ಈ ಫೋಟೊವನ್ನು ಲೀಕ್ ಮಾಡಿದ್ದಾರೆ ಎಂದು ವರದಿ ಮಾಡಿದ್ದಾರೆ. ಡಿಂಪಲ್ ಹಯಾಥಿ ಅಷ್ಟೇ ಅಲ್ಲ. ಮತ್ತೊಬ್ಬ ನಟಿ ಮೀನಾಕ್ಷಿ ಚೌಧರಿ ಜೊತೆನೂ ರೊಮ್ಯಾಂಟಿಕ್ ಸೀನ್‌ಗಳಲ್ಲಿ ನಟಿಸುತ್ತಿದ್ದಾರೆ ಎಂದು ವರದಿ ಮಾಡಿದೆ.

ಲಿಪ್ ಲಾಕ್ ಮಾಡಲು ರವಿತೇಜಾ ಹಿಂದೇಟು

ಲಿಪ್ ಲಾಕ್ ಮಾಡಲು ರವಿತೇಜಾ ಹಿಂದೇಟು

ಮಾಸ್ ಮಹಾರಾಜ ರವಿತೇಜಾ ಲಿಪ್ ಲಾಕ್ ದೃಶ್ಯದಲ್ಲಿ ನಟಿಸಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಆದರೆ, ಚಿತ್ರದ ನಿರ್ದೇಶಕ ರಮೇಶ್ ವರ್ಮಾ ಒಂದು ಲಿಪ್ ಲಾಕ್ ದೃಶ್ಯ ಬೇಕು ಎಂದು ಒತ್ತಾಯ ಮಾಡಿದ್ದರು. ಈ ಕಾರಣಕ್ಕೆ ರವಿತೇಜಾ ಕಿಸ್ ದೃಶ್ಯಗಳಲ್ಲಿ ನಟಿಸಲು ಒಪ್ಪಿದ್ದರು ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನೊಂದು ಕಡೆ ಇಬ್ಬರು ನಟಿಯರಿಗೂ ರವಿತೇಜಾ ಲಿಕ್ ಮಾಡಿದ್ದಾರೆ ಎನ್ನಲಾಗಿದೆ. ಇಂತಹ ದೃಶ್ಯಗಳು ಲೀಕ್ ಆಗಿದ್ದು ಹೇಗೆ ಅನ್ನುವುದು ಗೊತ್ತಾಗಿಲ್ಲ. ಅಲ್ಲದೆ ಚಿತ್ರತಂಡ ಕೂಡ ಇದೂವರೆಗೂ ಇದು ಸಿನಿಮಾದ್ದೇ ದೃಶ್ಯವೆಂದು ಹೇಳಿಲ್ಲ.

ಕ್ರ್ಯಾಕ್ ಚಿತ್ರದಿಂದ ಮತ್ತೆ ಮಾಸ್ ಖದರ್

ಕ್ರ್ಯಾಕ್ ಚಿತ್ರದಿಂದ ಮತ್ತೆ ಮಾಸ್ ಖದರ್

'ಕ್ರ್ಯಾಕ್' ಸಿನಿಮಾ ತೆಲುಗು ಚಿತ್ರರಂಗಕ್ಕೆ ಲಾಕ್‌ಡೌನ್ ಸಮಯದಲ್ಲಿ ಹೊಸ ಹುರುಪು ಕೊಟ್ಟ ಸಿನಿಮಾ. ಶೇ. 50ರಷ್ಟು ಆಸನ ವ್ಯವಸ್ಥೆ ಇದ್ದಾಗಲೇ 'ಕ್ರ್ಯಾಕ್' ಥಿಯೇಟರ್‌ಗೆ ಎಂಟ್ರಿಕೊಟ್ಟಿತ್ತು. ಸತತ ಸೋಲಿನ ಬಳಿಕ ಮತ್ತೆ ಮರಳಿದ್ದ ರವಿತೇಜಾಗೆ ಪ್ರೇಕ್ಷಕರು ಭರ್ಜರಿ ಸ್ವಾಗತ ಕೊಟ್ಟಿದ್ದರು. ಇಲ್ಲಿಂದ ರವಿತೇಜಾ ವೃತ್ತಿ ಬದುಕು ಮತ್ತೆ ಸರಿಯಾದ ದಾರಿ ಹಿಡಿದಿದೆ. ಈ ಮಧ್ಯೆ ಲಿಪ್ ಲಾಕ್ ಫೋಟೊ ಬೇಜಾನ್ ವೈರಲ್ ಆಗುತ್ತಿದೆ.

More from Filmibeat

English summary
Telugu actor Ravi Teja kissing Dimple Hayathi from Khiladi movie got leaked and went Viral. Ravi Teja has locked lips with both the leading actress of the film. He has romantic scenes with Meenakshi Chaudhary as well as Dimple Hayathi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X