ಸೋಶಿಯಲ್ ಮೀಡಿಯಾದಲ್ಲಿ ರಾ ರಾ ರಕ್ಕಮ್ಮ ಕ್ರೇಜ್: ಮಕ್ಕಳಿಂದಲೇ ಸ್ಪೆಷಲ್ ಸಾಂಗ್ ರೆಡಿ!
'ವಿಕ್ರಾಂತ್ ರೋಣ' ಸಿನಿಮಾದ ಮೊದಲ ಹಾಡು ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಈ ಹಾಡು ರಿಲೀಸ್ ಆದಲ್ಲಿಂದ ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ವಯಸ್ಸಿನ ಅಂತರವೇ ಇಲ್ಲದೆ ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಬಿಡುಗಡೆಯಾದ ಎಲ್ಲಾ ಭಾಷೆಯಲ್ಲೂ ರಕ್ಕಮ್ಮನ ವೈಯ್ಯಾರಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.
ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾವಿದು. ಈಗಾಗಲೇ ಸಿನಿಮಾದ ಕೆಲ ತುಣುಕುಗಳನ್ನು ನೋಡಿ ಸಿನಿಪ್ರಿಯರು 'ವಿಕ್ರಾಂತ್ ರೋಣ' ನೋಡುವುದಕ್ಕೆ ಕಾದು ಕೂತಿದ್ದಾರೆ. ಈ ಮಧ್ಯೆ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ 'ರಾ ರಾ ರಕ್ಕಮ್ಮ ಸಾಂಗ್ ಕ್ರೇಜ್ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಹೆಚ್ಚಾಗುತ್ತಲೇ ಇದೆ.
'ವಿಕ್ರಾಂತ್ ರೋಣ' ಜುಲೈ 28ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಸುದೀಪ್, ಹೊಸ ಪ್ರತಿಭೆ ನೀತಾ ಅಶೋಕ್, ನಿರೂಪ್ ಭಂಡಾರಿ ಅಭಿನಯದ ಈ ಸಿನಿಮಾ ಕೂಡ ಹೊಸ ದಾಖಲೆ ಬರೆಯ ಬಹುದೆಂದು ನಿರೀಕ್ಷೆ ಮಾಡಲಾಗಿದೆ. ಈ ಮಧ್ಯೆ ಭರ್ಜರಿ ಪ್ರಚಾರ ಆರಂಭ ಆಗಿದೆ. ರಾ ರಾ ರಕ್ಕಮ್ಮ ಹಾಡಿಗೆ ಮನಸೋತಿರುವ ಮಕ್ಕಳು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಕಿಚ್ಚನಿಗಾಗಿ ಮಕ್ಕಳ ಸ್ಪೆಷಲ್ ಸಾಂಗ್
'ರಾ ರಾ ರಕ್ಕಮ್ಮ..' ರಿಲೀಸ್ ಆಗುತ್ತಿದ್ದಂತೆ ಸಂಗೀತ ಗುನುಗುವುದಕ್ಕೆ ಶುರು ಮಾಡಿದ್ದಾರೆ. ಇನ್ನೊಂದು ಕಡೆ ಡ್ಯಾನ್ಸ್ ಪ್ರಿಯರು ಹೆಜ್ಜೆ ಹಾಕುತ್ತಿದ್ದಾರೆ. ಜಾನಿ ಮಾಸ್ಟರ್ ಹಾಕಿಸಿರುವ ಸ್ಟೆಪ್ಸ್ ಎಲ್ಲೆಡೆ ಕ್ರೇಜ್ ಹೆಚ್ಚಾಗಿದೆ. ಇದೇ ರೀತಿ ಪುಟಾಣಿ ಮಕ್ಕಳು ರಾ ರಾ ರಕ್ಕಮ್ಮನ ಅವತಾರವೆತ್ತಿದ್ದಾರೆ. ತಮ್ಮದೇ ಸೆಟ್‌ನಲ್ಲಿ ಕೊರಿಯೋಗ್ರಾಫರ್ ಹೇಳಿಕೊಟ್ಟ ಸ್ಟೆಪ್ಸ್‌ಗೆ ಸಖತ್ತಾಗೇ ಹೆಜ್ಜೆ ಹಾಕಿದ್ದಾರೆ. ವಿಕ್ರಾಂತ್ ರೋಣಗಾಗಿ ಮಕ್ಕಳೇ ಹಾಕಿರುವ ಈ ವಿಶೇಷ ಹಾಡನ್ನು ಕಿಚ್ಚ ಕ್ರಿಯೇಷನ್ಸ್ ಯೂಟ್ಯೂಬ್‌ನಲ್ಲಿ ಶೇರ್ ಮಾಡಿದೆ.

ಸಿನಿಮಾ ಹಾಡಿಗೇನು ಕಮ್ಮಿಯಿಲ್ಲ
'ರಾ ರಾ ರಕ್ಕಮ್ಮ.. ಹಾಡನ್ನು ಮಕ್ಕಳಿಗಾಗಿ ರೀ-ಕ್ರಿಯೇಟ್ ಮಾಡಲಾಗಿದೆ. 9 ಮಂದಿ ಹೆಣ್ಣು ಮಕ್ಕಳು ಜಾಕ್ವೆಲಿನ್ ಫರ್ನಾಂಡೀಸ್ ಹೆಜ್ಜೆ ಹಾಕಿದ ಹಾಡಿಗೆ ಅವರೆಲ್ಲರೂ ಸೇರಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಇದೇ ಹಾಡು ಈಗ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬೇಜಾನ್ ಸೌಂಡ್ ಮಾಡಿದೆ. ಒರಿಜಿನಲ್ ಸಾಂಗ್‌ನಷ್ಟೆ ಪ್ರೊಫೆಷನಲ್ ಆಗಿ ಈ ಹಾಡನ್ನು ಶೂಟ್ ಮಾಡಿರುವುದು ವಿಶೇಷ.

ಒರಿಜಿನಲ್ ಹಾಡಿಗೂ ಮಿಲಿಯನ್ ವೀವ್ಸ್
ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ಹಾಡು ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಕ್ಕಮ್ಮ ಸಾಂಗ್ ರಿಲೀಸ್ ಆಗಿದ್ದು, ಸಂಗೀತ ಪ್ರಿಯರಿಗೆ ಕಿಕ್ ಕೊಟ್ಟಿದೆ. ಈ ಲಿರಿಕಲ್ ಸಾಂಗ್ ಬಿಡುಗಡೆಯಾಗಿ 12 ದಿನಗಳು ಕಳೆದಿವೆ. ಕನ್ನಡದಲ್ಲಿ 9.6 ಮಿಲಿಯನ್ ವೀವ್ಸ್. ಹಿಂದಿಯಲ್ಲಿ 9.7 ಮಿಲಿಯನ್ ವೀವ್ಸ್, ತೆಲುಗಿನಲ್ಲಿ 3 ಮಿಲಿಯನ್ ವೀವ್ಸ್, ತಮಿಳಿನಲ್ಲಿ 1.5 ಮಿಲಿಯನ್ ವೀವ್ಸ್ ಹಾಗೂ ಮಲಯಾಳಂನಲ್ಲಿ 1.5 ಮಿಲಿಯನ್ ವೀವ್ಸ್ ಆಗಿದೆ. ಒಟ್ಟು 25.30 ಮಿಲಿಯನ್ ವೀವ್ಸ್ ಬಿಡುಗಡೆಯಾದ ಈ ಎಲ್ಲಾ ಭಾಷೆಯಿಂದ ಬಂದಿದೆ.

ಸೆಟ್ಟು-ಲೈಟಿಂಗ್ ಎಲ್ಲಾ ಸೂಪರ್
'ವಿಕ್ರಾಂತ್ ರೋಣ' ಸಿನಿಮಾದ ರಾ ರಾ ರಕ್ಕಮ್ಮ ಹಾಡನ್ನು ಶಾರದ ಮುನಿ ಡ್ಯಾನ್ಸ್ ಅಕಾಡೆಮಿಯ ಭರತ್ ಕೊರಿಯೋಗ್ರಫಿ ಮಾಡಿದ್ದಾರೆ. ಹರಿ ಎಂಬುವವರು ಕ್ಯಾಮರಾ ವರ್ಕ್ ಮಾಡಿದ್ದಾರೆ. ಸಿನಿಮಾದಂತೆಯೇ ಸೆಟ್ ಲೈಟಿಂಗ್ ಎಲ್ಲವನ್ನೂ ಪ್ರಫೆಷನಲ್ ಸಿನಿಮಾ ಮೇಕರ್‌ನಂತೆಯೇ ಮಾಡಲಾಗಿದೆ. ಹೀಗಾಗಿ ಬಿಡುಗಡೆ ಕೆಲವೇ ಗಂಟೆಗಳಲ್ಲಿ ಸಾಂಗಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


Click it and Unblock the Notifications











