Kichcha Sudeep Kabza: 'ಕಬ್ಜ' ಸಿನಿಮಾ ಬಗ್ಗೆ ಏನಿದು ಸುದ್ದಿ?

'ಕೆಜಿಎಫ್ 2' ಹಾಗೂ 'ವಿಕ್ರಾಂತ್ ರೋಣ' ಬಳಿಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ 'ಕಬ್ಜ'. ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಜೊತೆಯಾಗಿ ನಟಿಸುತ್ತಿರುವ ಮತ್ತೊಂದು ಸಿನಿಮಾದ ಚಿತ್ರೀಕರಣ ಫುಲ್ ಸ್ವಿಂಗ್‌ನಲ್ಲಿ ನಡೆಯುತ್ತಿದೆ. ಇದೇ ವೇಳೆ ಸ್ಯಾಂಡಲ್‌ವುಡ್‌ನಲ್ಲಿ 'ಕಬ್ಜ' ಚಿತ್ರದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ಆರ್ ಚಂದ್ರ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಹೇಳಿತ್ತು. ಭಾರ್ಗವ್ ಭಕ್ಷಿ ಅವತಾರದಲ್ಲಿ ಸುದೀಪ್ 'ಕಬ್ಜ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಿತ್ತು. ಹೀಗಾಗಿ ಉಪ್ಪಿ ಹಾಗೂ ಸುದೀಪ್ ಅಭಿಮಾನಿಗಳಿಗೆ ಈ ಸಿನಿಮಾದ ಮೇಲೆ ಕುತೂಹಲ ಹೆಚ್ಚಾಗುವಂತೆ ಮಾಡಿತ್ತು.

'ಕಬ್ಬ' ಸಿನಿಮಾ ಶೂಟಿಂಗ್ ಅಂದ್ಕೊಂಡಿದ್ದಕ್ಕಿಂತ ತಡವಾಗುತ್ತಿದೆ. ಒಂದು ಕಡೆ ಲಾಕ್‌ಡೌನ್ ಕಾರಣ ಆಗಿದ್ದರೆ, ಇನ್ನೊಂದು ಕಡೆ ದೊಡ್ಡ ಸ್ಟಾರ್ ಕಾಸ್ಟ್ ಡೇಟ್ ಸಮಸ್ಯೆ ಕೂಡ ಎದುರಾಗಿತ್ತು ಎನ್ನುವ ಮಾತು ಸ್ಯಾಂಡಲ್‌ವುಡ್‌ನಲ್ಲಿ ಕೇಳಿಬರುತ್ತಿದೆ. ಇದೇ ವೇಳೆ 'ಕಬ್ಜ' ತಂಡದ ಮೇಲೆ ಕಿಚ್ಚ ಸುದೀಪ್ ಮುನಿಸಿಕೊಂಡಿದ್ದಾರೆ ಅನ್ನೋ ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ಕಾರಣವೇನು ಎಂದು ತಿಳಿಯಲು ಮುಂದೆ ಓದಿ.

Recommended Video

Kabza | 'ಕಬ್ಜ' ಸಿನಿಮಾದಿಂದ ಬೇಸರ, ಹೊರನಡೆದ ಕಿಚ್ಚ ಸುದೀಪ್? | Kichcha Sudeep
'ಕಬ್ಜ' ಕೈ ಬಿಟ್ರಾ ಕಿಚ್ಚ ಸುದೀಪ್?

'ಕಬ್ಜ' ಕೈ ಬಿಟ್ರಾ ಕಿಚ್ಚ ಸುದೀಪ್?

ಕಿಚ್ಚ ಸುದೀಪ್ 'ಕಬ್ಭ' ಸಿನಿಮಾದಿಂದ ಹೊರಬಂದಿದ್ದಾರೆ ಅನ್ನೋದು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿರುವ ಬಿಸಿ ಬಿಸಿ ಚರ್ಚೆ. ನಿರ್ದೇಶಕ ಆರ್ ಚಂದ್ರ ವಿರುದ್ಧ ಕಿಚ್ಚ ಸುದೀಪ್ ಮುನಿಸಿಕೊಂಡಿದ್ದು, 'ಕಬ್ಜ' ಸಿನಿಮಾದಲ್ಲಿ ನಟಿಸುವುದಿಲ್ಲವೆಂದು ಹೇಳಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಕಾರಣಕ್ಕೆ ಆರ್ ಚಂದ್ರು ಟೆನ್ಷನ್ ಆಗಿದ್ದಾರೆ ಅನ್ನುವುದು ನಿರ್ಮಾಪಕರ ವಲಯದಲ್ಲಿ ಚರ್ಚೆಯಾಗುತ್ತಿರುವ ಬಿಸಿಬಿಸಿ ಸುದ್ದಿ.

'ಕಬ್ಜ' ಕೈ ಬಿಡಲು ಅಸಲಿ ಕಾರಣವೇನು?

'ಕಬ್ಜ' ಕೈ ಬಿಡಲು ಅಸಲಿ ಕಾರಣವೇನು?

'ಕಬ್ಜ' ಸಿನಿಮಾ ಸುಮಾರು 7 ಭಾಷೆಯಲ್ಲಿ ರಿಲೀಸ್ ಮಾಡಲು ಹೊರಟಿರುವ ಸಿನಿಮಾ. ಹೀಗಾಗಿ ಕನ್ನಡದ ಇಬ್ಬರು ಸೂಪರ್ ಸ್ಟಾರ್‌ಗಳನ್ನು ಇಟ್ಕೊಂಡು ಸಿನಿಮಾ ಮಾಡಲು ಆರ್ ಚಂದ್ರು ಮುಂದಾಗಿದ್ದರು. ಆದರೆ, ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಡೇಟ್‌ ಕ್ಲ್ಯಾಶ್ ಆಗಿದ್ದರಿಂದ, ಮಧ್ಯೆ ಕೊರೊನಾ ಸಮಸ್ಯೆ ಎದುರಾಗಿದ್ದರಿಂದ ಆರ್ ಚಂದ್ರುಗೆ ಸಿನಿಮಾ ಮುಗಿಸಲು ಕೊಂಚ ಸಮಯ ಹಿಡಿದಿತ್ತು. ಹೀಗಾಗಿ ಕಿಚ್ಚನ ಕೆಲವು ಬಿಲ್ಡಪ್ ಶಾಟ್‌ಗಳನ್ನು ಡೂಪ್ ಬಳಸಿ ಚಿತ್ರೀಕರಿಸಿದ್ದರಂತೆ. ಇದು ಸುದೀಪ್‌ಗೆ ಗೊತ್ತಾಗುತ್ತಿದ್ದಂತೆ ಆರ್ ಚಂದ್ರು ವಿರುದ್ಧ ಕೆಂಡಾಮಂಡಲವಾಗಿದ್ದರು ಅಂತ ಸ್ಯಾಂಡಲ್‌ವುಡ್‌ ಮಾತಾಡಿಕೊಳ್ಳುತ್ತಿದೆ.

ಶೂಟಿಂಗ್ ಮಾಡಲ್ಲ ಎಂದ ಸುದೀಪ್?

ಶೂಟಿಂಗ್ ಮಾಡಲ್ಲ ಎಂದ ಸುದೀಪ್?

ತನ್ನ ಅನುಮತಿಯನ್ನು ಪಡೆಯದೆ ಕಿಚ್ಚ ಸುದೀಪ್ ಬಿಲ್ಡಪ್ ಶಾಟ್‌ಗಳನ್ನು ಡೂಪ್ ಬಳಸಿ ಶೂಟ್ ಮಾಡಿದ್ದು, ಕಿಚ್ಚ ಸುದೀಪ್‌ಗೆ ಬೇಸರವಾಗಿದ್ಯಂತೆ. ಈ ಕಾರಣಕ್ಕೆ ಸುದೀಪ್ ಇನ್ಮುಂದೆ ಶೂಟಿಂಗ್‌ಗೆ ಬರಲ್ಲ ಎಂದು ಹೋಗಿದ್ದಾರೆ. ಇದರಿಂದ ನಿರ್ದೇಶಕ ಆರ್ ಚಂದ್ರು ಕಂಗಾಲಾಗಿದ್ದಾರೆ ಅನ್ನೂ ಗುಸುಗುಸು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಆದರೆ, ಆರ್ ಚಂದ್ರು ಕೆಲವು ದಿನಗಳ ಹಿಂದಷ್ಟೇ 'ಕಬ್ಜ' ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ಇಬ್ಬರು ನಾಯಕಿಯರ ಪೋಷನ್ ಬಿಟ್ಟರೆ, ಮತ್ತೇನು ಉಳಿದಿಲ್ಲವೆಂದು ಹೇಳಿದ್ದರು. ಅಂದ್ಹಾಗೆ ಈ ಸುದ್ದಿ ಕಿಚ್ಚ ಸುದೀಪ್ ಅಥವಾ ಆರ್ ಚಂದ್ರು ಆಗಲಿ ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ನೀಡಿಲ್ಲ.

'ವಿಕ್ರಾಂತ್ ರೋಣ' ಪ್ರಚಾರದಲ್ಲಿ ಕಿಚ್ಚ ಬ್ಯುಸಿ

'ವಿಕ್ರಾಂತ್ ರೋಣ' ಪ್ರಚಾರದಲ್ಲಿ ಕಿಚ್ಚ ಬ್ಯುಸಿ

ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹಬ್ಬಕ್ಕಾಗಿ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಿದ್ದು, ಸಿನಿಮಾವನ್ನು ಸುಮಾರು 50 ದೇಶಗಳಲ್ಲಿ ರಿಲೀಸ್ ಮಾಡಲು ಸಜ್ಜಾಗಿದ್ದಾರೆ. ಜುಲೈ 28ರಂದು ಸಿನಿಮಾ ಬಿಡಗಡೆಯಾಗಲಿದ್ದು, ರಷ್ಯನ್, ಮ್ಯಾಂಡರಿನ್, ಜರ್ಮನ್ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಕಿಚ್ಚ ಸುದೀಪ್ ಇನ್ಮುಂದೆ 'ಕಬ್ಜ' ಸಿನಿಮಾದ ಶೂಟಿಂಗ್‌ಗೆ ಸಿಗುವುದು ಅನುಮಾನ ಎನ್ನುವುದು ಇದೇ ನಿರ್ಮಾಪಕರ ಮಾತು. ಅಸಲಿಗೆ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿರುವ ಗಾಳಿ ಸುದ್ದಿ ಮುಂದಿನ ದಿನಗಳಲ್ಲಿ ಯಾರ ರೂಪ ಪಡೆದುಕೊಳ್ಳುತ್ತೆ ಅನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kichcha Sudeep out of Upendra Starrer Pan India Movie Kabza. Here is the truth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X