ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಬೇಕಂತೆ? ಏಕಂತೆ?
ಕಿಚ್ಚ ಸುದೀಪ್ ಅವರು ರನ್ನ ಚಿತ್ರದ 50ನೇ ದಿನದ ಸಂಭ್ರಮವನ್ನು ಹಂಚಿಕೊಂಡು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ನೀಡಿದ್ದ ಒಂದು ಹೇಳಿಕೆ ಅನೇಕ ಅರ್ಥಗಳನ್ನು ಹುಟ್ಟಿ ಹಾಕಿತ್ತು.
ಸುದೀಪ್ ಅವರಿಗೆ ರನ್ನ ಚಿತ್ರದ ನಿರ್ಮಾಪಕ ಹಾಗೂ ವಿತರಕರ ಮೇಲೆ ಏಕೋ ಮುನಿಸು ಉಂಟಾಗಿದೆ ಎನಿಸಿತ್ತು. ಅದರೆ, ಸುದೀಪ್ ಅವರಿಗೆ ಇಡೀ ಚಿತ್ರರಂಗವೇ ಬೇಡವೆನಿಸಿದೆ ಎಂಬ ವಿಷಯವನ್ನು ಚಿತ್ರಕರ್ಮಿ ಕೃಷ್ಣ ಅವರು ಹೊರ ಹಾಕುತ್ತಿದ್ದಂತೆ ಅಭಿಮಾನಿಗಳು ಬೆಚ್ಚಿದ್ದಾರೆ. [ರನ್ನ ನಿರ್ಮಾಪಕರಿಗೆ ಸುದೀಪ್ ಕೊಟ್ರ ಗುನ್ನ?]
ಕಿಚ್ಚ ಸುದೀಪ, ನೀವು ಇಲ್ಲದ ಕನ್ನಡ ಚಿತ್ರರಂಗ ಊಹಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ನಮ್ಮ ಕಿಚ್ಚ ಸುದೀಪ್ ವಾಪಸ್ ಬೇಕು ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಶುರುಮಾಡಿದ್ದಾರೆ. ಈ ಅಭಿಯಾನದಲ್ಲಿ ಕಿಚ್ಚನ ಅಭಿಮಾನಿಗಳಲ್ಲದೆ, ಯುವನಟ, ನಿರ್ದೇಶಕರು ಕೈಜೋಡಿಸಿದ್ದಾರೆ.
ಸುದೀಪ್ ಅವರೇ ನಿಮ್ಮ ಅಭಿಮಾನಿಗಳು ಕೇಳುತ್ತಿದ್ದಾರೆ ದಯವಿಟ್ಟು ಉತ್ತರಿಸಿ ಎಂದು ಟ್ವೀಟ್ ಮಾಡಿದ್ದಾರೆ. ಯಾಕೋ ಇತ್ತೀಚೆಗೆ ಚಿತ್ರರಂಗದವರು ಟ್ವಿಟ್ಟರ್ ಎಂಬ ಬ್ಲಾಗಿಂಗ್ ವೇದಿಕೆಯನ್ನು ವ್ಯಾಜ್ಯ ಪರಿಹಾರ ವೇದಿಕೆ ಮಾಡಿಕೊಂಡ ಹಾಗೆ ಕಾಣುತ್ತದೆ. ಸದ್ಯಕ್ಕೆ ಕಿಚ್ಚ ಸುದೀಪ್ ವಾಪಸ್ ಬನ್ನಿ ಎಂಬ ಕರೆಗೆ ಹೇಗೆ ಪ್ರತಿಕ್ರಿಯೆ ಬಂದಿದೆ ನೋಡಿ...

ಸದಭಿರುಚಿ ಚಿತ್ರಪ್ರೇಮಿಗಳ ವಾದ
ಇಷ್ಟಕ್ಕೂ ಸುದೀಪ್ ಅವರು ಎಲ್ಲೂ ಬಹಿರಂಗವಾಗಿ ಈ ಬಗ್ಗೆ ಹೇಳಿಲ್ಲ, ಅಸಮಾಧಾನ ವ್ಯಕ್ತಪಡಿಸಿಲ್ಲ. ಕೈತುಂಬಾ ಸಿನಿಮಾ ಇರುವಾಗ ಕೈಕಟ್ಟಿ ನಿಲ್ಲುವ ಪೈಕಿಯೂ ಅಲ್ಲ. ತಮ್ಮದೇ ಚಿತ್ರರಂಗದಿಂದ ತಾವೇ ಹೊರಕ್ಕೆ ಹೋಗುತ್ತೇನೆ ಅಥವಾ ದೂರವುಳಿಯುತ್ತೇನೆ ಎಂಬುದು ಎಷ್ಟರಮಟ್ಟಿಗೆ ಸರಿ ಎಂಬುದು ಸದಭಿರುಚಿ ಚಿತ್ರಪ್ರೇಮಿಗಳ ವಾದ.

ಸುದೀಪ್ ಅವರಿಗೆ ಆಗಿರುವ ನೋವೇನು?
ನಿರ್ಮಾಪಕರು, ವಿತರಕರ ಬಗ್ಗೆ ಸುದೀಪ್ ಟ್ವೀಟ್ ಮಾಡಿ, ಚಿತ್ರ ಬಿಡುಗಡೆಯಾದ ಮೇಲೆ ಅವರೊಟ್ಟಿಗೆ ಮಾತುಕತೆ ಮಾಡಿಲ್ಲ ಎಂದಿದ್ದಾರೆ. ಈ ಟ್ವೀಟ್ ಅರ್ಥ ಏನು ಎಂಬುದನ್ನು ಆಸಕ್ತರು ಸುದೀಪ್ ಅವರಿಗೆ ಟ್ವೀಟ್ ಮಾಡಿ ಕೇಳಬಹುದು. ಸುದೀಪ್ ಅವರಿಗೆ ಆಗಿರುವ ನೋವನ್ನು ಪರಿಹರಿಸುವತ್ತಾ ಚರ್ಚಿಸಬಹುದು.
ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ ಮನವಿ
ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ, ನಿಮ್ಮ ಅಭಿಮಾನಿ ಕೇಳುತ್ತಿದ್ದಾರೆ. ದಯವಿಟ್ಟು ಉತ್ತರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾರಿಂದ ಟ್ವೀಟ್
ನಟ ಚಿರಂಜೀವಿ ಸರ್ಜಾ ಅವರು ಟ್ವೀಟ್ ಮಾಡಿ, ನಮ್ಮ ಮನವಿಗೆ ಓಗೊಟ್ಟು ಬೇಗ ನಮ್ಮ ಚಿಂತೆ ದೂರ ಮಾಡು ಬ್ರದರ್ ಎಂದಿದ್ದಾರೆ.

ಮುಂದಿನ ಯೋಜನೆ ಬಗ್ಗೆ ಸುದೀಪ್
ತಮಿಳಿನ ಕೆ ಎಸ್ ರವಿಕುಮಾರ್ ಜೊತೆ ಮಾಡುತ್ತಿರುವ ಸಿನಿಮಾ ಹಾಗೂ ಹೆಬ್ಬುಲಿ ಎರಡು ಕೂಡಾ ಏಕಕಾಲಕ್ಕೆ ಶೂಟಿಂಗ್ ನಡೆಯಲಿದೆ. ಕೆಎಸ್ ರವಿಕುಮಾರ್ ನಿರ್ದೇಶನದ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ ಎಂದಿದ್ದಾರೆ. ರನ್ನ ನಂತರ ನಂದ ಅವರ ಜೊತೆ ಲವ ಎಂಬ ಮತ್ತೊಂದು ಚಿತ್ರ ಮಾಡುವುದಾಗಿಯೂ ಸುದೀಪ್ ಹೇಳಿದ್ದಾರೆ.
ಸುದೀಪ್ ವೇದನೆ ಬಗ್ಗೆ ಸುಳಿವು ಕೊಟ್ಟ ಕೃಷ್ಣ
ಸುದೀಪ್ ಅವರಿಗೆ ಆಗಿರುವ ವೇದನೆ ಬಗ್ಗೆ ಮೊದಲಿಗೆ ಸುಳಿವು ಕೊಟ್ಟಿದ್ದು ಛಾಯಾಗ್ರಹಕ ಕಮ್ ನಿರ್ದೇಶಕ ಕೃಷ್ಣ. ನಂತರ ಅಭಿಮಾನಿಗಳು ಈ ಬಗ್ಗೆ ಪ್ರಶ್ನಿಸಿದರು.
ಟ್ರೆಂಡಿಂಗ್ ಮಾಡೋಣ ಬನ್ನಿರೋ ಎಂದ ಫ್ಯಾನ್ಸ್
#WeWantKichchaSudeep ಟ್ರೆಂಡಿಂಗ್ ಮಾಡೋಣ ಬನ್ನಿರೋ ಎಂದ ಫ್ಯಾನ್ಸ್, ಫ್ಯಾನ್ ಕ್ಲಬ್ ಹಾಗೂ ಸಿನಿಮಾ ಆಧಾರಿತ ವೆಬ್ ತಾಣಗಳು.
ಸುದೀಪ್ ಇಲ್ಲದ ಚಿತ್ರರಂಗ ಊಹಿಸಲು ಸಾಧ್ಯವಿಲ್ಲ
ಸುದೀಪ್ ಇಲ್ಲದ ಚಿತ್ರರಂಗ ಊಹಿಸಲು ಸಾಧ್ಯವಿಲ್ಲ, ನಮಗೆ ನಮ್ಮ ಸುದೀಪ್ ಬೇಕು ಎಂದ ಅಭಿಮಾನಿ.
ದರ್ಶನ್ ಗೆ ಮೊರೆ ಹೊಕ್ಕ ಫ್ಯಾನ್ಸ್
ದರ್ಶನ್ ಅವರೇ ನೀವಾದ್ರೂ ಹೇಳಿ ಸುದೀಪ್ ಗೆ ಎಂದು ಮೊರೆ ಹೊಕ್ಕ ಫ್ಯಾನ್ಸ್
ಅಬ್ಬಾ !ಅಂತೂ ಟ್ರೆಂಡಿಂಗ್ ಆಗುತ್ತಿದೆ
ಅಬ್ಬಾ! ಅಂತೂ ಟ್ರೆಂಡಿಂಗ್ ಆಗುತ್ತಿದೆ ಎಂದು ಖುಷಿ ಪಟ್ಟ ತಂಡ.


Click it and Unblock the Notifications











