ಗಾಸಿಪ್ ಬಗ್ಗೆ ಕೃತಿ ಶೆಟ್ಟಿ ಬೇಸರ: ನಾನು ಹಾಗಲ್ಲ ಎಂದ ಯುವ ನಟಿ!

ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಅತಿ ವೇಗವಾಗಿ ಯಶಸ್ಸು ಪಡೆದು ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ ನಟಿ ಕೃತಿ ಶೆಟ್ಟಿ. ಮೊದಲ ಚಿತ್ರದಲ್ಲಿಯೆ ಯುವ ನಾಯಕಿ ಕೃತಿ ಶೆಟ್ಟಿ ಅವರ ಲಕ್ ಕುದುರಿದೆ. ಚೊಚ್ಚಲ ಚಿತ್ರ 'ಉಪ್ಪೆನ' ಆಕೆಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದೆ. ಬಳಿಕ ಕೃತಿಗೆ ಸಾಲು ಸಾಲು ದೊಡ್ಡ ಚಿತ್ರಗಳ ಆಫರ್‌ಗಳು ಬರ್ತಿದೆ. ಹಾಗೆ ಇಲ್ಲಿ ತನಕ ಕೃತಿ ಮಾಡಿರುವ ಚಿತ್ರಗಳು ಕೂಡ ಯಶಸ್ಸು ಕಂಡಿವೆ.

ಸಿನಿಮಾ ವಿಚಾರವಾಗಿ ಮಾತನಾಡುತ್ತಿದ್ದ ಕೃತಿ ಈ ಬಾರಿ ಗಾಸಿಪ್‌ಗಳ ಬಗ್ಗೆ ಮಾತನಾಡಲು ಮನಸ್ಸು ಮಾಡಿದ್ದಾರೆ. ಕೃತಿ ಶೆಟ್ಟಿ ತಮ್ಮ ಬಗ್ಗೆ ಹರಿದಾಡುತ್ತಿರುವ ಗಾಸಿಪ್‌ಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರಂತೆ. ತಮ್ಮ ಬಗ್ಗೆ ಹರಿದಾಡುತ್ತಿರುವ ಗಾಸಿಪ್ ಬಗ್ಗೆ ಕೃತಿ ಹೆಚ್ಚಾಗಿ ತಲೆ ಕೆಡಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಟಾಲಿವುಡ್‌ನಲ್ಲಿ ಹೆಚ್ಚಿನ ಸುದ್ದಿಗಳು ಹರಿದಾಡುತ್ತಿವೆ.

ಶಾಕುಂತಲೆ ರೂಪದಲ್ಲಿ ಸಮಂತಾ: ಅಲೌಕಿಕ ಸುಂದರಿ ಲುಕ್‌ಗೆ ಫ್ಯಾನ್ಸ್ ಫಿದಾ!
ಅಷ್ಟಕ್ಕೂ ನಟಿ ಮಣಿಯರು ತಮ್ಮ ಬಗ್ಗೆ ಹರಿದಾಡುವ ಗಾಸಿಪ್ ಸುದ್ದಿಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಕೆಲವೊಂದು ವಿಚಾರಗಳಿಗೆ ಮಾತ್ರ ಅವರು ಅತಿ ಹೆಚ್ಚಾಗಿ ಗಮನ ಹರಿಸುತ್ತಾರೆ. ಹಾಗೆಯೇ ಕೃತಿ ಕೂಡ ತಮಗೆ ಸರಿಹೊಂದದ ಗಾಪಿಸ್ ಸುದ್ದಿಯೊಂದರ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ.

ಕೃತಿ ಬಗ್ಗೆ ಹರಿದಾಡಿದ್ದ ವಂದತಿ ಇದು!

ಕೃತಿ ಬಗ್ಗೆ ಹರಿದಾಡಿದ್ದ ವಂದತಿ ಇದು!

ಕೃತಿ ಶೆಟ್ಟಿ ಬಗ್ಗೆ ಒಂದಷ್ಟು ಗಾಸಿಪ್‌ಗಳು ಹರಿದಾಡುತ್ತಿವೆ. ಅದರಲ್ಲೂ ಕೃತಿ ಅವರು ಶೂಟಿಂಗ್ ವಿಚಾರದಲ್ಲಿ ಶಿಸ್ತು ಕಾಪಾಡುವುದಿಲ್ಲ ಎನ್ನುವ ಸುದ್ದಿಗಳು ಹಲವು ದಿನಗಳಿಂದ ಹರಿದಾಡುತ್ತಲಿವೆ. ಕೃತಿ ಸಮಯಕ್ಕೆ ಸರಿಯಾಗಿ ಶೂಟಿಂಗ್‌ ಸೆಟ್‌ಗೆ ಬರುವುದಿಲ್ಲ. ಸೆಟ್‌ನಲ್ಲಿ ಅವರು ಇತರೆ ಸಹ ಕಲಾವಿದರಿಗೆ ಹೆಚ್ಚಾಗಿ ಅಗೌರವ ತೋರಿಸುತ್ತಾರೆ. ಮತ್ತು ಚಿತ್ರೀಕರಣದ ವೇಳೆ ಶೂಟಿಂಗ್ ಸ್ಥಳದಲ್ಲಿ ಹೆಚ್ಚಾಗಿ ಕೋಪ ತೋರಿಸುತ್ತಾರೆ. ಎನ್ನುವ ಸುದ್ದಿಗಳು ಟಾಲಿವುಡ್‌ನಲ್ಲಿ ಗಾಸಿಪ್ ರೂಪದಲ್ಲಿ ಹರಿದಾಡುತ್ತಿವೆ.

ಸುದ್ದಿ ಕೇಳಿ ದಿಗ್ಭ್ರಾಂತಗೊಂಡ ಕೃತಿ ಶೆಟ್ಟಿ!

ಸುದ್ದಿ ಕೇಳಿ ದಿಗ್ಭ್ರಾಂತಗೊಂಡ ಕೃತಿ ಶೆಟ್ಟಿ!

ನಟಿ ಕೃತಿ ಬಗ್ಗೆ ಕೆಲವು ಮಾಧ್ಯಗಳು ಈ ರೀತಿಯಾಗಿ ವರದಿ ಮಾಡಿರುವುದನ್ನು ಕಂಡು, ಕೃತಿಗೆ ಶಾಕ್ ಆಗಿದೆಯಂತೆ. ಅಲ್ಲದೇ ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎನ್ನುವ ರೀತಿ ವದಂತಿ ಹಬ್ಬಿರುವುದು ಕೂಡ ನಟಿಗೆ ಅತ್ಯಂತ ಬೇಸರ ತಂದಿದೆಯಂತೆ. ಕೃತಿಗೆ ಸಿನಿಮಾ ಶೂಟಿಂಗ್ ಎಂದರೆ ಅಪಾರ ಗೌರವ ಅಂತೆ. ಹಾಗಿರೋವಾಗ ಇಲ್ಲದ ಸುದ್ದಿಗಳನ್ನು ಹಬ್ಬಿಸಿದ್ದರಿಂದ ಬೇಸರ ಗೊಂಡಿದ್ದಾರಂತೆ. ಅವರ ವ್ಯಕ್ತಿತ್ವಕ್ಕೆ ಈ ವದಂತಿಗಳು ಯಾವ ಕಡೆಯಿಂದಲೂ ಹೊಂದಿಕೆ ಆಗುವುದಿಲ್ಲ ಎಂದು, ಈ ಬಗ್ಗೆ ಸ್ಪಷ್ಟ ಪಡಿಸಲು ಕೃತಿ ಮುಂದಾಗಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ಸುಮ್ಮನೆ ಇರುವಂತೆ ನಟಿ ಕೃತಿಗೆ ಸಲಹೆ!

ಸುಮ್ಮನೆ ಇರುವಂತೆ ನಟಿ ಕೃತಿಗೆ ಸಲಹೆ!

ಈ ವಿಚಾರವಾಗಿ ನಟಿ ಕೃತಿ, ಕೆಲವು ಪಿಆರ್ ತಂಡಗಳೊಂದಿಗೆ ಮಾತನಾಡಿದ್ದಾರಂತೆ. ಆಕೆಯ ಬಗ್ಗೆ ಹರಿದಾಡುತ್ತಿರುವ ಇಂತಹ ವದಂತಿಗಳನ್ನು ಖಂಡಿಸಲು ಅವರು ತನ್ನ ವ್ಯವಸ್ಥಾಪರಿಗೆ ಸೂಚನೆ ನೀಡಿದ್ದಾರಂತೆ. ಆದರೆ ಇಂತಹ ವಂದತಿಗಳು, ಸುದ್ದಿಗಳು ಸಮಯ ಕಳೆದಂತೆ ಸತ್ತು ಹೋಗುತ್ತವೆ. ಹಾಗಾಗಿ ಈ ಬಗ್ಗೆ ಮೌನವಾಗಿರಲು ಆಕೆಯ ಪಿಆರ್ ತಂಡ ಸಲಹೆ ನೀಡಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಕೃತಿ ಸದ್ಯಕ್ಕೆ ಈ ವಿಚಾರದ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ. ಮುಂದೆ ಮಾತನಾಡುತ್ತಾರೆ ಎನ್ನುವ ಬಗ್ಗೆ ಪ್ರಶ್ನೆ ಮೂಡಿದೆ.

ಟಾಲಿವುಡ್ ಲಕ್ಕಿ ಹುಡುಗಿ ಆದ ಕೃತಿ ಶೆಟ್ಟಿ!

ಟಾಲಿವುಡ್ ಲಕ್ಕಿ ಹುಡುಗಿ ಆದ ಕೃತಿ ಶೆಟ್ಟಿ!

ಇನ್ನು ನಟಿ ಕೃತಿ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ. ಕೃತಿಗೆ ದೊಡ್ಡ ದೊಡ್ಡ ಚಿತ್ರಗಳ ಅವಕಾಶಗಳು ಬರುತ್ತಿವೆ. ಸದ್ಯ ಕೃತಿ ಅಭಿನಯದ 'ಶ್ಯಾಮ್ ಸಿಂಗಾ ರಾಯ್' ಮತ್ತು 'ಬಂಗಾರ ರಾಜು' ಚಿತ್ರಗಳು ಗೆದ್ದು ಬೀಗಿವೆ. ಇನ್ನು ಮೂರು ಚಿತ್ರಗಳು ಕೃತಿ ಶೆಟ್ಟಿ ಕೈಯಲ್ಲಿ ಇವೆ. ಕೃತಿ ಅಭಿನಯದ ಸಾಲು, ಸಾಲು ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಹಾಗಾಗಿ ಈ ಲಕ್ಕಿ ಹುಡುಗಿಯ ಮುಂದಿನ ಚಿತ್ರಗಳು ಹೇಗೆ ಇರಲಿವೆ. ಅವು ಕೂಡ ಹಿಟ್ ಲಿಸ್ಟ್ ಸೇರುತ್ತವೆಯಾ ಎನ್ನುವ ಕುತೂಹಲ ಮೂಡಿದೆ.

More from Filmibeat

English summary
Krithi Shetty Upset With The Rumours About Her, She Try To Say She Is not Like That
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X