ಶಾಕುಂತಲೆ ರೂಪದಲ್ಲಿ ಸಮಂತಾ: ಅಲೌಕಿಕ ಸುಂದರಿ ಲುಕ್‌ಗೆ ಫ್ಯಾನ್ಸ್ ಫಿದಾ!

ನಟಿ ಸಮಂತಾ ತಮ್ಮ ವಿಚ್ಛೇದನದ ಬಳಿಕ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಸಮಂತಾ ಸಾಲು ಸಾಲಾಗಿ ತಮ್ಮ ಸಿನಿಮಾ ಸಮಾಚಾರವನ್ನು ಹೊರ ಹಾಕುತ್ತಲಿದ್ದಾರೆ. ಅಂತೆಯೇ ಈಗ ಸಮಂತಾ ಮುಂದಿನ ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಬಂದಿದೆ. ಸಮಂತಾ ಅಭಿನಯದ 'ಶಾಕುಂತಲಂ' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

ಸಮಂತಾ ಇತ್ತೀಚೆಗೆ ಏನೇ ಮಾಡಿದರೂ, ಯಾವುದೇ ಕಾರಣಕ್ಕೆ ಸುದ್ದಿ ಆದರೂ ಕೂಡ ಅದು ಅವರ ವಿಚ್ಛೇದನದ ವಿಚಾರದ ಜೊತೆಗೆ ತಳುಕು ಹಾಕಿ ಕೊಳ್ಳುತ್ತಲಿತ್ತು. ಆದರೆ ಅದೆಲ್ಲವನ್ನು ಬದಿಗೊತ್ತಿ ಸಮಂತಾ ತಮ್ಮ ಸಿನಿಮಾ ಕಾರ್ಯಗಳಲ್ಲಿ ನಿರತ ಆಗಿದ್ದಾರೆ. ಈಗ 'ಶಾಕುಂತಲಂ' ಚಿತ್ರದ ಅಪ್ಡೇಟ್ ಕೊಟ್ಟಿದ್ದಾರೆ.

ಜಲಪಾತದ ಮುಂದೆ ನಿಂತು ಜೀವನದ ಬಗ್ಗೆ ಪಾಠ ಮಾಡಿದ ಸಮಂತಾ: 'ಶಾಕುಂತಲಂ' ಫಸ್ಟ್‌ಲುಕ್ ಕಥೆಯೇನು?
'ಶಾಕುಂತಲಂ' ಸಿನಿಮಾ ಸಮಂತಾ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಹಾಗಾಗಿ ಸಮಂತಾ ಪಾತ್ರ ಮತ್ತು ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಈ ನಿರೀಕ್ಷೆಯನ್ನು ಚಿತ್ರದ ಪೋಸ್ಟರ್ ಈಗ ದಪ್ಪಟ್ಟು ಮಾಡಿದೆ.

'ಶಾಕುಂತಲೆ' ರೂಪದಲ್ಲಿ ನಟಿ ಸಮಂತಾ ಸಂಚಲನ!

'ಶಾಕುಂತಲೆ' ರೂಪದಲ್ಲಿ ನಟಿ ಸಮಂತಾ ಸಂಚಲನ!

ನಟಿ ಸಮಂತಾ ಈ ಚಿತ್ರದಲ್ಲಿ ಶಾಕುಂತಲೆ ಪಾತ್ರ ಮಾಡುತ್ತಿದ್ದಾರೆ. ಸಮಂತಾ ಶಾಕುಂತಲೆ ರೂಪದಲ್ಲಿ ಹೇಗೆ ಕಾಣುತ್ತಾರೆ ಎನ್ನುವ ಕುತೂಹಲಗಳಿಗೆ ಫಸ್ಟ್ ಲುಕ್ ಬ್ರೇಕ್ ಹಾಕಿದೆ. ಪೋಸ್ಟರ್‌ನಲ್ಲಿ ಸಮಂತಾ ಬಿಳಿ ಬಣ್ಣದ ಪೌರಾಣಿಕ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದಾರೆ. ಅದಕ್ಕೆ ಹೂವಿನ ಅಲಂಕಾರವಿದೆ. ಜೊತೆಗೆ ಹೂವಿ ಆಭರಣಗಳನ್ನು ತೊಟ್ಟಿದ್ದಾರೆ. ಇನ್ನು ಶಾಕುಂತಲೆ ರೂಪದಲ್ಲಿ ಇರುವ ಸಮಂತಾ ಸುತ್ತಲು, ನವಿಲು, ಜಿಂಕೆ, ಮೊಲ, ಗಿಳಿ, ಬಾತುಕೋಳಿ ಇವೆ. ಕಾಡಿನ ಸುಂದರ ಪರಿಸರದಲ್ಲಿ ಅಲೌಕಿಕ ಸುಂದರಿ ಶಾಕುಂತಲೇ ದುಶ್ಯಂತನಿಗಾಗಿ ಕಾಯುತ್ತಿರುವ ಹಾಗೆ ಈ ಪೋಸ್ಟರ್ ಕಂಡು ಬಂದಿದೆ.

ಟ್ವೀಟ್ ಮಾಡಿ ಸಂತಸ ಹಂಚಿಕೊಂಡ ಸಮಂತಾ!

ನಟಿ ಸಮಂತಾ 'ಶಾಕುಂತಲಂ' ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಹಂಚಿಕೊಂಡು, ಶಾಕುಂತಲೆ ಪಾತ್ರದ ಬಗ್ಗೆ ಒಂದೆರಡು ಸಾಲುಗಳನ್ನು ಬರೆದುಕೊಂಡಿದ್ದಾರೆ. "ಪ್ರಸ್ತುತಪಡಿಸಲಾಗುತ್ತಿದ್ದೇವೆ 'ಶಾಕುಂತಲಂ' ಚಿತ್ರದಿಂದ, ಪ್ರಕೃತಿ ಪ್ರಿಯೆ, ಅಲೌಕಿಕ ಸುಂದರಿ ಮತ್ತು ಬಿಗುಮಾನದ ಶಾಕುಂತಲೆ" ಎಂದು ಬರೆದು ಚಿತ್ರದ ಫಸ್ಟ್ ಲುಕ್ ಪೋಸ್ಟ್ ಮಾಡಿದ್ದಾರೆ.

ಫಸ್ಟ್ ಲುಕ್‌ಗೆ ಸಕಾರಾತ್ಮಕ ಪ್ರತಿಕ್ರಿಯೆ!

ಫಸ್ಟ್ ಲುಕ್‌ಗೆ ಸಕಾರಾತ್ಮಕ ಪ್ರತಿಕ್ರಿಯೆ!

'ಶಾಕುಂತಲಂ' ಚಿತ್ರದ ಫಸ್ಟ್ ಲುಕ್ ನೋಡುಗರ ಮನ ಸೆಳೆದಿದೆ. ಈ ಪೊಸ್ಟರ್ ರಿಲೀಸ್ ಆಗುತ್ತಲೇ ವೈರಲ್ ಆಗಿದೆ. ಪೊಸ್ಟರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇದು ಹೊಸತನ ಹೊಂದಿರುವ ಪೊಸ್ಟರ್, ಸುಂದರವಾಗಿದೆ ಎನ್ನುವ ಅಭಿಪ್ರಾಯಗಳು ಸೋಷಿಯಲ್ ಮಿಡಿಯಾದಲ್ಲಿ ವ್ಯಕ್ತವಾಗಿದೆ. ಈ ಫಸ್ಟ್ ಲುಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದು, ಸಿನಿಮಾ ರಿಲೀಸ್ ಯಾವಾಗ ಎನ್ನುವ ಪ್ರಶ್ನೆ ಚಿತ್ರತಂಡಕ್ಕೆ ಎದುರಾಗಿದೆ.

ದುಶ್ಯಂತ ಹಾಗೂ ಶಾಕುಂತಲೆ ಪ್ರೇಮ ಕತೆ ಇದು!

ದುಶ್ಯಂತ ಹಾಗೂ ಶಾಕುಂತಲೆ ಪ್ರೇಮ ಕತೆ ಇದು!

'ಶಾಕುಂತಲಂ' ಒಂದು ಪೌರಾಣಿಕ ಸಿನಿಮಾ. ಇದು ರಾಜ ದುಶ್ಯಂತ ಹಾಗೂ ಶಾಕುಂತಲೆ ಅವರ ಕಥೆ. ದೇವ್ ಮೋಹನ್ ಎಂಬುವವರು ರಾಜ ದುಶ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಶಾಕುಂತಲೆ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಪುತ್ರಿ ಅರ್ಹ ಈ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದು, ಭರತನ ಪಾತ್ರದಲ್ಲಿ ನಟಿಸಿದ್ದಾಳೆ. ಈ ಸಿನಿಮಾವನ್ನು ನೀಲಿಮಾ ಗುನಾ ನಿರ್ಮಾಣ ಮಾಡಿದ್ದಾರೆ, ಗುಣಶೇಖರ್ ಈ ಪೌರಾಣಿಕ ಚಿತ್ರದ ನಿರ್ದೇಶಕರು.

More from Filmibeat

English summary
Samantha Starrer Shaakuntalam Movie First Look Out, Eternal Beauty Samantha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X