'ಲಾಲ್ ಸಿಂಗ್ ಚಡ್ಡ' ಸೋಲಿನ ಬಳಿಕ ಆಮಿರ್ ಮುಂದಿನ ನಡೆಗೆ ಮಾಜಿ ಪತ್ನಿ ಸಾಥ್!

'ಲಾಲ್‌ ಸಿಂಗ್ ಚಡ್ಡ' ನಿರೀಕ್ಷಿಸಿದಷ್ಟು ಯಶಸ್ಸು ಕಂಡಿಲ್ಲ. ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಜೊತೆಯಾಗಿ ನಟಿಸಿದ ಸಿನಿಮಾ ಆಗಸ್ಟ್ 11ಕ್ಕೆ ರಿಲೀಸ್ ಆಗಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ಸಿನಿಮಾ ಫ್ಲಾಪ್ ಅಂತ ಸಾಬೀತಾಗಿದೆ.

ಆಮಿರ್ ಖಾನ್ ಸಿನಿಮಾ ಬಿಡುಗಡೆಯಾಗುವ ಕೆಲವೇ ದಿನಗಳ ಹಿಂದಷ್ಟೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಬಾಯ್‌ಕಾಟ್ 'ಲಾಲ್‌ ಸಿಂಗ್ ಚಡ್ಡ' ಅಭಿಯಾನ ಆರಂಭಿಸಿದ್ದರು. ಆಮಿರ್ ಖಾನ್ ಸಿನಿಮಾ ಸೋಲುವುದಕ್ಕೆ ಇದು ಒಂದು ಕಾರಣವೆಂದು ಹೇಳಲಾಗುತ್ತಿದೆ. ಈ ಮಧ್ಯೆ ದೊಡ್ಡ ಸೋಲಿನ ಬಳಿಕ ಆಮಿರ್ ಖಾನ್ ಮುಂದಿನ ಸಿನಿಮಾ ಯಾವುದು? ಏನು ಮಾಡುತ್ತಾರೆ ಎನ್ನುವ ಚರ್ಚೆ ಆರಂಭ ಆಗಿದೆ.

'ಲಾಲ್ ಸಿಂಗ್ ಚಡ್ಡ' ಬಳಿಕ ಮುಂದೇನು?

ಆಮಿರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯಾವಾಗಿ ಸೋತಿದ್ದರಿಂದ ಮುಂದಿನ ನಡೆ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಆಮಿರ್ ಖಾನ್ ಹೊಸ ನಡೆ ಏನಿರಬಹುದು? ಯಾವ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ಕುತೂಹಲ ಸಹಜವಾಗಿಯೇ ಇದೆ. ಆದರೆ, ಬಾಲಿವುಡ್ ಮಂದಿ ಬೇರೆನೇ ಹೇಳುತ್ತಿದ್ದಾರೆ.

 Laal Singh Chaddha Flop: Aamir Khan Taking 2 Months Big Break

ಆಮಿರ್ ಖಾನ್ ಈ ಸೋಲಿನಿಂದ ತೀವ್ರವಾಗಿ ನೊಂದಿದ್ದಾರೆ. ಈ ಕಾರಣದಿಂದಲೇ 'ಲಾಲ್ ಸಿಂಗ್ ಚಡ್ಡ' ಬಳಿಕ ಯಾವುದೇ ಸಿನಿಮಾವನ್ನು ಆಮಿರ್ ಖಾನ್ ಒಪ್ಪಿಕೊಂಡಿಲ್ವಂತೆ. ನಟನೆಯಿಂದ ದೊಡ್ಡದೊಂದು ಬ್ರೇಕ್ ತೆಗೆದುಕೊಳ್ಳಲು ಆಮಿರ್ ನಿರ್ಧರಿಸಿದ್ದಾರಂತೆ. ಇಂತಹದ್ದೊಂದು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ಮಾಜಿ ಪತ್ನಿ ಜೊತೆ ಅಮೆರಿಕಗೆ ಹಾರಲಿರೋ ಆಮಿರ್?

ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ, ಆಮಿರ್ ಖಾನ್ ಅಮೆರಿಕಾಗೆ ಹಾರಲಿದ್ದಾರೆ ಎನ್ನಲಾಗಿದೆ. ಸುಮಾರು ಎರಡು ತಿಂಗಳು ಭಾರತಕ್ಕೆ ಹಿಂತಿರುಗುವುದು ಅನುಮಾನವೆಂದು ಹೇಳಲಾಗುತ್ತಿದೆ. ಸೋಲಿನ ಕಹಿಯನ್ನು ಸಂಪೂರ್ಣ ಮರೆಯಲೆಂದೇ ವಿದೇಶಕ್ಕೆ ಹಾರುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಆಮಿರ್ ಖಾನ್ ಜೊತೆ ಮಾಜಿ ಪತ್ನಿ ಕಿರಣ್ ರಾವ್ ಹಾಗೂ ಪುತ್ರ ಆಜಾದ್ ರಾವ್ ಖಾನ್ ಕೂಡ ಅಮೆರಿಕಾಗೆ ತೆರಳಿದ್ದಾರೆ. ಮುಂದಿನ ಸಿನಿಮಾಗೆ ಕೈ ಹಾಕುವುದಕ್ಕಿಂತ ಮುನ್ನ ಸೋಲಿನ ಕಹಿಯನ್ನು ಮರೆಯಬೇಕಿದೆ. ಹೀಗಾಗಿಯೇ ಅಮೆರಿಕಾಗೆ ಹಾರಲಿದ್ದಾರೆ ಎನ್ನಲಾಗುತ್ತಿದೆ.

 Laal Singh Chaddha Flop: Aamir Khan Taking 2 Months Big Break

ಬಾಕ್ಸಾಫೀಸ್‌ನಲ್ಲಿ ದೊಡ್ಡ ಸೋಲು

ಆಮಿರ್ ಖಾನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸೋಲು ಕಂಡಿದೆ. ವಿಶ್ವದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಭಾರತ ಸಿನಿಮಾ 'ದಂಗಲ್'. ಈ ರೇಂಜಿಗೆ 'ಲಾಲ್ ಸಿಂಗ್ ಚಡ್ಡ' ಕೂಡ ಇರುತ್ತೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೂ ಭಾರತದ ಬಾಕ್ಸಾಫೀಸ್‌ನಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡಲು ಪರದಾಡಿದೆ. ಆದರೆ, ಅಮೆರಿಕಾದಲ್ಲಿ ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದ್ದು. ಸುಮಾರು 59 ಕೋಟಿ ರೂ. ಲೂಟಿ ಮಾಡಿದೆ ಎನ್ನಲಾಗಿದೆ.

ಹಾಲಿವುಡ್ ಸೂಪರ್‌ಸ್ಟಾರ್ ಟಾಮ್ ಹ್ಯಾಂಕ್ಸ್ ನಟಿಸಿದ 'ಫಾರೆಸ್ಟ್ ಗಂಪ್' ಸಿನಿಮಾದ ರಿಮೇಕ್ ಆಗಿದ್ದು, ಆಮಿರ್ ಖಾನ್ ಸುಮಾರು ಮೂರು ವರ್ಷದಿಂದ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಆದರೆ, ಇಷ್ಟು ವರ್ಷ ಒಂದೇ ಸಿನಿಮಾಗಾಗಿ ಮೀಸಲಿಟ್ಟಿದ್ದ ಆಮಿರ್ ಖಾನ್‌ಗೆ ಈ ಸಿನಿಮಾ ಸೋಲು ಸಹಜವಾಗಿಯೇ ನಿರಾಸೆಯನ್ನುಂಟು ಮಾಡಿದೆ. ಅಲ್ಲದೆ, ಹಿಂದಿನ ಸಿನಿಮಾ 'ಥಗ್ಸ್ ಆಫ್ ಹಿಂದೂಸ್ತಾನ್' ಕೂಡ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿತ್ತು.

More from Filmibeat

English summary
Laal Singh Chaddha Flop: Aamir Khan Taking 2 Months Big Break, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X