ರಾಜಮೌಳಿ ಸಿನಿಮಾದಲ್ಲಿ ಮಹೇಶ್ ಬಾಬು ಪಾತ್ರವೇನು? ಜೇಮ್ಸ್ ಬಾಂಡ್ ಲುಕ್ ಕೊಟ್ಟಿದ್ದೇಕೆ?

ಒಂದ್ಕಡೆ ಮಹೇಶ್ ಬಾಬು.. ಇನ್ನೊಂದ್ಕಡೆ ರಾಜಮೌಳಿ.. ಒಂದ್ಕಡೆ ಸೂಪರ್‌ಸ್ಟಾರ್.. ಇನ್ನೊಂದ್ಕಡೆ ಮೂವಿ ಮಾಂತ್ರಿಕ. ಈ ಎರಡೂ ಪವರ್‌ಹೌಸ್ ಒಟ್ಟಿಗೆ ಸೇರಿದರೆ ಏನಾಗಬೇಡಾ? ಮಹೇಶ್ ಬಾಬು ಇನ್ನು ಯಾವುದೇ ಸಿನಿಮಾ ಒಪ್ಪಿಕೊಂಡರೂ, ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಬಗ್ಗೆನೇ ಟಾಕ್ ನಡೆಯುತ್ತಲೇ ಇರುತ್ತೆ.

ಮಹೇಶ್ ಬಾಬು ನಟಿಸಿದ ಹೊಚ್ಚ ಹೊಸ ಸಿನಿಮಾ 'ಸರ್ಕಾರು ವಾರಿ ಪಾಟ' ಇಂದು ( ಮೇ 12) ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್ ಆದ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಹೇಶ್ ಬಾಬು ಖದರ್, ಲುಕ್ ಹಾಗೂ ಮ್ಯಾನರಿಸಂಗೆ ತೆಲುಗು ಮಂದಿ ಫಿದಾ ಆಗಿದ್ದಾರೆ. ಇನ್ನೊಂದು ಕಡೆ ಟ್ವಿಟರ್‌ನಲ್ಲಿ ಡಿಸಾಸ್ಟರ್ ಎಸ್‌ವಿಪಿ ಅನ್ನೋ ಟ್ಯಾಗ್ ಕೂಡ ವೈರಲ್ ಆಗುತ್ತಿದೆ.

ಟಾಲಿವುಡ್‌ ಸೂಪರ್‌ಸ್ಟಾರ್ ಅಭಿಮಾನಿಗಳು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮಹೇಶ್ ಅಭಿಮಾನಿಗಳ ಕಣ್ಣು ರಾಜಮೌಳಿ ಸಿನಿಮಾ ಮೇಲಿದೆ. ಈ ಜೋಡಿ ಒಟ್ಟಿಗೆ ನಟಿಸುವ ಸಿನಿಮಾ ಹೇಗಿರುತ್ತೆ? ಅದ್ಯಾವಾಗ ಕಣ್ಣು ತುಂಬಿಕೊಳ್ಳುತ್ತೇವೋ ಎಂದು ಎದುರು ನೋಡುತ್ತಿದ್ದಾರೆ. ಹೀಗಿರುವಾಗಲೇ, ಟಾಲಿವುಡ್ ಅಡ್ಡಾದಲ್ಲಿ ಅಡ್ಡಡ್ಡ.. ಉದ್ದುದ್ದದ ಸುದ್ದಿಗಳು ಸದ್ದು ಮಾಡುತ್ತಲೇ ಇವೆ.

ಬಾಂಡ್ ಲುಕ್‌ನಲ್ಲಿ ಮಹೇಶ್ ಬಾಬು

ಬಾಂಡ್ ಲುಕ್‌ನಲ್ಲಿ ಮಹೇಶ್ ಬಾಬು

ಮೂವಿ ಮಾಂತ್ರಿಕ ರಾಜಮೌಳಿ, ಟಾಲಿವುಡ್‌ ಸೂಪರ್‌ಸ್ಟಾರ್‌ಗೆ ಯಾವ ಪಾತ್ರ ಕೊಡಬಹುದು? ಸಿನಿಮಾದ ಕಥೆ ಹೇಗಿರಬಹುದು? ಅಂತ ಪ್ರಿನ್ಸ್ ಅಭಿಮಾನಿಗಳು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಈ ಮಧ್ಯೆ ಟಾಲಿವುಡ್‌ನಲ್ಲಿ ಕಿಕ್ಕೇರಿಸುವ ಸುದ್ದಿಯೊಂದು ಓಡಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಮಹೇಶ್ ಬಾಬು ಲುಕ್ ಬಗ್ಗೆನೇ ಚರ್ಚೆಯಾಗುತ್ತಿದೆ. ಪ್ರಿನ್ಸ್ ಈ ಸಿನಿಮಾದಲ್ಲಿ ಜೇಮ್ಸ್ ಬಾಂಡ್‌ಗೆ ಹೋಲುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.

 ಪ್ರಿನ್ಸ್ ಜೇಮ್ಸ್ ಬಾಂಡ್: ಸುದ್ದಿ ಹಬ್ಬಿದ್ದೇಗೆ?

ಪ್ರಿನ್ಸ್ ಜೇಮ್ಸ್ ಬಾಂಡ್: ಸುದ್ದಿ ಹಬ್ಬಿದ್ದೇಗೆ?

ರಾಜಮೌಳಿ ಸಿನಿಮಾದಲ್ಲಿ ಮಹೇಶ್ ಬಾಬು ಪಕ್ಕಾ ಜೇಮ್ಸ್ ಬಾಂಬ್‌ನಂತಹ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಅಸಲಿಗೆ ಈ ಚರ್ಚೆ ಆರಂಭ ಶುರುವಾಗುವುದಕ್ಕೆ ಕಾರಣ, ಮ್ಯಾಗಜೀನ್ ಒಂದಕ್ಕೆ ಮಹೇಶ್ ಬಾಬು ನೀಡಿದ ಪೋಸ್ . ಸ್ಟೈಲಿಶ್ ಕಾರಿನ ಮುಂದೆ ಅಷ್ಟೇ ಸ್ಟೈಲಿಶ್ ಆಗಿ ಮಹೇಶ್ ಬಾಬು ಪೋಸ್ ನೀಡಿದ್ದೇ ಈ ಚರ್ಚೆಗೆ ಕಾರಣ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಇದೊಂದು ಲುಕ್ ಬಗ್ಗೆ ಜನರ ಅಭಿಪ್ರಾಯ ತಿಳಿಯಲೆಂದೇ ಮ್ಯಾಗಜೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಅಂತಾನೂ ಹೇಳುತ್ತಿದ್ದಾರೆ.

ಮಹೇಶ್‌ ಬಾಬುಗೆ ಅಡ್ವೆಂಚರ್ ಸಿನಿಮಾ

ಮಹೇಶ್‌ ಬಾಬುಗೆ ಅಡ್ವೆಂಚರ್ ಸಿನಿಮಾ

ರಾಜಮೌಳಿ ಮುಂದೆ ನಿರ್ದೇಶಿಸಲಿರುವ ಸಿನಿಮಾದಲ್ಲಿ ಅಡ್ವೆಂಚರ್ ಕಥೆ ಇದ್ದು, ಮಹೇಶ್ ಬಾಬುಗೆ ನಿರ್ದೇಶನ ಮಾಡಲು ಸಜ್ಜಾಗುತ್ತಿದ್ದಾರೆ. ಈ ಸಿನಿಮಾದ ಬಜೆಟ್ ಸುಮಾರು 800 ಕೋಟಿ ಎಂದು ಅಂದಾಜಿಸಲಾಗುತ್ತಿದೆ. ಈ ಮಧ್ಯೆ ಮಹೇಶ್ ಬಾಬು ಮ್ಯಾಗಜೀನ್ ಲುಕ್ ಬಗ್ಗೆ ಚರ್ಚೆ ಶುರುವಾಗಿದ್ದು, ಬಾಂಡ್ ಅಂತಹ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಅನ್ನು ಅನುಮಾನ ಮೂಡುತ್ತಿದೆ. ಈ ಮಧ್ಯೆ ಅಭಿಮಾನಿಗಳು ಅತ್ಯದ್ಭುತವಾದ ಆಕ್ಷನ್ ಸಿನಿಮಾದಲ್ಲಿ ನಟಿಸಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ.

ಸದ್ಯಕ್ಕಿಲ್ಲ ರಾಜಮೌಳಿ ಸಿನಿಮಾ

ಸದ್ಯಕ್ಕಿಲ್ಲ ರಾಜಮೌಳಿ ಸಿನಿಮಾ

'ಸರ್ಕಾರು ವಾರಿ ಪಾಟ' ಸಿನಿಮಾ ಬಳಿಕ ಮಹೇಶ್ ಬಾಬು ರಾಜಮೌಳಿ ತಂಡ ಸೇರಿಕೊಳ್ಳಬಹುದು ಎಂದು ನಂಬಲಾಗಿತ್ತು. ಆದರೆ, ಅದಕ್ಕೂ ಮುನ್ನ ಮಹೇಶ್ ಬಾಬು ಇನ್ನೊಂದು ಸಿನಿಮಾದಲ್ಲಿ ನಟಸಲಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬು ನಟಿಸಲಿದ್ದು, ಬಳಿಕ ರಾಜಮೌಳಿ ಚಿತ್ರದಲ್ಲಿ ನಟಿಸಲಿದ್ದಾರೆ.

More from Filmibeat

English summary
Mahesh Babu Might Be Playing James Bond Kind of Role in SS Rajamouli Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X