ಅಲ್ಲು ಅರ್ಜುನ್‌ಗೂ ಮೊದಲು ಮಹೇಶ್ ಬಾಬು ಕಥೆ ಹೇಳಿದ್ದ ಸುಕುಮಾರ್: 'ಪುಷ್ಪ' ಒಪ್ಪದ ತಾರೆಯರು ಯಾರು?

ಸುಕುಮಾರ್ ನಿರ್ದೇಶಿಸಿದ ಅಲ್ಲು ಅರ್ಜುನ್ 'ಪುಷ್ಪ' 2021ರ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ. ಕೆಲವು ವರದಿಗಳ ಪ್ರಕಾರ ಈ ಸಿನಿಮಾ ಸುಮಾರು 300 ಕೋಟಿಗೂ ಅಧಿಕ ಹಣ ಗಳಿಸಿದೆ. 'ಪುಷ್ಪ' ಕೇವಲ ತೆಲುಗಿನಲ್ಲಷ್ಟೇ ಬ್ಲಾಕ್ ಬಸ್ಟರ್ ಹಿಟ್ ಆಗಿಲ್ಲ. ಉತ್ತರ ಭಾರತದ ಬಾಕ್ಸಾಫೀಸ್‌ ಅನ್ನು ಚಿಂದಿ ಉಡಾಯಿಸಿ ಅಚ್ಚರಿ ಮೂಡಿಸಿದೆ. ಈ ಚಿತ್ರದ ಬಾಲಿವುಡ್ ಬಾಕ್ಸಾಫೀಸ್‌ ಗಳಿಕೆ 100 ಕೋಟಿ ಸಮೀಪಿಸುತ್ತಿದೆ.

'ಪುಷ್ಪ' ಈಗ ಅಭೂತಪೂರ್ವ ಯಶಸ್ಸು ಕಂಡಿದೆ. ಆದರೆ, ಬಾಕ್ಸಾಫೀಸ್‌ನಲ್ಲಿಇಷ್ಟೆಲ್ಲಾ ಸದ್ದು ಮಾಡಿದ ಸಿನಿಮಾವನ್ನು ಐವರು ತಾರೆಯರು ತಿರಸ್ಕರಿಸಿದ್ದರಂತೆ. ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರಿಂದ ದಿಶಾ ಪಾಟ್ನಿವರೆಗೂ ನಿರ್ದೇಶಕ ಸುಕುಮಾರ್ ಬೇರೆ ಪಾತ್ರಗಳಲ್ಲಿ ಕೇಳಿದ್ದರು. ಅವರು ನಾನಾ ಕಾರಣಗಳನ್ನು ನೀಡಿ 'ಪುಷ್ಪ' ಸಿನಿಮಾವನ್ನುರಿಜೆಕ್ಟ್ ಮಾಡಿದ್ದರಂತೆ. ಇಂತಹದ್ದೊಂದು ಸುದ್ದಿ ಟಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. 'ಪುಷ್ಪ' ಸಿನಿಮಾ ಕೈ ಬಿಟ್ಟ ತಾರೆಯರ ಪಟ್ಟಿ ಇಲ್ಲಿದೆ.

ಮಹೇಶ್‌ ಬಾಬುಗೆ ಮೊದಲು ಪುಷ್ಪ ಕಥೆ ಹೇಳಿದ್ರು

ಮಹೇಶ್‌ ಬಾಬುಗೆ ಮೊದಲು ಪುಷ್ಪ ಕಥೆ ಹೇಳಿದ್ರು

ಕೆಲವು ವರ್ಷಗಳ ಹಿಂದೆ ಸುಕುಮಾರ್ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕಥೆ ಹೇಳುತ್ತಾರೆಂದು ಸುದ್ದಿಯಾಗಿತ್ತು. ಇವರಿಬ್ಬರ ನಡುವೆ ಮಾತುಕತೆ ನಡೆದಿದ್ದರೂ ಕಥೆ ಒಕೆ ಆಗಿರಲಿಲ್ಲ. 'ಪುಷ್ಪ' ಕತೆಯನ್ನೇ ಸುಕುಮಾರ್ ಅಂದು ಮಹೇಶ್ ಬಾಬುಗೆ ಹೇಳಿದ್ದರು. ಆದರೆ, ಮಹೇಶ್ ಬಾಬು ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುವುದಿಲ್ಲವೆಂದು ತಿರಸ್ಕರಿಸಿದ್ದರಂತೆ. ಅಂದು ಮಹೇಶ್ ಬಾಬು ಬಿಟ್ಟ ಕಥೆಯನ್ನೇ ಅಲ್ಲು ಅರ್ಜುನ್‌ಗೆ ಹೇಳಲಾಗಿತ್ತು ಅನ್ನುವ ಮಾತುಗಳು ಹರಿದಾಡುತ್ತಿದೆ.

ಶ್ರೀವಲ್ಲಿ ಪಾತ್ರದಲ್ಲ ಸಮಂತಾ ?

ಶ್ರೀವಲ್ಲಿ ಪಾತ್ರದಲ್ಲ ಸಮಂತಾ ?

ಸಮಂತಾ ಅಭಿನಯದ ಬಗ್ಗೆ ಸುಕುಮಾರ್‌ಗೆ ಉತ್ತಮ ಅಭಿಪ್ರಾಯವಿದೆ. ಯಾಕಂದ್ರೆ, 'ಪುಷ್ಪ'ಗೂ ಮುನ್ನ ಸುಕುಮಾರ್ ನಿರ್ದೇಶಿಸಿದ 'ರಂಗಸ್ಥಳಂ' ಸಿನಿಮಾದಲ್ಲಿ ಸಮಂತಾ ನಟಿಸಿದ್ದರು. ಹೀಗಾಗಿ 'ಪುಷ್ಪ' ಚಿತ್ರದಲ್ಲಿ ಶ್ರೀವಲ್ಲಿ ಪಾತ್ರಕ್ಕೆ ಅಪ್ರೋಚ್ ಮಾಡಿದ್ದರಂತೆ. ಆದರೆ, ಸಮಂತಾ ಕಾರಣಾಂತರಗಳಿಂದ ಈ ಸಿನಿಮಾದಲ್ಲಿ ನಟಿಸಲು ಒಪ್ಪಲಿಲ್ಲ. ಬಳಿಕ ಒತ್ತಾಯದ ಮೇರೆಗೆ 'ಹೂ ಅಂಟಾವಾ ಮಾವ' ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದರು.

ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಬೇಕಿತ್ತು ದಿಶಾ ಪಾಟ್ನಿ

ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಬೇಕಿತ್ತು ದಿಶಾ ಪಾಟ್ನಿ

ದೇವಿಶ್ರೀ ಪ್ರಸಾದ್ ಕಂಪೋಸ್ ಮಾಡಿದ್ದ 'ಹೂ ಅಂಟಾವಾ ಮಾವಾ' ಐಟಂ ಸಾಂಗ್‌ಗೆ ಮೊದಲು ಬಾಲಿವುಡ್ ನಟಿ ದಿಶಾ ಪಾಟ್ನಿಯನ್ನು ವಿಚಾರಿಸಲಾಗಿತ್ತು. ಟೈಗರ್ ಶ್ರಾಫ್ ಗರ್ಲ್‌ಫ್ರೆಂಡ್ ದಿಶಾ ಪಟಾನಿಯನ್ನು ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಿಸಲು ಭಾರೀ ಪ್ರಯತ್ನ ನಡೆಸಿದ್ದರು. ದೊಡ್ಡ ಮೊತ್ತವನ್ನು ನೀಡಲು ನಿರ್ಮಾಪಕರು ರೆಡಿಯಾಗಿದ್ದರು. ಆದರೆ, ದಿಶಾ ಈ ಆಫರ್‌ ಅನ್ನು ಹಲವು ಕಾರಣಗಳಿಂದ ಒಪ್ಪಿಕೊಳ್ಳಲಿಲ್ಲ.

ನೂರಾ ಫತೇಹಿ ಸಂಭಾವನೆಗೆ ಬೆಚ್ಚಿದ ಸುಕುಮಾರ್

ನೂರಾ ಫತೇಹಿ ಸಂಭಾವನೆಗೆ ಬೆಚ್ಚಿದ ಸುಕುಮಾರ್

ದಿಶಾ ಪಾಟ್ನಿ ಐಟಂ ಸಾಂಗ್‌ನಲ್ಲಿ ನಟಿಸುದಿಲ್ಲವೆಂದು ಹೇಳಿದ ಬಳಿಕ ಮತ್ತೊಬ್ಬ ಬಾಲಿವುಡ್ ಡ್ಯಾನ್ಸರ್ ಹುಡುಕಿಕೊಂಡು ಹೊರಟಿದ್ದರು. ಬಾಲಿವುಡ್‌ನ ಐಟಂ ಸಾಂಗ್ ಸ್ಪೆಷಲಿಸ್ಟ್ ನೂರಾ ಫತೇಹಿಯನ್ನು ಹೂ ಅಂಟಾವಾ ಹಾಡಿನಲ್ಲಿ ನಟಿಸುವಂತೆ ಕೇಳಲಾಗಿತ್ತು. ಆದರೆ, ನೂರಾ ಫತೇಹಿ ಗ್ರೀನ್ ಸಿಗ್ನಲ್ ಕೊಟ್ಟರೂ, ಸಂಭಾವನೆ ದೊಡ್ಡದಿತ್ತು. ಈ ಕಾರಣಕ್ಕೆ ಚಿತ್ರತಂಡವೇ ನೂರಾ ಫತೇಹಿಯನ್ನು ರಿಜೆಕ್ಟ್ ಮಾಡಿದ್ದರಂತೆ.

ಫಹಾದ್ ಪಾತ್ರದಲ್ಲಿ ವಿಜಯ್ ಸೇತುಪತಿ

ಫಹಾದ್ ಪಾತ್ರದಲ್ಲಿ ವಿಜಯ್ ಸೇತುಪತಿ

ಆಗ ತಾನೇ ವಿಜಯ್ ಸೇತುಪತಿ ನಟಿಸಿದ 'ಉಪ್ಪೇನಾ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಸುಕುಮಾರ್ ಶಿಷ್ಯನೇ ಈ ಸಿನಿಮಾ ನಿರ್ದೇಶನ ಮಾಡಿದ್ದರಿಂದ ಫಹಾದ್ ಫಾಸಿಲ್ ನಟಿಸಿದ ಪಾತ್ರದಲ್ಲಿ ನಟಿಸುವಂತೆ ವಿಜಯ್ ಸೇತುಪತಿಯನ್ನು ಕೇಳಾಗಿತ್ತು. ಆದರೆ, ವಿಜಯ್ ಸೇತುಪತಿ, ಅಲ್ಲು ಅರ್ಜುನ್ ಪಾತ್ರ ಕೊಟ್ಟರೆ ನಟಿಸುವುದಾಗಿ ಹೇಳಿದ್ದರಂತೆ. ಆದರೆ ಅಷ್ಟೊತ್ತಿಗಾಗಲೇ ಅಲ್ಲು ಅರ್ಜುನ್‌ 'ಪುಷ್ಪ' ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಹೀಗಾಗಿ ವಿಜಯ್ ಸೇತುಪತಿಯನ್ನು ಕೈಬಿಡಲಾಯಿತು.

More from Filmibeat

English summary
Director Sukumar approached many celebrities for may roles, but they Rejected. Mahesh Babu, Samantha, Disha Patani, Nora Fatehi, Vijay Sethupathi Rejected Pusha Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X