ಕೀರ್ತಿ ಸುರೇಶ್ ವಿರುದ್ಧ ಮಹೇಶ್ ಬಾಬು ಟೀಂ ಅಸಮಾಧಾನ: ನಟಿ ಮಾಡಿದ ತಪ್ಪೇನು?

ನಟಿ ಕೀರ್ತಿ ಸುರೇಶ್‌ ಅವರನ್ನು ಮಹಾನಟಿ ಅಂತಲೇ ಕರೆಯಲಾಗುತ್ತದೆ. ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಅವರ ಲಕ್‌ ಯಾಕೋ ಕೈ ಕೊಟ್ಟಂತಿದೆ. ಅವರು ಮಾಡಿದ ಸಾಲು, ಸಾಲು ಸಿನಿಮಾಗಳು ಸೋಲುಂಡಿವೆ. ಈಗ ಮತ್ತೆ ಒಂದಷ್ಟು ಹೊಸ ಪ್ರಯೋಗಗಳ ಮೂಲಕ ಕೀರ್ತಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಕೀರ್ತಿ ಸುರೇಶ್ ಸದ್ಯ ಹೆಚ್ಚಾಗಿ ಗಮನ ಸೆಳೆಯುತ್ತಿರುವುದು ಮತ್ತು ಸುದ್ದಿ ಆಗುತ್ತಿರುವುದು, 'ಸರ್ಕಾರು ವಾರಿ ಪಾಠ' ಚಿತ್ರದ ವಿಚಾರವಾಗಿ. ಅದರೊಂದಿಗೆ ಇತ್ತೀಚೆಗೆ ನಟಿ ಕೀರ್ತಿ ಸುರೇಶ್ ಅವರು ತಮ್ಮ ಹೊಸ ಹಾಡು 'ಗಾಂಧಾರಿ' ಮೂಲಕವೂ ಸುದ್ದಿ ಆಗುತ್ತಿದ್ದಾರೆ.

ಕೀರ್ತಿ ಸುರೇಶ್ ಹೊಸ ರೂಲ್ಸ್: ಕೋಟಿ ಕೊಟ್ಟರೂ ತುಂಡು ಬಟ್ಟೆ ಧರಿಸಲ್ಲ!
ಆದರೆ ಕೀರ್ತಿ ಸುರೆಶ್ ನಡೆ ಚಿತ್ರತಂಡಕ್ಕೆ ಅಸಮಾಧಾನ ಉಂಟು ಮಾಡಿದೆಯಂತೆ. ಕೀರ್ತಿ ಅವರು ಮಾಡುತ್ತಿರುವ ಹೊಸ ಪ್ರಾಜೆಕ್ಟ್‌ಗಳಿಂದ ಚಿತ್ರ ತಂಡಕ್ಕೆ ತಲೆ ನೋವು ಉಂಟಾಗಿದೆಯಂತೆ. ಹೀಗೊಂದು ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಲಿದೆ.

Mahesh Babu Starrer Sarkaru Vaari Paata Team Upset With Actress Keerthy Suresh
ಕೀರ್ತಿ ಸುರೇಶ್ ಅವರ ಡಾನ್ಸ್ ಮಾಡಿರುವ 'ಗಾಂಧಾರಿ' ಮ್ಯೂಸಿಕ್ ವಿಡಿಯೋ ರಿಲೀಸ್ ಆಗಿದೆ. ಈ ವಿಡಿಯೋದಲ್ಲಿ ನಟಿ ಕೀರ್ತಿ ಸುರೇಶ್ ಡ್ಯಾನ್ಸ್ ಮಾಡಿದ್ದಾರೆ. ಗಾಂಧಾರಿಯಾಗಿ ಕುಣಿದ ಕೀರ್ತಿಗೆ ಜನ ಮೆಚ್ಚುಗೆ ಸಿಕ್ಕಿದೆ. ಕೀರ್ತಿ ಡಾನ್ಸ್ ಸೂಪರ್ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಈ ಹಾಡು ಈಗ ವೈರಲ್ ಆಗಿದೆ. ಆದರೆ ಇದೇ ಹಾಡಿನಿಂದ 'ಸರ್ಕಾರು ವಾರಿ ಪಾಠ' ಚಿತ್ರತಂಡಕ್ಕೆ ಬೇಸರ ಆಗಿದೆಯಂತೆ.

ಮಹಾನಟಿ ಬೆಡಗಿ ಕೀರ್ತಿ ಸುರೇಶ್ ಈ ಮ್ಯೂಸಿಕ್ ವಿಡಿಯೋ ಈಗ ಮಾಡಬಾರದಿತ್ತು ಎನ್ನುವ ಅಭಿಪ್ರಾಯ ಚಿತ್ರದಲ್ಲಿ ಮೂಡಿದೆಯಂತೆ. ಮಹೇಶ್ ಬಾಬು ಅವರ ಜೊತೆಗಿನ 'ಸರ್ಕಾರು ವಾರಿ ಪಾಠ' ಚಿತ್ರ ಬಿಡುಗಡೆಯಾಗುವವರೆಗೆ ಇಂತಹ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಬಾರದಿತ್ತು. ಮೊದಲು ಚಿತ್ರಕ್ಕೆ ಆದ್ಯಾತೆ ನೀಡಬೇಕಿತ್ತು, ಎಂದು ಚಿತ್ರದ ನಿರ್ಮಾಪಕರು ಹೇಳಿಕೊಂಡಿದ್ದಾರಂತೆ.

ಸುದ್ದಲ ಅಶೋಕ್ ತೇಜ 'ಗಾಂಧಾರಿ' ಹಾಡಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ. ಬೃಂದಾ ಮಾಸ್ಟರ್ ಹಾಡನ್ನು ನಿರ್ದೇಶಿಸುವುದರೊಂದಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಅನನ್ಯಾ ಭಟ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಮತ್ತೊಂದೆಡೆ ಕೀರ್ತಿ ಸುರೇಶ್ ಅವರ ಕೈಯಲ್ಲಿ ಹಲವಾರು ಚಿತ್ರಗಳಿವೆ. ಅವರು 'ಭೋಲಾ ಶಂಕರ್' ಚಿತ್ರದಲ್ಲಿ ಚಿರಂಜೀವಿ ಅವರ ಸಹೋದರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಲಯಾಳಂ ಚಿತ್ರ 'ವಾಶಿ'ಯಲ್ಲಿ ವಕೀಲರಾಗಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Mahesh Babu Starrer Sarkaru Vaari Paata Team Upset With Actress Keerthy Suresh For Her New Song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X