twitter
    For Quick Alerts
    ALLOW NOTIFICATIONS  
    For Daily Alerts

    ಮಾಸ್ ಮಹಾರಾಜ ರವಿತೇಜ ಸಂಭಾವನೆ ಒಂದು ದಿನಕ್ಕೆ 50 ಲಕ್ಷ: ಇದೂ ಕಡಿಮೆ ಅಂತೆ!

    |

    ತೆಲುಗಿನ ಮಾಸ್ ಮಹಾರಾಜ ರವಿ ತೇಜ. ಒಂದೆರಡು ವರ್ಷದ ಹಿಂದೆ ರವಿತೇಜಾ ಸಿನಿಮಾ ಕರಿಯರ್ ಮುಗಿದೇ ಹೋಯ್ತು ಅಂತಲೇ ಭಾವಿಸಲಾಗಿತ್ತು. ಒಂದೇ ಒಂದು ಸಿನಿಮಾ ಕೂಡ ಹಿಟ್ ಆಗುತ್ತಿರಲಿಲ್ಲ. ಬಾಕ್ಸಾಫೀಸ್‌ನಲ್ಲಿ ನಿರಂತರ ಫ್ಲಾಪ್ ಸಿನಿಮಾಗಳನ್ನೇ ನೀಡುತ್ತಿದ್ದ ರವಿ ತೇಜಗೆ ಲಾಕ್‌ಡೌನ್ ವರದಾನವಾಗಿತ್ತು. ಈ ಸಂಕಷ್ಟ ಪರಿಸ್ಥಿತಿಯಲ್ಲೇ ರವಿತೇಜಾ ನಟಿಸಿದ್ದ 'ಕ್ರ್ಯಾಕ್' ಸಿನಿಮಾ ರಿಲೀಸ್ ಆಗಿತ್ತು. ಅಚ್ಚರಿ ಎಂಬಂತೆ 'ಕ್ರ್ಯಾಕ್' ಸೂಪರ್‌ ಡೂಪರ್ ಹಿಟ್ ಆಗಿತ್ತು. ಇಲ್ಲಿಂದ ಮತ್ತೆ ರವಿತೇಜ ಸಿನಿ ಬದುಕು ಬದಲಾಗಿದೆ.

    ರವಿತೇಜ ಈಗ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ಮಾಪಕರಿಗೆ ಕಾಲ್‌ ಶೀಟ್ ಕೊಡುವುದಕ್ಕೆ ಆಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಹೊಸ ಸಿನಿಮಾ 'ರಾಮ ರಾವ್ ಆನ್ ಡ್ಯೂಟಿ ಚಿತ್ರವನ್ನು ಅತೀ ಕಡಿಮೆ ಸಮಯದಲ್ಲಿ ಶೂಟಿಂಗ್ ಮುಗಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಮಧ್ಯೆ ರವಿತೇಜ ಸಂಭಾವನೆ ಬಗ್ಗೆನೂ ಗುಲ್ಲೆದ್ದಿದೆ. ಒಂದು ದಿನಕ್ಕೆ ಬರೋಬ್ಬರಿ 50 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಟಾಲಿವುಡ್ ಮೂಲಗಳ ಪ್ರಕಾರ ಇದೂ ಕೂಡ ಕಡಿಮೆನೇ ಅಂತೆ.

    ಹಿಂದಿಯಲ್ಲಿ ರವಿತೇಜ 'ಕಿಲಾಡಿ' ಸೋಲು: ಎಲ್ಲಾ ಚಿತ್ರವೂ 'ಪುಷ್ಪ' ಆಗಲು ಸಾಧ್ಯವಿಲ್ಲ!ಹಿಂದಿಯಲ್ಲಿ ರವಿತೇಜ 'ಕಿಲಾಡಿ' ಸೋಲು: ಎಲ್ಲಾ ಚಿತ್ರವೂ 'ಪುಷ್ಪ' ಆಗಲು ಸಾಧ್ಯವಿಲ್ಲ!

    ದಿನಕ್ಕೆ 50 ಲಕ್ಷ ಸಂಭಾವನೆ

    ದಿನಕ್ಕೆ 50 ಲಕ್ಷ ಸಂಭಾವನೆ

    ಮಾಸ್ ಮಹಾರಾಜ ರವಿತೇಜ ಈಗ ಆಕ್ಷನ್ ಥ್ರಿಲ್ಲರ್ ಸಿನಿಮಾ 'ರಾಮ ರಾವ್ ಆನ್ ಡ್ಯೂಟಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ನಿರ್ದೇಶಕ ಶರತ್ ಮಂಡವಗೆ ಇದು ಮೊದಲ ಸಿನಿಮಾ. ಇದೇ ಸುಧಾಕರ್ ಚೆರುಕುರಿ ಹಾಗೂ ಆರ್‌ಟಿ ಟೀಮ್‌ವರ್ಕ್ಸ್‌ ಎಂಬ ಸಂಸ್ಥೆ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ರವಿತೇಜ ದಿನಕ್ಕೆ 50 ಲಕ್ಷ ಸಂಭಾವನೆ ಪಡೆದಿದ್ದಾರಂತೆ. ಆದರೆ ಟಾಲಿವುಡ್ ಇದೇ ಕಡಿಮೆ ಸಂಭಾವನೆ ಎನ್ನುತ್ತಿದೆ. ಸಾಮಾನ್ಯವಾಗಿ ರವಿತೇಜ ಒಂದು ಸಿನಿಮಾಗೆ ಅಂತ ಸಂಭಾವನೆ ಮಾತಾಡುತ್ತಾರಂತೆ. ಆದರೆ, ಇದೇ ಮೊದಲ ಬಾರಿಗೆ ದಿನಕ್ಕೆ 50 ಲಕ್ಷದಂತೆ ಸಂಭಾವನೆ ಅಂತ ಮಾತಾಡಿಕೊಂಡು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    50 ಲಕ್ಷದ ಸಂಭಾವನೆ ಲೆಕ್ಕಾಚಾರವೇನು?

    50 ಲಕ್ಷದ ಸಂಭಾವನೆ ಲೆಕ್ಕಾಚಾರವೇನು?

    ರವಿತೇಜಾ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತ 'ರಾಮ ರಾಮ್ ಆನ್ ಡ್ಯೂಟಿ' ನಿರ್ಮಾಣ ಸಂಸ್ಥೆ ಕೂಡ ಸಿನಿಮಾವನ್ನು 20 ರಿಂದ 25 ದಿನಗಳಲ್ಲಿ ಸಿನಿಮಾ ಮುಗಿಸುವ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ ರವಿತೇಜಗೆ ಅಂದಕೊಂಡಂತೆ 25 ದಿನದೊಳಗೆ ಸಿನಿಮಾ ಮುಗಿಸುವುದಾಗಿ ಮಾತಾಡಿದ್ದರು. ಇದಕ್ಕೆ ದಿನಕ್ಕೆ 50 ಲಕ್ಷದಂತೆ ಸಂಭಾವನೆ ನೀಡುವುದಾಗಿ ಒಡಂಬಡಿಕೆ ಮಾಡಿಕೊಂಡಿದ್ದರು. ಈ ಲೆಕ್ಕಾಚಾರದ ಪ್ರಕಾರ, ರವಿತೇಜ ಈ ಸಿನಿಮಾಗೆ 10 ರಿಂದ 12 ಕೋಟಿ ಸಂಭಾವನೆ ಪಡೆದಿದ್ದಾರೆ. ಈ ಕಾರಣಕ್ಕೆ ಟಾಲಿವುಡ್ ಇದು ಕಮ್ಮಿ ಸಂಭಾವನೆ ಎನ್ನುತ್ತಿದೆ.

    ಒಂದು ದಿನದ ಸಂಭಾವನೆ ಎಷ್ಟು?

    ಒಂದು ದಿನದ ಸಂಭಾವನೆ ಎಷ್ಟು?

    'ಕ್ರ್ಯಾಕ್' ಸಿನಿಮಾ ಸೂಪರ್‌ ಹಿಟ್ ಆದ ಬಳಿಕ ರವಿ ತೇಜ ಮಾರ್ಕೇಟ್ ಮತ್ತೆ ಚಿಗುರಿದೆ. ರವಿತೇಜ ಜೊತೆ ಸಿನಿಮಾ ಮಾಡಲು ತೆಲುಗು ನಿರ್ಮಾಪಕರು ಮುಂದೆ ಬರುತ್ತಿದ್ದಾರೆ. ಹೀಗಾಗಿ ಸಂಭಾವನೆ ಕೂಡ ಏರಿಸಿಕೊಂಡಿದ್ದಾರಂತೆ. ಮಾಸ್ ಮಹಾರಾಜ ರವಿ ತೇಜ ಸದ್ಯ ಒಂದು ಸಿನಿಮಾಗೆ 15 ರಿಂದ 18 ಕೋಟಿ ವರೆಗೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತಿದೆ. ಈ ಲೆಕ್ಕಾಚಾರದ ಪ್ರಕಾರ ರವಿತೇಜ 'ರಾಮ ರಾವ್ ಆನ್ ಡ್ಯೂಟಿ' ಚಿತ್ರಕ್ಕೆ ಪಡೆದಿರುವ ಸಂಭಾವನೆ ಕಡಿಮೆ ಎಂದು ಅಂದಾಜು ಮಾಡುತ್ತಿದೆ ಚಿತ್ರತಂಡ.

    'ರಾಮ್ ರಾವ್ ಆನ್ ಡ್ಯೂಟಿ' ಅಸಲಿ ಮ್ಯಾಟರ್ ಏನು?

    'ರಾಮ್ ರಾವ್ ಆನ್ ಡ್ಯೂಟಿ' ಅಸಲಿ ಮ್ಯಾಟರ್ ಏನು?

    ಟಾಲಿವುಡ್ ಮೂಲಗಳ ಪ್ರಕಾರ 'ರಾಮ್ ರಾವ್ ಆನ್ ಡ್ಯೂಟಿ' ಸಿನಿಮಾ ನಿರ್ಮಾಪಕರ ಲೆಕ್ಕಾಚಾರ ತಲೆ ಕೆಳಗಾಗಿದೆ. ಒಂದು ದಿನಕ್ಕೆ 50 ಲಕ್ಷ ಸಂಭಾವನೆ ಅಂತ ಮಾತಾಡಿದ್ದೇನೋ ನಿಜ. ಆದರೆ, ಸಿನಿಮಾ ತಂಡ 20-25 ದಿನದೊಳಗೆ ಸಿನಿಮಾವನ್ನು ಮುಗಿಸುವಲ್ಲಿ ವಿಫಲಾಗಿದೆಯಂತೆ. ಸಿನಿಮಾದ ಟಾಕಿ ಪೋಷನ್ ಮುಗಿದಿದ್ದರೂ, ಇನ್ನೂ ಹಾಡುಗಳು ಹಾಗೂ ಪ್ಯಾಚ್ ವರ್ಕ್ ಬಾಕಿ ಇದೆಯಂತೆ. ಹೀಗಾಗಿ ಒಂದು ಲೆಕ್ಕಾಚಾರದ ಪ್ರಕಾರ, 'ರಾಮ್ ರಾವ್ ಆನ್ ಡ್ಯೂಟಿ' ಚಿತ್ರಕ್ಕೆ 38 ರಿಂದ 40 ದಿನ ಕಾಲ್‌ಶೀಟ್ ಪಡೆದಂತೆ ಆಗಿದೆ. ಹೀಗಾಗಿ 18 ರಿಂದ 20 ಕೋಟಿ ರವಿತೇಜ ಜೇಬು ಸೇರಿದೆ. ಇದರಿಂದ ನಿರ್ಮಾಪಕರಿಗೆ 3 ರಿಂದ 4 ಕೋಟಿ ಹೆಚ್ಚು ಸಂಭಾವನೆ ಕೊಟ್ಟಿದ್ದಾರೆ ಅಂತ ಟಾಲಿವುಡ್ ಹೇಳುತ್ತಿದೆ. ಆದರೂ, ದಿನಕ್ಕೆ 50 ಲಕ್ಷ ಸಂಭಾವನೆ ಕಮ್ಮಿಯೇನಲ್ಲ ಅಲ್ವಾ?.

    English summary
    Mass Maharaja Ravi Teja charged Rs 50 lakh per day for new movie Rama Rao on Duty. Ravi Teja allotted 20-25 working days for the shoot. And the makers convinced Krack actor to charge Rs 50 lakh per day.
    Thursday, March 3, 2022, 12:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X