'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ' ನಟಿಗೆ ಕೂಡಿ ಬಂತು ಕಂಕಣ: ವರನ್ಯಾರು ಗೊತ್ತೇ?
ಭಾರತೀಯ ಚಿತ್ರರಂಗದಲ್ಲೀಗ ಮದುವೆ ಪರ್ವ ಶುರುವಾಗಿದೆ. ಒಬ್ಬೊಬ್ಬರೇ ನಟಿಯರು ಹಸೆಮಣೆ ಏರುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ನಟಿಯೊಬ್ಬರು ಹಸೆಮಣೆ ಏರುತ್ತಿದ್ದಾರೆ. ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ'ಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಕೇವಲ ಸಿನಿಮಾ ಅಷ್ಟೇ ಅಲ್ಲ. ಆಂಕರಿಂಗ್‌ನಲ್ಲಿಯೂ ಚಿರಪರಿಚಿತರು. ಅವರೇ ಕಾವ್ಯಾ ಶಾ. ಈ ನಟಿ ಕಮ್ ನಿರೂಪಕಿ ಅತಿ ಶೀಘ್ರದಲ್ಲಿಯೇ ವಿವಾಹವಾಗುತ್ತಿದ್ದಾರಂತೆ. ಹಾಗಂತ ಸುದ್ದಿಯೊಂದು ಸ್ಯಾಂಡಲ್‌ವುಡ್‌ನಲ್ಲಿ ಓಡುತ್ತಿದೆ.
ಕಾವ್ಯಾ ಶಾ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ, ಕಿರುತೆರೆಯಲ್ಲಿ ಹಾಗೂ ಆಂಕರಿಂಗ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಕನ್ನಡ ಹಿರಿಯ ಪೋಷಕ ನಟ ನಾಗೇಂದ್ರ ಶಾ ಅವರ ಮಗಳು. ಸೋಶಿಯಲ್ ಮೀಡಿಯಾದಲ್ಲೂ ಸದಾ ಆಕ್ವೀವ್ ಆಗಿರುವ ನಟಿ, ನಿರೂಪಕಿ ಸದ್ಯ ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇವರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುತ್ತಿವೆ ಸ್ಯಾಂಡಲ್‌ವುಡ್ ಮೂಲಗಳು.

ಕಾವ್ಯ ಶಾ ಮದುವೆ ಯಾವಾಗ?
ಕಾವ್ಯಾ ಶಾ ಹಲವು ವರ್ಷಗಳಿಂದ ಕಿರುತೆರೆ ಹಾಗೂ ಸಿನಿಮಾರಂಗಕ್ಕೆ ಚಿರಪರಿಚಿತ. ಕನ್ನಡದ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಿರೂಪಣೆ ಮಾಡುವ ಮೂಲಕ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ. ಕಸ್ತೂರಿ ವಾಹಿನಿಯಿಂದ ಕಾವ್ಯಾ ಶಾ ಆಂಕರಿಂಗ್ ಆರಂಭಿಸಿದ್ದರು. ಬಳಿಕ ಮಾಡಲಿಂಗ್ ಕಡೆ ಆಕರ್ಷಿತರಾಗಿದ್ದರೂ, 'ಬಂಗಾರ', 'ಚಿ ಸೌ ಸಾವಿತ್ರಿ' ಅಂತಹ ಧಾರಾವಾಹಿಗಳಲ್ಲಿ ನಟಿಸಿದ್ದರು. ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ ಮಿಸ್ಟರ್ ಅಂಡ್ ಮಿಸ್ಟರ್ ರಾಮಾಚಾರಿ, ಇತ್ತೀಚೆಗೆ ತೆರೆಕಂಡ ಮುಗಿಲ್ ಪೇಟೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ಬ್ಯುಸಿಯಾಗಿರುವ ಕಾವ್ಯ ಶಾ ಇದೇ ಮಾರ್ಚ್ ತಿಂಗಳ ಕೊನೆಯಲ್ಲಿ ಇಲ್ಲವೇ ಏಪ್ರಿಲ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬಹುದು ಎಂದು ಸ್ಯಾಂಡಲ್‌ವುಡ್ ಮಾತಾಡಿಕೊಳ್ಳುತ್ತಿದೆ.

ಕಾವ್ಯಾ ಶಾ ಭಾವಿ ಪತಿ ಯಾರು?
ಕಾವ್ಯಾ ಶಾ ಮಾಧ್ಯಮದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಹುಡುಗನನ್ನು ಮದುವೆಯಾಗುತ್ತಿದ್ದಾರೆ. ಇವರದ್ದು ದಶಕದ ಪ್ರೇಮಕಥೆ ಎನ್ನಲಾಗಿದೆ. ಜೀ ಕನ್ನಡದಲ್ಲಿ ಪ್ರಮುಖ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡುತ್ತಿರುವ ವರುಣ್ ಎಂಬುವವರನ್ನು ವಿವಾಹವಾಗಲಿದ್ದಾರೆ. ವರುಣ್ ಗೌಡ ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಜೊತೆ ಆರಂಭದಲೂ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಇವೆಂಟ್ ಮ್ಯಾನೇಜ್ಮೆಂಟ್ ಕೂಡ ಮಾಡುತ್ತಿದ್ದು, 'ಹಾಸ್ಟೆಲ್ ಹುಡುಗರು' ಎನ್ನುವ ಸಿನಿಮಾವನ್ನೂ ನಿರ್ಮಾಣ ಮಾಡಿದ್ದಾರೆ. ಇವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಕಾಲಿವುಡ್‌ನಲ್ಲಿ ಕಾವ್ಯ ಶಾ ಬ್ಯುಸಿ
ಕಾವ್ಯಾ ಶಾ ಇತ್ತೀಚೆಗೆ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಹಾಸ್ಯ ಸಂತಾನಂ ನಟಿಸಿದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರೊಂದಿಗೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಕಾವ್ಯಾ ಶಾ ಮಾಡಲಿಂಗ್ ಜೊತೆ ನಟನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಚೆನ್ನೈನಲ್ಲಿ ನಡೆದ ಮಿಸ್ ಮೀನಾ ಹಂಟ್ ಸ್ಪರ್ಧೆಯ ವಿನ್ನರ್ ಕೂಡ ಆಗಿದ್ದರು. ಓದುವುದರಲ್ಲಿಯೂ ಮುಂದಿದ್ದ ಕಾವ್ಯಾ ಶಾ ಸಿನಿಮಾದ ಜೊತೆ ಜೊತೆಗೆ ಅಂತರರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ.

ಕಾವ್ಯಾ ಅಂತರರಾಷ್ಟ್ರೀಯ ಹೆಲ್ತ್ ಕೋಚ್
ನಟಿ ಕಮ್ ಆಂಕರ್ ಆಗಿದ್ದ ಕಾವ್ಯಾ ಶಾ ತಂದೆ ನಾಗೇಂದ್ರ ಶಾ ಅವರಂತೆಯೇ ನಟನೆಯಲ್ಲೂ ಹೆಸರು ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಕಾವ್ಯಾ ಸ್ಲಿಮ್ ಅಂಡ್ ಫಿಟ್ ಆಗಿದ್ದರು. ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಂಡು ಫಿಟ್ ಆಗಿದ್ದರು. ಇವರು ಕಂಡುಕೊಂಡು ಮಾರ್ಗವನ್ನು ಈಗ ಲೋಕಕ್ಕೆ ಹಂಚಲು ಹೊರಟಿದ್ದಾರೆ. ಕಾವ್ಯಾ ಶಾ ಈಗ ಅಂತರರಾಷ್ಟ್ರೀಯ ಹೆಲ್ತ್ ಕೋಚ್ ಕೂಡ ಹೌದು. ವಿಶ್ವದ ಮೂಲೆ ಮೂಲೆಯಲ್ಲಿರುವ ಹಲವು ಮಂದಿಗೆ ಹೆಲ್ತ್ ಕೋಚ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications











