Nayanthara: ತಾಯಿಯಾಗಲು ವಿಜ್ಞಾನದ ಮೊರೆ ಹೋದ ನಯನತಾರಾ: ಏನಿದು ಸುದ್ದಿ?
ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ. ವಿಶ್ವದ ಮೂಲೆ ಮೂಲೆಯಲ್ಲೂ ನಯನತಾರಾಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. 37 ವರ್ಷ ಈ ನಟಿ ಯಶಸ್ಸಿನ ತುತ್ತ ತುದಿಯಲ್ಲಿದ್ದಾರೆ. ಅದಕ್ಕೆ ದಕ್ಷಿಣ ಭಾರತದ ಚಿತ್ರರಂಗ ಈಕೆಯನ್ನು ಲೇಡಿ ಸೂಪರ್‌ಸ್ಟಾರ್ ಎಂದು ಬಿರುದನ್ನೇ ನೀಡಿದೆ. ಇಷ್ಟೇ ಅಲ್ಲ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕೆಲವೇ ಕೆಲವು ನಟಿಯರಲ್ಲಿ ನಯನತಾರಾ ಕೂಡ ಒಬ್ಬರು.
Recommended Video
ನಯನತಾರ ಮೊದಲ ಹೆಸರು ಡಯಾನಾ ಮರಿಯಮ್ ಕುರಿಯನ್. ಒಂದು ಸಾಮಾನ್ಯ ಕುಟುಂಬದಿಂದ ಬಂದ ಸಾಮಾನ್ಯ ಹುಡುಗಿ ದಕ್ಷಿಣ ಭಾರತದ ಸೂಪರ್‌ಸ್ಟಾರ್ ಪಟ್ಟಕ್ಕೇರುವುದೆಂದರೆ ಅದು ಕಡಿಮೆ ಸಾಧನೆಯೆನಲ್ಲಾ. ಆದರೆ, ಸಿನಿಮಾದಲ್ಲಿ ಕಂಡ ಯಶಸ್ಸು ವೈಯಕ್ತಿಕ ಜೀವನದಲ್ಲಿ ಕಂಡಿಲ್ಲ. ನಯನತಾರಾ ಸಿನಿಮಾಗಳು ಸದ್ದು ಮಾಡಿದಂತೆ, ಅವರ ವೈಯಕ್ತಿಕ ಜೀವನ ಕೂಡ ಸದ್ದು ಮಾಡುತ್ತಲೇ ಇರುತ್ತೆ.
ಪ್ರೀತಿಯ ವಿಚಾರದಲ್ಲಿ ನಿರಂತರ ಸೋಲುಂಡ ಬಳಿಕ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಕಳೆದ ಆರು ವರ್ಷಗಳಿಂದ ನಯನತಾರಾ ಹಾಗೂ ವಿಘ್ನೇಶ್ ಡೇಟಿಂಗ್ ಮಾಡುತ್ತಿದ್ದಾರೆ. ಈಗ ಇವರಿಬ್ಬರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಸಲಿಗೆ ಈ ಸುದ್ದಿಯಲ್ಲಿ ಹುರುಳಿದ್ಯಾ? ತಿಳಿಯಲು ಮುಂದೆ ಓದಿ.

ನಯನತಾರಾ ಸ್ಟಾರ್ ಆಗಿದ್ದೇಗೆ?
ನಯನತಾರಾ ಶಿಕ್ಷಣ ಮುಗಿಸಿದ ಬಳಿಕ ಕೇರಳದ ಕೈರಲಿ ಟಿವಿಯಲ್ಲಿ ಫೋನ್-ಇನ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಈ ಕಾರ್ಯಕ್ರಮದ ಮೂಲಕವೇ ನಯನತಾರಾ ವೃತ್ತಿ ಜೀವನ ಆರಂಭ ಆಗಿತ್ತು. ಈ ವೇಳೆ 'ಮನಸಿನಕ್ಕರೆ' ಮಲಯಾಳಂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇಲ್ಲಿಂದ ನಯನತಾರಾ ಒಂದೊಂದೇ ಮೆಟ್ಟಿಲೇರುತ್ತಾ, ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 'ಚಂದ್ರಮುಖಿ', 'ಗಜಿನಿ', 'ಬಿಲ್ಲಾ'ದಂತಹ ತಮಿಳು ಚಿತ್ರಗಳ ಮೂಲಕ ನಯನತಾರಾ ಸ್ಟಾರ್ ಪಟ್ಟಕ್ಕೇರಿದ್ದರು. ಕನ್ನಡದಲ್ಲಿ ಉಪೇಂದ್ರ ನಿರ್ದೇಶಿಸಿದ ಸೂಪರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿಕೊಟ್ಟಿದ್ದರು.

ವಿಘ್ನೇಶ್ ಜೊತೆ ಮದುವೆಗೆ ಸಿದ್ಧತೆ
ಪ್ರೀತಿಯಲ್ಲಿ ನಿರಂತರ ಕಹಿಯುಂಡ ನಯನತಾರಾ ಈಗ ತಮಿಳು ಸಿನಿಮಾಗಳ ಹಿಟ್ ನಿರ್ದೇಶಕ ವಿಘ್ನೇಶ್ ಶಿವನ್‌ರನ್ನು ವಿವಾಹವಾಗಲಿದ್ದಾರೆ. ವಿಘ್ನೇಶ್ ಹಾಗೂ ನಯನತಾರಾ ಕಳೆದ ಆರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಕ್ಯೂಟ್ ಕಪಲ್‌ಗಳಲ್ಲಿ ಈ ಜೋಡಿ ಕೂಡ ಒಂದು. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಒಟ್ಟಿಗೆ ಕಾಲ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ವೇಳೆ ಇಬ್ಬರ ಬಗ್ಗೆ ಹಲ್‌ಚಲ್ ಎಬ್ಬಿಸುವ ಸುದ್ದಿಯೊಂದು ಹರಿದಾಡುತ್ತಿದೆ.

ಬಾಡಿಗೆ ತಾಯಿ ಮೂಲಕ ಮಗುವಿಗೆ ಚಿಂತನೆ
ಇದೀಗ ನಯನತಾರಾ ಹಾಗೂ ವಿಘ್ನೇಶ್ ಬಗ್ಗೆ ಬಿಸಿ ಬಿಸಿ ಸುದ್ದಿಯೊಂದು ಹರಿದಾಡುತ್ತಿದೆ. ಈ ಜೋಡಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ನಿರ್ಧರಿಸಿದ್ದಾರೆ. ವಿವಾಹದ ಬಳಿಕವೇ ಮಗು ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಾಸ್ ಕೂಡ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೇ ಹಾದಿಯಲ್ಲಿ ನಯನತಾರಾ ಮತ್ತು ವಿಘ್ನೇಶ್ ಸಾಗಲಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿ ನಿಜವೇ?
ಟಿವಿ ಕಾರ್ಯಕ್ರಮವೊಂದರಲ್ಲಿ ನಯನತಾರಾ ನಿಶ್ಚಿತಾರ್ಥ ಮಾಡಿಕೊಂಡಿರುವಾಗಿ ಬಹಿರಂಗಪಡಿಸಿದ್ದರು. ಮೂಲಗಳ ಪ್ರಕಾರ, ಈ ವರ್ಷ ಇಬ್ಬರೂ ಹಸೆಮಣೆ ಏರಲಿದ್ದಾರೆ. ಆದರೆ, ಪ್ರತಿ ಬಾರಿ ನಯನತಾರಾ- ವಿಘ್ನೇಶ್ ಒಟ್ಟಿಗೆ ಕಾಣಿಸಿಕೊಂಡಾಗ ಇಂತಹ ಸುದ್ದಿಗಳು ಹರಿದಾಡುತ್ತಿರುತ್ತೆ. ನಯನತಾರಾ ಸಾಮಾನ್ಯವಾಗಿ ಗಾಸಿಪ್‌ಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಈ ಹಿಂದೆ ಕೂಡ ಮದುವೆ ಬಗ್ಗೆ ಕೇಳಿದಾಗ ಯಾರಿಗೂ ಹೇಳದೆ ಮದುವೆಯಾಗುವುದಿಲ್ಲ ಎಂದಿದ್ದರು. ಹೀಗಾಗಿ ಬಾಡಿಗೆ ತಾಯ್ತನದ ಸುದ್ದಿ ಸುಳ್ಳು ಎನ್ನುತ್ತಿದೆ ತಮಿಳು ಚಿತ್ರರಂಗ. ಸದ್ಯ ನಯನತಾರಾ ' ಕಾತು ವಾಕ್ಲೆ ರಾಂಡು ಕಾತಲ್' ಚಿತ್ರ ಬಿಡುಗಡೆ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ಸ್ವತಃ ವಿಘ್ನೇಶ್ ಶಿವನ್ ನಿರ್ದೇಶಿಸಿದ್ದಾರೆ. ವಿಜಯ್ ಸೇತುಪತಿ ಹಾಗೂ ಸಮಂತಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











