ನಿಖಿಲ್ ಕುಮಾರಸ್ವಾಮಿಯ 'ಯದುವೀರ' ಚಿತ್ರಕ್ಕೆ ನೇಹಾ ಶೆಟ್ಟಿ ಹೀರೋಯಿನ್?

ನಿಖಿಲ್ ಕುಮಾರಸ್ವಾಮಿ ಅಭಿನಯದ ಐದನೇ ಸಿನಿಮಾ 'ಯದುವೀರ' ಚಿತ್ರದ ಚಿತ್ರೀಕರಣ ಆರಂಭ ಆಗಿದೆ. ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ನಿಖಿಲ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ಯಾಚಿ ಟೈಟಲ್‌ ಇಟ್ಟು ಪ್ರೇಕ್ಷಕರನ್ನು ಗಮನ ಸೆಳೆದಿದೆ. ಈ ಗ್ಯಾಪ್‌ನಲ್ಲೇ ನಿರ್ಮಾಣ ಸಂಸ್ಥೆ ಕರಾವಳಿ ನಟಿಗೆ ಗಾಳ ಹಾಕಿದೆ ಎನ್ನಲಾಗಿದ್ದು, ನೇಹಾ ಶೆಟ್ಟಿಯೇ 'ಯದುವೀರ' ಸಿನಿಮಾ ಹೀರೋಯಿನ್ ಎನ್ನಲಾಗಿದೆ.

ನೇಹಾ ಶೆಟ್ಟಿ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಟಾಲಿವುಡ್‌ನಲ್ಲಿ ನೆಲೆಸಿದ್ದಾರೆ. ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿಯೇ ಸಕ್ರಿಯರಾಗಿದ್ದ ನೇಹಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಎನ್ನಲಾಗಿದೆ. ನೇಹಾ ಶೆಟ್ಟಿ ಸದ್ಯ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ? 'ಯದುವೀರ' ಸಿನಿಮಾಗೆ ಕರಾವಳಿ ಪಡೆದ ಸಂಭಾವನೆ ಬಗ್ಗೆ ಸ್ಯಾಂಡಲ್‌ವುಡ್ ಹೇಳುತ್ತಿರುವುದೇನು? ಅನ್ನೋದನ್ನ ನೋಡೋಣ ಬನ್ನಿ.

ನಿಖಿಲ್‌ಗೆ ನೇಹಾ ಶೆಟ್ಟಿ ನಾಯಕಿ

ನಿಖಿಲ್‌ಗೆ ನೇಹಾ ಶೆಟ್ಟಿ ನಾಯಕಿ

2016ರಲ್ಲಿ 'ಮುಂಗಾರು ಮಳೆ 2' ಸಿನಿಮಾದ ಮೂಲಕ ಕರಾವಳಿ ಬೆಡಗಿ ನೇಹಾ ಶೆಟ್ಟಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾವೇ ಮಲ್ಟಿಸ್ಟಾರರ್ ಸಿನಿಮಾ ಆಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್, ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಬಳಿಕ ಟಾಲಿವುಡ್‌ ಕಡೆ ಪಯಣ ಬಳಿಸಿದ್ದ ನಟಿ ಈಗ ಮತ್ತೆ ಕನ್ನಡ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಟಿಸುತ್ತಿರುವ 'ಯದುವೀರ' ಸಿನಿಮಾಗೆ ಇವರನ್ನೇ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎನ್ನುವ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ.

ಟಾಲಿವುಡ್‌ನಲ್ಲಿ ನೇಹಾ ಶೆಟ್ಟಿ ಬ್ಯುಸಿ

ಟಾಲಿವುಡ್‌ನಲ್ಲಿ ನೇಹಾ ಶೆಟ್ಟಿ ಬ್ಯುಸಿ

'ಮುಂಗಾರು ಮಳೆ 2' ಬಳಿಕ ನೇಹಾ ಶೆಟ್ಟಿ ಟಾಲಿವುಡ್‌ ಕಡೆ ಮುಖ ಮಾಡಿದ್ದರು. 2018ರಲ್ಲಿ ಪುರಿ ಜಗನ್ನಾಥ್ ನಿರ್ದೇಶಿಸಿದ 'ಮೆಹಬೂಬ' ಚಿತ್ರದಲ್ಲಿ ನಟಿಸಿದ್ದರು. ಇಲ್ಲಿಂದ ನೇಹಾ ಶೆಟ್ಟಿ ಯಶಸ್ಸಿನ ಯಾತ್ರೆ ಮುಂದುವರೆದಿದೆ. 2021ರಲ್ಲಿ 'ಗಲ್ಲಿ ರೌಡಿ' ಸಿನಿಮಾ ಬಿಡುಗಡೆಯಾಗಿದೆ. ಒಂದು ವಾರದ ಹಿಂದಷ್ಟೇ ನೇಹಾ ಶೆಟ್ಟಿ ನಟನೆಯ 'ಡಿಜೆ ಟಿಲ್ಲು' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೇಹಾ ಶೆಟ್ಟಿ ಪಾತ್ರದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ. ಸದ್ಯಕ್ಕೆ ಟಾಲಿವುಡ್‌ನಲ್ಲಿ ನೇಹಾ ಬ್ಯುಸಿಯಾಗಿದ್ದು, ಮತ್ತೆ ಕನ್ನಡದ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ.

ನೇಹಾ ಶೆಟ್ಟಿ ಪಡೆದ ಸಂಭಾವನೆ ಎಷ್ಟು?

ನೇಹಾ ಶೆಟ್ಟಿ ಪಡೆದ ಸಂಭಾವನೆ ಎಷ್ಟು?

'ಯದುವೀರ' ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್‌ಗೆ ತೆಲುಗು ನಂಟಿದ್ದು, ನೇಹಾ ಶೆಟ್ಟಿ ಪಾಪುಲಾರಿಟಿ ಬಗ್ಗೆ ಅರಿವಿದೆ. ಅಲ್ಲದೆ 'ಡಿಜೆ ಟಿಲ್ಲು' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರಿಂದ ಈ ಚಿತ್ರಕ್ಕೆ ನೇಹಾ ಶೆಟ್ಟಿಯನ್ನೇ ಕರೆದುಕೊಂಡು ಬರಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದೆ. ಇದೇ ವೇಳೆ ನೇಹಾ ಶೆಟ್ಟಿ ಸಂಭಾವನೆ ಬಗ್ಗೆನೂ ಚರ್ಚೆಯಾಗುತ್ತಿದೆ. ನೇಹಾ ಶೆಟ್ಟಿ 'ಯದುವೀರ' ಚಿತ್ರಕ್ಕೆ 45 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ, ನಾಯಕಿಯ ಆಯ್ಕೆ ಬಗ್ಗೆ ಕೆವಿನ್ ಪ್ರೊಡಕ್ಷನ್ ಹಾಗೂ ಸ್ವತ: ನೇಹಾ ಶೆಟ್ಟಿ ಅಧಿಕೃತವಾಗಿ ಮಾಹಿತಿಯನ್ನು ಹೊರ ಹಾಕಿಲ್ಲ. ಆದರೆ, ಸ್ಯಾಂಡಲ್‌ವುಡ್‌ನಲ್ಲಿ ಮಾತ್ರ ನೇಹಾನೇ 'ಯದುವೀರ' ಚಿತ್ರಕ್ಕೆ ನಾಯಕಿ ಎನ್ನುತ್ತಿದೆ.

ಪತ್ರಕರ್ತನ ಪ್ರಶ್ನೆಗೆ ನೇಹಾ ಗರಂ

ಪತ್ರಕರ್ತನ ಪ್ರಶ್ನೆಗೆ ನೇಹಾ ಗರಂ

ಕೆಲವು ದಿನಗಳ ಹಿಂದೆ 'ಡಿಜೆ ಟಿಲ್ಲು' ಸಿನಿಮಾದ ಟ್ರೈಲರ್ ಲಾಂಚ್ ಇತ್ತು. ಈ ಟ್ರೈಲರ್‌ನಲ್ಲಿ ಹೀರೋ ಸಿದ್ದು ನಿನಗೆ ಎಷ್ಟು ಮಚ್ಚೆ ಇದೆ ಎಂದು ಕೇಳುವ ಡೈಲಾಗ್ ಇದೆ. ಇದೇ ಡೈಲಾಗ್ ಅನ್ನು ಆಧಾರವಾಗಿಟ್ಟುಕೊಂಡು ಪತ್ರಕರ್ತರೊಬ್ಬರು ನಿಜವಾಗಿಯೂ ನಿಮಗೆ ಎಷ್ಟು ಮಚ್ಚೆಗಳಿವೆ ಎಂದು ಪ್ರಶ್ನೆ ಮಾಡಿದ್ದರು. ಮುಜುಗರಕ್ಕಿಡಾಗುವ ಪ್ರಶ್ನೆ ಕೇಳಿದ ಪತ್ರಕರ್ತನ ವಿರುದ್ಧ ನೇಹಾ ಶೆಟ್ಟಿ ಗರಂ ಆಗಿದ್ದರು. ಈ ಪ್ರಶ್ನೆ ತುಂಬಾನೇ ಅಸಹ್ಯಕರವಾಗಿತ್ತು ಎಂದು ಟ್ವೀಟ್ಟರ್‌ನಲ್ಲಿ ನೇಹಾ ಶೆಟ್ಟಿ ಪ್ರತಿಕ್ರಿಯಿಸಿದ್ದರು.

More from Filmibeat

English summary
Neha Shetty is the lead actress for Nikhil Kumaraswamy starrer Yadhuveer movie. She charged almost 45 crores for the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X