Toxic: ಮತ್ತೆ ಪೋಸ್ಟ್‌ಪೋನ್ ಆಗುತ್ತಾ ಯಶ್ 'ಟಾಕ್ಸಿಕ್'? ಸಿನಿಮಾ ಮಂದಿ ಕೊಡ್ತಿರೋ ಕಾರಣಗಳಿವು!

'ಕೆಡಿ ದಿ ವಿಲನ್' ರಿಲೀಸ್ ಬಳಿಕ ಕನ್ನಡ ಚಿತ್ರರಂಗದ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಟಾಕ್ಸಿಕ್'. ಇಷ್ಟೊತ್ತಿಗಾಗಲೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಕಾರಣ ನೀಡಿ ಮುಂದೂಡಲಾಗಿತ್ತು. ಇಲ್ಲದೇ ಹೋಗಿದ್ದರೆ, ಇಷ್ಟೊತ್ತಿಗಾಗಲೇ ಸಿನಿಮಾದ ಬಾಕ್ಸಾಫೀಸ್‌ ರಿಸಲ್ಟ್ ಹೊರ ಬೀಳುತ್ತಿತ್ತು.

'ಕೆಜಿಎಫ್ 2' ಮೆಗಾ ಸಕ್ಸಸ್ ಬಳಿಕ ಯಶ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಮಾರ್ಚ್ 19ಕ್ಕೆ ರಿಲೀಸ್ ಆಗ್ಬೇಕಿದ್ದ ಸಿನಿಮಾ ಜೂನ್ 4ಕ್ಕೆ ಪೋಸ್ಟ್‌ಪೋನ್ ಆಗಿದೆ. ಗ್ಲೋಬಲ್ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಮಾಡುವುದ ಪ್ಲಾನ್ ಇರುವುದರಿಂದ ದೊಡ್ಡ ಮಟ್ಟದ ಪ್ರಚಾರ ಬೇಕಿದೆ. ಆದರೆ, ಇನ್ನೂ 'ಟಾಕ್ಸಿಕ್' ಅಬ್ಬರ ಪ್ರಚಾರ ಶುರುವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ನೂರೆಂಟು ಪ್ರಶ್ನೆಗಳು ಹುಟ್ಟಿಕೊಂಡಿವೆ.

New Buzz in the industry is that Yash Toxic release may postpone again

'ಟಾಕ್ಸಿಕ್' ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾ ಅನ್ನೋದರಲ್ಲಿ ಎರಡು ಮಾತಿಲ್ಲ. ಸತತ ಸೋಲುಗಳಿಂದ ಬಳಲಿ ಬೆಂಡಾಗಿರುವ ಕನ್ನಡ ಚಿತ್ರರಂಗಕ್ಕೆ 'ಟಾಕ್ಸಿಕ್' ಸಕ್ಸಸ್ ಟಾನಿಕ್ ಆಗಬಹುದೆಂಬ ನಿರೀಕ್ಷೆಯಿದೆ. ಈ ನಂಬಿಕೆಯಲ್ಲಿ ಇರುವಾಗಲೇ ಸಿನಿಮಾ ಮತ್ತೆ ಪೋಸ್ಟ್‌ಪೋನ್ ಆಗಬಹುದೆಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಅದಕ್ಕೆ ಸಿನಿಮಾ ಮಂದಿ ಒಂದಿಷ್ಟು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅದೇನು ಅಂತ ನೋಡುವುದಾರೇ,

'ಟಾಕ್ಸಿಕ್' ಮತ್ತೆ ಪೋಸ್ಟ್‌ಪೋನ್?

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್'ಗಾಗಿ ಕೇವಲ ಕನ್ನಡಿಗರಷ್ಟೇ ಅಲ್ಲ, ಇಡೀ ದೇಶವೇ ಕಾಯುತ್ತಿದೆ. ಈ ಕಾರಣಕ್ಕೆ ಯಶ್ ಹಾಗೂ ಅವರ ತಂಡ ಸಿನಿಮಾವನ್ನು ಸರಿಯಾದ ಸಮಯಕ್ಕೆ ರಿಲೀಸ್ ಮಾಡುವುದಕ್ಕೆ ಎದುರು ನೋಡುತ್ತಿದೆ. ಇತ್ತ ಸ್ಯಾಂಡಲ್‌ವುಡ್‌ನಲ್ಲಿ ಮಂದಿ ಮಾತ್ರ 'ಟಾಕ್ಸಿಕ್' ಸಿನಿಮಾ ಜೂನ್ 4ರಂದೂ ರಿಲೀಸ್ ಆಗುವುದು ಅನುಮಾನ ಎಂದು ಹೇಳುತ್ತಿದ್ದಾರೆ. ಅದಕ್ಕೆ ಅವರೇ ಒಂದಿಷ್ಟು ಕಾರಣಗಳನ್ನು ಲಿಸ್ಟ್ ಮಾಡಿಕೊಂಡಿದ್ದಾರೆ.

New Buzz in the industry is that Yash Toxic release may postpone again


ಸಿನಿಮಾ ವರ್ಕ್‌ ಇನ್ನೂ ಮುಗಿದಿಲ್ಲ

ಯಶ್ ಸಿನಿಮಾ 'ಟಾಕ್ಸಿಕ್' ಬಗ್ಗೆ ನೂರೆಂಟು ಗಾಳಿ ಸುದ್ದಿಗಳು ಹರಿದಾಡುತ್ತಿವೆ. 'ಟಾಕ್ಸಿಕ್' ಪೆಂಡಿಂಗ್ ಕೆಲಸ ಇನ್ನೂ ಮುಗಿದಿಲ್ಲ ಎಂದು ಹೇಳಲಾಗುತ್ತಿದೆ. ಅದರಲ್ಲೂ ಗ್ರಾಫಿಕ್ಸ್ ವರ್ಕ್ ಇನ್ನೂ ಬಾಕಿ ಇದೆ ಎನ್ನಲಾಗಿದೆ. ಇನ್ನೂ 25 ರಿಂದ 30 ದಿನಗಳ ಕಾಲಾವಕಾಶ ಬೇಕಿದೆ ಎಂದು ಹೇಳುತ್ತಿದ್ದಾರೆ. ಅಲ್ಲದೇ ಕೆಲವು ದೃಶ್ಯಗಳನ್ನು ಇತ್ತೀಚೆಗೆ ರೀ-ಶೂಟ್ ಮಾಡಲಾಗಿದೆ ಅನ್ನೋ ಸುದ್ದಿನೂ ಒಡಾಡುತ್ತಿತ್ತು. ಹೀಗಾಗಿ ಸಿನಿಮಾವನ್ನು ಪೋಸ್ಟ್‌ಪೋನ್ ಮಾಡುವಂತಹ ಸಾಧ್ಯತೆಯಿದೆ ಎನ್ನಲಾಗಿದೆ.

ಯಾವಾಗ ರಿಲೀಸ್?

ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಈಗ ಅನೌನ್ಸ್ ಮಾಡಿದಂತೆ 'ಟಾಕ್ಸಿಕ್' ಜೂನ್ 4ರಂದು ರಿಲೀಸ್ ಆಗಬೇಕು. ಅಲ್ಲದೇ, ಮೇ ಮೊದಲ ವಾರದಿಂದ ಸಿನಿಮಾದ ಭರ್ಜರಿ ಪ್ರಚಾರ ಕೂಡ ಆರಂಭ ಆಗುತ್ತೆ ಅಂತ ವರದಿಯಾಗಿವೆ. ಈ ಮಧ್ಯೆ ಸಿನಿಮಾ ಮಂದಿ ಮಾತ್ರ ಶೇ.90 ರಷ್ಟು ಜೂನ್‌ನಲ್ಲಿ ರಿಲೀಸ್ ಮಾಡೋದು ಡೌಟು. ಆಗಸ್ಟ್ ತಿಂಗಳಿಗೆ ಸಿನಿಮಾ ರಿಲೀಸ್ ಮಾಡುವುದಕ್ಕೆ ಚಿಂತನೆ ನಡೆದಿದೆ ಎನ್ನುತ್ತಾರೆ. ಆದರೆ, ಈ ಬಗ್ಗೆ ಯಶ್ ಆಗಲಿ, 'ಟಾಕ್ಸಿಕ್' ಟೀಮ್ ಆಗಲಿ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ.

English summary
New Buzz in the industry is that Yash Toxic release may postpone again. Here is the reason.
Read more about: yash toxic kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X