ಐಶ್ವರ್ಯಾ ರೈಗೆ ಹಿಂದಿ ಚಿತ್ರರಂಗಕ್ಕೆ ಕಾಲಿಡಬೇಡಿ ಎಂದಿದ್ದ ಸಂಜಯ್ ದತ್: ಅಂದು ವಾರ್ನಿಂಗ್ ಕೊಟ್ಟಿದ್ದೇಕೆ?
ಐಶ್ವರ್ಯಾ ರೈ ವಿಶ್ವ ಸುಂದರಿ ಆದ ಕ್ಷಣದಿಂದಲೇ ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಇವರ ಸೌಂದರ್ಯಕ್ಕೆ ಹುಡುಗರಂತೂ ಮರುಳಾಗಿದ್ದರು. ವಿಶ್ವದ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಬಳಿಕ ನಿರೀಕ್ಷೆಯಂತೆ ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟಿದ್ದರು.
ಐಶ್ವರ್ಯಾ ರೈ ವಿಶ್ವ ಸುಂದರಿ ಸ್ಪರ್ಧೆಗೆ ಪೈಪೋಟಿ ನೀಡುವುದಕ್ಕೂ ಮೊದಲು ಮಾಡಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದರು. ಹೀಗಾಗಿ 1994ರಲ್ಲಿ ಮಿಸ್ ವರ್ಲ್ಡ್ ಆದ ಬಳಿಕವೂ ಮಾಡಲಿಂಗ್ ಅನ್ನು ಮುಂದುವರೆಸಿದ್ದರು. ವಿಶ್ವ ಸುಂದರಿ ಪಟ್ಟ ಗೆದ್ದ 3 ವರ್ಷಗಳ ಬಳಿಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅದೂ ಬಾಲಿವುಡ್ ಅಲ್ಲ ತಮಿಳು ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದರು.

ಮಣಿರತ್ನಂ ನಿರ್ದೇಶಿಸಿದ 'ಇರುವರ್' ಐಶ್ವರ್ಯಾ ರೈ ನಟಿಸಿದ ಮೊದಲ ಸಿನಿಮಾ. ಇಲ್ಲಿಂದ ಐಶ್ವರ್ಯಾ ಬಾಲಿವುಡ್‌ಗೂ ಎಂಟ್ರಿ ಕೊಟ್ಟರು. ನಂತಹ ಸೋಲು ಗೆಲುವಿನ ಆಟದಲ್ಲಿ ಕೊನೆಗೂ ಸ್ಟಾರ್ ಪಟ್ಟ ಗೆಲ್ಲುವಲ್ಲಿ ಯಶಸ್ವಿಯಾದರು. ಆದರೆ, ವಿಶ್ವ ಸುಂದರಿ ಪಟ್ಟ ಗೆದ್ದ ಬಳಿಕ ಜಾಹೀರಾತುಗಳಲ್ಲಿ ನಟಿಸುತ್ತಿದ್ದರು. ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳಲ್ಲಿ ನಟಿಸಿದ್ದೂ ಇದೆ.
ಈ ವೇಳೆ ಮ್ಯಾಗಜೀನ್ ಶೂಟ್ ಒಂದಕ್ಕೆ ಐಶ್ವರ್ಯಾ ರೈ ಅನ್ನು ಆಯ್ಕೆ ಮಾಡಲಾಗಿತ್ತು. ಈ ಶೂಟ್‌ನಲ್ಲಿ ಬಾಲಿವುಡ್ ನಟ ಸಂಜಯ್ ದತ್‌ರನ್ನೂ ಆಯ್ಕೆ ಮಾಡಿದ್ದರು. ಇಬ್ಬರನ್ನೂ ಒಟ್ಟುಕೊಂಡು ಮ್ಯಾಗಜೀನ್ ಶೂಟ್ ಮಾಡುವ ಪ್ಲ್ಯಾನ್ ಇತ್ತು. ಈ ವೇಳೆ ಸಂಜಯ್ ದತ್ ಅಂದು ಐಶ್ವರ್ಯಾ ರೈಗೆ ಹಿಂದಿ ಚಿತ್ರರಂಗಕ್ಕೆ ಬರಬೇಡ ಎಂದು ಎಚ್ಚರಿಕೆ ನೀಡಿದ್ದರು. ಅದ್ಯಾಕೆ ಹೀಗೆ ಹೇಳಿದ್ರು? ಅನ್ನೋದನ್ನು ಸಂದರ್ಶನದಲ್ಲಿ ಹೇಳಿದ್ದಾರೆ.

ಮ್ಯಾಗಜೀನ್ ಶೂಟ್ ಮಾಡುವಾಗ ಐಶ್ವರ್ಯಾ ರೈಗೆ ಸಂಜಯ್ ದತ್ ಮಾಡಲಿಂಗ್ ಕ್ಷೇತ್ರದಲ್ಲೇ ಇರುವಂತೆ ಹೇಳಿದ್ದರು. ಸಿನಿಮಾ ಇಂಡಸ್ಟ್ರಿಗೆ ಬರಬೇಡ ಎಂದು ಹೇಳಿದ್ದರಂತೆ. ಈ ಮಾತನ್ನು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು. ಹೀಗೆ ಹೇಳುವುದಕ್ಕೂ ಒಂದು ಕಾರಣವಿತ್ತು. " ಐಶ್ವರ್ಯಾ ರೈ ಮೋಹಕ ಸುಂದರಿ. ಸಿನಿಮಾರಂಗಕ್ಕೆ ಕಾಲಿಟ್ಟಾಗ ಇಲ್ಲಿನ ಬೇಡಿಕೆಗಳು ಹಾಗೂ ಸವಾಲುಗಳಿಂದ ಆ ಸೌಂದರ್ಯ ಕಾಣೆಯಾಗುತ್ತೆ. ಅದನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ." ಎಂದು ಸಂಜಯ್ ದತ್ ಹೇಳಿದ್ದರು.
ಇಷ್ಟೇ ಅಲ್ಲದೆ " ಈ ಗ್ಲಾಮರ್ ಲೋಕಕ್ಕೆ ಬಂದಾಗ, ಅದು ನಮ್ಮನ್ನು ಬದಲಾಯಿಸಿ ಬಿಡುತ್ತೆ. ಆಗ ಆಕೆಯ ಮುದ್ದಾದ ಮುಖ ಮಾಯವಾಗುತ್ತೆ. ಇಲ್ಲಿ ಸಿನಿಮಾ ಜಗತ್ತನ್ನು ಸರಿಯಾಗಿ ನಿಭಾಯಿಸಲು ಕಲಿಯಬೇಕು. ಅದು ಅಷ್ಟು ಸುಲಭವಲ್ಲ. ಇಲ್ಲಿ ತುಂಬಾನೇ ದೊಡ್ಡ ಸ್ಪರ್ಧೆಯಿದೆ. ಎರಡು ಮೆಟ್ಟಿಲು ಏರಿದರೆ, ಐನೂರು ಮಂದಿ ನಿಮ್ಮನ್ನು ಐದು ಮೆಟ್ಟಿಲು ಕೆಳಗೆ ಎಳೆಯುತ್ತಾರೆ." ಎಂದು ಐಶ್ವರ್ಯಾ ರೈಗೆ ಸಂಜಯ್ ದತ್ ಸಲಹೆ ನೀಡಿದ್ದರಂತೆ.
ಸಂಜಯ್ ದತ್ ಮಾತಿಗೆ ಐಶ್ವರ್ಯಾ ರೈ ಪ್ರತಿಕ್ರಿಯೆ ನೀಡಿದ್ದರು. ಅದನ್ನೂ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಸಂಜಯ್ ದತ್ ಹೇಳಿದ್ದನ್ನು ಐಶ್ವರ್ಯಾ ರೈ ಅರ್ಥ ಮಾಡಿಕೊಂಡಿದ್ದರು. " ನಾವು ನಮ್ಮ ವೃತ್ತಿ ಜೀವನದಲ್ಲಿ ಎಷ್ಟು ಆಳವಾಗಿ ಹೋಗುತ್ತೇವೋ.. ನಮ್ಮ ಭವಿಷ್ಯ ಅಷ್ಟು ಬಲಿಷ್ಠವಾಗುತ್ತೆ" ಎಂದಿದ್ದರು ಎಂದು ಸಂಜಯ್ ದತ್ ನೆನಪಿಸಿಕೊಂಡಿದ್ದಾರೆ.


Click it and Unblock the Notifications











