ಮದುವೆ ಆಗ್ತಿಲ್ಲ.. ಫ್ಯಾನ್ಸ್ ಬಿಡ್ತಿಲ್ಲ: ಇದೂವರೆಗೂ ಡಾರ್ಲಿಂಗ್‌ಗೆ ಬಂದ ಪ್ರಪೋಸಲ್‌ಗಳೆಷ್ಟು ಗೊತ್ತೇ?
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ 'ಸಲಾರ್' ಬಳಿಕ ಮತ್ತೆ ಗೆಲುವಿನ ರುಚಿ ಕಂಡಿದ್ದಾರೆ. ಸತತ ಸೋಲುಗಳಿಂದ ಬೇಸತ್ತು ಹೋಗಿದ್ದ ಪ್ರಭಾಸ್‌ಗೆ ಈಗೊಂದು ಸಕ್ಸಸ್ ಸಿಕ್ಕಿದೆ. ಹಾಗಂತ ಆಫರ್‌ಗಳು ಕಡಿಮೆ ಆಗಿತ್ತು ಅಂತಲ್ಲ. ಸತತ ಮೂರು ಫ್ಲಾಪ್‌ಗಳನ್ನು ಕೊಟ್ಟಾಗಲೇ ಕೈಯಲ್ಲಿ ಮೂರು ಸಿನಿಮಾಗಳಿದ್ದವು.
ಫ್ರಭಾಸ್ ಸಿನಿಮಾಗಳ ಬಗ್ಗೆ ಅವರ ಅಭಿಮಾನಿಗಳೀಗ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ. ಅವರಿಗೆ ತಮ್ಮ ನೆಚ್ಚಿನ ಡಾರ್ಲಿಂಗ್ ಮದುವೆ ಯಾವಾಗ ಅನ್ನೋದೇ ಚಿಂತೆ. ಪ್ರತಿ ವರ್ಷ ಪ್ರಭಾಸ್ ಮದುವೆ ಆಗಬಹುದು ಅಂತ ಕಾದಿದ್ದಷ್ಟೇ ಬಂತು. ಮದುವೆ ಅನ್ನೋ ಪದ ಕೇಳಿದರೆ, ಪ್ರಭಾಸ್ ಮಾರುದ್ದ ಓಡಿ ಹೋಗುತ್ತಿದ್ದಾರೆ.

ಪ್ರಭಾಸ್ ಫ್ಯಾಮಿಲಿ ಮ್ಯಾನ್ ಆಗ್ಬೇಕು ಅನ್ನೋದು ಅವರ ಅಭಿಮಾನಿಗಳು ಕನಸು. ಅದು ಯಾವಾಗ ಈಡೇರುತ್ತೋ ಅವರಿಗೇ ಗೊತ್ತಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಇದೂವರೆಗೂ ಅವರಿಗೆ ಬಂದಿರೋ ಪ್ರಪೋಸಲ್‌ಗಳ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಪ್ರಭಾಸ್ ಆಗಲು ಇದೂವರೆಗೂ ಬಂದ ಪ್ರಪೋಸಲ್‌ಗಳ ಸಂಖ್ಯೆ ಎಷ್ಟು ಗೊತ್ತೇ?
ಒಳ್ಳೆ ಹೈಟು.. ಒಳ್ಳೆಯ ಪರ್ಸನಾಲಿಟಿ.. ಸ್ಟಾರ್‌ಡಮ್ ಎಲ್ಲವೂ ಇದೆ. ಇಂತಹ ನಟನನ್ನು ಮದುವೆ ಆಗೋಕೆ ಹುಡುಗಿಯರು ಕ್ಯೂನಲ್ಲಿ ನಿಂತಿದ್ದಾರೆ. ಆದರೆ, ಪ್ರಭಾಸ್ ಯಾಕೋ ಮನಸ್ಸು ಮಾಡುತ್ತಿಲ್ಲ ಅಷ್ಟೇ. ಟಾಲಿವುಡ್‌ನ 'ವರ್ಷಂ', 'ಛತ್ರಪತಿ', 'ಮಿರ್ಚಿ' ಅಂತಹ ಸಿನಿಮಾಗಳಿಂದ ಪ್ರಭಾಸ್ ಸ್ಟಾರ್ ಪಟ್ಟಕ್ಕೆ ಏರಿದವರು. ಅದರಲ್ಲೂ 'ಬಾಹುಬಲಿ' ಬಂದ್ಮೇಲಂತೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಭಾಸ್ ಮಿಂಚಿದ್ದಾರೆ.

'ಬಾಹುಬಲಿ' ರಿಲೀಸ್ ಆದ್ಮೇಲಂತೂ ಪ್ರಭಾಸ್ ಮದುವೆ ನೋಡುವುದಕ್ಕೆ ಅವರ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ವರ್ಷ ಪ್ರಭಾಸ್ ಅಜ್ಜಿ ಈ ವರ್ಷ ಪ್ರಭಾಸ್ ಮದುವೆ ಆಗುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು. ಅದನ್ನು ಕೇಳಿ ಪ್ರಭಾಸ್ ಫ್ಯಾನ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಅದನ್ನು ಕೇಳಿಕೊಂಡಿದ್ದಷ್ಟೇ ಬಂತು. ಇದೂವರೆಗೂ ಮತ್ತೆ ಮದುವೆ ಬಗ್ಗೆ ಸುದ್ದಿನೇ ಇಲ್ಲ. ಆದರೆ, ಫ್ಯಾನ್ಸ್ ಖುಷಿ ಪಡೋ ವಿಷಯವೊಂದಿದೆ.
ಪ್ರಭಾಸ್‌ಗೀಗ 44 ವರ್ಷ. ಇಲ್ಲಿವರೆಗೂ ಅವರಿಗೆ ಸುಮಾರು 5000ಕ್ಕೂ ಅಧಿಕ ಪ್ರಪೋಸಲ್‌ಗಳು ಬಂದಿವೆಯಂತೆ. ಈ ವಿಷಯ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಡಾರ್ಲಿಂಗ್ ಫ್ಯಾನ್ಸ್ ಥ್ರಿಲ್ ಆಗಿರುವುದಂತೂ ನಿಜ. ಹಾಗಂತ ಪ್ರಭಾಸ್ ಫ್ಯಾಮಿಲಿ ಈ ವಿಷಯವನ್ನೇನು ಹೇಳಿಕೊಂಡಿಲ್ಲ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಅನುಷ್ಕಾ ಶೆಟ್ಟಿಯನ್ನೇ ಒಪ್ಪಿಕೊಳ್ಳಲಿ. ಇಲ್ಲ ಬೇರೆ ಯಾರನ್ನಾದರೂ ಒಪ್ಪಿಕೊಳ್ಳಲಿ. ಮೊದಲು ಮದುವೆ ಆಗಲಿ ಎಂದು ಹೇಳಿಕೊಂಡಿದ್ದಾರೆ.
ಕೆಲವು ದಿನ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಆದರೆ, ಇಬ್ಬರೂ ಆ ವಿಷಯವನ್ನು ತಳ್ಳಿ ಹಾಕಿದ್ದರು. ಸದ್ಯ ಪ್ರಭಾಸ್ ಈ ವರ್ಷವೂ ಮದುವೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಯಾಕಂದ್ರೆ, ದುಬಾರಿ ಬಜೆಟ್ ಸಿನಿಮಾ 'ಕಲ್ಕಿ 2898' , ಬಳಿಕ ಮಾರುತಿ ನಿರ್ದೇಶನದ 'ರಾಜಾ ಸಾಬ್' ಹಾಗೂ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಸಿನಿಮಾಗಳು ಕೈಯಲ್ಲಿವೆ.


Click it and Unblock the Notifications











