ಮಾಲ್ಡೀವ್ಸ್‌ನಲ್ಲಿ ಪ್ರಭಾಸ್–ಕೃತಿ ನಿಶ್ಚಿತಾರ್ಥ ಎಂದು ಟ್ವೀಟ್: ಆತನ ಚಳಿ ಬಿಡಿಸಿದ ನೆಟ್ಟಿಗರು!
ಎಲ್ಲಿ ಡಾರ್ಲಿಂಗ್ ಪ್ರಭಾಸ್ ದಕ್ಷಿಣ ಭಾರತದ ಸಲ್ಮಾನ್ ಖಾನ್ ಆಗಿಬಿಡುತ್ತಾರೋ ಅನ್ನೋ ಆತಂಕ ಅವರ ಅಭಿಮಾನಿಗಳಲ್ಲಿದೆ. ಪ್ರಭಾಸ್ ವಯಸ್ಸು ನಲವತ್ತು ದಾಟಿದರೂ, ಇನ್ನೂ ಮದುವೆ ಬಗ್ಗೆ ಯೋಚನೆ ಮಾಡುತ್ತಿಲ್ಲ. ಇವರ ಸುತ್ತ ಬರೀ ರೂಮರ್‌ಗಳೇ ಸುತ್ತುತ್ತಿವೆ.
ಪ್ರಭಾಸ್ 'ಆದಿಪುರುಷ್' ಸಿನಿಮಾದಲ್ಲಿ ನಟಿಸೋಕೆ ಶುರು ಮಾಡಿದ್ದಲ್ಲಿಂದ ಪ್ರಭಾಸ್ ಮದುವೆ ಬಗ್ಗೆ ಗಾಳಿ ಸುದ್ದಿ ಜೋರಾಗಿಯೇ ಹರಿದಾಡಲು ಆರಂಭಿಸಿದೆ. ಅಷ್ಟಕ್ಕೂ ಈಗ ಪ್ರಭಾಸ್ ಜೊತೆ ತಳುಕು ಹಾಕೊಂಡಿರೋ ಹೆಸರು ಬಾಲಿವುಡ್ ನಟಿ ಕೃತಿ ಸೆನನ್.

ಪ್ರಭಾಸ್ ಹಾಗೂ ಕೃತಿ ಸೆನನ್ ನಡುವೆ ಸಂಥಿಂಗ್ ಏನೋ ನಡೀತಿದೆ ಅಂತ ಕೆಲವು ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಆದರೆ, ಸ್ವತ: ಪ್ರಭಾಸ್ ಹಾಗೂ ಕೃತಿನೇ ಈ ಗಾಳಿ ಸುದ್ದಿಯನ್ನು ನಂಬಬೇಡಿ ಅಂತ ಹೇಳಿದ್ದರು. ಈಗ ಮತ್ತೆ ಇವರಿಬ್ಬರ ನಿಶ್ವಿತಾರ್ಥ ನಡೆಯಲಿದೆ ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ನೆಟ್ಟಿಗರು ಸಖತ್ ಆಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ನಿನ್ನೆ(ಫೆಬ್ರವರಿ 6) ಉಮೈರ್ ಸಂಧು ಒಂದು ಟ್ವೀಟ್ ಮಾಡಿದ್ದರು. " ಕೃತಿ ಸೆನನ್ ಹಾಗೂ ಪ್ರಭಾಸ್ ಮುಂದಿನ ವಾರ ಮಾಲ್ಡೀವ್ಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಅವರ ಬಗ್ಗೆ ನನಗೆ ಖುಷಿಯಿದೆ." ಎಂದು ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ.

ಕೆಲವರು "ಅಪ್‌ಡೇಟ್ ಕೊಟ್ಟಿದ್ದಕ್ಕೆ ಧನ್ಯವಾದಗಳು. ಹಾಗೇ ನಿನಗೆ ಮದುವೆ ಮನೆಯಲ್ಲಿ ಊಟದ ಕ್ರಾಂಟ್ಯಾಕ್ಟ್ ಸಿಕ್ಕಿದ್ಯಂತೆ. ಬಿರಿಯಾನಿ ಹೈಲೈಟ್ ಆಗಿರಬೇಕು." ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಪ್ರಭಾಸ್ ಈ ಕಾರ್ಯಕ್ರಮಕ್ಕೆ ಬರುತ್ತಾರಾ?" ಅಂತ ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು "ಈ ಮಾತನ್ನು ಮತ್ಯಾರು ಹೇಳಿದ್ರು" ಎಂದು ಕಿಡಿ ಕಾರಿದ್ದಾರೆ. " ನಿಮಗೆ ಆಮಂತ್ರಣ ಪತ್ರಿಕೆ ಸಿಕ್ಕಿದೆಯೇ.. ದಯವಿಟ್ಟು ಸ್ಕ್ರೀನ್ ಶಾಟ್ ಕಳಿಸಿ" ಎಂದು ಉಮೈರ್ ಸಂಧು ಕಾಲೆಳೆದಿದ್ದಾರೆ.
ಪ್ರಭಾಸ್ ಮದುವೆ ವಿಷಯ ಕೇಳಿ ಕೇಳಿ ನೆಟ್ಟಿಗರಿಗೆ ಸಾಕಾಗಿ ಹೋಗಿದೆ. ಪ್ರಭಾಸ್ ಮದುವೆ ಆಗುತ್ತಿಲ್ಲ. ಗಾಳಿ ಸುದ್ದಿಗಳು ಹರಿದಾಡುವುದು ನಿಲ್ಲುತ್ತಿಲ್ಲ. ಆಗಾಗಿ ಇಂತಹ ಗಾಳಿಸುದ್ದಿಗಳನ್ನ ಕೇಳಿ ನೆಟ್ಟಿಗರು ಹತಾಶಾರಾಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.


Click it and Unblock the Notifications











