ಇನ್ನು 30 ದಿನ ಅಷ್ಟೇ.. 'ಸಲಾರ್' ಶೂಟಿಂಗ್ ಮುಗಿಸುತ್ತಾರಂತೆ ಪ್ರಶಾಂತ್ ನೀಲ್!

ಅದ್ಯಾವುದೇ ಸಿನಿಮಾ ಬರಲಿ, ಟಾಲಿವುಡ್ ಮಂದಿ ಕಣ್ಣು 'ಸಲಾರ್' ಮೇಲಿದೆ. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ರೆಡಿಯಾಗಿರೋ ಈ ಸಿನಿಮಾದ ಮೇಲೆ ಇಡೀ ದೇಶದ ಕಣ್ಣಿದೆ. ಒಂದ್ಕಡೆ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್. ಇನ್ನೊಂದು ಕಡೆ ಪ್ಯಾನ್ ಇಂಡಿಯಾ ಡೈರೆಕ್ಟರ್. ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ನೋಡುವುದಕ್ಕೆ ಸಿನಿಪ್ರಿಯರಂತೂ ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯ ಟಾಲಿವುಡ್‌ನಲ್ಲಿ ಇದೇ ಸಿನಿಮಾದ ವಿಚಾರವಾಗಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಪ್ರಭಾಸ್‌ 'ಸಲಾರ್' ಸಿನಿಮಾದ ಶೂಟಿಂಗ್ ಅನ್ನು ಆದಷ್ಟು ಬೇಗ ಮುಗಿಸಬೇಕು ಅಂತ ಕೂತಿದ್ದಾರಂತೆ. ಅವರೇ ಸ್ಕೆಚ್ ಹಾಕಿಕೊಂಡಂತೆ ಒಂದೊಂದೇ ಸಿನಿಮಾ ಮುಗಿಸುತ್ತಾ ಬಂದಿದ್ದಾರೆ. 'ಆದಿಪುರುಷ್' ಸಿನಿಮಾಗೆ ಪ್ರಭಾಸ್ ಮೊದಲ ಆದ್ಯತೆ ನೀಡಿದ್ದರು. ಅದಕ್ಕೆ ಬೇಗನೇ ಶೂಟಿಂಗ್ ಮುಗಿಸಿಕೊಟ್ಟಿದ್ದರು. ಈಗ 'ಸಲಾರ್' ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಆದಷ್ಟು ಬೇಗ ಮುಗಿಸಲೇಬೇಕು ಅಂತ ಪ್ರಶಾಂತ್ ನೀಲ್‌ಗೆ ಹೇಳಿದ್ದಾರೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

Prabhas and Prashanth Neels movie Salaar will be completed in 30 days

ಪ್ರಶಾಂತ್ ನೀಲ್ ಇದೇ ಕಾರಣಕ್ಕೆ ಸಿನಿಮಾವನ್ನು ಇನ್ನೊಂದು ತಿಂಗಳಲ್ಲಿ ಮುಗಿಸುವುದಕ್ಕೆ ಪ್ಲಾನ್ ಮಾಡಿದ್ದಾರಂತೆ. ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಪ್ರಭಾಸ್ 'ಸಲಾರ್' ಸಿನಿಮಾವನ್ನು ಎಪ್ರಿಲ್ ತಿಂಗಳಲ್ಲಿ ಮುಗಿಸಲು ನಿರ್ಧಾರ ಮಾಡಿದ್ದಾರಂತೆ. ಈಗಾಗಲೇ ಪ್ರಭಾಸ್ ಪೋಷನ್ ಶೂಟಿಂಗ್ ಮುಗಿಸೋಕೆ ಬೇಕಿರೋ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ. ಪ್ರಶಾಂತ್ ನೀಲ್ ಇನ್ನು 30 ರಿಂದ 40 ದಿನಗಳ ಒಳಗೆ ಇಡೀ ಸಿನಿಮಾವನ್ನೇ ಕಂಪ್ಲೀಟ್ ಮಾಡುವುದಾಗಿ ಹೇಳಿದ್ದಾರಂತೆ. ಅದಕ್ಕಾಗಿ ಬೇಕಾಗಿರೋ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

ಇನ್ನು ಈಗಾಗಲೇ ಪ್ರಶಾಂತ್ ನೀಲ್ 'ಸಲಾರ್' ನಾಯಕಿ ಶೃತಿ ಹಾಸನ್ ನಟಿಸುತ್ತಿದ್ದ ದೃಶ್ಯಗಳ ಶೂಟಿಂಗ್‌ ಅನ್ನು ಮುಗಿಸಿದ್ದಾರೆ. ಇತ್ತೀಚೆಗೆ ಪ್ರಶಾಂತ್ ನೀಲ್, ಭುವನ್ ಗೌಡ, ಹಾಗೂ ಶೃತಿ ಹಾಸನ್ ಜೊತೆಯಾಗಿ ನಿಂತಿರುವ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತಿತ್ತು. ಬಾಲಕೃಷ್ಣ ಜೊತೆ ನಟಿಸಿದ 'ವೀರ ಸಿಂಗ ರೆಡ್ಡಿ' ಹಾಗೂ ಚಿರಂಜೀವಿ ಜೊತೆ ನಟಿಸಿದ 'ವಾಲ್ತೇರು ವೀರಯ್ಯ' ಶೃತಿ ಹಾಸನ್‌ಗೆ ಯಶಸ್ಸಿನ ರುಚಿ ತೋರಿಸಿದೆ. ಈಗ 'ಸಲಾರ್' ಅವರ ಕರಿಯರ್‌ಗೆ ಮೆಗಾ ಹಿಟ್ ಕೊಡುತ್ತೆ ಅನ್ನೋದ ಉತ್ಸಾಹದಲ್ಲಿದ್ದಾರೆ. ಈ ವೇಳೆನೇ ಆದಷ್ಟು ಬೇಗ 'ಸಲಾರ್' ಸಿನಿಮಾದ ಶೂಟಿಂಗ್ ಕೂಡ ಮುಗಿಯಲಿದೆ ಅನ್ನೋ ಸುದ್ದಿನೂ ಓಡಾಡಿತ್ತು.

Prabhas and Prashanth Neels movie Salaar will be completed in 30 days

ಇನ್ನೊಂದು ಪ್ರಶಾಂತ್ ನೀಲ್ ಕೂಡ 'ಸಲಾರ್' ಸಿನಿಮಾ ಶೂಟಿಂಗ್ ಅನ್ನು ಮುಗಿಸಲೇಬೇಕಿದೆ. ಯಾಕಂದ್ರೆ, ಈಗಾಗಲೇ ಕಮಿಟ್ ಆಗಿರೋ ಸಿನಿಮಾವನ್ನು ಆರಂಭ ಮಾಡಬೇಕಿದೆ. ಹೌದು, 'ಸಲಾರ್' ಬಳಿಕ ಜೂ.ಎನ್‌ಟಿಆರ್ ಸಿನಿಮಾಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಬೇಕಿದೆ. ಟಾಲಿವುಡ್ ಮೂಲಗಳ ಪ್ರಕಾರ, ಇವರಿಬ್ಬರ ಹೈ ವೋಲ್ಟೇಜ್ ಸಿನಿಮಾ ಇದೇ ವರ್ಷ ಸೆಪ್ಟೆಂಬರ್‌ನಿಂದ ಆರಂಭ ಆಗಲಿದ್ಯಂತೆ. 'ಸಲಾರ್' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಪ್ರಶಾಂತ್ ನೀಲ್ ಹೊಸ ಸಿನಿಮಾ ಆರಂಭ ಮಾಡಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಪ್ರಭಾಸ್ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಪ್ರಭಾಸ್ ಒತ್ತಡದಲ್ಲಿದ್ದು, ಅದಕ್ಕೆ ಸರಿಯಾಗಿ 'ಆದಿಪುರುಷ್' ಸಿನಿಮಾವನ್ನು ಮುಗಿಸಿದ್ದಾರೆ. ಆ ಬಳಿಕ 'ಸಲಾರ್'. ಈ ಸಿನಿಮಾನೂ ಮುಗಿಯುತ್ತಿದ್ದಂತೆ ನಾಗ ಅಶ್ವಿನ್ ಸಿನಿಮಾ 'ಪ್ರಾಜೆಕ್ಟ್ ಕೆ'ಮುಗಿಸಲಿದ್ದಾರೆ. ಯಾಕಂದ್ರೆ, 2024 ಸಂಕ್ರಾಂತಿಗೆ ರಿಲೀಸ್ ಆಗುತ್ತೆ ಅಂತ ನಾಗ ಅಶ್ವಿನ್ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಹೀಗಾಗಿ ಮುಂದಿನ ಸಂಕ್ರಾಂತಿ ಒಳಗೆ ಮೂರು ಬಿಗ್ ಪ್ರಾಜೆಕ್ಟ್ ಸಿನಿಮಾ ರಿಲೀಸ್ ಆಗುತ್ತಿರೋದ್ರಿಂದ ಪ್ರಭಾಸ್ ಬಿಡುವಿಲ್ಲದ ಸಿನಿಮಾ ಶೂಟಿಂಗ್ ಮಾಡಬೇಕಿದೆ.

More from Filmibeat

English summary
Prabhas and Prashanth Neel's movie Salaar will be completed in 30 days, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X