ಸಭೆಗಳನ್ನೆಲ್ಲಾ ಕ್ಯಾನ್ಸಲ್ ಮಾಡಿದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್: 'ರಾಧೆ ಶ್ಯಾಮ್' ರಿಲೀಸ್ ಆಗುತ್ತಾ?

ಅಖಾಡದಿಂದ RRR ಸಿನಿಮಾ ಹಿಂದಿ ಸರಿದ ಬಳಿಕ ಎಲ್ಲರ ಕಣ್ಣು ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಮೇಲೆ ನೆಟ್ಟಿದೆ. ಓಮಿಕ್ರಾನ್ ಹಾವಳಿಯಿಂದ ಬಿಗ್ ಬಜೆಟ್ ಸಿನಿಮಾಗಳು ಸೈಡಿಗೆ ಸರಿದಿವೆ. ಈ ಬೆನ್ನಲ್ಲೇ ಡಾರ್ಲಿಂಗ್ ನಟನೆಯ 'ರಾಧೆ ಶ್ಯಾಮ್' ಸಿನಿಮಾ ಕೂಡ ಪೋಸ್ಟ್‌ಪೋನ್ ಆಗುತ್ತೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಆದರೆ, ಸಿನಿಮಾ ತಂಡ ಮಾತ್ರ ಸಿನಿಮಾ ಬಿಡುಗಡೆ ವಿಚಾರದಲ್ಲಿ ಯಾವುದೇ ರೀತಿ ಬದಲಾವಣೆ ಇಲ್ಲಾ ಎಂದಿದೆ.

'ರಾಧೆ ಶ್ಯಾಮ್' ನಿರ್ಮಿಸಿದ ಯುವಿ ಪ್ರೊಡಕ್ಷನ್ ಸಂಸ್ಥೆ ಸಿನಿಮಾವನ್ನು ಅಂದುಕೊಂಡಂತೆ ಜನವರಿ 14ಕ್ಕೆ ಬಿಡುಗಡೆ ಮಾಡುವ ಬಗ್ಗೆ ದಿಟ್ಟ ಕೈಗೊಂಡಿದೆ. ಆದರೆ, ಇತ್ತೀಚೆಗೆ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಪ್ರಭಾಸ್ ಈಗಾಗಲೇ ಒಪ್ಪಿಕೊಂಡಿದ್ದ ಎಲ್ಲಾ ಸಭೆ ಸಮಾರಂಭಗಳನ್ನು ಕ್ಯಾನ್ಸಲ್ ಮಾಡಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.

ಪ್ರಭಾಸ್ ಮೀಟಿಂಗ್ ಕ್ಯಾನ್ಸಲ್

ಪ್ರಭಾಸ್ ಮೀಟಿಂಗ್ ಕ್ಯಾನ್ಸಲ್

ರಾಜಮೌಳಿ ಅಂತಹ ದಿಗ್ಗಜರೇ RRR ಸಿನಿಮಾವನ್ನು ಪೋಸ್ಟ್‌ಪೋನ್ ಮಾಡಿದ್ದಾರೆ. ಜನವರಿ 7ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಮತ್ಯಾವಾಗ ಬಿಡುಗಡೆ ಮಾಡುತ್ತಾರೋ ಗೊತ್ತಿಲ್ಲ. ಈ ಮಧ್ಯೆ ಬಿಡುಗಡೆ ರೇಸ್‌ನಲ್ಲಿ ಇರುವುದು ಪ್ರಭಾಸ್ ನಟಿಸಿದ 'ರಾಧೆ ಶ್ಯಾಮ್'. ಹೀಗಾಗಿ ಪ್ರಭಾಸ್ ಪ್ರಚಾರ, ಬೇರೆ ಸಿನಿಮಾಗಳಿಗೆ ಸಂಬಂಧಿಸಿದಂತೆ ಕೆಲವು ಮೀಟಿಂಗ್‌ಗಳನ್ನು ಇಟ್ಟುಕೊಂಡಿದ್ದರು. ಆ ಎಲ್ಲಾ ಮೀಟಿಂಗ್‌ಗಳನ್ನೂ ಕ್ಯಾನ್ಸಲ್ ಮಾಡಿದ್ದಾರೆ ಎನ್ನಲಾಗಿದೆ.

ಪೋಸ್ಟ್‌ಪೋನ್ ಆಗುತ್ತಾ 'ರಾಧೆ ಶ್ಯಾಮ್'

ಪೋಸ್ಟ್‌ಪೋನ್ ಆಗುತ್ತಾ 'ರಾಧೆ ಶ್ಯಾಮ್'

ಪ್ರಭಾಸ್ ಸಿನಿಮಾ ಮಂದಿ ಜೊತೆ ಇಟ್ಟುಕೊಂಡಿದ್ದ ಮೀಟಿಂಗ್ ಅನ್ನು ಕ್ಯಾನ್ಸಲ್ ಮಾಡಿದ್ದಕ್ಕೆ ಟಾಲಿವುಡ್‌ನಲ್ಲಿ ಮತ್ತೆ 'ರಾಧೆ ಶ್ಯಾಮ್' ಬಿಡುಗಡೆ ಬಗ್ಗೆ ಗಾಳಿಸುದ್ದಿಗಳು ಹರಿದಾಡಲು ಆರಂಭಿಸಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಜನವರಿ 14 ಸಂಕ್ರಾಂತಿ ಬಿಡುಗಡೆ ಆಗುವುದಿಲ್ಲ. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಸಿನಿಮಾ ಕೂಡ ಮುಂದಕ್ಕೆ ಹೋಗುತ್ತೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಪ್ರೊಡಕ್ಷನ್ ಕಂಪನಿ ಸಿನಿಮಾ ಮುಂದೂಡಿಕೆ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ. ಆದರೆ, ಇನ್ನೊಂದು ಕಡೆ ಭಾರತದ ಹಲವೆಡೆ ಥಿಯೇಟರ್‌ಗಳು ಬಂದ್ ಆಗುವ ಸೂಚನೆ ಸಿಗುತ್ತಿದ್ದು, ಗೊಂದಲ ಮತ್ತಷ್ಟು ಹೆಚ್ಚಾಗಿದೆ.

ಥಿಯೇಟರ್ ಬಂದ್, ಎದುರಾಯ್ತು ಸಮಸ್ಯೆ

ಥಿಯೇಟರ್ ಬಂದ್, ಎದುರಾಯ್ತು ಸಮಸ್ಯೆ

ದೇಶದಲ್ಲಿ ಓಮಿಕ್ರಾನ್ ಹಾವಳಿ ಹೆಚ್ಚಾಗಿದ್ದರಿಂದ ದೆಹಲಿಯಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇ. 50ರಷ್ಟು ಸೀಟು ಭರ್ತಿಗೆ ಆದೇಶ ಹೊರಡಿಸಿದೆ. ಇನ್ನೊಂದು ಕಡೆ ಕರ್ನಾಟಕದಲ್ಲೂ ಲಾಕ್‌ಡೌನ್ ಆಗುತ್ತೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ 'ರಾಧೆ ಶ್ಯಾಮ್' ಅಂತಹ ದುಬಾರಿ ಸಿನಿಮಾ ಬಿಡುಗಡೆಯಾಗುತ್ತಾ? ಎನ್ನುವ ಪ್ರಶ್ನೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆದರೆ, ನಷ್ಟ ಕಟ್ಟಿಟ್ಟ ಬುತ್ತಿ.

ಸಂಕ್ರಾಂತಿ ಮೇಲೆ 'ರಾಧೆ ಶ್ಯಾಮ್' ಕಣ್ಣು

ಸಂಕ್ರಾಂತಿ ಮೇಲೆ 'ರಾಧೆ ಶ್ಯಾಮ್' ಕಣ್ಣು

ಆಂಧ್ರ, ತೆಲಂಗಾಣದಲ್ಲಿ ಸಂಕ್ರಾಂತಿ ಹಬ್ಬ ದೊಡ್ಡ ಹಬ್ಬ. ಈ ವೇಳೆ ತೆರೆಕಂಡ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಹೀಗಾಗಿ ಪ್ರಭಾಸ್ ಕೂಡ ಈ ಅವಕಾಶವನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಇನ್ನೊಂದು ಕಡೆ RRR ಪೋಸ್ಟ್‌ಪೋನ್ ಆಗಿದ್ದು, ಭೀಮ್ಲಾ ನಾಯಕ್ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಅಖಾಡಕ್ಕಿಳಿದರೆ, 'ರಾಧೆ ಶ್ಯಾಮ್‌' ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಪ್ರಭಾಸ್ ಸಿನಿಮಾ ಜನವರಿ 14ರಂದೇ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

More from Filmibeat

English summary
Prabhas cancelling all the meetings as hints to postpone Radhe Shyam release date. But the makers of Radhe Shyam announced that there is no postponement of the film.
Read more about: prabhas ಪ್ರಭಾಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X