ಅನುಷ್ಕಾ ಶೆಟ್ಟಿಯನ್ನು ಸೊಸೆಯಾಗಿ ಸ್ವೀಕರಿಸಲು ರೆಡಿ: ಪ್ರಭಾಸ್‌ಗೊಂದು ಸಮಸ್ಯೆಯಿದೆ.. ಏನದು?

By ಫಿಲ್ಮಿಬೀಟ್ ಡೆಸ್ಕ್

ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಬಗ್ಗೆ ಅದೆಷ್ಟು ಸುದ್ದಿ ಓಡಾಡಿವೆಯೋ ಅವರಿಗೇ ಗೊತ್ತಿಲ್ಲ. ಇಬ್ಬರು ಇನ್ನೇನು ಮದುವೆ ಆಗೇ ಬಿಡುತ್ತಾರೆ ಅನ್ನೋ ಸುದ್ದಿ ಹಬ್ಬಿದ್ದು ಸಿನಿಪ್ರೇಮಿಗಳಿಗೀಗ ಹಳೇ ವಿಷಯ. ಆದರೆ, ಇಬ್ಬರೂ ಪ್ರೀತಿಸುತ್ತಿದ್ದಾರೋ ಇಲ್ಲವೋ ಅನ್ನೋ ಗೊಂದಲ ಅಂತೂ ಇನ್ನೂ ಇದೆ.

ಪ್ರಭಾಸ್ ಕುಟುಂಬಕ್ಕೆ ಅನುಷ್ಕಾ ಶೆಟ್ಟಿ ತೀರಾ ಹತ್ತಿರ. ಏನಾದರೂ ಕಾರ್ಯಕ್ರಮಗಳಾದರೆ ಅಲ್ಲಿಗೆ ಅನುಷ್ಕಾ ಶೆಟ್ಟಿ ಹೋಗಿ ಬರುತ್ತಾರೆ. ಇಬ್ಬರ ಆಫ್‌ಲೈನ್ ಕೆಮಿಸ್ಟ್ರಿ ಕೂಡ ಅಷ್ಟೇ ಅನ್ಯೋನ್ಯವಾಗಿದೆ. ಆದರೆ, ಅನುಷ್ಕಾ ಆಗಲಿ, ಪ್ರಭಾಸ್ ಆಗಲಿ ಇದೂವರೆಗೂ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಇಬ್ಬರೂ ಆತ್ಮೀಯ ಸ್ನೇಹಿತರು ಅಂತ ಹೇಳಿಕೊಂಡೇ ಬರುತ್ತಿದ್ದಾರೆ.

Prabhas family ready to do marriage with anushka shetty but there is a problem

ಅದೆಷ್ಟೇ ವದಂತಿಗಳು ಹಬ್ಬಿದರೂ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರೂ ಮದುವೆ ಆಗಬೇಕು ಅಂತ ಅಭಿಮಾನಿಗಳು ಬಯಸುತ್ತಿದ್ದಾರೆ. ಅದು ಇದೂವರೆಗೂ ಈಡೇರುವ ಚಿಕ್ಕದೊಂದು ಸುಳಿವು ಕೂಡ ಸಿಕ್ಕಿಲ್ಲ. ಆದ್ರೀಗ ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಅದೇನಂದರೆ, ಅನುಷ್ಕಾ ಶೆಟ್ಟಿಯನ್ನು ಸೊಸೆಯಾಗಿ ಸ್ವೀಕರಿಸಲು ಪ್ರಭಾಸ್ ಕುಟುಂಬ ರೆಡಿಯಾಗಿದೆಯಂತೆ. ಆದರೆ, ಇಲ್ಲೊಂದು ಸಮಸ್ಯೆ ಎಂದು ವರದಿಗಳಾಗಿವೆ.

ಪ್ರಭಾಸ್‌ಗೀಗ 43 ವರ್ಷ. ಹಾಗೇ ಅನುಷ್ಕಾ ಶೆಟ್ಟಿಗೆ 41 ವರ್ಷ. ಇಬ್ಬರೂ ಇನ್ನೂ ಮದುವೆ ಆಗದೇ ಹಾಗೇ ಇದ್ದಾರೆ. ಇಬ್ಬರ ನಡುವೆ ಗಾಳಿ ಸುದ್ದಿಗಳು ಹರಡುವುದಕ್ಕೆ ಪ್ರಮುಖ ಕಾರಣ ಇದೇನೆ. ಇಬ್ಬರೂ ಮದುವೆ ಬಗ್ಗೆ ಆಲೋಚನೆ ಮಾಡದೇ ಇರೋದಕ್ಕೆ ಅಭಿಮಾನಿಗಳಲ್ಲಿ ಗೊಂದಲಕ್ಕೆ ಒಳಗಾಗಿದ್ದಾರೆ. ಸದ್ಯ ಹೊಸ ಸುದ್ದಿ ಏನಪ್ಪಾ ಅಂದ್ರೆ, ಕೌಟುಂಬಿಕ ಜೀವನಕ್ಕೆ ಕಾಲಿಡಲು ಪ್ರಭಾಸ್‌ಗೆ ಯಾವುದೇ ಅಭ್ಯಂತರವಿರಲ್ಲ. ಹಾಗೇ ಅವರ ಕುಟುಂಬ ಕೂಡ ರೆಡಿಯಾಗಿದೆಯಂತೆ.

ಅನುಷ್ಕಾ ಶೆಟ್ಟಿಯನ್ನು ಮನೆ ಸೊಸೆಯಾಗಿ ಸ್ವೀಕರಿಸಲು ಪ್ರಭಾಸ್ ಕುಟುಂಬಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ಪ್ರಭಾಸ್‌ಗೆ ಒಂದು ಸಮಸ್ಯೆ ಎಂದು ಹೇಳಲಾಗಿದೆ. ಪ್ರಭಾಸ್ ಸೋಶಿಯಲ್ ಆಗಿಲ್ಲ. ಕೇವಲ ಕೆಲಸದ ಮೇಲೆ ಮಾತ್ರ ಗಮನ ಹರಿಸುತ್ತಿದ್ದಾರೆ. ವರ್ಷದಲ್ಲಿ ಬಹುತೇಕ ದಿನಗಳನ್ನು ಸೆಟ್ಟಿನಲ್ಲಿಯೇ ಕಾಲ ಕಳೆಯುತ್ತಾರೆ. ಹೀಗಾಗಿ ಪ್ರಭಾಸ್ ಮನೆಯವರಲ್ಲಿ ಆತಂಕ ಹೆಚ್ಚಾಗಿದೆಯಂತೆ.

Prabhas family ready to do marriage with anushka shetty but there is a problem

ಇದೇ ವೇಳೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರೂ ಉತ್ತಮ ಸ್ನೇಹಿತರು. ಅವರಲ್ಲಿ ಗೆಳೆತನ ಬಿಟ್ಟು ಬೇರೆ ಏನೂ ಇಲ್ಲ. ಆದರೆ, ಇಬ್ಬರೂ ಒಂದಾಗಬೇಕು ಅಂತ ಪ್ರಭಾಸ್ ಕುಟುಂಬವೇ ಬಯಸುತ್ತಿದೆ. ಈ ಗೆಳೆತನ ಪ್ರೀತಿಯಾಗಿ ಬದಲಾಗಬೇಕಿದೆ ಎಂದು ಡಾರ್ಲಿಂಗ್ ಕುಟುಂಬ ಬಯಸುತ್ತಿದೆ ಎಂದು ಟಾಲಿವುಡ್ ಮಾಧ್ಯಮಗಳು ವರದಿ ಮಾಡುತ್ತಿವೆ.

ಮನೆಯವರೇ ಬಯಸಿದ ಮೇಲೆ ಇಬ್ಬರೂ ಹತ್ತಿರವಾಗಲಿ ಅಂತ ಅಭಿಮಾನಿಗಳು ಕೂಡ ಆಶಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇಬ್ಬರೂ ನಾವಿಬ್ಬರೂ ಉತ್ತಮ ಸ್ನೇಹಿತರು ಎಂದು ಈಗಾಗಲೇ ಕ್ಲಿಯರ್ ಆಗಿ ಹೇಳಿದ್ದಾರೆ. ಹೀಗಾಗಿ ತಲೆಗೆ ಹುಳ ಬಿಟ್ಟುಕೊಂಡು, ಇಬ್ಬರ ಮದುವೆ ಆಗಲಿ ಅಂತ ಕಾದು ಕುಳಿತಿರೋ ಅಭಿಮಾನಿಗಳಿಗೆ ಈ ಜೋಡಿ ಸಿಹಿ ಸುದ್ದಿ ನೀಡಬಹುದೇ ಎಂಬ ಪ್ರಶ್ನೆ ಮತ್ತೆ ಹುಟ್ಟಿಕೊಂಡಿದೆ.

More from Filmibeat

English summary
Buzz: Prabhas family ready to do marriage with Anushka Shetty:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X