'ಕಲ್ಕಿ' ಸಿನಿಮಾ ಮುಂದೆ ಪ್ರಶಾಂತ್ ನೀಲ್ 'ಸಲಾರ್' ಮಂಕಾಯಿತೇ? ನಾಗ ಅಶ್ವಿನ್ ಸಿನಿಮಾ ದಿಢೀರನೇ ಸೈಲೆಂಟ್

ಬಾಹುಬಲಿ ಬಳಿಕ ಯಶಸ್ಸಿನ ರುಚಿಯನ್ನೇ ನೋಡದ ಪ್ರಭಾಸ್ ಮುಂದೆ ಎರಡು ಸಿನಿಮಾಗಳಿವೆ. ಒಂದು ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್'. ಇನ್ನೊಂದು ನಾಗ ಅಶ್ವಿನ್ ನಿರ್ದೇಶನದ 'ಕಲ್ಕಿ: 2898 AD'. ವಿಶೇಷ ಅಂದ್ರೆ, ಈ ಸಿನಿಮಾಗಳೂ ಪ್ರಚಾರವನ್ನು ಆರಂಭ ಮಾಡಿವೆ.

'ಕಲ್ಕಿ' ಸಿನಿಮಾಗಿಂತ ಮುನ್ನವೇ 'ಸಲಾರ್' ಬಿಡುಗಡೆಯಾಗಲಿದೆ. ಹೀಗಾಗಿ 'ಸಲಾರ್' ನಿಧಾನವಾಗಿ ಪ್ರಚಾರವನ್ನು ಆರಂಭಿಸಿದೆ. ಇದೇ ಬೆನ್ನಲ್ಲೇ 'ಕಲ್ಕಿ:2898 AD' ಟೈಟಲ್ ಲಾಂಚ್ ಮಾಡಿ ಚಿಕ್ಕದೊಂದು ಟೀಸರ್ ರಿಲೀಸ್ ಮಾಡಿತ್ತು. ಇಲ್ಲಿಂದ ಎರಡೂ ಸಿನಿಮಾಗಳ ನಡುವೆ ಪೈಪೋಟಿ ಶುರುವಾಗಿದೆ ಅನ್ನೋದು ಟಾಲಿವುಡ್‌ನಲ್ಲಿ ಟಾಕ್.

Prabhas Kalki 2898 AD goes Silent till Prashanth Neels Salaar gets release

ಒಂದೇ ತಿಂಗಳಲ್ಲಿ ಪ್ರಭಾಸ್ ಅಭಿನಯದ 'ಸಲಾರ್' ಹಾಗೂ 'ಕಲ್ಕಿ' ಸಿನಿಮಾದ ಟೀಸರ್‌ಗಳು ರಿಲೀಸ್ ಆಗಿವೆ. ಆದರೆ, ಎರಡೂ ಸಿನಿಮಾಗಳ ಟೀಸರ್‌ಗೆ ಪ್ರೇಕ್ಷಕರು ಕೊಟ್ಟ ರೆಸ್ಪಾನ್ಸ್ ಬೇರೆನೇ ಇದೆ. 'ಕಲ್ಕಿ'ಗೆ ಸಿಕ್ಕಿರೋ ರೆಸ್ಪಾನ್ಸ್ ನೋಡಿ 'ಸಲಾರ್' ಟೀಮ್ ಬೆಚ್ಚಿಬಿದ್ದಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಟಾಲಿವುಡ್‌ನಲ್ಲಿ ಈ ಎರಡು ಸಿನಿಮಾ ಬಗ್ಗೆ ಏನು ನಡೀತಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಕಲ್ಕಿ' ಸಿಕ್ಕ ರೆಸ್ಪಾನ್ಸ್ 'ಸಲಾರ್'ಗೆ ಸಿಕ್ಕಿಲ್ಲ

'ಆದಿಪುರುಷ್' ಸಿನಿಮಾ ಹೇಳ ಹೆಸರಿಲ್ಲದೆ ಹೋದ ಮೇಲೆ ಎರಡೇ ಸಿನಿಮಾ ಮೇಲೆ ಪ್ರಭಾಸ್ ಫ್ಯಾನ್ಸ್ ನಂಬಿಕೆ ಇಟ್ಟಿದ್ದಾರೆ. ಒಂದು ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್'. ಇನ್ನೊಂದು 'ಕಲ್ಕಿ:2898 AD'. ಈ ಎರಡೂ ಸಿನಿಮಾಗಳೂ ಪ್ರಭಾಸ್‌ಗೆ ಮತ್ತೆ ಸಕ್ಸಸ್ ಕೊಟ್ಟೇ ಕೊಡುತ್ತವೆ ಅನ್ನೋ ನಂಬಿಕೆಯಲ್ಲಿದ್ದಾರೆ. ಅದೇನಾಗುತ್ತೆ ಅನ್ನೋದು ಸಿನಿಮಾ ರಿಲೀಸ್ ಆದ್ಮೇಲೆ ಗೊತ್ತಾಗುತ್ತೆ. ಆದರೆ, ಇತ್ತೀಚೆಗೆ ರಿಲೀಸ್ ಆದ ಎರಡೂ ಸಿನಿಮಾ ಟೀಸರ್‌ಗಳು ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿದೆ. 'ಸಲಾರ್' ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ರೆ, ಇತ್ತ 'ಕಲ್ಕಿ'ಗೆ ಹೊಗಳಿಕೆಯ ಮಹಾಪೂರವೇ ಹರಿದು ಬರುತ್ತಿದೆ.

Prabhas Kalki 2898 AD goes Silent till Prashanth Neels Salaar gets release

'ಸಲಾರ್' ಹೆಚ್ಚು ಪ್ರಚಾರ ಬೇಕು

'ಕಲ್ಕಿ' ಒಂದೇ ಒಂದು ಟೀಸರ್ ಬಿಟ್ಟು ಅಭಿಮಾನಿಗಳ ನಿದ್ದೆ ಕೆಡಿಸಿದೆ. ಇದೇ ಸಿನಿಮಾ ರಿಲೀಸ್‌ವರೆಗೂ ಕ್ಯಾರಿ ಮಾಡುವುದರಲ್ಲಿ ಅನುಮಾನವಿಲ್ಲ. ಆದ್ರೀಗ 'ಸಲಾರ್' ರಿಲೀಸ್ ಡೇಟ್ ಹತ್ತಿರದಲ್ಲಿರುವುದರಿಂದ ಅಗತ್ಯವಾದ ಪ್ರಚಾರ ಬೇಕಿದೆ. ಅದರಲ್ಲಿ ಪ್ರಶಾಂತ್ ನೀಲ್ ಹಿಂದೆ ಬಿದ್ದಿದ್ದಾರೆ ಅನ್ನೋದು ಟಾಲಿವುಡ್‌ನಲ್ಲಿ ಓಡಾಡುತ್ತಿರುವ ಗುಸುಗುಸು. 'ಸಲಾರ್'ಗೆ ಸಿಗಬೇಕಿದ್ದ ಜನಪ್ರಿಯತೆ ಈಗ 'ಕಲ್ಕಿ'ಗೆ ಸಿಕ್ಕಿದೆ. ಹೀಗಾಗಿ ಪ್ರಶಾಂತ್ ನೀಲ್ ಸಿನಿಮಾ ಕಡೆಗೆ ಹೆಚ್ಚು ಗಮನ ಹರಿಸಲಾಗುತ್ತಿದೆಯಂತೆ.

'ಕಲ್ಕಿ' ಪ್ರಚಾರ ಸ್ಥಗಿತ?

'ಕಲ್ಕಿ'ಗಿಂತ ಮುನ್ನ 'ಸಲಾರ್' ಬಿಡುಗಡೆಯಾಗುತ್ತಿದೆ. ಹೀಗಾಗಿ 'ಸಲಾರ್' ಬಿಡುಗಡೆಯಾಗವವರೆಗೂ 'ಕಲ್ಕಿ' ಸಿನಿಮಾದ ಪ್ರಚಾರಕ್ಕೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ. ಪ್ರಭಾಸ್ ಮೊದಲು 'ಸಲಾರ್' ಸಿನಿಮಾದ ಪ್ರಚಾರದ ಕಡೆ ಫೋಕಸ್ ಮಾಡಿದ್ದಾರೆ ಅನ್ನೋ ಮಾತು ಓಡಾಡುತ್ತಿದೆ. 'ಸಲಾರ್' ಇನ್ನೂ ಹೆಚ್ಚಿನ ಪ್ರಚಾರ ಬೇಕಿರುವುದರಿಂದ ಇನ್ನು ಎರಡು ತಿಂಗಳು 'ಸಲಾರ್' ಸಿನಿಮಾ ತಂಡದ ಜೊತೆ ಇರುತ್ತಾರೆ ಎನ್ನಲಾಗಿದೆ.

ಮಾಸ್ಟರ್ ಪ್ಲ್ಯಾನ್ ಮಾಡ್ತಾರಾ ಪ್ರಶಾಂತ್ ನೀಲ್?

'ಕೆಜಿಎಫ್ 2' ಅಂತಹ ಮೆಗಾ ಸಿನಿಮಾ ಕೊಟ್ಟ ಬಳಿಕ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸೂಪರ್‌ಸ್ಟಾರ್ ಸಿನಿಮಾವಿದು. ಆದರೆ, 'ಸಲಾರ್' ಟೀಸರ್ ನೋಡಿ ನೆಟ್ಟಿಗರು 'ಕೆಜಿಎಫ್'ಗೆ ಹೋಲಿಕೆ ಮಾಡಿದ್ದೇ ಹೆಚ್ಚು. ಹೀಗಾಗಿ ಮುಂದೆ ಬಿಡುವ ಟೀಸರ್ ಹಾಗೂ ಸಾಂಗ್‌ಗಳಿಂದ ಈ ಇಮೇಜ್‌ನಿಂದ ಹೊರಬರಬೇಕಿದೆ. ಅದಕ್ಕೆ ಪ್ರಶಾಂತ್ ನೀಲ್ ಏನು ಪ್ಲ್ಯಾನ್ ಮಾಡಿದ್ದಾರೆ ಅನ್ನೋದು ಅವರಿಗೇ ಗೊತ್ತಿದೆ. 'ಕಲ್ಕಿ'ಯಿಂದ 'ಸಲಾರ್' ಸಿನಿಮಾತಂಡಕ್ಕೆ ಒತ್ತಡ ಹೆಚ್ಚಾಗಿರೋದಂತೂ ಸತ್ಯ. ಹೀಗಾಗಿ ಭರ್ಜರಿ ಪ್ರಚಾರ ಮಾಡಲೇಬೇಕಾದ ಅನಿವಾರ್ಯತೆಯಿದೆ.

More from Filmibeat

English summary
Prabhas Kalki 2898 AD goes Silent till Prashanth Neel's Salaar gets release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X