'ರಾಜ ಡಿಲಕ್ಸ್‌' ಚಿತ್ರಕ್ಕೆ ಈ ಮಲಯಾಳಂ ನಟಿನೇ ಬೇಕು ಅಂತಿದ್ದಾರೆ ಪ್ರಭಾಸ್

ಪ್ಯಾನ್ ಇಂಡಿಯಾ ಸೂಪರ್‌ ಪ್ರಭಾಸ್ ಕೈ ತುಂಬಾ ಸಿನಿಮಾಗಳಿವೆ. ರಾಧೆಶ್ಯಾಮ್, ಸಲಾರ್, ಆದಿಪುರುಷ್ ಸೇರಿದಂತೆ ಪ್ರಾಜೆಕ್ಟ್ ಕೆ ಜೊತೆ ಸ್ಪಿರಿಟ್ ಚಿತ್ರಗಳಿವೆ. ಇವುಗಳ ಜೊತೆ ಕೆಲವು ಸಿನಿಮಾಗಳಿಗೆ ಮಾತುಕತೆ ಕೂಡ ನಡೆಯುತ್ತಿದೆ. ಇನ್ನು ಕೆಲವು ಅನೌನ್ಸ್ ಮಾಡುವುದು ಬಾಕಿ ಉಳಿದಿದೆ ಅಷ್ಟೇ. ಈ ಗ್ಯಾಪ್‌ನಲ್ಲಿಯೇ ಮತ್ತೊಂದು ಸಿನಿಮಾ ಕೂಡ ಸೆಟ್ಟೇರಲಿದೆ. ಅದಕ್ಕೆ ಬೇಕಾಗಿರುವ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಪ್ರಭಾಸ್ ಮಲಯಾಳಂ ನಟಿಯ ಹಿಂದೆ ಬಿದ್ದಿದ್ದಾರೆ.

ಒಂದು ಸಿನಿಮಾಗೆ ನಾಯಕಿಯನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಅನ್ನುವುದು ನಿರ್ದೇಶಕನ ನಿರ್ಧಾರ ಆಗಿರುತ್ತೆ. ಕೆಲವೊಮ್ಮೆ ಇಡೀ ತಂಡ ಕೂಡ ನಾಯಕಿಯ ಆಯ್ಕೆ ಮಾಡುವುದೂ ಇದೆ. ಸೂಪರ್‌ಸ್ಟಾರ್ ಸಿನಿಮಾಗಳಾಗಿದ್ದರೆ, ಅವರೂ ತಮಗೆ ಸೂಟ್ ಆಗುವ ನಾಯಕಿಯನ್ನು ಆಯ್ಕೆ ಮಾಡುವಂತೆ ಸಲಹೆ ನೀಡುವ ಸಾಧ್ಯತೆಗಳಿವೆ. ಈಗ ಪ್ರಭಾಸ್ ತಮ್ಮ ಮುಂದಿನ ಸಿನಿಮಾಗೆ ಮಲಯಾಳಂ ನಾಯಕಿಯನ್ನು ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರಂತೆ.

ಪ್ರಭಾಸ್ ಇಷ್ಟಪಟ್ಟ ನಾಯಕಿ ಯಾರು?

ಪ್ರಭಾಸ್ ಇಷ್ಟಪಟ್ಟ ನಾಯಕಿ ಯಾರು?

ಪ್ರಭಾಸ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ಮಲಯಾಳಂ ನಟಿ ಮಾಳವಿಕ ಮೋಹನನ್ ನಾಯಕಿ ಅನ್ನೋದು ಪ್ರಭಾಸ್ ಆಸೆಯಂತೆ. ನಿರ್ದೇಶಕರಿಗೂ ಮಾಳವಿಕ ಮೋಹನನ್‌ರನ್ನು ಕೇಳಿ ನೋಡುವಂತೆ ಪ್ರಭಾಸ್ ಹೇಳಿದ್ದಾರೆ ಅನ್ನುವುದು ಲೇಟೆಸ್ಟ್ ಗಾಸಿಪ್. ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ಮಾಳವಿಕ ಮೋಹನನ್ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತಿವೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಮಾಳವಿಕಾ ಆಕ್ಟೀವ್ ಆಗಿದ್ದಾರೆ. ಈ ಕಾರಣಕ್ಕೆ ಪ್ರಭಾಸ್ ಮಲಯಾಳಂ ನಟಿಯನ್ನು ಆಯ್ಕೆ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಪ್ರಭಾಸ್ ಒಪ್ಪಿದ ಹೊಸ ಸಿನಿಮಾ ಯಾವುದು?

ಪ್ರಭಾಸ್ ಒಪ್ಪಿದ ಹೊಸ ಸಿನಿಮಾ ಯಾವುದು?

ಫ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಹೊಸ ಸಿನಿಮಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರಕ್ಕೆ 'ರಾಜಾ ಡಿಲಕ್ಸ್' ಎಂದು ಹೆಸರಿಡಲಾಗಿದೆ. ಮಾರುತಿ ಎಂಬವವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಹಾಗೂ ಮಾರುತಿ ಕಾಂಬಿನೇಷನ್‌ ಸಿನಿಮಾಗೆ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದೆ. ಪ್ರಭಾಸ್ ಒತ್ತಾಸೆ ಮೇರೆಗೆ ಮಾಳವಿಕಾ ಮೋಹನನ್‌ರನ್ನು ಆಯ್ಕೆ ಮಾಡುವ ಎಲ್ಲಾ ಸಾಧ್ಯತೆಗಳೂ ಕೂಡ ಇವೆ ಎನ್ನಲಾಗುತ್ತಿದೆ.

ಮಾಳವಿಕ ಮೋಹನನ್ ಹಿನ್ನೆಲೆಯೇನು?

ಮಾಳವಿಕ ಮೋಹನನ್ ಹಿನ್ನೆಲೆಯೇನು?

ಮಾಳವಿಕ ಮೋಹನನ್ ಮಲಯಾಳಂ ಚಿತ್ರರಂಗದ ಹಿರಿಯರ ಕ್ಯಾಮರಾಮ್ಯಾನ್ ಕೆ ಯು ಮೋಹನನ್ ಅವರ ಪುತ್ರಿ. 28 ವರ್ಷದ ಈ ನಟಿ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ. 2013ರಲ್ಲಿ ಮಲಯಾಳಂ ಸಿನಿಮಾ 'ಪಟ್ಟಂ ಪೋಲೆ'ಯಲ್ಲಿ ನಟಿಸಿದ್ದರು. ರಜನಿಕಾಂತ್ ನಟನೆಯ 'ಪೆಟ್ಟಾ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ದಳಪತಿ ವಿಜಯ್ ಅಭಿನಯದ 'ಮಾಸ್ಟರ್' ಸಿನಿಮಾದಲ್ಲೂ ನಟಿಸಿದ್ದರು. ಇತ್ತೀಚೆಗೆ ಧನುಷ್ ಅಭಿನಯದ 'ಮಾರಾನ್' ಚಿತ್ರದಲ್ಲೂ ನಟಿಸಿದ್ದರು.

'ರಾಧೆಶ್ಯಾಮ್' ರಿಲೀಸ್

'ರಾಧೆಶ್ಯಾಮ್' ರಿಲೀಸ್

ಪ್ರಭಾಸ್ ಅಭಿನಯದ 'ರಾಧೆಶ್ಯಾಮ್' ಸಿನಿಮಾ ಇದೇ ಮಾರ್ಚ್ 11 ರಂದು ಬಿಡುಗಡೆಯಾಗುತ್ತಿದೆ. 70ರ ದಶಕದ ಕಥೆಯನ್ನುತೆರೆಮೇಲೆ ತರಲಾಗಿದೆ. ಹಸ್ತ ನೋಡಿ ಭವಿಷ್ಯ ಹೇಳುವ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ವಿಭಿನ್ನ ಲವ್‌ ಸ್ಟೋರಿಯಾಗಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾ ಈಗಾಗಲೇ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

More from Filmibeat

English summary
Prabhas next movie Raj Deluxe to have malayalam actress Malavika Mohanan as female lead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X