ಸತತ ಸೋಲಿನ ಬಳಿಕ 'ಸ್ಟ್ರಾಟಜಿ' ಬದಲಿಸಿದ ಪ್ರಭಾಸ್: 'ರಾಜಾ ಡಿಲಕ್ಸ್'ಗೆ ಸಂಭಾವನೆ ಬೇಡ್ವಂತೆ?
'ಬಾಹುಬಲಿ' ಸಿರೀಸ್ ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದರು. ಉತ್ತರದಿಂದ ದಕ್ಷಿಣದವರೆಗೂ ಸಿನಿಪ್ರಿಯರು ಪ್ರಭಾಸ್ ಜಾಪ ಮಾಡಿತ್ತಿದ್ದರು. ಇನ್ಮುಂದೆ ಇಡೀ ಭಾರತೀಯರ ಪಾಲಿಗೆ ಪ್ರಭಾಸ್ 'ಡಾರ್ಲಿಂಗ್' ಆಗೇಬಿಟ್ಟರು. ಬೇರೆ ಚಿತ್ರರಂಗದ ಕಥೆ ಮುಗೀತು ಅಂತಾನೇ ಟಾಕ್ ಆಗಿತ್ತು.
'ಬಾಹುಬಲಿ 2' ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿತ್ತು. ದಕ್ಷಿಣದ ನಟನೊಬ್ಬ ಭಾರತೀಯ ಚಿತ್ರರಂಗದಲ್ಲಿದ್ದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿತ್ತು. ಆ ಬಳಿಕ ಪ್ರಭಾಸ್ ನಟಿಸಿದ ಒಂದೇ ಒಂದು ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿಲ್ಲ.
ಬಿಗ್ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ 'ಸಾಹೋ' ಹಾಗೂ 'ರಾಧೆ ಶ್ಯಾಮ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ ಬಳಿಕ ಮುಖಭಂಗ ಆಗಿದೆ. ಹೀಗಾಗಿ ಗೆಲ್ಲಲೇ ಬೇಕು ಅಂತ ಪ್ರಭಾಸ್ ನಿರ್ಧರಿಸಿದ್ದಾರಂತೆ. ಹೀಗಾಗಿ ಸಂಭಾವನೆ ವಿಷಯದಲ್ಲಿ ಹೊಸ 'ಸ್ಟ್ರಾಟಜಿ' ಬಳಸುತ್ತಿದ್ದಾರಂತೆ. ಅಷ್ಟಕ್ಕೂ ರಣತಂತ್ರವೇನು? ಟಾಲಿವುಡ್‌ನಲ್ಲಿ ಓಡಾಡುತ್ತಿರುವ ಸುದ್ದಿಯೇನು? ತಿಳಿಯಲು ಮುಂದೆ ಓದಿ.

ದೊಡ್ಡ ಬಜೆಟ್ ಸಿನಿಮಾಗೆ ಬ್ರೇಕ್
'ಬಾಹುಬಲಿ 2' ಬಳಿಕ ಪ್ರಭಾಸ್ ಸಿನಿಮಾಗಳ ಬಜೆಟ್ ಗಗನಕ್ಕೇರಿತ್ತು.'ಸಾಹೋ',' ರಾಧೆ ಶ್ಯಾಮ್' ಸಿನಿಮಾಗಳ ಬಜೆಟ್ 300 ಕೋಟಿ ರೂ. ಮೀರಿದ್ದವು. ಹೀಗಾಗಿ ಈ ಎರಡೂ ಸಿನಿಮಾಗಳ ನಿರ್ಮಾಪಕರಿಗೆ ಸಿಕ್ಕಪಟ್ಟೆ ನಷ್ಟ ಆಗಿತ್ತು. ಈ ಕಾರಣಕ್ಕೆ ಸಿನಿಮಾ ಬಜೆಟ್ ಕಡಿಮೆ ಮಾಡೋಕೆ ಪ್ರಭಾಸ್ ದೊಡ್ಡ ಹೆಜ್ಜೆಯನ್ನೇ ಇಡುತ್ತಿದ್ದಾರೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.

'ರಾಜಾ ಡಿಲಕ್ಸ್'ಗೆ ಸಂಭಾವನೆ ಇಲ್ಲ
'ಸಾಹೋ' ಹಾಗೂ 'ರಾಧೆ ಶ್ಯಾಮ್' ಸಿನಿಮಾಗೆ ಪ್ರಭಾಸ್ 100 ಕೋಟಿ ರೂ. ಸಂಭಾವನೆ ಪಡೆದಿದ್ದರು ಅನ್ನೋ ಮಾತು ಕೇಳಿ ಬಂದಿತ್ತು. ಅದೇ 'ಪ್ರಾಜೆಕ್ಟ್ ಕೆ'ಗೆ ಸುಮಾರು 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಅನ್ನೋ ಸುದ್ದಿನೂ ಹಾರಿದಾಡಿತ್ತು. ಇದರಿಂದ ನಿರ್ಮಾಪಕರಿಗೆ ದೊಡ್ಡ ಹೊರೆಯಾಗುತ್ತಿತ್ತು. ನಿರ್ಮಾಪಕರನ್ನು ಇದರಿಂದ ಹೊರತರೋಕೆ ಪ್ರಭಾಸ್ ಹೊಸ ಸ್ಟ್ರಾಟಲಿ ಮಾಡಿದ್ದು 'ರಾಜಾ ಡಿಲಕ್ಸ್'ಗೆ ಒಂದೇ ಒಂದು ರೂಪಾಯಿ ಸಂಭಾವನೆ ಪಡೆಯದೆ ನಟಿಸುತ್ತಿದ್ದಾರಂತೆ.

ಕಲೆಕ್ಷನ್‌ನಲ್ಲಿ ಪ್ರಾಫಿಟ್ ಕೊಡಿ
ನಿರ್ಮಾಪಕರಿಗೆ ತೊಂದರೆಯಾಗದಂತೆ ಸಿನಿಮಾ ಮಾಡಿಕೊಡಲು ಮುಂದಾಗಿದ್ದಾರಂತೆ. ಅದಕ್ಕೆ ದುಬಾರಿ ಸಂಭಾನವೆ ಪಕ್ಕಕ್ಕಿಟ್ಟು, ಸಿನಿಮಾ ಮೇಕಿಂಗ್ ಮೇಲೆ ಹೆಚ್ಚು ಗಮನ ಹರಿಸಲು ಮುಂದಾಗಿದ್ದಾರಂತೆ. ಮಾರುತಿ ನಿರ್ದೇಶನದ 'ರಾಜಾ ಡಿಲಕ್ಸ್'ಗೆ ಒಂದೇ ರೂಪಾಯಿ ಸಂಭಾವನೆ ಬೇಡ ಅಂತ ಹೇಳಿದ್ದೇನೋ ಸರಿ. ಆದರೆ, ಬಿಗ್ ಪ್ರಾಫಿಟ್ ಬೇಕು ಅಂತ ಒಡಂಬಡಿಕೆ ಮಾಡಿಕೊಂಡಿದ್ದಾಂತೆ. ಆದರೆ, ಎಷ್ಟು ಪರ್ಸಂಟೇಜ್ ಪ್ರಾಫಿಟ್ ಕೇಳಿದ್ದಾರೆ ಅನ್ನೋದು ಮಾತ್ರ ಗೊತ್ತಿಲ್ಲ.

ಪ್ರಭಾಸ್ ಸಿನಿಮಾಗಳ ಕಥೆಯೇನು?
ಡಾರ್ಲಿಂಗ್ ಪ್ರಭಾಸ್ ಈಗಾಗಲೇ ಒಪ್ಪಿಕೊಂಡಿರೋ ಸಿನಿಮಾಗಳಿಗೆ ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 'ಆದಿಪುರುಷ್', 'ಸಲಾರ್' ಹಾಗೂ 'ಪ್ರಾಜೆಕ್ಟ್ ಕೆ' ಈಗಾಗಲೇ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ ಅನ್ನೋ ಮಾತಿದೆ. ಈ ಮಧ್ಯೆನೇ 'ರಾಜಾ ಡಿಲಕ್ಸ್' ಮೂಲಕ ಹೊಸ ತಂತ್ರವನ್ನು ಅನುಸರಿಸಿದ್ದು, ಈ ಸಿನಿಮಾ ಸಕ್ಸಸ್ ಆದರೆ ಪ್ರಭಾಸ್ ಸಂಭಾವನೆ ಬಿಟ್ಟು ಪ್ರಾಫಿಟ್ ಕೊಡಿ ಅಂತ ಡಿಮ್ಯಾಂಡ್ ಮಾಡಬಹುದು ಅನ್ನೋ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.


Click it and Unblock the Notifications











