MNC ಕಂಪೆನಿಯ ಜಾಹೀರಾತಿನಲ್ಲಿ ಪವರ್ ಸ್ಟಾರ್ ಪುನೀತ್?

ಹದಿನೈದು ವರ್ಷಗಳ ಹಿಂದೆ ಡಾ.ರಾಜಕುಮಾರ್ ನಂದಿನಿ ಹಾಲಿಗೆ ರಾಯಭಾರಿಯಾಗಿದ್ದರು. ರೈತರಿಗೆ ಉಪಯೋಗವಾಗಲಿ ಎನ್ನುವ ದೃಷ್ಠಿಯಿಂದ ಯಾವುದೇ ಸಂಭಾವನೆ ಪಡೆಯದೆ ಡಾ. ರಾಜ್ ರಾಜ್ಯದ ನಂಬರ್ ಒನ್ ಹಾಲು ಉತ್ಪಾದನಾ ಸಂಸ್ಥೆ 'ಕೆಎಂಎಫ್ ನಂದಿನಿ' ಜಾಹೀರಾತಿನಲ್ಲಿ ಭಾಗವಹಿಸಿದ್ದರು. ಆ ಮೂಲಕ ಕನ್ನಡದ ಸೆಲೆಬ್ರಿಟಿಯೊಬ್ಬರು ಮೊತ್ತಮೊದಲ ಬಾರಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ತಾರೆ ಎನಿಸಿಕೊಂಡರು.

ತಂದೆ ನಡೆದ ದಾರಿಯಲ್ಲೇ ಸಾಗಿದ ಪುನೀತ್ ರಾಜಕುಮಾರ್ ಕೂಡಾ ನಂದಿನಿ ಹಾಲು ಜಾಹೀರಾತಿಗೆ ಯಾವುದೇ ಸಂಭಾವನೆ ಪಡೆಯದೆ ಕೆಲ ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದರು. ಅದೇ ಹಾದಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ನಟಿ ರಮ್ಯಾ ಮತ್ತು ರಾಗಿಣಿ ಕೂಡಾ ನಂತರದ ದಿನದಲ್ಲಿ ನಂದಿನಿ ಹಾಲು ಜಾಹೀರಾತಿನಲ್ಲಿ ಭಾಗವಹಿಸಿದ್ದರು.

Puneeth Rajkumar bags new endorsement from 7up

ಪುನೀತ್ ರಾಜಕುಮಾರ್ ದಕ್ಷಿಣಭಾರತದ ಪ್ರಸಿದ್ದ ರೆಡಿಮೇಡ್ ಉಡುಪು ತಯಾರಕಾರದ F Square ಮತ್ತು ಮಣಪ್ಪುರಂ ಫೈನಾನ್ಸ್ ಸಂಸ್ಥೆಯ ಜಾಹೀರಾತಿನಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ.

ವಿಷಯಕ್ಕೆ ಬರುವುದಾದರೆ ಬಹು ರಾಷ್ಟ್ರೀಯ ಕಂಪೆನಿ ಪೆಪ್ಸಿಕೊ ಸಂಸ್ಥೆಯ '7 UP' ತಂಪು ಪಾನೀಯದ ಜಾಹೀರಾತಿನಲ್ಲಿ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ.

ಖಚಿತ ಮಾಹಿತಿಯ ಪ್ರಕಾರ ಪುನೀತ್ '7 UP' ಜಾಹೀರಾತಿನಲ್ಲಿ (ದಕ್ಷಿಣ ಭಾರತಕ್ಕೆ ಸೀಮಿತ) ಕಾಣಿಸಿಕೊಳ್ಳಲಿದ್ದು ಇದರ ಶೂಟಿಂಗ್ ಈಗಾಗಲೇ ಮುಕ್ತಾಯಗೊಂಡಿದೆ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.

ಪೆಪ್ಸಿಕೊ ಸಂಸ್ಥೆ ಮತ್ತು ಪುನೀತ್ ರಾಜಕುಮಾರ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

More from Filmibeat

English summary
Power star of Kannada film industry Puneeth Rajkumar is rumoured to have bagged the endorsement for popular soft drink 7 Up of Pepsico.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X