ಪವರ್‌ಸ್ಡಾರ್ 'ಜೇಮ್ಸ್' ಟ್ರೈಲರ್, ಟೀಸರ್ ರಿಲೀಸ್ ಯಾವಾಗ?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ ಜೇಮ್ಸ್. ಈ ಸಿನಿಮಾ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವುದು ಎಲ್ಲರಿಗೂ ಗೊತ್ತಿದೆ. ಅಪ್ಪು ಅಗಲಿದ ನೋವಿನಲ್ಲಿದ್ದರು ಜಗಮೆಚ್ಚಿನ ನಟನ ಸಿನಿಮಾ ವೀಕ್ಷಿಸಲು ಕಾತುರರಾಗಿದ್ದಾರೆ. ಅದಕ್ಕೆ ನಿರ್ದೇಶಕ ಚೇತನ್ 'ಜೇಮ್ಸ್' ಸಿನಿಮಾವನ್ನು ಪುನೀತ್ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡಲೇ ಬೇಕು ಅಂತ ಹಠ ತೊಟ್ಟು ಕೆಲಸ ಮಾಡುತ್ತಿದ್ದಾರೆ.

Recommended Video

ಜೇಮ್ಸ್ ಬಂದಿಲ್ಲ ಅಂದ್ರೆ ನಾವೇ ಬರ್ತೀವಿ ಎಂದ ಡಾರ್ಲಿಂಗ್ ಕೃಷ್ಣ

'ಜೇಮ್ಸ್' ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆ ಆಗೇ ಆಗುತ್ತೆ. ಕೊರೊನಾ ಮೂಲೆ ಸಿನಿಮಾ ಕೆಲಸಕ್ಕೆ ಅಡ್ಡಿಯಾದರೆ ಮಾತ್ರ ವಿಳಂಬ ಆಗುವ ಸಾಧ್ಯತೆಗಳಿವೆ. ಆದರೆ, ನಿರ್ದೇಶಕ ಭರ್ಜರಿ ಚೇತನ್ ಈಗಾಗಲೇ ಸಿನಿಮಾದ ಕೆಲಸಗಳನ್ನು ವೇಗವಾಗಿ ಮುಗಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪ್ಯಾಚ್ ವರ್ಕ್ ಮುಗಿದಿದ್ದು, ಸಿನಿಮಾ ಕಲರಿಂಗ್ ಕೆಲಸ ಶುರುವಾಗಿದೆ. ಒಂದಿಷ್ಟು ಸವಾಲುಗಳನ್ನು ಮುಂದಿಟ್ಟುಕೊಂಡು ಅಪ್ಪು ಬರ್ತ್‌ಡೇಗೆ ಸಿನಿಮಾ ರಿಲೀಸ್‌ಗೆ ಮುಂದಾಗಿದ್ದಾರೆ. ಸದ್ಯ ಗಾಂಧಿನಗರದಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ಅದೇನಪ್ಪಾ ಅಂದರೆ, ಜೇಮ್ಸ್ ಟೀಸರ್, ಟ್ರೈಲರ್ ರಿಲೀಸ್ ಆಗುವುದಿಲ್ಲವಂತೆ.

'ಜೇಮ್ಸ್' ಟೀಸರ್, ಟ್ರೈಲರ್ ಇಲ್ಲ

'ಜೇಮ್ಸ್' ಟೀಸರ್, ಟ್ರೈಲರ್ ಇಲ್ಲ

ಚೇತನ್ ಕುಮಾರ್ ನಿರ್ದೇಶನದ ಸಿನಿಮಾ 'ಜೇಮ್ಸ್' ಸಿನಿಮಾ ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಂತೆ 'ಜೇಮ್ಸ್' ನಿರ್ದೇಶಕ ಚೇತನ್ ಚಿಕ್ಕದಾದರೂ ಒಂದು ತುಣುಕು ರಿಲೀಸ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಗಾಂಧಿನಗರದ ಮಂದಿ ಹೊಸ ಸುದ್ದಿಯೊಂದನ್ನು ಹೊರ ಹಾಕಿದ್ದಾರೆ. ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ಟೀಸರ್ ಹಾಗೂ ಟ್ರೈಲರ್ ಎರಡನ್ನೂ ರಿಲೀಸ್ ಮಾಡುದಿಲ್ಲವಂತೆ. ಸಂಕ್ರಾಂತಿಗೇ ಒಂದು ಪೋಸ್ಟರ್ ರಿಲೀಸ್ ಮಾಡಿದ್ದ ತಂಡ ಟೀಸರ್, ಟ್ರೈಲರ್ ಯಾಕೆ ರಿಲೀಸ್ ಮಾಡುತ್ತಿಲ್ಲ ಎಂಬ ಕುತೂಹಲವಿದೆ.

ಡೈರೆಕ್ಟ್ ಥಿಯೇಟರ್‌ನಲ್ಲಿ 'ಜೇಮ್ಸ್' ರಿಲೀಸ್

ಡೈರೆಕ್ಟ್ ಥಿಯೇಟರ್‌ನಲ್ಲಿ 'ಜೇಮ್ಸ್' ರಿಲೀಸ್

ಇಡೀ ಚಿತ್ರತಂಡ 'ಜೇಮ್ಸ್' ಸಿನಿಮಾದ ಚಿಕ್ಕದೊಂದು ತುಣುಕುಗಳನ್ನೂ ರಿವೀಲ್ ಮಾಡಬಾರದು ಎಂದು ನಿರ್ಧರಿಸಿದ್ದಾರಂತೆ. ಅಪ್ಪು ಅಭಿಮಾನಿಗಳು ಎಲ್ಲರೂ ನೇರವಾಗಿ ಥಿಯೇಟರ್‌ಗೆ ಬಂದು ಸಿನಿಮಾ ನೋಡಲಿ. ಪುನೀತ್ ರಾಜ್‌ಕುಮಾರ್ ಪಾತ್ರವನ್ನು, ನಟನೆಯನ್ನು ಕಣ್ತುಂಬಿಕೊಳ್ಳಲಿ ಎಂಬುದು ಚಿತ್ರತಂಡ ಆಸೆ. ಅದಕ್ಕೆ ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ದಿನವೇ ನೇರವಾಗಿ ಚಿತ್ರಮಂದಿರಕ್ಕೆ ರಿಲೀಸ್ ಆಗುತ್ತಿದೆ ಅಂತ ಸಿನಿಮಾ ಮಂದಿ ಹೇಳುತ್ತಿದ್ದಾರೆ. ಆದರೆ, ಅಧಿಕೃತವಾಗಿ ನಿರ್ದೇಶಕ ಚೇತನ್ ಆಗಲಿ, ಚಿತ್ರತಂಡ ಆಗಲಿ ಈ ಬಗ್ಗೆ ಎಲ್ಲೂ ಹೇಳಿಕೆ ಕೊಟ್ಟಿಲ್ಲ.

ಟ್ರೈಲರ್, ಟೀಸರ್‌ಗೆ ಸಮಯದ ಕೊರತೆ

ಟ್ರೈಲರ್, ಟೀಸರ್‌ಗೆ ಸಮಯದ ಕೊರತೆ

'ಜೇಮ್ಸ್' ಸಿನಿಮಾ ಕೆಲಸ ಜೋರಾಗಿ ಸಾಗಿದೆ. ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ ಆಗಿರುವುದರಿಂದ ಹೆಚ್ಚು ನಿಗಾವಹಿಸಲಾಗುತ್ತಿದೆ. ಹೀಗಾಗಿ ಸಿನಿಮಾದ ಬೇರೆ ಬೇರೆ ವಿಭಾಗದಲ್ಲೂ ಗಮನ ಹರಿಸಬೇಕಿರುವುದರಿಂದ ಟ್ರೈಲರ್ ಹಾಗೂ ಟೀಸರ್‌ ಕಟ್ ಮಾಡುವುದಕ್ಕೆ ಸಮಯವಿಲ್ಲ. ಜೊತೆ ಟ್ರೈಲರ್, ಟೀಸರ್ ಬಿಟ್ಟು ಸಂಭ್ರಮ ಪಡುವ ಸಮಯವೂ ಇದಲ್ಲವೆಂದು ನಿರ್ಧರಿಸಿದಂತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

'ಜೇಮ್ಸ್' ಸಿನಿಮಾ ಡಬ್ಬಿಂಗ್ ಕಥೆಯೇನು?

'ಜೇಮ್ಸ್' ಸಿನಿಮಾ ಡಬ್ಬಿಂಗ್ ಕಥೆಯೇನು?

'ಜೇಮ್ಸ್' ಸಿನಿಮಾದ ಮತ್ತೊಂದು ವಿಷಯ ಏನಪ್ಪಾ ಅಂದರೆ, ಪುನೀತ್ ರಾಜ್‌ಕುಮಾರ್ ಪಾತ್ರಕ್ಕೆ ಡಬ್ಬಿಂಗ್ ಮಾಡುವವರು ಯಾರು? ಎನ್ನುವ ಪ್ರಶ್ನೆ ಕಾಡುತ್ತಿದೆ. ಸದ್ಯ ಪುನೀತ್ ರಾಜ್‌ಕುಮಾರ್ ಶೂಟಿಂಗ್ ವೇಳೆ ಹೇಳಿದ ಡೈಲಾಗ್‌ಗಳನ್ನೇ ಇಟ್ಟುಕೊಳ್ಳುವ ಪ್ರಯತ್ನ ನಡೆಯುತ್ತಿದೆಯಂತೆ. ಅಪ್ಪು ಧ್ವನಿ ಜೊತೆ ಸೇರಿಕೊಂಡಿರುವ ನಾಯ್ಸ್ ಅನ್ನು ತೆಗೆದು ಹಾಕುವ ಯತ್ನ ನಡೆಯುತ್ತಿದೆ. ಇದು ಸಾಧ್ಯವಾಗದೇ ಹೋದರೇ ಶಿವಣ್ಣ 'ಜೇಮ್ಸ್' ಸಿನಿಮಾದ ಅಪ್ಪು ಪಾತ್ರಕ್ಕೆ ಧ್ವನಿ ನೀಡುವ ಸಾಧ್ಯತೆಗಳು ಇವೆ.

More from Filmibeat

English summary
Puneeth Rajkumar Movie James is directly releasing in the theatre. Movie Team sources says that is that there is no trailer and teaser will be releasing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X