ಬಿಡುಗಡೆಗೆ ಮುನ್ನವೇ 'ರಣವಿಕ್ರಮ' ಚಿತ್ರದ ಕಥೆ ಲೀಕ್?

ರಣವಿಕ್ರಮ ಚಿತ್ರದ ಬಗ್ಗೆ ಏನಾದರೂ ಹೇಳಿ ಎಂದು ಹಲವು ಬಾರಿ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಅವರನ್ನು ಸಿನಿಪತ್ರಕರ್ತರು ಕೇಳಿಕೊಂಡಾಗ ಅವರು ಹೇಳುತ್ತಿದ್ದದ್ದು ಒಂದೇ, ನಮ್ಮ ಚಿತ್ರದ ಬಗ್ಗೆ ನಾವೇ ಹೇಳಬಾರದು. ಚಿತ್ರ ನೋಡಿ ಜನ ಹೇಳಬೇಕು ಎಂದು ಜಾಣ ಉತ್ತರ ನೀಡಿ ಮಾಧ್ಯಮದವರಿಂದ ದೂರವಾಗುತ್ತಿದ್ದರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರ ಬಿಡುಗಡೆಗೆ ಕೌಂಟ್ ಡೌನ್ ಆರಂಭವಾಗುತ್ತಿದ್ದಂತೆಯೇ ಚಿತ್ರದ ಹೈಪ್ ತಾರಕಕ್ಕೇರಿದೆ. ಈ ನಡುವೆ ಚಿತ್ರದ ಕಥೆಯ ಬಗ್ಗೆ ಗಾಂಧಿನಗರದಲ್ಲಿ ಭಾರೀ ಗುಲ್ಲೆಬ್ಬಿದೆ.

ರಣವಿಕ್ರಮ ಚಿತ್ರದ ಕಥೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಣ ದಶಕದ ಸಮಸ್ಯೆಯಾದ ಗಡಿವಿವಾದಕ್ಕೆ ಸಂಬಂಧ ಪಟ್ಟದ್ದು ಎನ್ನುವ ಸುದ್ದಿಯೀಗ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಹರಿದಾಡುತ್ತಿದೆ. (ರಣವಿಕ್ರಮ ಗುಟ್ಟು ಬಿಟ್ಟುಕೊಡದ ಪವನ್)

ಈ ಹಿಂದೆ ಶ್ರೀಮುರುಳಿ ಮತ್ತು ರಮ್ಯಾ ನಟಿಸಿದ್ದ 'ಕಂಠಿ' ಚಿತ್ರ ಕೂಡಾ ಕನ್ನಡ - ಮರಾಠಿ ಭಾಷಿಗರ ನಡುವಣ ಗಡಿ, ಭಾಷೆಯ ವಿವಾದಕ್ಕೆ ಸಂಬಂಧ ಪಟ್ಟದಾಗಿತ್ತು. ಅದನ್ನು ಬಿಟ್ಟರೆ ಎರಡು ರಾಜ್ಯದ ಗಡಿ ಸಮಸ್ಯೆಯ ಬಗ್ಗೆ ಕನ್ನಡದಲ್ಲಿ ಯಾವುದೇ ಚಿತ್ರ ಬಂದ ಉದಾಹರಣೆಯಿಲ್ಲ.

ಈ ನಡುವೆ ರಣವಿಕ್ರಮ ಚಿತ್ರ ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳ ಸಂಖ್ಯೆ ಬಹುತೇಕ ಅಂತಿಮವಾಗಿದ್ದು ಬೆಂಗಳೂರಿನ ಸಂತೋಷ್ ಚಿತ್ರಮಂದಿರ ಸೇರಿ ರಾಜ್ಯದ ಹೆಚ್ಚುಕಮ್ಮಿ ಇನ್ನೂರು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ.

ಚಿತ್ರದ ಕಥೆಯ ಗಾಂಧಿನಗರದ ಸುದ್ದಿಯ ಪ್ರಕಾರ, ಮುಂದೆ ಓದಿ..

ಕನ್ನಡ - ಮರಾಠಿ ಗಡಿ ಸಮಸ್ಯೆ

ಕನ್ನಡ - ಮರಾಠಿ ಗಡಿ ಸಮಸ್ಯೆ

ಇದು ರಾಜ್ಯ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ನಡೆಯುವ ಕಥೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಿದಾಡುತ್ತಿದೆ. ಪುನೀತ್ ರಾಜಕುಮಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದನ್ನು ಟ್ರೈಲರ್ ನಲ್ಲಿ ನೋಡಿದ್ದಾಗಿದೆ.

ಪುನೀತ್ ಕನ್ನಡಾಭಿಮಾನಿ

ಪುನೀತ್ ಕನ್ನಡಾಭಿಮಾನಿ

ಪೊಲೀಸ್ ಪಾತ್ರದ ಜೊತೆ ಪುನೀತ್ ಚಿತ್ರದಲ್ಲಿ ಅಪ್ಪಟ ಕನ್ನಡ ಭಾಷಾಭಿಮಾನಿ. ಅದಕ್ಕೆ ಪೂರಕ ಎನ್ನುವಂತೆ ಚಿತ್ರದ ಹಾಡಿನ ಸಾಲೊಂದು ಈ ಹೀಗಿದೆ. 'ರಣವಿಕ್ರಮ, ತಡೆ ಅಕ್ರಮ, ಮಾಡು ನೀ ಕನ್ನಡವ ಸಕ್ರಮಾ'. ಹಾಗಾಗಿ ಗಾಂಧಿನಗರದ ಸುದ್ದಿಗೆ ಈ ಹಾಡಿನ ಸಾಹಿತ್ಯ ಮತ್ತಷ್ಟು ಜೀವ ತಂದಿದೆ.

ಮರಾಠಿ ಸಂಭಾಷಣೆಗಳು

ಮರಾಠಿ ಸಂಭಾಷಣೆಗಳು

ಈ ಹಿಂದೆ ಕಂಠಿ ಚಿತ್ರದಲ್ಲೂ ಮರಾಠಿ ಡೈಲಾಗುಗಳಿದ್ದವು. ರಣವಿಕ್ರಮ ಚಿತ್ರದಲ್ಲೂ ಗಡಿಭಾಗದಲ್ಲಿ ಮಾತನಾಡುವ ಕನ್ನಡ ಮಿಶ್ರಿತ ಮರಾಠಿ ಸಂಭಾಷಣೆಗಳು ಹೆಚ್ಚಾಗಿವೆ ಎನ್ನುವ ಸುದ್ದಿಯಿದೆ.

ಮುಂಬೈ, ಪುಣೆಯಲ್ಲೂ ರಿಲೀಸ್

ಮುಂಬೈ, ಪುಣೆಯಲ್ಲೂ ರಿಲೀಸ್

ರಣವಿಕ್ರಮ ಚಿತ್ರ ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ಮೀರಜ್ ನಗರದಲ್ಲೂ ಏಕಕಾಲಕ್ಕೆ ನಾಳೆ (ಏ 10) ಬಿಡುಗಡೆಯಾಗಲಿದೆ. ಗಾಂಧಿನಗರದಲ್ಲಿ ಈಗ ಹರಿದಾಡುತ್ತಿರುವ ಸುದ್ದಿ ಖಚಿತವಾದರೆ ಆ ಭಾಗದಲ್ಲಿ ಚಿತ್ರ ಪ್ರದರ್ಶನಕ್ಕೆ ತೊಂದರೆಯಾದರೆ ಆಶ್ಚರ್ಯ ಪಡಬೇಕಾಗಿಲ್ಲ.

ಟಾಟಾ ಡೊಕೊಮೋ

ಟಾಟಾ ಡೊಕೊಮೋ

ಜಯಣ್ಣ ಕಂಬೈನ್ಸ್ ಚಿತ್ರಗಳು ಬಿಡುಗಡೆಗೆ ಮುನ್ನ ಮಾಧ್ಯಮದವರ ಮುಂದೆ ಬರುವುದು ಕಮ್ಮಿ. ಟಾಟಾ ಡೊಕೊಮೊ ಕಂಪೆನಿ ರಣವಿಕ್ರಮ ಚಿತ್ರದ ಪ್ರಮೋಷನ್ ವಹಿಸಿಕೊಂಡಿತ್ತು. ಆ ಸಮಯದಲ್ಲಿ ಚಿತ್ರದ ನಿರ್ದೇಶಕರು ಸ್ವಲ್ಪ ಹೊತ್ತು ಮಾಧ್ಯಮದವರಿಗೆ ಮಾತಿಗೆ ಸಿಕ್ಕಿದರು.

ರಣವಿಕ್ರಮ ಚಿತ್ರದ ಡೈರೆಕ್ಟರ್ ಹೇಳುವುದೇನು?

ರಣವಿಕ್ರಮ ಚಿತ್ರದ ಡೈರೆಕ್ಟರ್ ಹೇಳುವುದೇನು?

ಪುನೀತ್ ಚಿತ್ರ ನಿರ್ದೇಶಿಸುವುದೇ ಒಂದು ಉತ್ತಮ ಅನುಭವ. ಅವರ ಕೆಲವು ಚಿತ್ರಗಳನ್ನು ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇನೆ. ನನ್ನ ಸಿನಿಮಾ ಜೀವನದಲ್ಲಿ ಪುನೀತ್ ಅವರನ್ನು ಐಡಲ್ ಆಗಿಟ್ಟುಕೊಂಡವನು. ಇನ್ನು ಒಂದೆರಡು ದಿನ ವೈಟ್ ಮಾಡಿ ಚಿತ್ರ ಬಿಡುಗಡೆಯಾಗುತ್ತೆ, ಆಮೇಲ್ ಗೊತ್ತಾಗುತ್ತೆ ಎಂದು ರಣವಿಕ್ರಮ ಚಿತ್ರದ ಕಥೆಯ ಬಗ್ಗೆ ಹೇಳದೇ ನಿರ್ದೇಶಕ ಪವನ್ ಒಡೆಯರ್ ನುಣುಚಿ ಕೊಂಡಿದ್ದಾರೆ.

More from Filmibeat

English summary
Power Star Puneeth Rajkumar starer, Pavan Wadeyar directed Rana Vikrama movies story related to Karnataka - Maharashtra border dispute?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X