'ಪುಷ್ಪ 2' ₹1000 ಕೋಟಿ ಕಲೆಕ್ಷನ್: ಗಗನಕ್ಕೇರಿತೇ ರಶ್ಮಿಕಾ ಸಂಭಾವನೆ?

ಉತ್ತರ ಭಾರತ-ದಕ್ಷಿಣ ಭಾರತ ಎಲ್ಲಾ ಕಡೆ ರಶ್ಮಿಕಾ ಮಂದಣ್ಣಕ್ಕೆ ಯಶಸ್ಸು ಸಿಕ್ಕಿದೆ. ಕೊಡಗಿನ ಬ್ಯೂಟಿ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡುತ್ತಿವೆ. ಬಾಲಿವುಡ್‌ನಲ್ಲಿ ರಣ್‌ಬೀರ್ ಸಿಂಗ್ ನಟಿಸಿದ 'ಅನಿಮಲ್' ಸಿನಿಮಾ ಬಾಕ್ಸಾಫೀಸ್‌ ದಾಖಲೆಗಳನ್ನೆಲ್ಲ ಪೀಸ್ ಪೀಸ್ ಮಾಡಿತ್ತು. ಆ ಸಿನಿಮಾ ಹಿಂದೆನೇ ರಶ್ಮಿಕಾ ಮಂದಣ್ಣಗೆ ಮತ್ತೊಂದು ಸೂಪರ್‌ ಸಕ್ಸಸ್ ಸಿಕ್ಕಿದೆ.

ಇತ್ತೀಚೆಗೆ ತೆರೆಕಂಡಿರುವ ರಶ್ಮಿಕಾ ಮಂದಣ್ಣ ಸಿನಿಮಾ 'ಪುಷ್ಪ 2' ಬಾಕ್ಸಾಫೀಸ್‌ನಲ್ಲಿ ಅತೀ ಕಡಿಮೆ ಸಮಯದಲ್ಲಿ ಬಾಕ್ಸಾಫೀಸ್‌ನಲ್ಲಿ ₹1000 ಕೋಟಿ ಕಲೆ ಹಾಕಿದೆ. ಈ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಸಂಭಾವನೆಯನ್ನು ದಿಢೀರನೇ ಏರಿಸಿಕೊಂಡಿದ್ದಾರೆ ಅನ್ನೋ ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ. ಎರಡು ಮೆಗಾ ಬ್ಲಾಕ್‌ ಬಸ್ಟರ್ ಸಿನಿಮಾಗಳನ್ನು ಕೊಟ್ಮೇಲೆ ರಶ್ಮಿಕಾ ಸ್ಟಾರ್ ಬದಲಾಗಿದೆ ಅಂತ ಸಿನಿಮಾ ಇಂಡಸ್ಟ್ರಿ ಮಾತಾಡಿಕೊಳ್ಳುತ್ತಿದೆ.

Pushpa 2 box office reached Rs 1000 crore Rashmika Mandanna hikes her salary

ರಶ್ಮಿಕಾ ಮಂದಣ್ಣಗೆ ದಕ್ಷಿಣ ಭಾರತದ ನಟಿಯಷ್ಟೇ ಅಲ್ಲ. ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರಿಂದ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಬಾಲಿವುಡ್‌ಗೆ ಕಾಲಿಟ್ಟ ಬಳಿಕ ಯಶಸ್ಸು ರಶ್ಮಿಕಾ ಅವರನ್ನೇ ಹುಡುಕಿಕೊಂಡು ಬಂದಿದೆ. ಈಗ 'ಪುಷ್ಪ 2' ಗೆಲುವಿನ ಬಳಿಕ ನಯನತಾರಾ, ದೀಪಿಕಾ ಪಡುಕೋಣೆ ಸಂಭಾವನೆಯನ್ನೂ ರಶ್ಮಿಕಾ ಮೀರಿದ ಡಿಮ್ಯಾಂಡ್ ಇಟ್ಟಿದ್ದಾರೆಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ರಶ್ಮಿಕಾ ಸಂಭಾವನೆ ಮ್ಯಾಟರ್ ಏನು? ತಿಳಿಯಲು ಮುಂದೆ ಓದಿ?

'ಪುಷ್ಪ' ಮೊದಲ ಪಾರ್ಟ್ ಮಾಡುವಾಗ ರಶ್ಮಿಕಾ ಮಂದಣ್ಣ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಅಲ್ಲಿಂದ 'ಪುಷ್ಪ 2'ವರೆಗೂ ಯಶಸ್ಸಿನ ಪ್ರಮಾಣ ಹೆಚ್ಚಾಗಿದೆ. ಈ ಕಾರಣಕ್ಕೆ ರಶ್ಮಿಕಾ ಸಂಭಾವನೆ 'ಪುಷ್ಪ 2' ವೇಳೆಗಾಗಲೇ 8 ಕೋಟಿಯಿಂದ 10 ಕೋಟಿ ರೂಪಾಯಿ ಆಗಿತ್ತು ಎಂದು ಚಿತ್ರರಂಗದಲ್ಲಿ ಓಡಾಡುತ್ತಿರುವ ಸುದ್ದಿ. ಈಗಂತೂ ರಶ್ಮಿಕಾ ಸಂಭಾವನೆ ಗಗನಕ್ಕೇರಿದೆ ಅಂತ ವರದಿಗಳಾಗಿವೆ.

Pushpa 2 box office reached Rs 1000 crore Rashmika Mandanna hikes her salary

ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಲೇಡಿ ಸೂಪರ್‌ಸ್ಟಾರ್ ನಯನತಾರಾ. ಇವರ ಜೊತೆ ಮತ್ತೊಬ್ಬ ತಮಿಳು ನಟಿ ತ್ರಿಶಾ ಕೂಡ ಕಾಂಪಿಟೇಷನ್‌ನಲ್ಲಿ ಇದ್ದಾರೆ. ಸಂಭಾವನೆ ವಿಷಯದಲ್ಲಿ ನಯನತಾರಾ ಹಾಗೂ ತ್ರಿಶಾ ಮಧ್ಯೆ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ರಶ್ಮಿಕಾ ಮಂದಣ್ಣ ಇವರಿಬ್ಬರನ್ನೂ ಓವರ್ ಟೇಕ್ ಮಾಡಿದ್ದಾರೆಂಬುದು ಸದ್ಯದ ಸುದ್ದಿ.

ಹಾಗಂತ ಕೇವಲ ದಕ್ಷಿಣ ಭಾರತದ ನಟಿಯರೇ ಅಲ್ಲ. ಬಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ನಟಿ ದೀಪಿಕಾ ಪಡುಕೋಣೆಯನ್ನೂ ಹಿಂದಿಕ್ಕಿದ್ದಾರೆ ಎನ್ನಲಾಗಿದೆ. ದೀಪಿಕಾ ಪಡುಕೋಣೆ ಒಂದು ಸಿನಿಮಾಗೆ 15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಈಗ ರಶ್ಮಿಕಾ ಇವರಿಂದ ದೊಡ್ಡ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ನಯನತಾರಾ ಹಾಗೂ ತ್ರಿಶಾ 10 ರಿಂದ 12 ಕೋಟಿ ರೂ. ಸಂಭಾವನೆ ಪಡೆದರೆ, ದೀಪಿಕಾ ಪಡುಕೋಣೆ 'ಕಲ್ಕಿ 2898 AD'ಗಾಗಿ 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈಗ 'ಪುಷ್ಪ 2' ಯಶಸ್ಸಿನ ಬಳಿಕ ರಶ್ಮಿಕಾ ಮಂದಣ್ಣ 16 ಕೋಟಿ ರೂಪಾಯಿಗೆ ಸಂಭಾವನೆ ಏರಿಸಿಕೊಂಡಿದ್ದಾರೆ ಅನ್ನೋದು ಸುದ್ದಿ. ಅಸಲಿಗೆ ಚಿತ್ರರಂಗದಲ್ಲಿ ಹರಿದಾಡುತ್ತಿರುವ ಈ ಸುದ್ದಿ ಎಷ್ಟು ಸತ್ಯವಿದೆ ಅನ್ನೋ ಗೊತ್ತಿಲ್ಲ. ಆದರೆ, ಸಂಭಾವನೆ ಹೆಚ್ಚಿಸಿಕೊಂಡ ಬಗ್ಗೆ ಸುದ್ದಿಯಂತೂ ಓಡಾಡುತ್ತಿದೆ. ಸದ್ಯ ರಶ್ಮಿಕಾ ಕೈಯಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸುತ್ತಿರುವ 'ಸಿಕಂದರ್', 'ದಿ ಗರ್ಲ್‌ಫ್ರೆಂಡ್','ಕುಬೇರ' ಅಂತಹ ಸಿನಿಮಾಗಳು ಇವೆ.

More from Filmibeat

English summary
Pushpa 2 box office reached Rs.1000 crore Rashmika Mandanna hikes her salary;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X