ಅಪಘಾತದ ಬಳಿಕ ಸಾಯಿ ಧರಂ ತೇಜ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಪ್ರಯೋಗ: ಸುಕುಮಾರ್ ಕಾರಣ!

ಟಾಲಿವುಡ್‌ ಮೆಗಾ ಕುಟುಂಬದ ಹೀರೊ ಸಾಯಿ ಧರಂ ತೇಜ್ ಕಳೆದ ವರ್ಷ ಬೈಕ್ ಅಪಘಾತಕ್ಕೀಡಾಗಿದ್ದರು. 2021ರ ಸೆಪ್ಟೆಂಬರ್ 10ರಂದು ರಾತ್ರಿ ಬೈಕ್‌ನಲ್ಲಿ ತೆರಳುವಾಗ ಅಪಘಾತಕ್ಕೀಡಾಗಿ, ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಸಾಯಿ ಧರಂ ತೇಜ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಅಪಘಾತ ಟಾಲಿವುಡ್ ಮಂದಿಯನ್ನು ಬೆಚ್ಚಿ ಬೀಳಿಸಿತ್ತು.

ಸ್ಟೋರ್ಟ್ ಬೈಕ್‌ ಅನ್ನು ಅತೀ ವೇಗದಲ್ಲಿ ಚಲಾಯಿಸುತ್ತಿದ್ದೂ ಕೂಡ ಕಾರಣ ಎನ್ನಲಾಗಿತ್ತು. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದ ಬಳಿಕ ಸಾಯಿ ಧರಂ ತೇಜ್ ಮತ್ತೆ ನಟನೆಯತ್ತ ಮರಳಿದ್ದರು. ಈಗ ಸಾಯಿ ಧರಂ ತೇಜ್ 15ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಇದೇ ವೇಳೆ ಮೆಗಾ ಕುಟುಂಬದ ಹೀರೊ ಸಾಯಿ ಧರಂ ತೇಜ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಪ್ರಯೋಗ ಮಾಡಲಾಗಿದೆ ಅನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ 'ಪುಷ್ಪ' ಸಿನಿಮಾದ ನಿರ್ದೇಶಕ ಸುಕುಮಾರ್ ಅಂತೆ. ಅಷ್ಟಕ್ಕೂ ಸುಕುಮಾರ್ ಬ್ಲ್ಯಾಕ್ ಮ್ಯಾಜಿಕ್ ಹಿಂದಿನ ರಹಸ್ಯವೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಮೆಗಾ ಕುಟುಂಬದ ಹೀರೊ ಮೇಲೆ ಬ್ಲ್ಯಾಕ್ ಮ್ಯಾಜಿಕ್

ಮೆಗಾ ಕುಟುಂಬದ ಹೀರೊ ಮೇಲೆ ಬ್ಲ್ಯಾಕ್ ಮ್ಯಾಜಿಕ್

ಸಾಯಿ ಧರಂ ತೇಜ ಅಪಘಾತದ ಬಳಿಕ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಬೈಕ್ ಆಕ್ಸಿಡೆಂಟ್ ಬಳಿಕ 15ನೇ ಸಿನಿಮಾಗೆ ಕಿಕ್ ಸ್ಟಾರ್ಟ್ ಕೊಟ್ಟಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ. ಈ ಮಧ್ಯೆ ಸಾಯಿ ಧರಂ ತೇಜಗೆ ಬ್ಲ್ಯಾಕ್ ಮಾಜಿಕ್ ಮೂಲಕ ಮೋಡಿ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅದಕ್ಕೆ ಕಾರಣ 'ಪುಷ್ಪ' ಚಿತ್ರದ ನಿರ್ದೇಶಕ ಸುಕುಮಾರ್ ಎನ್ನಲಾಗಿದೆ. ಹಾಗಂತ ಸುಕುಮಾರ್ ನಟ ಸಾಯಿ ಧರಂ ತೇಜ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿಸಿದ್ರಾ? ಎಂದು ಗಾಬರಿಯಾಗ ಬೇಡಿ. ಇದು ಅವರ 15ನೇ ಸಿನಿಮಾದ ಕಥೆಯಷ್ಟೆ.

ಸಾಯಿ ಧರಂ 15ನೇ ಸಿನಿಮಾದ ಕಥೆಯೇನು?

ಸಾಯಿ ಧರಂ 15ನೇ ಸಿನಿಮಾದ ಕಥೆಯೇನು?

ಸಾಯಿ ಧರಂ ತೇಜ ಈ ಸಿನಿಮಾದಲ್ಲಿ ಎಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಸಾಯಿ ಧರಂ ತೇಜ ಗ್ರಾಮವೊಂದಕ್ಕೆ ಬರುತ್ತಾರೆ. ಆ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಜನರು ಸಾವನ್ನಪ್ಪುತ್ತಿರುತ್ತಾರೆ. ಇದಕ್ಕೆ ಕಾರಣ ಬ್ಲ್ಯಾಕ್ ಮ್ಯಾಜಿಕ್ ಎಂದು ಜನರು ನಂಬಿದ್ದು, ಇಂತಹ ಸಂದರ್ಭವನ್ನು ಸಿನಿಮಾದ ಹೀರೊ ಹೇಗೆ ನಿಭಾಯಿಸುತ್ತಾರೆ ಎಂಬುವುದೇ ಕಥೆ.

ಸುಕುಮಾರ್ ಬ್ಲ್ಯಾಕ್ ಮ್ಯಾಜಿಕ್ ಕಥೆ

ಸುಕುಮಾರ್ ಬ್ಲ್ಯಾಕ್ ಮ್ಯಾಜಿಕ್ ಕಥೆ

ಸಾಯಿ ಧರಂ ತೇಜ ಅಭಿನಯದ 15ನೇ ಸಿನಿಮಾಗೆ ಸುಕುಮಾರ್ ಕಥೆ ಬರೆದಿದ್ದಾರೆ. ಇಷ್ಟೇ ಅಲ್ಲದೆ ಸ್ಕ್ರೀನ್ ಪ್ಲೇ ಕೂಡ ಇವರದ್ದೇ. ಕಾರ್ತಿಕ್ ವರ್ಮ ಎಂಬುವವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಸಾಯಿ ಧರಂ 15ನೇ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಯಾಕಂದ್ರೆ, ಸಾಯಿ ಧರಂ ತೇಜ ಅವರ ಸಹೋದರ ವೈಷ್ಣವ್ ತೇಜ ನಟಿಸಿದ ಮೊದಲ ಸಿನಿಮಾ 'ಉಪ್ಪೇನ'ಗೂ ಸುಕುಮಾರ್ ಅವರೇ ಕಥೆ ಕೊಟ್ಟಿದ್ದರು. ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ಬಾಚಿಕೊಂಡಿತ್ತು. ಈ ಕಾರಣಕ್ಕೆ ಸಾಯಿ ಧರಂ ತೇಜ ಸಿನಿಮಾ ಮೇಲೂ ಕುತೂಹಲ ದುಪ್ಪಟ್ಟಾಗಿದೆ.

ಗೆಲುವು ಎದುರು ನೋಡುತ್ತಿರುವ ಸಾಯಿ ಧರಂ

ಗೆಲುವು ಎದುರು ನೋಡುತ್ತಿರುವ ಸಾಯಿ ಧರಂ

ಸಾಯಿ ಧರಂ ತೇಜ್ ಬೈಕ್ ಅಪಘಾತದ ಬಳಿಕ ಚೇತರಿಸಿಕೊಳ್ಳುತ್ತಿರುವಾಗಲೇ 'ರಿಪಬ್ಲಿಕ್' ಸಿನಿಮಾ ರಿಲೀಸ್ ಆಗಿತ್ತು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿರಲಿಲ್ಲ. ಹೀಗಾಗಿ 15ನೇ ಸಿನಿಮಾ ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಈಗ ಸಾಯಿ ಧರಂ ತೇಜಾ ಜೊತೆ ಸುಕುಮಾರ್ ಕೈ ಜೋಡಿಸಿದ್ದು, ಇವರ ವೃತ್ತಿ ಬದುಕಿನಲ್ಲೂ ಮ್ಯಾಜಿಕ್ ಮಾಡಬಹುದು ಎಂದು ಎದುರು ನೋಡುತ್ತಿದ್ದಾರೆ.

More from Filmibeat

English summary
Pushpa Director Black Magic On Mega Family Hero Sai Dharam Tej. Sukumar has provided the story and screenplay for Sai Dharam Tej 15th Movie. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X