ಲೋಕೇಶ್ ಕನಗರಾಜ್- ರಜನಿ ಸಿನಿಮಾಗೆ ಈ ಇಬ್ಬರಲ್ಲಿ ಯಾರು ವಿಲನ್? ಸೆಟ್ಟೇರೋದು ಯಾವಾಗ?

ಸೂಪರ್‌ಸ್ಟಾರ್ ರಜನಿಕಾಂತ್ ವಿಶೇಷ ಪಾತ್ರದಲ್ಲಿ ನಟಿಸಿದ 'ಲಾಲ್ ಸಲಾಂ' ಸಿನಿಮಾ ಬಾಕ್ಸಾಫೀಸ್ ಸೋತಿದೆ. 'ಜೈಲರ್' ಸಕ್ಸಸ್ ಅನ್ನು ಈ ಸಿನಿಮಾದಲ್ಲಿ ಮುಂದುವರೆಸಿಕೊಂಡು ಹೋಗಲು ರಜನಿ ವಿಫಲರಾಗಿದ್ದಾರೆ. ಆದರೂ, ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿರೋ ರಜನಿಯ ಎರಡು ಸಿನಿಮಾಗಳ ಮೇಲೆ ತಮಿಳರು ಕಣ್ಣಿಟ್ಟಿದ್ದಾರೆ.

ಅದರಲ್ಲೂ ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿರವ ರಜನಿಯ 171ನೇ ಸಿನಿಮಾದ ಮೇಲೆ ಕಣ್ಣಿದೆ. ಸೂಪರ್‌ಸ್ಟಾರ್ ರಜನಿಯನ್ನು ಲೋಕೇಶ್ ಕನಗರಾಜ್ ಇನ್ಯಾವ ರೀತಿ ತೋರಿಸಬಹುದೆಂಬ ಕುತೂಹಲದಲ್ಲಿ ಇದ್ದಾರೆ. ಸದ್ಯಕ್ಕೆ ಈ ಸಿನಿಮಾದಿಂದ ಹೊಸ ಅಪ್‌ಡೇಟ್ ಕಾಲಿವುಡ್‌ನಲ್ಲಿ ಓಡಾಡುತ್ತಿದೆ. ರಜನಿಯ 171ನೇ ಸಿನಿಮಾಗೆ ವಿಲನ್ ಯಾರು? ಈ ಬಗ್ಗೆ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

Rajiniknath 171 movie Raghava Lawrence

ಫೆಬ್ರವರಿ 9ರಂದು ರಿಲೀಸ್ ಆಗಿದ್ದ 'ಲಾಲ್ ಸಲಾಂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಯಾಕೋ ಯಶಸ್ಸು ಕಾಣಲಿಲ್ಲ. ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ತಮಿಳಿನ ಯುವ ನಟರಾದ ವಿಷ್ಣು ವಿಶಾಳ್, ವಿಕ್ರಾಂತ್, ಸೆಂಥಿಲ್ ಸೇರಿದಂತೆ ಹಲವು ಮಂದಿ ನಡಿಸಿದ್ದರು. 'ಜೈಲರ್' ಸಕ್ಸಸ್ ಬಳಿಕ ರಜನಿಕಾಂತ್ ವಿಶೇಷ ಪಾತ್ರದಲ್ಲಿ ನಟಿಸಿದ್ದರಿಂದ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಆಗಬಹುದೆಂಬ ನಿರೀಕ್ಷೆಯಿತ್ತು.

ಮೋಯ್ದಿನ್ ಭಾಯ್ ಅವತಾರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದರು. ಆದರೆ, ರಜನಿ ಅಭಿಮಾನಿಗಳು ಈ ಸಿನಿಮಾವನ್ನು ನೋಡುವ ಮನಸ್ಸು ಮಾಡಿಲ್ಲ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ರಜನಿಕಾಂತ್ ನಟಿಸಿದ 'ಲಾಲ್ ಸಲಾಂ' ಸುಮಾರು 15 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಆದರೆ ಲೈಕಾ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ರಜನಿಕಾಂತ್ ಅಭಿಮಾನಿಗಳು 'ಜೈ ಭೀಮ್' ನಿರ್ದೇಶಕ ಜ್ಞಾನವೇಲು ಆಕ್ಷನ್ ಕಟ್ ಹೇಳುತ್ತಿರುವ 'ವೆಟ್ಟೆಯಾನ್' , ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿರುವ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆಗಳನ್ನು ಇಟ್ಟಿದ್ದಾರೆ. ಸದ್ಯಕ್ಕೆ ಕಾಲಿವುಡ್‌ನಲ್ಲಿ ಲೋಕೇಶ್ ಕನಗರಾಜ್ ಹಾಗೂ ರಜನಿಕಾಂತ್ ಕಾಂಬಿನೇಷನ್ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆಗಳಿವೆ. ಇದೇ ವೇಳೆ ಸಿನಿಮಾದ ವಿಲನ್ ಯಾರಾಗಬಹುದು ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ.

Rajiniknath 171 movie Raghava Lawrence

ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಸಿನಿಮಾ ಸೆಟ್ಟೇರುವ ಮುನ್ನವೇ ಚರ್ಚೆಯಲ್ಲಿದೆ. ಇತ್ತೀಚೆಗೆ ಈ ಸಿನಿಮಾದಲ್ಲಿ ವಿಲನ್ ಆಗಿ ಶಿವಕಾರ್ತಿಕೇಯನ್ ನಟಿಸುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು. ಇನ್ನೇನು ಶಿವಕಾರ್ತಿಕೇಯನ್ ಫಿಕ್ಸ್ ಆಗೇ ಬಿಟ್ರು ಅಂದುಕೊಂಡಿರುವಾಗಲೇ ಮತ್ತೊಂದು ಹೆಸರು ಒಡಾಡುತ್ತಿದೆ. ಆ ಹೆಸರೇ ರಾಘವ ಲಾರೆನ್ಸ್.

ರಜನಿಕಾಂತ್ ನಟಿಸುತ್ತಿರುವ 171ನೇ ಸಿನಿಮಾಗೆ ಖಳನಾಯಕನಾಗಿ ರಾಘವ ಲಾರೆನ್ಸ್ ನಟಿಸಲಿದ್ದಾರೆ ಎಂಬ ವದಂತಿ ಹಬ್ಬಿದೆ. ಸದ್ಯಕ್ಕೆ ರಜನಿಯ 171 ನೇ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ಹೊರಬೀಳುತ್ತಿದೆ. ಕ್ರೇಜಿ ಕಾಂಬಿನೇಷನ್‌ ಸಿನಿಮಾ ಬಗ್ಗೆ ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಇದೂವರೆಗೂ ಅಧಿಕೃತ ಮಾಹಿತಿ ನೀಡಿಲ್ಲ. ಸದ್ಯ 'ವೆಟ್ಟೈಯಾನ್' ಸಿನಿಮಾ ಶೇ.60ರಷ್ಟು ಶೂಟಿಂಗ್ ಮುಗಿಸಿದ್ದು, ದೀಪಾವಳಿಗೆ ರಿಲೀಸ್ ಆಗುವ ಸಾಧ್ಯತೆಯಿದೆ.

More from Filmibeat

English summary
Raghava Lawrence might be the villain for Rajinikanth thalaivar 171
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X