ದುಬೈನಲ್ಲಿ RRR ಪ್ರಿ-ರಿಲೀಸ್ ಕಾರ್ಯಕ್ರಮ: ಹಾಲಿವುಡ್ ಸೂಪರ್‌ಸ್ಟಾರ್‌ಗೆ ರಾಜಮೌಳಿ ಗಾಳ

'RRR' ಈ ವರ್ಷ ಬಿಡುಗಡೆಯಾಗುತ್ತಿರುವ ಭಾರತದ ದಬಾರಿ ಸಿನಿಮಾ. ಬರೋಬ್ಬರಿ 500 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಐದು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ರಾಜಮೌಳಿ ನಿರ್ದೇಶನದ ಜೊತೆ ಜೂ. ಎನ್‌ಟಿಆರ್, ರಾಮ್ ಚರಣ್ ಅಂತ ಎರಡು ಪವರ್‌ ಹೌಸ್‌ ಒಟ್ಟಿಗೆ ಸೇರಿದ ಮೇಲೆ ಸಿನಿಮಾದ ಲೆವೆಲ್ ಬೇರೆನೇ ಇರುತ್ತೆ. ಹೀಗಾಗಿ ಬಿಡುಗಡೆಗೂ ಮುನ್ನವೇ ದುಬಾರಿ ವೆಚ್ಚದಲ್ಲಿ ಪ್ರಿ ರಿಲೀಸ್ ಇವೆಂಟ್ ಮಾಡಲು ರಾಜಮೌಳಿ ಸ್ಕೆಚ್ ಹಾಕಿದ್ದಾರಂತೆ.

ರಾಜಮೌಳಿ ನಿರ್ದೇಶಿಸಿದ ಮತ್ತೊಂದು ಮೆಗಾ ಸಿನಿಮಾ 'RRR'. ಈ ಸಿನಿಮಾ ಜನವರಿ 7ರಂದೇ ರಿಲೀಸ್ ಆಗಬೇಕಿತ್ತು. ಆಗಲೇ ರಾಜಮೌಳಿ ಬಾರಿ ವೆಚ್ಚದಲ್ಲಿ ಪ್ರಚಾರ ಮಾಡಿದ್ದರು. ಆದರೆ, ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆಯನ್ನು ಮುಂದೂಡಬೇಕಾಗಿತ್ತು. ಈಗ ಮತ್ತೆ ಪ್ರಚಾರ ಆರಂಭಿಸಿದ್ದು, ದುಬೈನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದಾರೆ. ಆ ಕಾರ್ಯಕ್ರಮಕ್ಕೆ ಹಾಲಿವುಡ್ ಸೂಪರ್‌ಸ್ಟಾರ್ ಅನ್ನು ಕರೆದುಕೊಂಡು ಬರುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

 ದುಬೈನಲ್ಲಿ ಪ್ರಿ-ರಿಲೀಸ್ ಇವೆಂಟ್

ದುಬೈನಲ್ಲಿ ಪ್ರಿ-ರಿಲೀಸ್ ಇವೆಂಟ್

'RRR' ರಿಲೀಸ್ ಮಾಡಬೇಕು ಅನ್ನುವಾಗಲೇ ಏನಾದರೂ ಒಂದು ವಿಘ್ನ ಎದುರಾಗುತ್ತಿತ್ತು. ಹೀಗಾಗಿ ಹಲವು ಬಾರಿ ಸಿನಿಮಾವನ್ನು ರಾಜಮೌಳಿ ಪೋಸ್ಟ್‌ಪೋನ್ ಮಾಡಿದ್ದಾರೆ. ಆದ್ರೀಗ ಮಾರ್ಚ್ 25ಕ್ಕೆ ಶತಾಯಗತಾಯ ಸಿನಿಮಾ ಬಿಡುಗಡೆ ಮಾಡಲೇಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಹೀಗಾಗಿ ದುಬೈನಲ್ಲಿ ದೊಡ್ಡ ಮಟ್ಟದಲ್ಲಿ ಇಡೀ ವಿಶ್ವಕ್ಕೆ 'RRR' ರಿಲೀಸ್ ಬಗ್ಗೆ ಮಾಹಿತಿ ನೀಡಲು ದುಬೈನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಹಿಂದೆ ಕೂಡ ರಾಜಮೌಳಿ ದುಬೈ ಇವೆಂಟ್ ಬಗ್ಗೆ ಮಾತಾಡಿದ್ದರು. ಆದರೆ, ರಿಲೀಸ್ ಡೇಟ್ ಹತ್ತಿರದಲ್ಲಿದ್ದಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಆ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಲಿವುಡ್‌ ಸೂಪರ್‌ಸ್ಟಾರ್ ಅನ್ನು ಕರೆದುಕೊಂಡು ಬರುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

 ದುಬೈ ಕಾರ್ಯಕ್ರಮಕ್ಕೆ ಟಾಪ್ ಕ್ರೂಸ್

ದುಬೈ ಕಾರ್ಯಕ್ರಮಕ್ಕೆ ಟಾಪ್ ಕ್ರೂಸ್

ರಾಜಮೌಳಿ 'RRR' ಪ್ರಿ- ರಿಲೀಸ್ ಕಾರ್ಯಕ್ರಮಕ್ಕೆ ಈಗಾಗಲೇ ಹಾಲಿವುಡ್ ಸೂಪರ್‌ಸ್ಟಾರ್‌ಗೆ ಆಹ್ವಾನ ನೀಡಿದ್ದಾರಂತೆ. ಮಿಷನ್ ಇಂಪಾಸಿಲ್ ಅಂತ ಆಕ್ಷನ್ ಸಿನಿಮಾಗಳಲ್ಲಿ ನಟಿಸಿರುವ ಸೂಪರ್‌ಸ್ಟಾರ್ ಟಾಮ್ ಕ್ರೂಸ್ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಟಾಮ್ ಕ್ರೂಸ್ ಸದ್ಯ ಅವೆಂಜರ್ಸ್ ಸಿರೀಸ್‌ನಲ್ಲಿ ಐರನ್ ಮ್ಯಾನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗತ್ತಿನ ಅತ್ಯಂತ ದುಬಾರಿ ನಟನಿಗೆ ರಾಜಮೌಳಿ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

 ಗಂಗೂಬಾಯಿ ಬಳಿಕ ಪ್ರಚಾರ ಆರಂಭ

ಗಂಗೂಬಾಯಿ ಬಳಿಕ ಪ್ರಚಾರ ಆರಂಭ

ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಫೆಬ್ರವರಿ 25ಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ ಆಲಿಯಾ ಆ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಗಂಗೂಬಾಯಿ ಸಿನಿಮಾ ರಿಲೀಸ್ ಆಗುತ್ತಿದ್ದಂತೆ 'RRR' ಚಿತ್ರದ ಪ್ರಚಾರ ಆರಂಭ ಆಗಲಿದೆ. ಮತ್ತೆ ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ ಚರಣ್ ತೇಜಾ ಹಾಗೂ ಆಲಿಯಾ ಭಟ್ ಈ ಚಿತ್ರದ ಪ್ರಚಾರಕ್ಕೆ ಇಳಿಯಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಈಗಾಗಲೇ ಪ್ರಚಾರಕ್ಕೆ ಹೆಚ್ಚು ಹಣ ಖರ್ಚು ಮಾಡಿದ್ದರಿಂದ ಈ ಬಾರಿ ಕೇವಲ ಪ್ರಮುಖ ಸಿಟಿಗಳಲ್ಲಿ ಪ್ರಚಾರ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

 ಆರ್ನಾಲ್ಡ್- ಜಾಕಿ ಅತಿಥಿಗಳಾಗಿ ಬಂದಿದ್ದರು

ಆರ್ನಾಲ್ಡ್- ಜಾಕಿ ಅತಿಥಿಗಳಾಗಿ ಬಂದಿದ್ದರು

ದಕ್ಷಿಣ ಭಾರತದ ಚಿತ್ರತಂಡ ಈ ಹಿಂದೆ ಕೂಡ ಹಾಲಿವುಡ್ ಹಾಗೂ ವಿದೇಶಿ ನಟರನ್ನು ಮುಖ್ಯ ಅತಿಥಿಗಳನ್ನಾಗಿ ಕರೆದಿದೆ. ಶಂಕರ್ ನಿರ್ದೇಶಿಸಿದ್ದ 'ಐ' ಸಿನಿಮಾದ ಆಡಿಯೋ ಕಾರ್ಯಕ್ರಮಕ್ಕೆ ಹಾಲಿವುಡ್ ನಟ ಆರ್ನಾಲ್ಡ್ ಶ್ವಾರ್ಜಿನೆಗರ್ ಅತಿಥಿಯಾಗಿ ಆಗಮಿಸಿದ್ದರು. ಕಮಲ್ ಹಾಸನ್ 'ದಶವಾತಾರ' ಚಿತ್ರದ ಆಡಿಯೋ ರಿಲೀಸ್‌ಗೆ ಜಾಕಿ ಚಾನ್ ಬಂದಿದ್ದರು. ಈಗ RRR ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ಗೆ ಹಾಲಿವುಡ್ ಸೂಪರ್‌ಸ್ಟಾರ್ ಟಾಮ್ ಕ್ರೂಸ್ ಬರುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Rajamouli directed RRR Dubai chief guest is Hollywood Superstar Tom Cruise. Rajamouli along with his team is planning to invite Hollywood action star Tom Cruise as the Chief Guest for the pre release event of RRR.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X